ಏರ್‌ಟೆಲ್‌ನ ಈ ಎರಡು ಅಗ್ಗದ ಪ್ಲ್ಯಾನ್‌ಗಳು ಈಗ ಪ್ಯಾನ್ ಇಂಡಿಯಾ ಲಭ್ಯ!
ಟೆಲಿಕಾಂ ಸಂಸ್ಥೆಗಳು ಚಂದಾದಾರರ ಸಂಖ್ಯೆ ಹೆಚ್ಚಿಸಿಕೊಳ್ಳಲು ಆಕರ್ಷಕ ಯೋಜನೆಗಳನ್ನು ಪರಿಚಯಿಸುತ್ತಲೇ ಸಾಗಿವೆ. ಅವುಗಳಲ್ಲಿ ಕಡಿಮೆ ಬೆಲೆಯ ರೀಚಾರ್ಜ್ ಪ್ಲ್ಯಾನ್‌ಗಳು ಇವೆ ಹಾಗೂ ದುವಾರಿ ದರದ ವಾರ್ಷಿಕ ಯೋಜನೆಗಳು ಸೇರಿವೆ. ಹೀಗೆ ಏರ್‌ಟೆಲ್ ಸಹ ಮೇ ತಿಂಗಳಿನಲ್ಲಿ ಹೊಸದಾಗಿ 129ರೂ ಮತ್ತು 199ರೂ. ಗಳ ಎರಡು ಪ್ರೀಪೇಯ್ಡ್ ಪ್ಲ್ಯಾನ್‌ಗಳನ್ನು ಪರಿಚಯಿಸಿತ್ತು. ಗ್ರಾಹಕರನ್ನು ಆಕರ್ಷಿಸಿದ್ದ ಈ ಎರಡು ಯೋಜನೆಗಳುಈಗ ಪ್ಯಾನ್ ಇಂಡಿಯಾ ಲಭ್ಯ.

ಹೌದು, ಏರ್‌ಟೆಲ್ ನೂತನವಾಗಿ ಪರಿಚಯಿಸಿದ್ದ ಏರ್‌ಟೆಲ್ 129ರೂ ಮತ್ತು ಏರ್‌ಟೆಲ್ 199ರೂ. ಪ್ರೀಪೇಯ್ಡ್ ಯೋಜನೆಗಳು ಆರಂಭದಲ್ಲಿ ಕೆಲವೇ ಪ್ರದೇಶಗಳ ವ್ಯಾಪ್ತಿಗಳಲ್ಲಿ ಲಭ್ಯವಿತ್ತು. ಆದ್ರೆ ಇದೀಗ ಈ ಎರಡು ಯೋಜನೆಗಳು ಭಾರತದ ಎಲ್ಲ ಟೆಲಿಕಾಂ ಪ್ರದೇಶಗಳ ವ್ಯಾಪ್ತಿಗಳಲ್ಲಿಯೂ ಲಭ್ಯ ಎಂದಿದೆ. ಕಡಿಮೆ ಪ್ರೈಸ್‌ನಲ್ಲಿರುವ ಈ ಯೋಜನೆಗಳು ಆಕರ್ಷಕ ಪ್ರಯೋಜನಗಳನ್ನು ಒಳಗೊಂಡಿವೆ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಮುಂದೆ ಓದಿರಿ.

ಏರ್‌ಟೆಲ್ 129ರೂ. ಪ್ಲ್ಯಾನ್
ಏರ್‌ಟೆಲ್‌ನ 129ರೂ. ಪ್ರಿಪೇಯ್ಡ್ ಯೋಜನೆಯು ಒಟ್ಟು 24 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ 1GB ಡೇಟಾ, 300 ಎಸ್‌ಎಂಎಸ್ ಮತ್ತು ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಲಭ್ಯವಾಗಲಿದೆ. ಅತೀ ಹೆಚ್ಚಿನ ಡೇಟಾ ಬಳಕೆ ಅಗತ್ಯ ಇರದ ಬಳಕೆದಾರರಿಗೆ ಈ ಯೋಜನೆ ಆಕರ್ಷಕ ಅನಿಸಲಿದೆ.

ಏರ್‌ಟೆಲ್ 199ರೂ. ಪ್ಲ್ಯಾನ್
ಏರ್‌ಟೆಲ್‌ನ 199ರೂ. ಪ್ರಿಪೇಯ್ಡ್ ಯೋಜನೆಯು ಸಹ ಒಟ್ಟು 24 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಪ್ರತಿದಿನ 1GB ಡೇಟಾ, 100 ಎಸ್‌ಎಂಎಸ್ ಮತ್ತು ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಲಭ್ಯವಾಗಲಿದೆ. ಈ ಯೋಜನೆಯು ಸಹ ಅತೀ ಹೆಚ್ಚಿನ ಡೇಟಾ ಬಳಕೆ ಅಗತ್ಯ ಇರದ ಬಳಕೆದಾರರಿಗೆ ಈ ಯೋಜನೆ ಆಕರ್ಷಕ ಅನಿಸಲಿದೆ.

ಪ್ಯಾನ್ ಇಂಡಿಯಾ ಯೋಜನೆ
ಏರ್‌ಟೆಲ್ 129ರೂ ಮತ್ತು ಏರ್‌ಟೆಲ್ 199ರೂ. ಯೋಜನೆಗಳು ಈ ಮೊದಲು ಅಸ್ಸಾಂ, ಬಿಹಾರ ಮತ್ತು ಜಾರ್ಖಂಡ್, ಗುಜರಾತ್, ಹರಿಯಾಣ, ಕೇರಳ, ಕೋಲ್ಕತಾ, ಮಧ್ಯಪ್ರದೇಶ, ಛತ್ತೀಸಗಡ್, ಮಹಾರಾಷ್ಟ್ರ, ಗೋವಾ, ಈಶಾನ್ಯ, ಒರಿಸ್ಸಾ, ರಾಜಸ್ಥಾನ, ಯುಪಿ ಪೂರ್ವ, ಯುಪಿ ಪಶ್ಚಿಮ ಮತ್ತು ಉತ್ತರಾಖಂಡ್ ಜೊತೆಗೆ ಪಶ್ಚಿಮ ಬಂಗಾಳ ಪ್ರದೇಶಗಳಲ್ಲಿ ಲಭ್ಯವಿತ್ತು. ಆದ್ರೆ ಈಗ ಭಾರತದ ಎಲ್ಲ ಟೆಲಿಕಾಂ ಸರ್ಕಲ್ ವ್ಯಾಪ್ತಿಯಲ್ಲಿಯೂ ಈ ಯೋಜನೆ ಲಭ್ಯ.


Click it and Unblock the Notifications








