ಏರ್‌ಟೆಲ್ ಕೊಡುಗೆ : ಬಳಕೆದಾರರಿಗೆ ಲಭ್ಯವಾಗಲಿದೆ 400MB ಉಚಿತ ಹೆಚ್ಚುವರಿ ಡೇಟಾ!

|

ಭಾರತೀಯ ಟೆಲಿಕಾಂ ವಲಯದಲ್ಲಿ ಸದ್ಯ ಪೈಪೋಟಿ ಜೋರಾಗಿದ್ದು, ಗ್ರಾಹಕರನ್ನು ಸೆಳೆಯಲು ಟೆಲಿಕಾಂ ಕಂಪನಿಗಳು ಹೆಣಗಾಡುತ್ತಿವೆ. ಅವುಗಳಲ್ಲಿ ಏರ್‌ಟೆಲ್‌ ಮತ್ತೆ ನಂಬರ್‌ ಒನ್‌ ಸ್ಥಾನ ಪಡೆಯಲು ಭಾರಿ ಕಸರತ್ತು ನಡೆಸುತ್ತಿದ್ದು, ಇದೀಗ ಕಂಪನಿಯು ತನ್ನ ಜನಪ್ರಿಯ ಮೂರು ರೀಚಾರ್ಜ್‌ ಪ್ಲ್ಯಾನ್‌ಗಳಲ್ಲಿ ಬದಲಾವಣೆಯನ್ನು ಮಾಡಿಕೊಂಡಿದೆ. ಈ ಮೂಲಕ ಬಳಕೆದಾರರಿಗೆ 400MB ಡೇಟಾವನ್ನು ಹೆಚ್ಚುವರಿಯಾಗಿ ನೀಡಲು ಸಜ್ಜಾಗಿದೆ.

ಏರ್‌ಟೆಲ್ ಕೊಡುಗೆ : ಬಳಕೆದಾರರಿಗೆ ಲಭ್ಯವಾಗಲಿದೆ 400MB ಉಚಿತ ಹೆಚ್ಚುವರಿ ಡೇಟಾ!

ಹೌದು, ಏರ್‌ಟೆಲ್ ಕಂಪನಿಯು ಬಳಕೆದಾರಿಗೆ ಹೆಚ್ಚುವರಿ 400MB ಡೇಟಾವನ್ನು ಉಚಿತವಾಗಿ ನೀಡಲು ಯೋಜಿಸಿದ್ದು, ಈ ಪ್ರಯೋಜನವು ಏರ್‌ಟೆಲ್‌ನ 398ರೂ, 448ರೂ ಮತ್ತು 499ರೂ ರೀಚಾರ್ಜ್‌ ಪ್ಲ್ಯಾನ್‌ಗಳಲ್ಲಿ ದೊರೆಯಲಿದೆ. ಈ ರೀಚಾರ್ಜ್‌ ಪ್ಯಾಕ್‌ಗಳಲ್ಲಿ ಸದ್ಯ ಇರುವ ಡೇಟಾಗೆ ಇನ್ಮುಂದೆ 400ಎಂಬಿ ಡೇಟಾವು ಸೇರಿಕೊಳ್ಳಲಿದೆ ಎನ್ನಲಾಗಿದೆ. ಹಾಗಾದರೇ ಏರ್‌ಟೆಲ್‌ ಕಂಪನಿಯ ಮೂರು ರೀಚಾರ್ಜ್‌ ಪ್ಲ್ಯಾನ್‌ಗಳ ಕುರಿತು ಮುಂದೆ ನೋಡೋಣ.

ಓದಿರಿ : 'ಒನ್‌ಪ್ಲಸ್‌ 7 ಪ್ರೊ' ಖರೀದಿಸ ಬೇಕೇ ಅಥವಾ ಬೇಡವೇ ನೀವೇ ನಿರ್ಧರಿಸಿ! ಓದಿರಿ : 'ಒನ್‌ಪ್ಲಸ್‌ 7 ಪ್ರೊ' ಖರೀದಿಸ ಬೇಕೇ ಅಥವಾ ಬೇಡವೇ ನೀವೇ ನಿರ್ಧರಿಸಿ!

398ರೂ ರೀಚಾರ್ಜ್‌

398ರೂ ರೀಚಾರ್ಜ್‌

ಪ್ರಸ್ತುತ ಏರ್‌ಟೆಲ್‌ನ 398ರೂ ರೀಚಾರ್ಜ್‌ ಪ್ಯಾಕ್‌ ಉಚಿತ ಕರೆಗಳು, ಎಸ್‌ಎಮ್‌ಎಸ್‌, ಸೇರಿದಂತೆ ಪ್ರತಿದಿನ 1GB ಉಚಿತ ಡೇಟಾ ಆಯ್ಕೆಗಳನ್ನು ಒಳಗೊಂಡಿವೆ. ಆದರೆ ಬಳಕೆದಾರರಿಗೆ ಇನ್ಮುಂದೆ 400MB ಡೇಟಾ ಹೆಚ್ಚುವರಿಯಾಗಿ ದೊರೆಯಲಿದ್ದು, ಹೀಗಾಗಿ ಪ್ರತಿದಿನ 1.4GB ಲಭ್ಯವಾಗಲಿದೆ. ಉಳಿದಂತೆ ಇತರೆ ಪ್ರಯೋಜನಗಳಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ.

