ಒಂದೇ ರೀಚಾರ್ಜ್‌ನಲ್ಲಿ ಅಧಿಕ ಡೇಟಾ, OTT, ವಾಯಿಸ್ ಕರೆ ಎಲ್ಲವೂ ಲಭ್ಯ; ಬೆಲೆಯೂ ಅಗ್ಗ!
ದೇಶದ ಟೆಲಿಕಾಂ ವಲಯದಲ್ಲಿ ಎರಡನೇ ದೊಡ್ಡ ಟೆಲಿಕಾಂ ಪೂರೈಕೆದಾರ ಕಂಪನಿಯಾಗಿ ಗುರುತಿಸಿಕೊಂಡಿರುವ ಭಾರ್ತಿ ಏರ್‌ಟೆಲ್ ಹಲವು ಅತ್ಯುತ್ತಮ ಪ್ಲ್ಯಾನ್ ಪರಿಚಯಿಸಿದೆ. ಅವುಗಳಲ್ಲಿ ಪ್ರೀಪೇಯ್ಡ್ ಹಾಗೂ ಪೋಸ್ಟ್‌ಪೇಯ್ಡ್ ಯೋಜನೆಗಳು ಸೇರಿವೆ. ಆ ಪೈಕಿ ಏರ್‌ಟೆಲ್‌ನ ಈ ಒಂದು ಯೋಜನೆಯು ಭರಪೂರ ಪ್ರಯೋಜನಗಳನ್ನು ಪಡೆದಿದ್ದು, ಗ್ರಾಹಕರಿಗೆ ಬೆಸ್ಟ್ ಎನ್ನುವಂತಿದೆ.
ಹೌದು, ಏರ್‌ಟೆಲ್ ಟೆಲಿಕಾಂನ 499ರೂ. ಗಳ ಪ್ಲಾಟಿನಂ ಪೋಸ್ಟ್‌ಪೇಯ್ಡ್ ಪ್ಲ್ಯಾನ್ ಆಕರ್ಷಕ ಪ್ರಯೋಜನಗಳನ್ನು ಪಡೆದಿದ್ದು, ಬೆಲೆಯಿಂದಲೂ ಗಮನ ಸೆಳೆದಿದೆ. ಈ ಯೋಜನೆಯು ವೇಗದ ಡೇಟಾ ಸೌಲಭ್ಯ, ವಾಯಿಸ್ ಕರೆ ಪ್ರಯೋಜನ, ಎಸ್‌ಎಮ್‌ಎಸ್ ಸೌಲಭ್ಯ ಇವುಗಳ ಜೊತೆಗೆ ಓಟಿಟಿ (OTT) ಪ್ರಯೋಜನಗಳನ್ನು ಸಹ ಪಡೆದುಕೊಂಡಿದೆ.

ಒಂದೇ ರೀಚಾರ್ಜ್‌ನಲ್ಲಿ ಮನರಂಜನೆಯ ಆಯ್ಕೆ/ ಸೌಲಭ್ಯಗಳು ಹಾಗೂ ಡೇಟಾ, ವಾಯಿಸ್ ಕರೆ ಪ್ರಯೋಜನ ಬಯಸುವ ಗ್ರಾಹಕರಿಗೆ ಏರ್‌ಟೆಲ್‌ನ 499ರೂ. ಗಳ ಪ್ಲಾಟಿನಂ ಪೋಸ್ಟ್‌ಪೇಯ್ಡ್ ಯೋಜನೆಯು ಆಕರ್ಷಕ ಎನಿಸಬಹುದು. ಹಾಗಾದರೆ ಏರ್‌ಟೆಲ್‌ನ 499ರೂ. ಗಳ ಪ್ಲಾಟಿನಂ ಪೋಸ್ಟ್‌ಪೇಯ್ಡ್ ಪ್ಲ್ಯಾನಿನ ಬಗ್ಗೆ ಇಲ್ಲಿದೆ ಪೂರ್ಣ ಮಾಹಿತಿ.

ಏರ್‌ಟೆಲ್ 499ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು : ಭಾರ್ತಿ ಏರ್‌ಟೆಲ್ ಈ ಫೋಸ್ಟ್‌ಪೇಯ್ಡ್ ಪ್ಲ್ಯಾನಿನಲ್ಲಿ ಬಳಕೆದಾರರು 75GB ಡೇಟಾ ಸೌಲಭ್ಯ ಪಡೆದುಕೊಳ್ಳುತ್ತಾರೆ. ಇದರಲ್ಲಿ 200GB ವರೆಗೆ ರೋಲ್‌ಓವರ್ ಸೌಲಭ್ಯ ಸಹ ಗ್ರಾಹಕರಿಗೆ ದೊರೆಯುತ್ತದೆ. ಮತ್ತೇ ಈ ಪ್ಲ್ಯಾನಿನಲ್ಲಿ ಅನಿಯಮಿತ ಧ್ವನಿ ಕರೆ ಸೌಲಭ್ಯ ಮತ್ತು ಡೈಲಿ 100 ಎಸ್‌ಎಂಎಸ್ ಕಳುಹಿಸುವ ಅವಕಾಶ ಇರುತ್ತದೆ. ಹಾಗೆಯೇ ಗ್ರಾಹಕರಿಗೆ ಜನಪ್ರಿಯ ಅಮೆಜಾನ್ ಪ್ರೈಮ್ ಆಕ್ಸಸ್, ವಿಂಕ್ ಮ್ಯೂಸಿಕ್ ಮತ್ತು ಏರ್ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂನ ಚಂದಾದಾರಿಕೆ ಇದೆ.
ಏರ್‌ಟೆಲ್ 599ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನಿನ ಮಾಹಿತಿ : ಏರ್‌ಟೆಲ್ 599ರೂ. ಪೋಸ್ಟ್‌ಪೇಯ್ಡ್ ಯೋಜನೆಯು ಒಂದು ಫ್ಯಾಮಿಲಿ ಯೋಜನೆ ಆಗಿದ್ದು, ಈ ಯೀಜನೆಯಲ್ಲಿ ಚಂದಾದಾರು 75 GB ಡೇಟಾ ಪಡೆಯಬಹುದಾಗಿದೆ. ಈ ಪ್ಲ್ಯಾನಿನಲ್ಲಿ ಅನಿಯಮಿತ ವಾಯಿಸ್ ಕರೆ ಮಾಡುವ ಅವಕಾಶ ಮತ್ತು ಪ್ರತಿದಿನ 100 ಎಸ್‌ಎಂಎಸ್ ಸೆಂಡ್ ಮಾಡುವ ಅವಕಾಶ ಸಿಗಲಿದೆ. ಅಲ್ಲದೇ ಚಂದಾದಾರಿಕಗೆ ಹೆಚ್ಚುವರಿಯಾಗಿ ಅಮೆಜಾನ್ ಪ್ರೈಮ್ ಆಕ್ಸಸ್, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್, ವಿಂಕ್ ಮ್ಯೂಸಿಕ್ ಮತ್ತು ಏರ್ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂನ ಸದಸ್ಯತ್ವ ಲಭ್ಯ.

