ಏರ್‌ಟೆಲ್ ಇನ್ಫಿನಿಟಿ ಪ್ಲಾನ್: ಮಾರುಕಟ್ಟೆಯ ಕಿಂಗ್ ಆಫರ್...!
ಟೆಲಿಕಾಂ ಮಾರುಕಟ್ಟೆಯಲ್ಲಿ ಸದ್ಯ ಪ್ರೀಪೇಯ್ಡ್ ಆಫರ್‌ಗಳ ಬದಲಾಗಿ ಪೋಸ್ಟ್ ಪೇಯ್ಡ್ ಆಫರ್‌ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಲಾಂಚ್ ಆಗುತ್ತಿವೆ. ಒಂದರ ಹಿಂದೆ ಒಂದು ಆಫರ್‌ಗಳನ್ನು ನಾವು ಕಾಣಬಹುದಾಗಿದೆ. ಇದೇ ಮಾದರಿಯಲ್ಲಿ ಏರ್‌ಟೆಲ್ ತನ್ನ ಬಳಕೆದಾರರಿಗೆ ದೊಡ್ಡ ಮಟ್ಟದಲ್ಲಿ ಆಫರ್‌ವೊಂದನ್ನು ನೀಡುತ್ತಿದೆ. ಸದ್ಯ ಇನ್ಫಿನಿಟಿ ಪ್ಲಾನ್‌ವೊಂದನ್ನು ಲಾಂಚ್ ಮಾಡಿದ್ದು, ಇದರಲ್ಲಿ ಬಳೆದಾರರಿಗೆ ಕರೆ ಮಾಡುವ ಅವಕಾಶ ಸೇರಿದಂತೆ ಡಬ್ಬಲ್ ಡೇಟ್ ಸೇರಿದಂತೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಲಾಭವನ್ನು ಮಾಡಿಕೊಡಲಿದೆ.

ಓದಿರಿ: ಅಮೆಜಾನ್‌ನಲ್ಲಿ ಇಲ್ಲದ ಆಫರ್ ಇಲ್ಲಿ ಮಾತ್ರವೇ: ಕೇವಲ ಮೂರು ದಿನ..!
ಜಿಯೋ ಹಾಗೂ ವೊಡಾಪೋನ್‌ಗಳು ಮಾರುಕಟ್ಟೆಯಲ್ಲಿ ಪೊಸ್ಟ್‌ಪೇಯ್ಡ್ ಬಳಕೆದಾರರನ್ನು ಸೆಳೆಯುವ ಸಲುವಾಗಿ ಹೊಸ ಮಾದರಿಯ ಆಫರ್ ಗಳನ್ನು ಘೋಷಣೆ ಮಾಡುತ್ತಿವೆ. ಇದೇ ಹಿನ್ನಲೆಯಲ್ಲಿ ಏರ್‌ಟೆಲ್‌ಗೆ ತನ್ನ ಬಳಕೆದಾರರನ್ನು ಕಳೆದುಕೊಳ್ಳದೆ ಇರುವ ಅವಶ್ಯಕತೆಯೂ ನಿರ್ಮಾಣವಾಗಿದ್ದು, ಇದಕ್ಕಾಗಿಯೇ ಇರುವ ಪ್ಲಾನ್‌ನಲ್ಲಿಯೇ ಹೆಚ್ಚಿನ ಲಾಭವನ್ನು ಮಾಡಿಕೊಡಲು ಮುಂದಾಗಿದೆ. ಬಳಕೆದಾರರಿಗೆ ಇದು ಮೆಚ್ಚಿಗೆಯಾಗುವ ಸಾಧ್ಯತೆ ಇದೆ.

ರೂ.399 ಪ್ಲಾನ್:
ಈ ಹಿಂದೆ ರೂ.399 ಪ್ಲಾನ್ ಅನ್ನು ಲಾಂಚ್ ಮಾಡಿದ್ದ ಸಂದರ್ಭದಲ್ಲಿ ಬಳಕೆದಾರರಿಗೆ ತಿಂಗಳಿಗೆ ಒಟ್ಟು 20 GB ಡೇಟಾವನ್ನು ಬಳಕೆಗೆ ನೀಡುತಿತ್ತು. ಇದಾದ ನಂತರದಲ್ಲಿ ಎಲ್ಲಾ ಟೆಲಿಕಾಂ ಕಂಪನಿಗಳು ಇದೇ ಮಾದರಿಯ ಪ್ಲಾನ್ ಅನ್ನು ಘೋಷಣೆ ಮಾಡಿದ ಹಿನ್ನಲೆಯಲ್ಲಿ, ಬಳಕೆದಾರರಿಗೆ ಇನ್ನು ಹೆಚ್ಚಿನ ಲಾಭವನ್ನು ಮಾಡಿಕೊಡಲು ಮತ್ತೆ ಹೆಚ್ಚುವರಿಯಾಗಿ 20 GB ಡೇಟಾವನ್ನು ನೀಡಲಿದೆ.

