ಏರ್‌ಟೆಲ್ 1599ರೂ VS ವಿ 1699ರೂ ಪೋಸ್ಟ್‌ಪೇಯ್ಡ್ ಪ್ಲ್ಯಾನ್: ಯಾವುದು ಯೋಗ್ಯ?
ಸದ್ಯ ಟೆಲಿಕಾಂ ಕಂಪನಿಗಳು ಚಂದಾದಾರರ ಸಂಖ್ಯೆ ಹೆಚ್ಚಿಸಿಕೊಳ್ಳಲು ಆಕರ್ಷಕ ಪ್ರೀಪೇಯ್ಡ್ ಯೋಜನೆಗಳ ಜೊತೆಗೆ ಪೋಸ್ಟ್‌ಪೇಯ್ಡ್ ಯೋಜನೆಗಳನ್ನು ನೀಡುತ್ತ ಸಾಗಿವೆ. ಕಂಪನಿಗಳು ಭಿನ್ನ ಪ್ರಯೋಜನಗಳ ಯೋಜನೆಗಳ ಲಿಸ್ಟ್ ಹೊಂದಿವೆ. ಆ ಪೈಕಿ ಅಲ್ಪಾವಧಿಯಿಂದ ವಾರ್ಷಿಕ ಅವಧಿಯ ವರೆಗೂ ಪೋಸ್ಟ್‌ಪೇಯ್ಡ್ ಯೋಜನೆಗಳ ಆಯ್ಕೆಗಳು ಇವೆ. ಏರ್‌ಟೆಲ್ ಹಾಗೂ ವಿ ಟೆಲಿಕಾಂಗಳ ಕೆಲವು ಪೋಸ್ಟ್‌ಪೇಯ್ಡ್ ಯೋಜನೆಗಳು ಗ್ರಾಹಕರ ಗಮನ ಸೆಳೆದಿವೆ. ಏರ್‌ಟೆಲ್ 1599ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್ ಹಾಗೂ ವಿ 1699ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್ ಯಾವುದು ಬೆಸ್ಟ್?

ಹೌದು, ಭಾರ್ತಿ ಏರ್‌ಟೆಲ್ ಹಾಗೂ ವಿ ಟೆಲಿಕಾಂ (ವೊಡಾಫೋನ್ ಐಡಿಯಾ) ಸಂಸ್ಥೆಗಳು ಡೇಟಾ, ಅನಿಯಮಿತ ವಾಯಿಸ್ ಕರೆ, ಎಸ್‌ಎಮ್‌ಎಸ್ ಸೌಲಭ್ಯಗಳನ್ನು ಒಳಗೊಂಡ ಪೋಸ್ಟ್‌ಪೇಯ್ಡ್ ಯೋಜನೆಗಳ ಆಯ್ಕೆ ನೀಡಿವೆ. ಅವುಗಳಲ್ಲಿ ಏರ್‌ಟೆಲ್ 1599ರೂ. ಪೋಸ್ಟ್‌ಪೇಯ್ಡ್ ಹಾಗೂ ವಿ ಟೆಲಿಕಾಂನ 1699ರೂ. ಪೋಸ್ಟ್‌ಪೇಯ್ಡ್ ಯೋಜನೆಗಳು ಹೆಚ್ಚು ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿವೆ. ಹಾಗಾದರೇ ಈ ಎರಡು ಪೋಸ್ಟ್‌ಪೇಯ್ಡ್ ಯೋಜನೆಗಳ ಪ್ರಯೋಜನಗಳೆನು ಹಾಗೂ ಇವೆರಡರಲ್ಲಿ ಯಾವ ಯೋಜನೆ ರೀಚಾರ್ಜ್‌ಗೆ ಯೋಗ್ಯ? ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಏರ್‌ಟೆಲ್ 1599ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್
ಏರ್‌ಟೆಲ್ 1599ರೂ. ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ಅನಿಯಮಿತ ಲೋಕಲ್ ಮತ್ತು ಎಸ್‌ಟಿಡಿ ಕರೆಗಳು, ಪ್ರತಿದಿನ 100 ಉಚಿತ ಎಸ್‌ಎಂಎಸ್‌ಗಳನ್ನು ಹೊಂದಿರುವ 1599 ರೂ ಪೋಸ್ಟ್‌ಪೇಯ್ಡ್ ಪ್ಲ್ಯಾನ್ ರೀಚಾರ್ಜ್ ಮಾಡಿಸಿದರೆ ಪ್ರತಿ ತಿಂಗಳು 150GB ಡೇಟಾ ಗ್ರಾಹಕರಿಗೆ ಸಿಗಲಿದೆ. ಜೊತೆಗೆ ಮೂರು ತಿಂಗಳ ನೆಟ್‌ಫ್ಲಿಕ್ಸ್ ಚಂದಾದಾರಿಕೆ, ಒಂದು ವರ್ಷದ ಅಮೆಜಾನ್ ಪ್ರೈಮ್, ಜೀ ಶೋಸ್ ಅಂಡ್ ಮೂವಿಸ್ ಮತ್ತು ಏರ್‌ಟೆಲ್ ಟಿವಿ ಪ್ರೀಮಿಯಮ್ ಚಂದಾದಾರಿಕೆಯನ್ನು ಏರ್‌ಟೆಲ್ ನೀಡುತ್ತಿದೆ.

