ಜಿಯೋದ 199ರೂ. ಪ್ಲ್ಯಾನ್‌ಗಿಂತ, ಏರ್‌ಟೆಲ್‌ನ 199ರೂ, ಪ್ಲ್ಯಾನ್ ಉತ್ತಮವೇ?
ಪ್ರಸ್ತುತ ದೇಶಿಯ ಟೆಲಿಕಾಂ ವಲಯದಲ್ಲಿ ಸಾಕಷ್ಟು ಅಪ್‌ಡೇಟ್‌ಗಳು ನಡೆದಿದ್ದು, ಜಿಯೋ, ಏರ್‌ಟೆಲ್ ಹಾಗೂ ವಿ ಟೆಲಿಕಾಂ ಸಂಸ್ಥೆಗಳು ಚಂದಾದಾರರನ್ನು ಹೆಚ್ಚಿಸಿಕೊಳ್ಳಲು ಪೈಪೋಟಿ ಮುನ್ನಡೆಸಿವೆ. ಈ ನಿಟ್ಟಿನಲ್ಲಿ ಮೂರು ಟೆಲಿಕಾಂಗಳು ಭಿನ್ನ ಬೆಲೆಯಲ್ಲಿ ಅಧಿಕ ಪ್ರಯೋಜನಗಳ ಪ್ರೀಪೇಯ್ಡ್ ಪ್ಲ್ಯಾನ್‌ಗಳನ್ನು ಪರಿಚಯಿಸುತ್ತಾ ಸಾಗಿವೆ. ಭಾರ್ತಿ ಏರ್‌ಟೆಲ್ ನೂತನವಾಗಿ 199ರೂ. ಪ್ಲ್ಯಾನ್ ಪರಿಚಯಿಸಿದೆ. ಈ ಯೋಜನೆ ಜಿಯೋ ಟೆಲಿಕಾಂನ 199 ರೂ. ಗಿಂತ ಉತ್ತಮವೇ?

ಹೌದು, ಏರ್‌ಟೆಲ್ ಟೆಲಿಕಾಂ ಹೊಸದಾಗಿ ಪರಿಚಯಿಸಿರುವ 199 ರೂ. ಪ್ರೀಪೇಯ್ಡ್ ಯೋಜನೆಯು ಆಕರ್ಷಕ ವ್ಯಾಲಿಡಿಟಿ, ಡೇಟಾ, ವಾಯಿಸ್ ಕರೆಯ ಸೌಲಭ್ಯವನ್ನು ಒಳಗೊಂಡಿದೆ. ಇನ್ನು ಇದೇ ಪ್ರೈಸ್ ಟ್ಯಾಗ್‌ನಲ್ಲಿ ಜಿಯೋ ಸಹ ಪ್ರೀಪೇಯ್ಡ್ ಯೋಜನೆ ಹೊಂದಿದ್ದು, ಅದು ಸಹ ಡೇಟಾ, ವ್ಯಾಲಿಡಿಟಿ, ವಾಯಿಸ್ ಕರೆ ಪ್ರಯೋಜನ ಪಡೆದಿದೆ. ಹಾಗಾದರೆ 199 ರೂ. ಬೆಲೆಯಲ್ಲಿ ಜಿಯೋದ ಯೋಜನೆ ಉತ್ತಮವೇ ಅಥವಾ ಏರ್‌ಟೆಲ್ ಟೆಲಿಕಾಂ ನ ಪ್ಲ್ಯಾನ್ ಯೋಗ್ಯವೇ? ಮುಂದೆ ತಿಳಿಯೋಣ ಬನ್ನಿರಿ.

ಏರ್‌ಟೆಲ್ ಟೆಲಿಕಾಂನ 199ರೂ. ಪ್ರಿಪೇಯ್ಡ್ ಪ್ಲಾನ್ ಪ್ರಯೋಜನಗಳು
ಏರ್‌ಟೆಲ್ ಟೆಲಿಕಾಂನ ನೂತನ 199ರೂ. ಪ್ರಿಪೇಯ್ಡ್ ಪ್ಲಾನ್ 30 ದಿನಗಳ ವ್ಯಾಲಿಡಿಟಿ ಪ್ರಯೋಜನ ಒಳಗೊಂಡಿದೆ. ಈ ಅವಧಿಯಲ್ಲಿ ಒಟ್ಟು 3GB ಡೇಟಾ ಪ್ರಯೋಜನ ದೊರೆಯಲಿದೆ. ಇದಲ್ಲದೆ ಅನಿಯಮಿತ ವಾಯಿಸ್ ಕರೆ ಹಾಗೂ ದೈನಂದಿನ 100 SMS ಪ್ರಯೋಜನ ಕೂಡ ಗ್ರಾಹಕರಿಗೆ ಲಭ್ಯವಾಗಲಿದೆ. ಸುಮಾರು ಒಂದು ತಿಂಗಳ ವ್ಯಾಲಿಡಿಟಿಯನ್ನು ಬಯಸುವ ಬಳಕೆದಾರರಿಗಾಗಿ ಈ ಯೋಜನೆ ಸೂಕ್ತ ಎನಿಸಲಿದೆ. ಜೊತೆಗೆ ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಮತ್ತು ಉಚಿತ ಹಲೋ ಟ್ಯೂನ್ಸ್ ಮತ್ತು ವಿಂಕ್ ಮ್ಯೂಸಿಕ್‌ನ ಹೆಚ್ಚುವರಿ ಪ್ರಯೋಜನಗಳನ್ನು ಸಹ ಹೊಂದಿದೆ.

