Home
ಸುದ್ದಿಜಾಲ

ಜಿಯೋ 149ರೂ.ಪ್ಲ್ಯಾನ್ ಮತ್ತು ಏರ್‌ಟೆಲ್‌ 169ರೂ.ಪ್ಲ್ಯಾನ್‌ : ಯಾವುದು ಉತ್ತಮ?

ಪ್ರಸ್ತುತ ದೇಶದ ಪ್ರಮುಖ ಖಾಸಗಿ ಟೆಲಿಕಾಂ ಸಂಸ್ಥೆಗಳಾದ ಜಿಯೋ, ಏರ್‌ಟೆಲ್, ವೊಡಾಫೋನ್ ಗ್ರಾಹಕರನ್ನು ಉಳಿಸಿಕೊಳ್ಳಲು ಆಕರ್ಷಕ ಪ್ರೀಪೇಡ್‌ ಪ್ಲ್ಯಾನ್‌ಗಳನ್ನು ಘೋಷಿಸುತ್ತಿವೆ. ಮುಖ್ಯವಾಗಿ ಕಡಿಮೆ ಬೆಲೆಗೆ ಹೆಚ್ಚು ವ್ಯಾಲಿಡಿಟಿ ಮತ್ತು ಡೇಟಾ ಪ್ರಯೋಜನಗಳನ್ನು ಒದಗಿಸುವ ಯೋಜನೆಗಳಿಗೆ ಅಧಿಕ ಒಲವು ನೀಡುತ್ತಿವೆ. ಈ ನಿಟ್ಟಿನಲ್ಲಿ ಜಿಯೋ ನೆಟವರ್ಕ್‌ಗೆ ಹೋಗುವುದಾ ಇಲ್ಲ ಏರ್‌ಟೆಲ್‌ ನೆಟವರ್ಕ್‌ ಕಡೆ ವಾಲುವುದಾ ಎನ್ನುವುದೇ ಗ್ರಾಹಕರಲ್ಲಿ ಪ್ರಶ್ನೆಯಾಗಿದೆ.

ಏರ್‌ಟೆಲ್‌

ಹೌದು, ಟೆಲಿಕಾಂ ವಲಯದಲ್ಲಿನ ಏರಿಳಿತಗಳಿಂದಾಗಿ ಟೆಲಿಕಾಂ ಸಂಸ್ಥೆಗಳ ಪ್ಲ್ಯಾನ್‌ಗಳಲ್ಲಿಯೂ ಬದಲಾವಣೆಗಳಾಗುತ್ತಿವೆ. ಇತ್ತೀಚಿಗೆ ಜಿಯೋ, ವೊಡಾಫೋನ್ ಮತ್ತು ಏರ್‌ಟೆಲ್‌ ಸಂಸ್ಥೆಗಳು ಹಲವು ಪ್ಲ್ಯಾನ್‌ಗಳನ್ನು ಪರಿಚಯಿಸಿವೆ. ಮುಖ್ಯವಾಗಿ ಜಿಯೋ ಮತ್ತು ಏರ್‌ಟೆಲ್‌ ಕಂಪನಿಗಳ ಆರಂಭಿಕ ಪ್ರೀಪೇಡ್‌ ಪ್ಲ್ಯಾನ್‌ಗಳು ಹೆಚ್ಚು ಗಮನಸೆಳೆದಿವೆ. ಆದರೆ ಜಿಯೋದ 149ರೂ.ಗಳ ಆಲ್‌-ಇನ್‌-ಒನ್‌ ಪ್ಲ್ಯಾನ್‌ ಹಾಗೂ ಏರ್‌ಟೆಲ್‌ನ 169ರೂ. ಪ್ರೀಪೇಡ್‌ ಪ್ಲ್ಯಾನ್‌ ಯಾವುದು ಯೋಗ್ಯ.?..ಈ ಪ್ಲ್ಯಾನ್‌ಗಳ ಪ್ರಮುಖ ಪ್ರಯೋಜನಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಏರ್‌ಟೆಲ್ 169ರೂ

ಏರ್‌ಟೆಲ್ 169ರೂ

ಭಾರ್ತಿ ಏರ್‌ಟೆಲ್ ರೂ 169 ಪ್ರಿಪೇಯ್ಡ್ ಯೋಜನೆಯು ಜಿಯೋಗಿಂತ ಸ್ವಲ್ಪ ಭಿನ್ನವಾಗಿದೆ. ಈ ಯೋಜನೆಯು ದಿನಕ್ಕೆ 1 ಜಿಬಿ ಡೇಟಾವನ್ನು ಚಂದಾದಾರರಿಗೆ ನೀಡುತ್ತದೆ. ರಿಲಯನ್ಸ್ ಜಿಯೋ ಪ್ರಿಪೇಯ್ಡ್ ಯೋಜನೆಯು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಅಲ್ಲದೆ, ಚಂದಾದಾರರಿಗೆ ದಿನಕ್ಕೆ 100 ಉಚಿತ ಎಸ್‌ಎಂಎಸ್ ಸೌಲಭ್ಯವನ್ನು ನೀಡುತ್ತದೆ ಜೊತೆಗೆ ಏರ್‌ಟೆಲ್‌ನ ವಿಂಕ್ ಮ್ಯೂಸಿಕ್ ಮತ್ತು ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಅಪ್ಲಿಕೇಶನ್‌ಗೆ ಸಹ ದೊರೆಯುತ್ತವೆ.

