ಏರ್‌ಟೆಲ್ 298ರೂ. ಮತ್ತು 349ರೂ. ಪ್ಲ್ಯಾನ್ ಪ್ಲ್ಯಾನ್‌ಗಳಲ್ಲಿ ಯಾವುದು ಬೆಸ್ಟ್?
ಇತ್ತೀಚಿಗೆ ದೇಶದ ಖಾಸಗಿ ಟೆಲಿಕಾಂಗಳು ಪ್ರೀಪೇಡ್ ಪ್ಲ್ಯಾನ್‌ಗಳ ಬೆಲೆ ಏರಿಕೆ ಮಾಡಿದ್ದು, ಚಂದಾದಾರರನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಹೀಗಾಗಿ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಟೆಲಿಕಾಂಗಳು ಚಂದಾದಾರರನ್ನು ಹೆಚ್ಚಿಸಿಕೊಳ್ಳುವ ಧಾವಂತದಲ್ಲಿ ಮುನ್ನುಗ್ಗುತ್ತಿದ್ದು, ಅದಕ್ಕಾಗಿ ಆಕರ್ಷಕ ಪ್ಲ್ಯಾನ್‌ಗಳನ್ನು ನೀಡುತ್ತಿದ್ದಾರೆ. ಆದರೆ ಈ ಸ್ಪರ್ಧೆಯಲ್ಲಿ ಟೆಲಿಕಾಂಗಳ ನಡುವೆ ಪೈಪೋಟಿ ಮುಂದುವರೆದಿದೆ.

ಹೌದು, ಚಂದಾದಾರರನ್ನು ಹೆಚ್ಚಿಸಿಕೊಳ್ಳಲು ಖಾಸಗಿ ಟೆಲಿಕಾಂಗಳು ಇತ್ತೀಚಿಗೆ ಹೊಸ ಪ್ಲ್ಯಾನ್‌ಗಳನ್ನು ಪರಿಚಯಿಸಿವೆ. ಅವುಗಳಲ್ಲಿ ಕೆಲವು ಜನಪ್ರಿಯ ಪ್ರೀಪೇಡ್ ಪ್ಲ್ಯಾನ್‌ಗಳು ಒಂದಕ್ಕೊಂದು ಬಹುತೇಕ ಸಾಮ್ಯತೆ ಹೊಂದಿವೆ. ಅದೇ ರೀತಿ ಏರ್‌ಟೆಲ್ ಟೆಲಿಕಾಂ ಇತ್ತೀಚಿಗೆ ಬಿಡುಗಡೆ ಮಾಡಿರೊ 298ರೂ. ಹಾಗೂ 349ರೂ. ಪ್ರೀಪೇಡ್ ಪ್ಲ್ಯಾನ್‌ಗಳು ಒಂದೇ ರೀತಿಯ ಪ್ರಯೋಜನಗಳನ್ನು ಒಳಗೊಂಡಿವೆ ಎಂದು ಅನಿಸುತ್ತವೆ. ಆದರೆ ಈ ಎರಡು ಪ್ಲ್ಯಾನ್‌ಗಳಲ್ಲಿ ನಡುವೆ ಒಂದು ಪ್ರಮುಖ ವ್ಯತ್ಯಾಸವಿದೆ. ಹಾಗಾದರೆ ಈ ಎರಡು ಪ್ಲ್ಯಾನ್‌ಗಳ ಸೌಲಭ್ಯಗಳೆನು ಮತ್ತು ಯಾವುದು ಯೋಗ್ಯ ಎನ್ನುವುದನ್ನು ತಿಳಿಯಲು ಮುಂದೆ ಓದಿರಿ.

ಏರ್‌ಟೆಲ್ 298ರೂ. ಪ್ಲ್ಯಾನ್
ಏರ್‌ಟೆಲ್‌ನ 298ರೂ. ಪ್ರೀಪೇಡ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಲೋಕಲ್ ಮತ್ತು ನ್ಯಾಶನಲ್ ಕರೆಗಳ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 2GB ಡೇಟಾ ಹಾಗೂ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ಸಿಗಲಿದೆ. ಹಾಗೆಯೆ ಈ ಪ್ಲ್ಯಾನ್ ಏರ್‌ಟೆಲ್ Wynk Music ಸೇವೆಯನ್ನು ಒದಗಿಸುತ್ತದೆ.

