Home
ಸುದ್ದಿಜಾಲ

ಮನರಂಜನೆ ಪ್ರಿಯರಿಗೆ ಏರ್‌ಟೆಲ್‌ನ ಈ ರೀಚಾರ್ಜ್‌ ಪ್ಲ್ಯಾನ್‌ ಉತ್ತಮ; ಯಾಕಂದ್ರೆ!?

ಏರ್‌ಟೆಲ್‌ ತನ್ನೆಲ್ಲಾ ಚಂದಾದಾರರಿಗೆ ವಿಶೇಷ ಹಾಗೂ ಹಲವು ಆಯ್ಕೆಯಗಳನ್ನು ನೀಡಿದ್ದು, ಈ ಮೂಲಕ ಗ್ರಾಹಕರು ತಮ್ಮ ಇಚ್ಚೆಗೆ ಅನುಗುಣವಾಗಿ ರೀಚಾರ್ಜ್‌ ಮಾಡಿಸಿಕೊಳ್ಳಬಹುದಾಗಿದೆ. ಅದರಲ್ಲೂ ಇತ್ತೀಚೆಗೆ ಹೊಸ ರೀಚಾರ್ಜ್‌ ಪ್ಲ್ಯಾನ್‌ಗಳನ್ನೂ ಸಹ ಘೋಷಣೆ ಮಾಡಿದ್ದು, ಇದರೊಂದಿಗೆ ಕನಿಷ್ಠ ರೀಚಾರ್ಜ್‌ ದರವನ್ನು ಏರಿಕೆ ಮಾಡುವ ಮೂಲಕ ಹಲವಾರು ಗ್ರಾಹಕರ ಆಕ್ರೋಶಕ್ಕೂ ಕಾರಣವಾಗಿದೆ. ಅದಾಗ್ಯೂ ಏರ್‌ಟೆಲ್‌ನ ಈ ರೀಚಾರ್ಜ್‌ ಪ್ಲ್ಯಾನ್‌ ಮಾತ್ರ ಮನರಂಜನೆ ಇಷ್ಟಪಡುವವರಿಗೆ ಸಂತಸ ಹೆಚ್ಚಿಗೆ ಮಾಡಲಿದೆ.

ಮನರಂಜನೆ ಪ್ರಿಯರಿಗೆ ಏರ್‌ಟೆಲ್‌ನ ಈ ರೀಚಾರ್ಜ್‌ ಪ್ಲ್ಯಾನ್‌ ಉತ್ತಮ; ಯಾಕಂದ್ರೆ!?

ಹೌದು, ಏರ್‌ಟೆಲ್‌ ಹಲವಾರು ರೀಚಾರ್ಜ್‌ ಪ್ಲ್ಯಾನ್‌ಗಳನ್ನು ಹೊಂದಿದ್ದು, ಇವು ಕೇವಲ ಕರೆ ಮಾಡಲಷ್ಟೇ ಅಲ್ಲದೆ, ಓಟಿಟಿ ಚಂದಾದಾರಿಕೆ ಹಾಗೂ ಇನ್ನಿತರೆ ಪ್ರಮುಖ ಸೇವೆಗಳನ್ನು ಪಡೆಯಲು ಅನುಕೂಲ ಮಾಡಿಕೊಡುತ್ತವೆ. ಆ ರೀಚಾರ್ಜ್‌ ಪ್ಲ್ಯಾನ್‌ಗಳ ಲಿಸ್ಟ್‌ನಲ್ಲಿ ಏರ್‌ಟೆಲ್‌ನ 3,359 ರೂ. ಗಳ ಪ್ಲ್ಯಾನ್‌ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ. ಹಾಗಿದ್ರೆ, ಈ ರೀಚಾರ್ಜ್‌ ಪ್ಲ್ಯಾನ್‌ನಲ್ಲಿ ಬಳಕೆದಾರರಿಗೆ ಲಭ್ಯವಾಗುವ ವಿಶೇಷ ಸೌಲಭ್ಯವೇನು?, ಯಾವೆಲ್ಲಾ ಕಾರಣಕ್ಕೆ ಈ ಪ್ಲ್ಯಾನ್‌ ರೀಚಾರ್ಜ್‌ ಮಾಡಿಸಿಕೊಳ್ಳಬೇಕು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

3,359 ರೂ. ಗಳ ಪ್ರಿಪೇಯ್ಡ್ ಪ್ಲ್ಯಾನ್‌ ಉತ್ತಮವೇ?

