Home
ಸುದ್ದಿಜಾಲ

ಏರ್‌ಟೆಲ್‌ನ ಹೊಸ 401ರೂ.ಪ್ಲ್ಯಾನ್‌: 3GB ಡೇಟಾ ಮತ್ತು ಹಾಟ್‌ಸ್ಟಾರ್‌ ಸದಸ್ಯತ್ವ!

ದೇಶದ ಟೆಲಿಕಾಂ ಸಂಸ್ಥೆಗಳು ಈ ಲಾಕ್‌ಡೌನ್‌ ಸಂದರ್ಭದಲ್ಲಿ ತಮ್ಮ ಚಂದಾದಾರರಿಗೆ ಅನುಕೂಲಕರ ಯೋಜನೆಗಳನ್ನು ಪರಿಚಯಿಸುತ್ತಿವೆ. ಅವುಗಳಲ್ಲಿ ಬಹುತೇಕ ಪ್ಲ್ಯಾನ್‌ಗಳು ಅಧಿಕ ಡೇಟಾ ಸೌಲಭ್ಯ, ವ್ಯಾಲಿಡಿಟಿ ಅವಧಿಯ ವಿಸ್ತರಣೆಗಳಂತಹ ಪ್ರಯೋಜನಗಳನ್ನ ಹೊಂದಿವೆ. ಲಾಕ್‌ಡೌನ್‌ ಅವಧಿಯಲ್ಲಿ ಎಲ್ಲರೂ ಮನೆಯಲ್ಲಿಯೇ ಇರುವುದರಿಂದ ಮುಖ್ಯವಾಗಿ ಡೇಟಾ ಬಳಕೆ ಹೆಚ್ಚಾಗಿರುತ್ತದೆ. ಈ ನಿಟ್ಟಿನಲ್ಲಿ ಏರ್‌ಟೆಲ್‌ ಇದೀಗ ನೂತನ ಪ್ಲ್ಯಾನ್ ಪರಿಚಯಿಸಿದೆ.

ಹೌದು, ಏರ್‌ಟೆಲ್‌ ಟೆಲಿಕಾಂ ಹೊಸದಾಗಿ 401ರೂ.ಬೆಲೆಯ ಪ್ರೀಪೇಯ್ಡ್‌ ಪ್ಲ್ಯಾನ್‌ವೊಂದನ್ನು ಪರಿಚಯಿಸಿದ್ದು, ಈ ಯೋಜನೆಯು ಸಂಪೂರ್ಣ ಡೇಟಾ ಪ್ರಯೋಜನಗಳನ್ನು ಒದಗಿಸಲಿದೆ. ಚಂದಾದಾರಿರಿಗೆ ಈ ಯೋಜನೆಯಲ್ಲಿ ಪ್ರತಿದಿನ 3GB ಡೇಟಾ ಸೌಲಭ್ಯ ಲಭ್ಯವಾಗಲಿದ್ದು, ಇದರೊಂದಿಗೆ ಜನಪ್ರಿಯ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ VIP ಚಂದಾದಾರಿಕೆಯು ದೊರೆಯಲಿದೆ. ಹೀಗಾಗಿ ಲಾಕ್‌ಡೌನ್‌ ಟೈಮ್‌ನಲ್ಲಿ ಅಧಿಕ ಡೇಟಾ ಬಳಕೆಗೆ ಉತ್ತಮ ಅನಿಸಿದೆ.

ಏರ್‌ಟೆಲ್‌ 401ರೂ. ಪ್ಲ್ಯಾನ್‌

ಏರ್‌ಟೆಲ್‌ 401ರೂ. ಪ್ಲ್ಯಾನ್‌

ಏರ್‌ಟೆಲ್‌ ಸಂಸ್ಥೆಯ ಈ ಹೊಸ ಪ್ರೀಪೇಯ್ಡ್‌ ಪ್ಲ್ಯಾನ್ 28 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಹೆಚ್ಚುವರಿಯಾಗಿ 399ರೂ ಶುಲ್ಕದ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ VIP ಸದಸ್ಯತ್ವ ಸಹ ಲಭ್ಯವಾಗುತ್ತದೆ. ಅಂದಹಾಗೆ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ VIP ಸದಸ್ಯತ್ವವು ಒಂದು ವರ್ಷದ ವಾಯ್ದೆಯನ್ನು ಪಡೆದಿರುತ್ತದೆ. ಆದರೆ ಈ ಪ್ಲ್ಯಾನಿನಲ್ಲಿ ಯಾವುದೇ ಉಚಿತ ಕರೆ ಹಾಗೂ ಎಸ್‌ಎಮ್‌ಎಸ್‌ ಸೌಲಭ್ಯಗಳು ಲಭ್ಯವಿರುವುದಿಲ್ಲ.

ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಸದಸ್ಯತ್ವ ಆಕ್ಟಿವ್ ಮಾಡಲು ಹೀಗೆ ಮಾಡಿ

ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಸದಸ್ಯತ್ವ ಆಕ್ಟಿವ್ ಮಾಡಲು ಹೀಗೆ ಮಾಡಿ