ವಿ ಟೆಲಿಕಾಂನ 1,699ರೂ. ಪೋಸ್ಟ್‌ಪೇಯ್ಡ್ ಪ್ಲಾನ್
ವಿ ಟೆಲಿಕಾಂನ 1,699ರೂ. ಪೋಸ್ಟ್‌ಪೇಯ್ಡ್ ಪ್ಲಾನ್ ಬಳಕೆದಾರರಿಗೆ ಅನಿಯಮಿತ ವಾಯ್ಸ್ ಕರೆ ಮತ್ತು 3,000 ಎಸ್‌ಎಂಎಸ್/ದಿನಕ್ಕೆ ಅನಿಯಮಿತ ಡೇಟಾವನ್ನು ನೀಡುತ್ತದೆ. ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ+ ಹಾಟ್‌ಸ್ಟಾರ್ ವಿಐಪಿ ಮತ್ತು ವಿ ಮೂವೀಸ್ ಮತ್ತು ಟಿವಿಯೊಂದಿಗೆ ನೆಟ್‌ಫ್ಲಿಕ್ಸ್‌ನ ಒಟಿಟಿ ಪ್ರಯೋಜನಗಳು ಇವೆ. ಬಳಕೆದಾರರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 2,999ರೂ ಮೌಲ್ಯದ 7 ದಿನಗಳ iRoamFree ಪ್ಯಾಕ್ ಅನ್ನು ಪಡೆಯುತ್ತಾರೆ. ಇದು ಅಂತಾರಾಷ್ಟ್ರೀಯ ಸ್ಥಳಗಳಿಂದ ಕರೆಗಳನ್ನು ಮಾಡಲು ಅವಕಾಶ ನೀಡುತ್ತದೆ. ಈ REDX ಪ್ಲಾನ್ ಬಳಕೆದಾರರಿಗೆ ವಿಮಾನ ನಿಲ್ದಾಣದ ಲಾಂಜ್‌ಗಳಿಗೆ ಉಚಿತ ಪ್ರವೇಶವನ್ನು ನೀಡುತ್ತದೆ. REDX ಪ್ಲಾನ್ ಬಳಕೆದಾರರು ವರ್ಚುವಲ್ ರಿಲೇಶನ್ ಶಿಪ್ ಮ್ಯಾನೇಜರ್ ಮೂಲಕ ಕಂಪನಿಯಿಂದ ಆದ್ಯತೆಯ ಸಹಾಯವನ್ನು ಪಡೆಯುತ್ತಾರೆ.

ಎರಡು ಯೋಜನೆಗಳಲ್ಲಿ ಯಾವುದು ಯೋಗ್ಯ?
ಏರ್‌ಟೆಲ್ 1599ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್ ಹಾಗೂ ವಿ ಟೆಲಿಕಾಂನ 1,699ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್ ಎರಡು ಟೆಲಿಕಾಂಗಳ ಯೋಜನೆಗಳು ಆಕರ್ಷಕ ಪ್ರಯೋಜನಗಳನ್ನು ಪಡೆದಿವೆ. ಈ ಎರಡು ಪೋಸ್ಟ್‌ಪೇಯ್ಡ್ ಯೋಜನೆಗಳು ಡೇಟಾ ಪ್ರಯೋಜನದ ಜೊತೆಗೆ ಎಸ್‌ಎಮ್‌ಎಸ್ ಸೌಲಭ್ಯ ಒದಗಿಸಿವೆ ಹಾಗೂ ಓಟಿಟಿ ಪ್ರಯೋಜನ ಸಹ ನೀಡಿವೆ. ಆದರೆ ಪ್ರೈಸ್‌ಟ್ಯಾಗ್‌ನಿಂದ ಏರ್‌ಟೆಲ್ ಟೆಲಿಕಾಂ ಯೋಜನೆಯು ಅಗ್ಗವಾಗಿ ಕಾಣಿಸುತ್ತವೆ.


Click it and Unblock the Notifications