ಏರ್‌ಟೆಲ್ 349ರೂ. ಪ್ಲ್ಯಾನ್
ಏರ್‌ಟೆಲ್‌ನ 349ರೂ. ಪ್ರೀಪೇಡ್ ಪ್ಲ್ಯಾನ್ ಸಹ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಲೋಕಲ್ ಮತ್ತು ನ್ಯಾಶನಲ್ ಕರೆಗಳ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 2GB ಡೇಟಾ ಹಾಗೂ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ಸಿಗಲಿದೆ. ಹಾಗೆಯೆ ಈ ಪ್ಲ್ಯಾನ್ ಏರ್‌ಟೆಲ್ Wynk Music ಸೇವೆಯನ್ನು ಒದಗಿಸುತ್ತದೆ.

ವ್ಯತ್ಯಾಸ ಏನು?
ಏರ್‌ಟೆಲ್‌ನ 298ರೂ. ಪ್ರೀಪೇಡ್ ಪ್ಲ್ಯಾನ್ ಹಾಗೂ 349ರೂ. ಪ್ರೀಪೇಡ್ ಪ್ಲ್ಯಾನ್ ಎರಡು ಒಂದೇ ರೀತಿಯ ಪ್ರಯೋಜನಗಳನ್ನು ಒಳಗೊಂಡಿವೆ. ಎರಡು ಪ್ಲ್ಯಾನ್‌ಗಳ ಪ್ರಯೋಜನಗಳು ಒಂದೇ ಅಂದಮೇಲೆ ಆ ಪ್ಲ್ಯಾನ್‌ಗಳ ಬೆಲೆಯಲ್ಲಿ ವ್ಯತ್ಯಾಸ ಯಾಕಿದೆ ಎನ್ನುವ ಪ್ರಶ್ನೆ ಮೂಡುತ್ತದೆ. ಏರ್‌ಟೆಲ್‌ನ 349ರೂ. ಪ್ಲ್ಯಾನ್ ಈ ಪ್ರಯೋಜನಗಳೊಂದಿಗೆ ಒಂದು ತಿಂಗಳ ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಒದಗಿಸುತ್ತದೆ. ಆದರೆ ಏರ್‌ಟೆಲ್‌ನ 298ರೂ. ಪ್ಲ್ಯಾನಿನಲ್ಲಿ ಈ ಸೇವೆ ಅಲಭ್ಯವಾಗಿದೆ. ಹಾಗೆಯೇ ಏರ್‌ಟೆಲ್‌ನ ಇನ್ನಿತರೆ ಜನಪ್ರಿಯ ಪ್ಲ್ಯಾನ್‌ಗಳ ಬಗ್ಗೆ ಮುಂದೆ ಮಾಹಿತಿ ನೀಡಲಾಗಿದೆ.

ಏರ್‌ಟೆಲ್ 179ರೂ. ಪ್ಲ್ಯಾನ್
ಏರ್‌ಟೆಲ್‌ನ 179 ರೂ ಪ್ರಿಪೇಯ್ಡ್ ಯೋಜನೆ 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದ್ದು, ಡೇಟಾ ಮತ್ತು ಕರೆ ಪ್ರಯೋಜನಗಳನ್ನು ಇದು ಒಳಗೊಂಡಿದೆ. ಒಟ್ಟು ಪೂರ್ಣ ವ್ಯಾಲಿಡಿಟಿ ಅವಧಿಗೆ 2GB ಡೇಟಾ ಸೌಲಭ್ಯವನ್ನು ಒಳದಗಿಸಲಿದ್ದು, ಇದರೊಂದಿಗೆ ಅನಿಯಮಿತ ಕರೆಗಳ ಸೌಲಭ್ಯ ಸಹ ಪಡೆದಿದೆ. ಜೊತೆಗೆ ಈ ಪ್ಲ್ಯಾನ್ ಸ್ಪಲ್ಪ ಭಿನ್ನವಾಗಿ ಕಾಣಿಸುತ್ತದೆ ಏಕೆಂದರೆ ಈ ಪ್ಲ್ಯಾನಿನಲ್ಲಿ ಹೆಚ್ಚುವರಿಯಾಗಿ ಭಾರ್ತಿ ಆಕ್ಸಾದಿಂದ 2 ಲಕ್ಷ ರೂಪಾಯಿ ಮೌಲ್ಯದ ಜೀವ ವಿಮೆ ಸಹ ದೊರೆಯಲಿದೆ. ಹಾಗೂ ಏರ್‌ಟೆಲ್ ಆಪ್‌ನ ಇತರೆ ಸೇವೆಗಳು ಸಿಗಲಿವೆ.