ರಿಲಾಯನ್ಸ್ ಜಿಯೋದ 199ರೂ. ಪ್ರಿಪೇಯ್ಡ್ ಪ್ಲಾನ್ ಪ್ರಯೋಜನಗಳು
ಜಿಯೋ ಟೆಲಿಕಾಂನ 199ರೂ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 23 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 1.5 GB ಡೇಟಾ ಸೌಲಭ್ಯ ಸಿಗಲಿದ್ದು, ಒಟ್ಟು ಪೂರ್ಣ ವ್ಯಾಲಿಡಿಟಿ ಅವಧಿಗೆ 34.5 GB ಡೇಟಾ ಪ್ರಯೋಜನ ದೊರೆಯಲಿದೆ. ಹಾಗೆಯೇ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಹಾಗೂ ಎಸ್‌ಎಮ್‌ಎಸ್ ಪ್ರಯೋಜನ ಸಹ ಪಡೆದಿದೆ. ಹಾಗೆಯೇ ಜಿಯೋ ಸಿನಿಮಾ, ಜಿಯೋ ಟೆಲಿಕಾಂನ ಇತರೆ ಆಪ್ಸ್ ದೊರೆಯುತ್ತವೆ.

ಪ್ರಯೋಜನಗಳಲ್ಲಿ ಭಿನ್ನತೆ
ಜಿಯೋ ಹಾಗೂ ಏರ್‌ಟೆಲ್ ಟೆಲಿಕಾಂಗಳ ಬಹುತೇಕ ಯೋಜನೆಗಳಲ್ಲಿ ಸಾಮ್ಯತೆ ಇದೆ. ಹಾಗೆಯೇ ಜಿಯೋ ಹಾಗೂ ಏರ್‌ಟೆಲ್ ನ 199 ರೂ. ಬೆಲೆಯ ಪ್ರೀಪೇಯ್ಡ್ ಯೋಜನೆ ಒಂದೇ ರೀತಿ ಎನಿಸಿದರೂ, ಕೆಲವು ಭಿನ್ನ ಪ್ರಯೋಜನಗಳು ಕಾಣಿಸುತ್ತವೆ. ಸದ್ಯ 199ರೂ. ಅಗ್ಗದ ಬೆಲೆಯ ರೀಚಾರ್ಜ್ ಯೋಜನೆಯಲ್ಲಿ ಎರಡು ಟೆಲಿಕಾಂಗಳು ಡೇಟಾ ಪ್ರಯೋಜನ ಹೊಂದಿವೆ. ಎಸ್‌ಎಮ್‌ಎಸ್ ಸೌಲಭ್ಯ ನೀಡಿವೆ. ಆದರೆ ವ್ಯಾಲಿಡಿಟಿ ಹಾಗೂ ಡೇಟಾ ಪ್ರಯೋಜನಗಳಲ್ಲಿ ಭಿನ್ನತೆ ಕಾಣಬಹುದಾಗಿದೆ.

ರೀಚಾರ್ಜ್ ಮಾಡಿಸಲು ಯಾವ ಪ್ಲ್ಯಾನ್ ಯೋಗ್ಯ?
199ರೂ. ಬೆಲೆಯ ಪ್ರೀಪೇಯ್ಡ್ ಯೋಜನೆಯಲ್ಲಿ ಜಿಯೋ ಹಾಗೂ ಏರ್‌ಟೆಲ್ ಟೆಲಿಕಾಂಗಳು ಆಕರ್ಷಕ ಪ್ರಯೋಜನ ನೀಡಿವೆ. ಪ್ರತಿದಿನ ಡೇಟಾ ಪ್ರಯೋಜನ ಬಯಸುವ ಗ್ರಾಹಕರಿಗೆ ಜಿಯೋದ 199ರೂ. ಪ್ಲ್ಯಾನ್ ಉತ್ತಮ ಅನಿಸಲಿದೆ. ಇನ್ನು ಅಧಿಕ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಏರ್‌ಟೆಲ್ ಟೆಲಿಕಾಂನ 199 ರೂ. ಪ್ಲ್ಯಾನ್ ಆಕರ್ಷಕ ಎನಿಸುತ್ತದೆ. ಏಕೆಂದರೆ ಏರ್‌ಟೆಲ್ 28 ದಿನಗಳ ವ್ಯಾಲಿಡಿಟಿ ಪಡೆದಿದೆ. ಆದರೆ ಜಿಯೋ ಯೋಜನೆಯು 23 ದಿನಗಳ ವ್ಯಾಲಿಡಿಟಿ ಪಡೆದಿದೆ.


Click it and Unblock the Notifications








