ಏರ್‌ಟೆಲ್‌ನಿಂದ ಹೊಸ ವಾರ್ಷಿಕ ವ್ಯಾಲಿಡಿಟಿ ಪ್ಲ್ಯಾನ್!..511GB ಡೇಟಾ ಉಚಿತ!
ದೇಶದ ಟೆಲಿಕಾಂ ಕ್ಷೇತ್ರಕ್ಕೆ ರಿಲಾಯನ್ಸ್ ಜಿಯೋ ಎಂಟ್ರಿ ಕೊಟ್ಟಾಗಿನಿಂದ ಕ್ರಾಂತಿಕರ ಬದಲಾವಣೆಗಳಾಗುತ್ತಲಿವೆ. ಜಿಯೋ ವಿರುದ್ಧ ಏರ್‌ಟೆಲ್ ಮತ್ತು ವೊಡಾಫೋನ್ ಸಂಸ್ಥೆಗಳು ಸೆಣಸಾಡಿ ಹೈರಾಣವಾಗಿದ್ದರೂ, ಪೈಪೋಟಿ ಮಾತ್ರ ತೀವ್ರವಾಗಿಯೇ ಮುಂದುವರೆಸಿವೆ. ಈ ನಿಟ್ಟಿನಲ್ಲಿ ಏರ್‌ಟೆಲ್ ಈಗ ಹೊಸ ವಾರ್ಷಿಕ ವ್ಯಾಲಿಡಿಟಿ ಪ್ಲ್ಯಾನಿನ ಅಸ್ತ್ರವನ್ನು ಪ್ರಯೋಗ ಮಾಡಿದ್ದು, ಈ ಯೋಜನೆಯು ಗ್ರಾಹಕರಿಗೆ ಬೆಸ್ಟ್ ಎನಿಸಲಿದೆ.

ಹೌದು, ಏರ್‌ಟೆಲ್ ಸಂಸ್ಥೆಯು ಹೊಸದಾಗಿ 1699ರೂ.ಗಳ ಪ್ರೀಪೇಡ್ ಪ್ಕ್ಯಾನ್ ಅನ್ನು ಪರಿಷ್ಕೃತವಾಗಿ ಪರಿಚಯಿಸಿದ್ದು, ಈ ಪ್ಯಾಕ್‌ನಲ್ಲಿ ಪ್ರತಿ ದಿನ ಗ್ರಾಹಕರಿಗೆ ಒಂದು ವರ್ಷ ಅವಧಿಯ (365ದಿನಗಳು) ವ್ಯಾಲಿಡಿಟಿ ದೊರೆಯಲಿದೆ. ಹಾಗೆಯೇ ಇದರೊಂದಿಗೆ ಅನಿಯಮಿತ ಪ್ರಾದೇಶಿಕ ಮತ್ತು ರಾಷ್ಟ್ರೀಯ ಉಚಿತ ಕರೆಗಳು, 100 ಉಚಿತ ಎಸ್‌ಎಮ್‌ಎಸ್ ಹಾಗೂ ವಾರ್ಷಿಕ 511GB ಉಚಿತ ಡೇಟಾದ ಪ್ರಯೋಜನೆಗಳು ಸಹ ಲಭ್ಯವಾಗಲಿವೆ.

ಈ ಆಫರ್ ಮುಂಚೆ ಏರ್‌ಟೆಲ್ ಪ್ರತಿದಿನ ಉಚಿತ 1GB ಡೇಟಾ ನೀಡುತ್ತಿತ್ತು. ಈಗ ಆಫರ್‌ನಲ್ಲಿ ಹೆಚ್ಚುವರಿಯಾಗಿ 400MB ಸೇರಿಸಿದ್ದು, ಹೀಗಾಗಿ ಈ ಪ್ಲ್ಯಾನ್‌ನಡಿ ಪ್ರತಿದಿನ 1.4MB ಡೇಟಾ ಬಳಕೆದಾರರಿಗೆ ಸೀಗಲಿದೆ. ಜೊತೆಗೆ HOOQ, ZEE5 ಮತ್ತು ಏರ್‌ಟೆಲ್ ಟಿವಿ ಪ್ರೀಮಿಯಮ್ ಸದಸ್ಯವು ಸಹ ಲಭ್ಯವಾಗಲಿದೆ. ಹಾಗಾದರೇ ಏರ್‌ಟೆಲ್‌ನ ಹೊಸ 1699ರೂ.ಗಳ ವಾರ್ಷಿಕ ಪ್ಯಾಕ್‌ನಲ್ಲಿ ಲಭ್ಯವಾಗುವ ಪ್ರಯೋಜನಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ವಾರ್ಷಿಕ ವ್ಯಾಲಿಡಿಟಿ
ಹಲವಾರು ವಿಶೇಷ ಪ್ಲ್ಯಾನ್‌ಗಳನ್ನು ನೀಡಿರುವ ಏರ್‌ಟೆಲ್ ಸಂಸ್ಥೆಯು ಈಗ ವಾರ್ಷಿಕ ವ್ಯಾಲಿಡಿಟಿಯ ಪ್ಲ್ಯಾನ್ ಘೋಷಿಸಿದ್ದು, ಗ್ರಾಹಕರಿಗೆ 365ದಿನಗಳ ಅವಧಿಯ ವ್ಯಾಲಿಡಿಟಿ ದೊರೆಯಲಿದೆ. ದೀರ್ಘಕಾಲದವರೆಗೆ ಗ್ರಾಹಕರನ್ನು ಉಳಿಸಿಕೊಳ್ಳುವುದೇ ಈ ಯೋಜನೆಯ ಉದ್ದೇಶವಾಗಿದೆ. ಹಾಗೆಯೇ ಜಿಯೋದ 1,699ರೂ. ಪ್ಲ್ಯಾನಿಗೆ ಪೈಪೋಟಿ ನೀಡಲು ಈ ಕ್ರಮ ಎನ್ನಲಾಗಿದೆ.