ಒಟ್ಟು 40 GB:
ಈ ಹಿಂದೆ ನೀಡುತ್ತಿದ್ದ 20 GB ಡೇಟಾವನ್ನು ನೀಡುತಿತ್ತು. ಈಗ ಇದರೊಂದಿಗೆ ಹೆಚ್ಚುವರಿಯಾಗಿ ಮತ್ತೆ 20 GB ಡೇಟಾವನ್ನು ಬಳಕೆದಾರರಿಗೆ ನೀಡುತ್ತಿರುವ ಹಿನ್ನಲೆಯಲ್ಲಿ ರೂ.399 ಪ್ಲಾನ್‌ನಲ್ಲಿ ಒಟ್ಟು 40 GB ಡೇಟಾವನ್ನು ಬಳಕೆ ಮಾಡಿಕೊಳ್ಳುವ ಅವಕಾಶವು ದೊರೆಯಲಿದೆ. ಇದಲ್ಲದೇ ಡೇಟಾ ಕ್ಯಾರಿ ಮಾಡುವ ಆಯ್ಕೆಯನ್ನು ಇದರಲ್ಲಿ ನೀಡಲಾಗಿದೆ.

ಉಚಿತ ಆಫರ್‌ಗಳು:
ಇದಲ್ಲದೇ ಈ ಆಫರ್‌ನಲ್ಲಿ ಬಳಕೆದಾರರಿಗೆ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ಮಾಡಿಕೊಡಲಾಗಿದ್ದು, ಜೊತೆಗೆ ರೋಮಿಂಗ್ ಸಹ ಉಚಿತವಾಗಿಯೇ ಇರಲಿದೆ. ಏರ್‌ಟೆಲ್ ಆಪ್‌ಗಳನ್ನು ಯಾವುದೇ ಶುಲ್ಕವಿಲ್ಲದೇ ಬಳಕೆ ಮಾಡುವ ಆಯ್ಕೆಯೂ ಬಳಕೆದಾರರಿಗೆ ಈ ಆಫರ್‌ನಲ್ಲಿ ದೊರೆಯಲಿದೆ.

ಅಮೆಜಾನ್ ಪ್ರೈಮ್:
ಇದಲ್ಲದೇ ಈ ಪ್ಲಾನ್ ಅನ್ನು ರಿಚಾರ್ಜ್ ಮಾಡಿಸಿಕೊಂಡವರಿಗೆ ಒಂದು ವರ್ಷಗಳ ಕಾಲ ಉಚಿತವಾಗಿ ಅಮೆಜಾನ್ ಪ್ರೈಮ್ ವಿಡಿಯೋಗಳನ್ನು ನೋಡುವ ಅವಕಾಶವು ದೊರೆಯಲಿದೆ. ಬೇರೆ ಯಾವುದೇ ಟೆಲಿಕಾಂ ಕಂಪನಿಗಳು ಈ ಮಾದರಿಯ ಆಫರ್ ಅನ್ನು ನೀಡುತ್ತಿಲ್ಲ.

ಒಂದೇ ಆಫರ್‌ನಲ್ಲಿ ಹೆಚ್ಚು ಲಾಭ:
ಏರ್‌ಟೆಲ್ ನೀಡಿರುವ ಈ ಆಫರ್ ಮಾರುಕಟ್ಟೆಯಲ್ಲಿಯೇ ಬೆಸ್ಟ್ ಎನ್ನಲಾಗಿದೆ. ಹೆಚ್ಚು ಪ್ರಮಾಣದ ಡೇಟಾದೊಂದಿಗೆ ಬಳಕೆದಾರರಿಗೆ ಕರೆ ಮಾಡುವ ಅವಕಾಶವು ದೊರೆಯುತ್ತಿದೆ. ಈ ಹಿನ್ನಲೆಯಲ್ಲಿ ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ ಇದೊಂದು ಬೆಸ್ಟ್ ಆಫರ್ ಎಂದರೆ ತಪ್ಪಾಗುವುದಿಲ್ಲ ಎನ್ನಲಾಗಿದೆ.


Click it and Unblock the Notifications