448ರೂ ರೀಚಾರ್ಜ್‌

448ರೂ ರೀಚಾರ್ಜ್‌

ಏರ್‌ಟೆಲ್ 448ರೂ ರೀಚಾರ್ಜ್‌ ಪ್ಯಾಕ್‌ನಲ್ಲಿ ಸದ್ಯ ಬಳಕೆದಾರರು ಉಚಿತ ಕರೆ, ಎಸ್‌ಎಮ್‌ಎಸ್‌ ಮತ್ತು ಪ್ರತಿದಿನ 1.5GB ಡೇಟಾದ ಪ್ರಯೋಜನ ಪಡೆಯುತ್ತಿದ್ದು, ಇನ್ಮುಂದೆ ಈ ರೀಚಾರ್ಜ್‌ ಪ್ಲ್ಯಾನ್‌ನಲ್ಲಿ ಹೆಚ್ಚುವರಿಯಾಗಿ 400MB ಸೇರಿಕೊಳ್ಳಲಿದೆ. ಆನಂತರ ಪ್ರತಿದಿನ 1.9GB ಡೇಟಾದ ಪ್ರಯೋಜನವು ಬಳಕೆದಾರರಿಗೆ ದೊರೆಲಿದೆ.

499ರೂ ರೀಚಾರ್ಜ್‌

499ರೂ ರೀಚಾರ್ಜ್‌

ಏರ್‌ಟೆಲ್ 499ರೂ ರೀಚಾರ್ಜ್‌ ಯೋಜನೆಯಲ್ಲಿ ಪ್ರಸ್ತುತ ಉಚಿತ ಕರೆಗಳು, ಎಸ್‌ಎಮ್‌ಎಸ್‌ ಹಾಗೂ ಪ್ರತಿದಿನ 2GB ಉಚಿತ ಡೇಟಾ ಬಳಕೆದಾರರಿಗೆ ದೊರೆಯುತ್ತಿದ್ದು, ಇನ್ನು ಹೊಸದಾಗಿ 400MB ಡೇಟಾವು ದೊರೆಯಲಿದೆ. ಹೀಗಾಗಿ ಬಳಕೆದಾರರಿಗೆ ಪ್ರತಿದಿನ 2.4GB ಡೇಟಾದ ಪ್ರಯೋಜನವು ಸೀಗಲಿದ್ದು, ವ್ಯಾಲಿಡಿಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಏರ್‌ಟೆಲ್‌ ಟಿವಿ ಚಂದಾದಾರತ್ವ

ಏರ್‌ಟೆಲ್‌ ಟಿವಿ ಚಂದಾದಾರತ್ವ

ಏರ್‌ಟೆಲ್‌ನ ಈ ಮೂರು ರೀಚಾರ್ಜ್‌ ಪ್ಲ್ಯಾನ್‌ಗಳ ಡೇಟಾದಲ್ಲಿ ಹೆಚ್ಚಳ ಮಾಡಿರುವುದರೊಂದಿಗೆ ಕಂಪನಿಯು ಏರ್‌ಟೆಲ್‌ ಟಿವಿ ಚಂದಾದಾರತ್ವದ ಪ್ರಯೋಜನವನ್ನು ಸಹ ಒದಗಿಸುತ್ತಿದೆ. Zee5, HOOQ, ಸೇರಿದಂತೆ 350ಕ್ಕೂ ಅಧಿಕ ಲೈವ್‌ ಚಾನಲ್‌ಗಳನ್ನು ವೀಕ್ಷಿಸಬಹುದಾಗಿದೆ. ಹಾಗೂ 10,000ಕಿಂತಲೂ ಹೆಚ್ಚಿನ ಸಿನಿಮಾಗಳನ್ನು ವೀಕ್ಷಿಸುವ ಆಯ್ಕೆಗಳು ಇರಲಿವೆ ಎನ್ನಲಾಗಿದೆ.

ಓದಿರಿ : ರೆಡ್ಮಿ ನೋಟ್‌ 7ಎಸ್‌ ಲಾಂಚ್!..48ಎಂಪಿ ಕ್ಯಾಮೆರಾ ಫೀಚರ್ ಸ್ಪೆಷಲ್!ಓದಿರಿ : ರೆಡ್ಮಿ ನೋಟ್‌ 7ಎಸ್‌ ಲಾಂಚ್!..48ಎಂಪಿ ಕ್ಯಾಮೆರಾ ಫೀಚರ್ ಸ್ಪೆಷಲ್!

Best Mobiles in India

English summary
Airtel Rs. 399, Rs. 448, Rs. 499 Prepaid Plans Now Offer 400MB Additional Daily Data.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X