ಕೆಲವರಿಗೆ ಈ ಅಧಿಕ ಮೊತ್ತದ ರೀಚಾರ್ಜ್ ಪ್ಲ್ಯಾನ್‌ ಮಾಡಿಸಿಕೊಳ್ಳುವುದು ಕಷ್ಟಕರವಾದ ಕೆಲಸವಾಗಬಹುದು. ಆದರೆ, ಈ ಪ್ಲ್ಯಾನ್‌ನಲ್ಲಿ ಇರುವ ಸೌಲಭ್ಯಗಳನ್ನು ಗಮನಿಸಿದರೆ ಹಣಕ್ಕೆ ತಕ್ಕ ಸೇವೆ ಖಂಡಿತ ಲಭ್ಯವಾಗುತ್ತದೆ ಎಂಬುದು ನಿಮಗೆ ಅರಿವಾಗುತ್ತದೆ. ಯಾಕೆಂದರೆ, 350 ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿರುವ ಏರ್‌ಟೆಲ್‌ ಈಗಾಗಲೇ 5G ಪ್ಲಸ್ ನೆಟ್‌ವರ್ಕ್‌ಗಳೊಂದಿಗೆ ದೇಶದ ಹಲವಾರು ಭಾಗಗಳಲ್ಲಿ ವಿಶೇಷ ನೆಟ್‌ವರ್ಕ್‌ ಸೇವೆ ನೀಡುತ್ತಿದ್ದು, ಈ ರೀಚಾರ್ಜ್‌ ಪ್ಲ್ಯಾನ್‌ ಸಹ5G ಗೆ ಸಹಕಾರಿಯಾಗಿದೆ. ಇದರಿಂದ ಯಾವುದೇ ಅಡೆತಡೆ ಇಲ್ಲದೆ ವೇಗದ ಇಂಟರ್ನೆಟ್‌ ಸೇವೆಯನ್ನು ಪಡೆಯಬಹುದು.

ಇನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಓಟಿಟಿ ಪ್ರಯೋಜನಗಳನ್ನು ಪಡೆಯಲು ಈ ಪ್ಲ್ಯಾನ್‌ ಅತ್ಯಾನುಕೂಲ. ಈ ಮೂಲಕ ಮನರಂಜನಾ ಪ್ರಯೋಜನಗಳೊಂದಿಗೆ ಪ್ರಿಪೇಯ್ಡ್ ಯೋಜನೆಯನ್ನು ಸಹ ಪಡೆಯಬಹುದಾಗಿದ್ದು, ಇದಿಷ್ಟೇ ಅಲ್ಲದೆ ಹಲವಾರು ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ಪಡೆಯಬಹುದಾಗಿದೆ. ಹೀಗಾಗಿ ಕರೆ ವಿಷಯವನ್ನು ಹೊರತುಪಡಿಸಿ ಬಳಕೆದಾರರು ದೊಡ್ಡ ಲೈಬ್ರರಿಗೆ ಪ್ರವೇಶವನ್ನು ಪಡೆದಂತ ಅನುಭವ ಆಗುತ್ತದೆ ಎಂದೇ ಹೇಳಬಹುದು.

ಮನರಂಜನೆ ಪ್ರಿಯರಿಗೆ ಏರ್‌ಟೆಲ್‌ನ ಈ ರೀಚಾರ್ಜ್‌ ಪ್ಲ್ಯಾನ್‌ ಉತ್ತಮ; ಯಾಕಂದ್ರೆ!?

