ಏರ್‌ಟೆಲ್‌ 1599ರೂ. V/S ವಿ 1099ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್: ಯಾವುದು ಬೆಸ್ಟ್‌?

|

ಪ್ರಸ್ತುತ ಟೆಲಿಕಾಂ ಕಂಪನಿಗಳು ಚಂದಾದಾರರ ಸಂಖ್ಯೆ ಹೆಚ್ಚಿಸಿಕೊಳ್ಳಲು ಆಕರ್ಷಕ ಪ್ರೀಪೇಯ್ಡ್‌ ಯೋಜನೆಗಳನ್ನು ನೀಡುತ್ತ ಸಾಗಿವೆ. ಹಾಗೆಯೇ ಪ್ರೀಪೇಯ್ಡ್‌ ಜೊತೆಗೆ ಪೋಸ್ಟ್‌ಪೇಯ್ಡ್‌ ಗ್ರಾಹಕರನ್ನು ಹೆಚ್ಚಿಸಲು ಅಗ್ಗದ ಪ್ರೈಸ್‌ನಲ್ಲಿ ಯೋಜನೆಗಳನ್ನು ಪರಿಚಯಿಸಿವೆ. ಆ ಪೈಕಿ ಏರ್‌ಟೆಲ್‌ ಹಾಗೂ ವೊಡಾಫೋನ್-ಐಡಿಯಾ (ವಿ) ಸಂಸ್ಥೆಗಳು ಭಿನ್ನ ಶ್ರೇಣಿಯಲ್ಲಿ ಪೋಸ್ಟ್‌ಪೇಯ್ಡ್‌ ಯೋಜನೆಗಳನ್ನು ಪರಿಚಯಿಸಿ ಗಮನ ಸೆಳೆದಿವೆ.

ಏರ್‌ಟೆಲ್‌

ಹೌದು, ಭಾರ್ತಿ ಏರ್‌ಟೆಲ್‌ ಹಾಗೂ ವಿ ಟೆಲಿಕಾಂ ಸಂಸ್ಥೆಗಳು ಡೇಟಾ, ಅನಿಯಮಿತ ವಾಯಿಸ್‌ ಕರೆ, ಎಸ್‌ಎಮ್‌ಎಸ್‌ ಸೌಲಭ್ಯಗಳನ್ನು ಒಳಗೊಂಡ ಪೋಸ್ಟ್‌ಪೇಯ್ಡ್‌ ಯೋಜನೆಗಳ ಆಯ್ಕೆ ನೀಡಿವೆ. ಅವುಗಳಲ್ಲಿ ಏರ್‌ಟೆಲ್‌ 1599ರೂ. ಪೋಸ್ಟ್‌ಪೇಯ್ಡ್‌ ಹಾಗೂ ವಿ ಟೆಲಿಕಾಂನ 1099ರೂ. ಪೋಸ್ಟ್‌ಪೇಯ್ಡ್‌ ಯೋಜನೆಗಳು ಹೆಚ್ಚು ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿವೆ. ಹಾಗಾದರೇ ಇವೆರಡು ಯೋಜನೆಗಳ ಪ್ರಯೋಜನಗಳೆನು ಹಾಗೂ ಇವೆರಡರಲ್ಲಿ ಯಾವುದು ಯೋಗ್ಯ? ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಏರ್‌ಟೆಲ್‌ 1599ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್