511GB ಉಚಿತ ಡೇಟಾ
ಏರ್‌ಟೆಲ್‌ನ 1699ರೂ. ಪ್ಲ್ಯಾನಿನಲ್ಲಿ ಬಳಕೆದಾರರಿಗೆ ಒಂದು ವರ್ಷದ ಅವಧಿಗೆ ಒಟ್ಟು 511GB ಉಚಿತ ಡೇಟಾ ಲಭ್ಯವಾಗಲಿದೆ. ಅಂದರೇ ಪ್ರತಿದಿನ 1.4MB ಯಂತೆ ಉಚಿತ ಡೇಟಾವು ಗ್ರಾಹಕರಿಗೆ ದೊರೆಯಲಿದೆ. ಈ ಮೊದಲು 1GB ಡೇಟಾವನ್ನು ಮಾತ್ರ ನೀಡುತ್ತಿದ್ದ ಕಂಪನಿಯು ಈಗ ಜಿಯೋ ಜೊತೆಗೆ ಪೈಪೋಟಿ ನಡೆಸಲು 400MB ಹೆಚ್ಚುವರಿಯಾಗಿ ನೀಡುತ್ತಿದೆ.

ಅನಿಯಮಿತ ಉಚಿತ ಕರೆ
ಸದ್ಯ ಜಿಯೋ ಸೇರಿದಂತೆ ಬಹುತೇಕ ಎಲ್ಲ ಟೆಲಿಕಾಂ ಸಂಸ್ಥೆಗಳು ಉಚಿತ ಕರೆಗಳ ಸೌಲಭ್ಯವನ್ನು ನೀಡುತ್ತಿವೆ. ಏರ್‌ಟೆಲ್ ಈ ಪ್ಲ್ಯಾನಿನಲ್ಲಿ ಬಳಕೆದಾರರಿಗೆ ಅನಿಯಮಿತ ಉಚಿತ ಲೋಕಲ್ ಮತ್ತು ನ್ಯಾಷನಲ್ ಕರೆಗಳು ದೊರೆಯಲಿದ್ದು, ಯಾವುದೇ FUP ಇರುವುದಿಲ್ಲ. ಜೊತೆಗೆ ಉಚಿತ ರೋಮಿಂಗ್ ಸೌಲಭ್ಯದ ಪ್ರಯೋಜನವು ಸಹ ಗ್ರಾಹಕರಿಗೆ ಲಭ್ಯವಾಗಲಿದೆ.

ಉಚಿತ ಎಸ್‌ಎಮ್‌ಎಸ್
1699ರೂ. ಏರ್‌ಟೆಲ್ ವಾರ್ಷಿಕ ಪ್ಲ್ಯಾನಿನಲ್ಲಿ ಬಳಕೆದಾರರಿಗೆ ಪ್ರತಿದಿನ ಲೋಕಲ್ ಮತ್ತು ನ್ಯಾಷನಲ್ 100 ಎಸ್‌ಎಮ್‌ಎಸ್‌ಗಳು ಉಚಿತವಾಗಿ ಸೀಗಲಿದ್ದು, ಹೆಚ್ಚುವರಿಯಾಗಿ ಯಾವುದೇ ಶುಲ್ಕ ಇರುವುದಿಲ್ಲ. ಜಿಯೋದ 1699ರೂ. ಗಳ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಲೋಕಲ್ ಮತ್ತು ನ್ಯಾಷನಲ್ 100 ಎಸ್‌ಎಮ್‌ಎಸ್‌ಗಳು ಉಚಿತವಾಗಿ ಲಭ್ಯವಾಗಲಿವೆ. ಏರ್‌ಟೆಲ್ ಈ ಯೋಜನೆ ಜಿಯೋಗೆ ಬಿಗ್ ಫೈಟ್ ನೀಡಲಿದೆ.

ಏರ್‌ಟೆಲ್ ಟಿವಿ ಸದಸ್ಯತ್ವ ಉಚಿತ
ಏರ್‌ಟೆಲ್ ಈ ಹೊಸ ಪ್ರೀಪೇಡ್ ಪ್ಲ್ಯಾನ್ ರೀಚಾರ್ಜ್‌ನೊಮದಿಗೆ ಗ್ರಾಹಕರಿಗೆ HOOQ, ZEE5 ಮತ್ತು ಏರ್‌ಟೆಲ್ ಟಿವಿ ಪ್ರೀಮಿಯಮ್ ಸದಸ್ಯವು ಸಹ ದೊರೆಯಲಿದೆ. ಏರ್‌ಟೆಲ್ ಟಿವಿ ಚಂದಾದಾರಿಕೆಯಲ್ಲಿ 350+ ಚಾನಲ್ಸ್, 10,00೦ಟಿವಿ ಶೋಗಳು ಮತ್ತು ಸಿನಿಮಾಗಳನ್ನು ವೀಕ್ಷಿಸಬಹುದಾಗಿದೆ. ಹಾಗೂ ಒಂದು ವರ್ಷದ ನಾರ್ಟನ್(Norton) ಮೊಬೈಲ್ ಸೆಕ್ಯುರಿಟಿ ಪ್ಲ್ಯಾನ್ ದೊರೆಯಲಿದೆ.


Click it and Unblock the Notifications