ಏರ್‌ಟೆಲ್ ಪ್ರಿಪೇಯ್ಡ್ ಗ್ರಾಹಕರು ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಚಂದಾದಾರಿಕೆಯನ್ನು ಏರ್‌ಟೆಲ್ ಥ್ಯಾಂಕ್ಸ್‌ ಅಪ್ಲಿಕೇಶನ್ ಮೂಲಕ ಅಥವಾ ರೀಚಾರ್ಜ್ ಮಾಡಿದ ನಂತರ ಗ್ರಾಹಕರ ಮೊಬೈಲ್ ಸಂಖ್ಯೆಗೆ ಕಳುಹಿಸಿದ ಲಿಂಕ್ ಮೂಲಕ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಸದಸ್ಯತ್ವವನ್ನು ಸಕ್ರಿಯಗೊಳಿಸಬಹುದು. ಈ ರೀಚಾರ್ಜ್‌ನೊಂದಿಗೆ ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಚಂದಾದಾರಿಕೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಏರ್‌ಟೆಲ್ ಹೇಳಿದೆ. ಹಾಗೂ ಡಿಸ್ನಿ + ಹಾಟ್‌ಸ್ಟಾರ್‌ನಿಂದ ವಿಐಪಿ ಚಂದಾದಾರಿಕೆಯನ್ನು ಪಡೆಯಲು ರೀಚಾರ್ಜ್ ಮಾಡಲಾದ ಅದೇ ಸಂಖ್ಯೆಯೊಂದಿಗೆ ಬಳಕೆದಾರರು ಲಾಗಿನ್ ಆಗಬೇಕಾಗುತ್ತದೆ.

ಏರ್‌ಟೆಲ್‌ ರೀಚಾರ್ಜ್‌ ಜೊತೆ ಇನ್ಸೂರೆನ್ಸ್‌ ಸೌಲಭ್ಯ

ಏರ್‌ಟೆಲ್‌ ರೀಚಾರ್ಜ್‌ ಜೊತೆ ಇನ್ಸೂರೆನ್ಸ್‌ ಸೌಲಭ್ಯ

ಏರ್‌ಟೆಲ್‌ ಟೆಲಿಕಾಂ ತನ್ನ ಕೆಲವು ಜನಪ್ರಿಯ ಪ್ರೀಪೇಡ್ ಪ್ಲ್ಯಾನ್ ಜೊತೆಗೆ ಉಚಿತ ಇನ್ಸೂರೆನ್ಸ್‌ ಸೌಲಭ್ಯ ನೀಡುತ್ತಿದೆ. ಅಂತಹ ಪ್ರೀಪೇಯ್ಡ್‌ ಪ್ಲ್ಯಾನ್‌ಗಳಲ್ಲಿ ಡೇಟಾ ಮತ್ತು ಕರೆಯ ಪ್ರಯೋಜನಗಳನ್ನು ಸಹ ಲಭ್ಯ ಇರುತ್ತವೆ ಜೊತೆಗೆ ಇನ್ಶೂರೆನ್ಸ್‍ ಸೌಲಭ್ಯ ಸಹ ದೊರೆಯಲಿದೆ. ಇನ್ಶೂರೆನ್ಸ್ ಪ್ರಯೋಜನ ಪಡೆದ ಏರ್‌ಟೆಲ್‌ನ ಪ್ಲ್ಯಾನ್‌ಗಳು ಯಾವುವು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಏರ್‌ಟೆಲ್ 179ರೂ. ಪ್ಲ್ಯಾನ್

ಏರ್‌ಟೆಲ್ 179ರೂ. ಪ್ಲ್ಯಾನ್

ಏರ್‌ಟೆಲ್‌ನ ನೂತನ 179ರೂ. ಪ್ಲ್ಯಾನ್ ಅಲ್ಪಾವಧಿಯ ಪ್ಲ್ಯಾನ್‌ ಆಗಿದ್ದು, ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಭಾರತದಾದ್ಯಂತ ಅನಿಯಮಿತ ಕರೆಗಳ ಸೌಲಭ್ಯ ಇದೆ. ಜೊತೆಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ 300 ಎಸ್ಎಮ್ಎಸ್‌ ಹಾಗೂ 2GB ಡಾಟಾ 4G/3G/2G ಪ್ರಯೋಜನವನ್ನು ಒಳಗೊಂಡಿದೆ. ಇದರೊಂದಿಗೆ ಭಾರ್ತಿ ಆಕ್ಸಾ ಲೈಫ್‌ ಇನ್ಶೂರೆನ್ಸ್‌ನಿಂದ ಟರ್ಮ್ ಲೈಫ್ ಇನ್ಶೂರೆನ್ಸ್‍ ಸೌಲಭ್ಯ ಸಹ ಪಡೆದಿದೆ.

ಏರ್‌ಟೆಲ್‌ 279ರೂ. ಪ್ಲ್ಯಾನ್

ಏರ್‌ಟೆಲ್‌ 279ರೂ. ಪ್ಲ್ಯಾನ್

ಏರ್‌ಟೆಲ್‌ ಸಂಸ್ಥೆಯ 279ರೂ. ಪ್ಲ್ಯಾನ್ ಸಹ ಲೈಫ್‌ ಇನ್ಶೂರೆನ್ಸ್‌ ಸೌಲಭ್ಯ ಪಡೆದಿದೆ. ಈ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಒಟ್ಟು 6GB (4G/3G/2G ) ಡಾಟಾ ಹಾಗೂ 900 ಎಸ್‌ಎಮ್‌ಎಸ್‌ಗಳು ಸಿಗುತ್ತವೆ. ಇದರೊಂದಿಗೆ ಯಾವುದೇ FUP ಮಿತಿ ಇಲ್ಲದೇ ಅನಿಯಮಿತ ಕರೆಗಳ ಪ್ರಯೋಜನವು ದೊರೆಯಲಿದೆ. ಇದರೊಂದಿಗೆ 4ಲಕ್ಷದ ಟರ್ಮ್ ಲೈಫ್‌ ಇನ್ಶೂರೆನ್ಸ್‍ ಸೌಲಭ್ಯ ಸಿಗಲಿದೆ.

Best Mobiles in India

English summary
Airtel launched Rs 401 Prepaid Plan. This plan offers only daily 3GB data.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+