ಏರ್‌ಟೆಲ್‌ 1599ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್

ಏರ್‌ಟೆಲ್‌ 1599ರೂ. ಪೋಸ್ಟ್‌ಪೇಯ್ಡ್‌ ಯೋಜನೆಯಲ್ಲಿ ಅನಿಯಮಿತ ಲೋಕಲ್ ಮತ್ತು ಎಸ್‌ಟಿಡಿ ಕರೆಗಳು, ಪ್ರತಿದಿನ 100 ಉಚಿತ ಎಸ್‌ಎಂಎಸ್‌ಗಳನ್ನು ಹೊಂದಿರುವ 1599 ರೂ ಪೋಸ್ಟ್‌ಪೇಯ್ಡ್ ಪ್ಲ್ಯಾನ್ ರೀಚಾರ್ಜ್ ಮಾಡಿಸಿದರೆ ಪ್ರತಿ ತಿಂಗಳು 150GB ಡೇಟಾ ಗ್ರಾಹಕರಿಗೆ ಸಿಗಲಿದೆ. ಜೊತೆಗೆ ಮೂರು ತಿಂಗಳ ನೆಟ್‌ಫ್ಲಿಕ್ಸ್ ಚಂದಾದಾರಿಕೆ, ಒಂದು ವರ್ಷದ ಅಮೆಜಾನ್ ಪ್ರೈಮ್, ಜೀ ಶೋಸ್ ಅಂಡ್ ಮೂವಿಸ್ ಮತ್ತು ಏರ್‌ಟೆಲ್ ಟಿವಿ ಪ್ರೀಮಿಯಮ್ ಚಂದಾದಾರಿಕೆಯನ್ನು ಏರ್‌ಟೆಲ್ ನೀಡುತ್ತಿದೆ.

ವಿ ಟೆಲಿಕಾಂನ 1099ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್

ವಿ ಟೆಲಿಕಾಂನ 1099ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್

ವಿ ಟೆಲಿಕಾಂನ 1099ರೂ. ಪೋಸ್ಟ್‌ಪೇಯ್ಡ್‌ ಯೋಜನೆಯು ತಿಂಗಳಿಗೆ 150 ಜಿಬಿ ಕ್ಯಾಪ್ ಮಾಡಿದ ಅನಿಯಮಿತ ಡೇಟಾ ಸೌಲಭ್ಯ ಹೊಂದಿದೆ. ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ವಾಯಿಸ್‌ ಕರೆ ಪ್ರಯೋಜನ ಮತ್ತು ದಿನಕ್ಕೆ 100 ಎಸ್‌ಎಂಎಸ್ ಸೌಲಭ್ಯ ಪಡೆದಿದೆ. ಹಾಗೆಯೇ ಈ ಯೋಜನೆಯೊಂದಿಗೆ ಒಂದು ವರ್ಷದ ನೆಟ್‌ಫ್ಲಿಕ್ಸ್ ಚಂದಾದಾರಿಕೆ, ಒಂದು ವರ್ಷ ಅಮೆಜಾನ್ ಪ್ರೈಮ್ ಸದಸ್ಯತ್ವ, ಒಂದು ವರ್ಷದ ಜೀ5 ಪ್ರೀಮಿಯಂ ಚಂದಾದಾರಿಕೆ ಹಾಗೂ ರೋಮಿಂಗ್ ಸೌಲಭ್ಯ ಸಿಗಲಿದೆ.

ಯಾವುದು ಯೋಗ್ಯ?

ಯಾವುದು ಯೋಗ್ಯ?

ಏರ್‌ಟೆಲ್‌ 1599ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್ ಹಾಗೂ ವಿ ಟೆಲಿಕಾಂನ 1099ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್ ಎರಡು ಟೆಲಿಕಾಂಗಳ ಯೋಜನೆಗಳು ಆಕರ್ಷಕ ಪ್ರಯೋಜನಗಳನ್ನು ಪಡೆದಿವೆ. ಈ ಎರಡು ಪೋಸ್ಟ್‌ಪೇಯ್ಡ್‌ ಯೋಜನೆಗಳು ಡೇಟಾ ಪ್ರಯೋಜನದ ಜೊತೆಗೆ ಎಸ್‌ಎಮ್‌ಎಸ್‌ ಸೌಲಭ್ಯ ಒದಗಿಸಿವೆ ಹಾಗೂ ಓಟಿಟಿ ಪ್ರಯೋಜನ ಸಹ ನೀಡಿವೆ. ಆದರೆ ಪ್ರೈಸ್‌ಟ್ಯಾಗ್‌ನಿಂದ ವಿ ಟೆಲಿಕಾಂ ಅಗ್ಗವಾಗಿ ಕಾಣಿಸುತ್ತವೆ.

Most Read Articles
Best Mobiles in India

English summary
Vodafone Idea's Rs 1,099 REDX postpaid plan is probably the best offering available right now.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X