ಏರ್‌ಟೆಲ್ 379ರೂ. ಪ್ಲ್ಯಾನ್
ಏರ್‌ಟೆಲ್‌ನ ಈ 379ರೂ. ಪ್ರಿಪೇಯ್ಡ್ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಇದು ಸಹ ಡೇಟಾ ಮತ್ತು ಕರೆ ಪ್ರಯೋಜನಗಳನ್ನು ಪಡೆದಿದೆ. ಒಟ್ಟು ಪೂರ್ಣ ವ್ಯಾಲಿಡಿಟಿ ಅವಧಿಗೆ 6GB ಡೇಟಾ ಸೌಲಭ್ಯವನ್ನು ಒಳದಗಿಸಲಿದ್ದು, ಇದರೊಂದಿಗೆ ಅನಿಯಮಿತ ಕರೆಗಳ ಸೌಲಭ್ಯ ಸಹ ಪಡೆದಿದೆ. ಜೊತೆಗೆ ಈ ಪ್ಲ್ಯಾನ್ Wynk ಮ್ಯೂಸಿಕ್, ಏರ್‌ಟೆಲ್ ಎಕ್ಸ್‌ಟ್ರಿಮ್ ಪ್ರೀಮಿಯಮ್, ಪ್ರತಿದಿನ 100ಎಸ್‌ಎಮ್ಎಸ್ ಪ್ರಯೋಜನ ಪಡೆದಿದೆ.

ಏರ್‌ಟೆಲ್ 1498ರೂ. ಪ್ಲ್ಯಾನ್
ಏರ್‌ಟೆಲ್ 1498ರೂ. ಪ್ಲ್ಯಾನ್ ಪ್ರೀಪೇಡ್ ಪ್ಲ್ಯಾನ್ 365 ದಿನಗಳ ವಾರ್ಷಿಕ ವ್ಯಾಲಿಡಿಟಿ ಪಡೆದಿದ್ದು, ಕರೆ ಮತ್ತು ಡೇಟಾ ಪ್ರಯೋಜನವನ್ನು ಒಳಗೊಂಡಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 24GB ಡೇಟಾ ಸೌಲಭ್ಯದ ಜೊತೆಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಪಡೆದುಕೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯವನ್ನು ಹೊಂದಿದೆ. ಇನ್ನು ಇದರೊಂದಿಗೆ Wynk ಮ್ಯೂಸಿಕ್, ಏರ್‌ಟೆಲ್ ಎಕ್ಸ್‌ಟ್ರಿಮ್ ಪ್ರೀಮಿಯಮ್, ಫಾಸ್ಟ್‌ಟ್ಯಾಗ್ ಕ್ಯಾಶ್‌ಬ್ಯಾಕ್ ಸೌಲಭ್ಯ ಹೊಂದಿದೆ. ದೀರ್ಘ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಈ ಆಯ್ಕೆ ಉತ್ತಮ ಅನಿಸಲಿದೆ.

ಏರ್‌ಟೆಲ್ 647ರೂ. ಪ್ಲ್ಯಾನ್
ಸುಮಾರು ಮೂರು ತಿಂಗಳ ಕಾಲದ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಈ ಪ್ಲ್ಯಾನ್ ಬೆಸ್ಟ್ ಅನಿಸುತ್ತದೆ. ಏಕೆಂದರೇ ಏರ್‌ಟೆಲ್‌ನ 647ರೂ. ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಪ್ರತಿದಿನ 1.5GB ಡಾಟಾ ಸೌಲಭ್ಯ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್ ಲಭ್ಯಇವೆ. ಇದರೊಂದಿಗೆ ಅನಿಯಮಿತ ಕರೆಗಳ ಪ್ರಯೋಜನಗಳು ದೊರೆಯುತ್ತದೆ.

ಏರ್‌ಟೆಲ್ 497ರೂ. ಪ್ಲ್ಯಾನ್
ಏರ್‌ಟೆಲ್‌ನ 497ರೂ. ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಇನ್ನು ಈ ಪ್ಲ್ಯಾನಿನಲ್ಲಿ ಪ್ರತಿದಿನ 1.5GB ಡಾಟಾ ಸೌಲಭ್ಯ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್ ಉಚಿತವಾಗಿ ಸಿಗಲಿವೆ. ಇದರೊಂದಿಗೆ ಅನಿಯಮಿತ ಕರೆಗಳ ಸೌಲಭ್ಯ ಹಾಗೂ ರೋಮಿಂಗ್ ಪ್ರಯೋಜನ ಸಹ ಇದೆ.


Click it and Unblock the Notifications