ಜಿಯೋ 149ರೂ

ಜಿಯೋ 149ರೂ.ಗಳ ಆಲ್‌-ಇನ್-ಒನ್ ಪ್ರಿಪೇಯ್ಡ್ ಯೋಜನೆಯಲ್ಲಿ ಚಂದಾದಾರರಿಗೆ ಪ್ರತಿದಿನ 1.5 ಜಿಬಿ ಲಭ್ಯವಾಗುತ್ತದೆ. ಜಿಯೋದಿಂದ ಜಿಯೋ ಹೊರಹೋಗುವ ಕರೆಗಳು ಉಚಿತವಾಗಿರುತ್ತದೆ ಹಾಗೂ ಜಿಯೋದಿಂದ ಇತರೆ ನೆಟವರ್ಕ್‌ಗಳ ಕರೆಗಳಿಗೆ 300 ನಿಮಿಷಗಳು ಉಚಿತ ಸಿಗಲಿದೆ. ಈ ಯೋಜನೆಯು 24 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಅಲ್ಲದೆ, ಚಂದಾದಾರರಿಗೆ ದಿನಕ್ಕೆ 100 ಉಚಿತ ಎಸ್‌ಎಂಎಸ್ ಸೌಲಭ್ಯವನ್ನು ನೀಡುತ್ತದೆ ಜೊತೆಗೆ ಜಿಯೋ ಆಪ್‌ ಸೇವೆಗಳು ದೊರೆಯಲಿವೆ.

ವ್ಯತ್ಯಾಸಗಳು

ವ್ಯತ್ಯಾಸಗಳು

ಜಿಯೋ 149ರೂ ಆಲ್‌-ಇನ್-ಒನ್ ಪ್ರಿಪೇಯ್ಡ್ ಪ್ಲ್ಯಾನಿನಲ್ಲಿ 24 ದಿನಗಳ ವ್ಯಾಲಿಡಿಟಿ ಅವಧಿಗೆ 36GB ಡೇಟಾ ಲಭ್ಯವಾಗಲಿದೆ. ಅದೇ ರೀತಿ ಏರ್‌ಟೆಲ್‌ 169ರೂ ಪ್ಲ್ಯಾನಿನಲ್ಲಿ 28 ದಿನಗಳಿಗೆ 28GB ಡೇಟಾ ಸಿಗಲಿದೆ. ಇನ್ನು ಜಿಯೋದಲ್ಲಿ ಇತರೆ ನೆಟವರ್ಕ ಕರೆಗಳಿಗೆ 300ನಿಮಿಷ ಉಚಿತ ನೀಡಲಾಗಿದೆ ಹಾಗೂ ಜಿಯೋ ಟು ಜಿಯೋ ಕರೆಗಳು ಉಚಿತವಾಗಿರಲಿವೆ. ಹಾಗೆಯೇ ಏರ್‌ಟೆಲ್‌ನಲ್ಲಿ ಉಚಿತ ಕರೆಗಳು ಸಿಗಲಿವೆ.

ಕೊನೆಯ ಮಾತು

ಕೊನೆಯ ಮಾತು

ಕೆಲವು ಗ್ರಾಹಕರು ದೀರ್ಘಾವಧಿಯ ಪ್ರೀಪೇಡ್‌ ಪ್ಲ್ಯಾನ್‌ಗಳನ್ನು ರೀಚಾರ್ಜ್ ಮಾಡಿಕೊಳ್ಳಲು ಇಚ್ಛಿಸುತ್ತಾರೆ. ಆದರೆ ಬಹುತೇಕರು ತಿಂಗಳ ಅಲ್ಪಾವಧಿಯ ಪ್ಲ್ಯಾನ್‌ಗಳನ್ನು ನೋಡುತ್ತಿರುತ್ತಾರೆ. ಅಂತಹ ಗ್ರಾಹಕರಿಗೆ ಜಿಯೋ 149ರೂ. ಮತ್ತು ಏರ್‌ಟೆಲ್ 169ರೂ. ಪ್ಲ್ಯಾನ್‌ ಸೂಕ್ತ ಎನಿಸಲಿವೆ. ಹೀಗಾಗಿ ಗ್ರಾಹಕರು ಅವರ ಅಗತ್ಯಗಳಿಗೆ ಅನುಗುಣವಾಗಿ ಉತ್ತಮ ಎನಿಸುವ ಪ್ಲ್ಯಾನ್‌ ಆಯ್ದುಕೊಳ್ಳುವುದು ಸೂಕ್ತ.

Best Mobiles in India

English summary
Bharti Airtel offers the Rs 169 prepaid plan, whereas Reliance Jio offers the competing Rs 149 prepaid plan to its subscribers. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+