ಓಟಿಟಿ ವೀಕ್ಷಣೆಗೆ ಹೆಚ್ಚಿನ ಡೇಟಾ ಅವಶ್ಯಕ

ಸಮಾನ್ಯವಾಗಿ ಯಾವುದೇ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ವಿಡಿಯೋ ವೀಕ್ಷಣೆ ಮಾಡಬೇಕಾದರೂ ಹೆಚ್ಚಿನ ಡೇಟಾ ಅವಶ್ಯಕ. ಯಾಕೆಂದರೆ ಈ ವಿಡಿಯೋಗಳು ಹೆಚ್ಚಿನ ರೆಸಲ್ಯೂಶನ್‌ ಸಾಮರ್ಥ್ಯ ಹೊಂದಿದ್ದು, ಬಳಕೆದಾರರಿಗೆ ಯಾವಾಗಲು ವಿಶೇಷ ಅನುಭವ ನೀಡಲು ಮುಂದಾಗುತ್ತಲೇ ಇರುತ್ತವೆ. ಅದರಲ್ಲೂ ಉತ್ತಮ ಕ್ವಾಲಿಟಿ ವಿಡಿಯೋ ವೀಕ್ಷಣೆ ಮಾಡುವ ಮಜವೇ ಬೇರೆ. ಇದಕ್ಕಾಗಿ ನೀವು ಈ ರೀಚಾರ್ಜ್‌ ಪ್ಲ್ಯಾನ್‌ ಮೂಲಕ ಹೆಚ್ಚಿನ ಡೇಟಾ ಪಡೆಯುವುದರಿಂದ ಈ ರೀತಿಯ ವಿಡಿಯೋ ವೀಕ್ಷಣೆಗೆ ಅನುಕೂಲ ಆಗುತ್ತದೆ.

ಏರ್‌ಟೆಲ್‌ನ ಈ ಪ್ಲ್ಯಾನ್‌ ಪ್ರಯೋಜನ ಏನು?

ಇನ್ನು ಈ 3,359 ರೂ. ಗಳ ಪ್ಲ್ಯಾನ್‌ ಬಳಕೆದಾರರು 365 ದಿನಗಳ ಒಟ್ಟು ಮಾನ್ಯತೆಯ ಜೊತೆಗೆ ದಿನವೂ 2.5GB ದೈನಂದಿನ ಡೇಟಾವನ್ನು ಪಡೆಯಬಹುದಾಗಿದ್ದು, ಅನಿಯಮಿತ ವಾಯ್ಸ್‌ ಕಾಲ್‌ ಹಾಗೂ 100 ಎಸ್‌ಎಮ್‌ಎಸ್‌ ಪ್ರಯೋಜನವನ್ನು ಪಡೆಯಬಹುದು.

ಇನ್ನು ಪ್ರಮುಖ ವಿಷಯಕ್ಕೆ ಬರುವುದಾದರೆ ಒಂದು ವರ್ಷದ ವರೆಗೆ ಬಳಕೆದಾರರು ಅಮೆಜಾನ್ ಪ್ರೈಮ್‌ ವಿಡಿಯೋ (ಮೊಬೈಲ್ ಆವೃತ್ತಿ), ಹಾಗೂ ಡಿಸ್ನಿ+ ಹಾಟ್‌ಸ್ಟಾರ್ (ಮೊಬೈಲ್ ಆವೃತ್ತಿ) , ಅಪೊಲೊ 24|7 ಸರ್ಕಲ್, ಫಾಸ್ಟ್ಯಾಗ್ ನಲ್ಲಿ 100 ರೂ. ಗಳ ಕ್ಯಾಶ್‌ಬ್ಯಾಕ್ ಹಾಗೂ ವಿಂಕ್ ಮ್ಯೂಸಿಕ್‌ನಲ್ಲಿ ಉಚಿತ ಹಾಡುಗಳನ್ನು ಆಲಿಸಬಹುದಾಗಿದೆ.

ಮನರಂಜನೆ ಪ್ರಿಯರಿಗೆ ಏರ್‌ಟೆಲ್‌ನ ಈ ರೀಚಾರ್ಜ್‌ ಪ್ಲ್ಯಾನ್‌ ಉತ್ತಮ; ಯಾಕಂದ್ರೆ!?

ಇದರೊಂದಿಗೆ ಈ ಯೋಜನೆಯು ಏರ್‌ಟೆಲ್‌ನ 5G ನೆಟ್‌ವರ್ಕ್‌ನಲ್ಲಿಯೂ ಕಾರ್ಯನಿರ್ವಹಿಸುತ್ತದೆ ಎಂಬುದು ಗ್ರಾಹಕರು ಗಮನಿಸಬೇಕಾದ ವಿಷಯ. ಅದರಲ್ಲೂ 5G ಸೇವೆಗಳನ್ನು ಪಡೆಯಲು 4G ಗ್ರಾಹಕರಿಂದ ಹೆಚ್ಚುವರಿಯಾಗಿ ಯಾವುದೇ ದರ ವಿಧಿಸುತ್ತಿಲ್ಲವಾದ್ದರಿಂದ 4G ಆಧಾರದ ಈ ರೀಚಾರ್ಜ್‌ ಪ್ಲ್ಯಾನ್‌ ಮೂಲಕವೇ 5G ಸೇವೆ ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
With the Rs 3359 plan from Airtel, you get 2.5GB of daily data along with 365 days of total validity.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+