ಏರ್ಟೆಲ್ 999ರೂ. ಪೋಸ್ಟ್‌ಪೇಯ್ಡ್ ಯೋಜನೆಯ ಮಾಹಿತಿ : ಏರ್‌ಟೆಲ್ ಟೆಲಿಕಾಂನ ಈ ಪೋಸ್ಟ್‌ಪೇಯ್ಡ್ ಪ್ಲ್ಯಾನ್ ಒಟ್ಟು 100 GB ಡೇಟಾ ಪ್ರಯೋಜನ ಒಳಗೊಂಡಿದೆ. ಈ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಅನಿಯಮಿತ ವಾಯಿಸ್ ಕರೆಗಳ ಅವಕಾಶ ಪಕ್ಕಾ ದೊರೆಯಲಿದೆ. ಮುಖ್ಯವಾಗಿ ಉಚಿತ 100 ಎಸ್‌ಎಮ್‌ಎಸ್ ಸೌಲಭ್ಯ ಗ್ಯಾರಂಟಿ ಇದ್ದು, ಅಲ್ಲದೇ ಗ್ರಾಹಕರಿಗೆ ಅಮೆಜಾನ್ ಪ್ರೈಮ್ ಪ್ರವೇಶ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್, ವಿಂಕ್ ಮ್ಯೂಸಿಕ್ ಸೌಲಭ್ಯಗಳು ಸೇರಿದಂತೆ ಮತ್ತಷ್ಟು ಸೌಲಭ್ಯ ಸಿಗುತ್ತವೆ.
ಏರ್‌ಟೆಲ್ 1499ರೂ. ಪೋಸ್ಟ್‌ಪೇಯ್ಡ್ ರೀಚಾರ್ಜ್‌ನ ಸೌಲಭ್ಯ : ಏರ್‌ಟೆಲ್ ಟೆಲಿಕಾಂನ 1499 ರೂ. ರೀಚಾರ್ಜ್‌ನಲ್ಲಿ ಒಟ್ಟು 200 GB ಡೇಟಾ ಖಚಿತ ಲಭ್ಯ. ಇದರೊಂದಿಗೆ ಯಾವುದೇ ನಂಬರ್‌ಗೆ ಅನಿಯಮಿತ ಕಾಲ್ ಮಾಡುವ ಸೌಲಭ್ಯ ನಿಶ್ಚಿತ. ಇದರಲ್ಲಿ ಡೈಲಿ 100 ಎಸ್‌ಎಮ್‌ಎಸ್ ಪ್ರಯೋಜನ ಸಿಗಲಿದ್ದು, ಹಾಗೆಯೇ ಹೆಚ್ಚುವರಿ ಯಾಗಿ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಪ್ರವೇಶ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್, ವಿಂಕ್ ಮ್ಯೂಸಿಕ್ ಸೌಲಭ್ಯಗಳು ಸಹ ದೊರೆಯುತ್ತವೆ.
ಏರ್‌ಟೆಲ್ 1199ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನಿನಲ್ಲಿ ಏನುಂಟು : ಒಟ್ಟು 150 GB ಡೇಟಾ ಪ್ರಯೋಜನ ಒಳಗೊಂಡಿರುವ ಏರ್‌ಟೆಲ್ ಟೆಲಿಕಾಂನ 1199 ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್ ಮತ್ತಷ್ಟು ಆಕರ್ಷಕ ಸೌಲಭ್ಯ ಪಡೆದಿದೆ. ಈ ಯೋಜನೆಯು ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನದ ಜೊತೆ ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ ಪಡೆದಿದೆ. ಅಲ್ಲದೇ ಹೆಚ್ಚುವರಿ ಸೌಲಭ್ಯವಾಗಿ ಗ್ರಾಹಕರಿಗೆ ನೆಟ್‌ಫ್ಲಿಕ್ಸ್ ಬೇಸಿಕ್ ಅನ್ಲಿಮಿಟೆಡ್ ಪ್ರವೇಶ, ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್, ವಿಂಕ್ ಮ್ಯೂಸಿಕ್, ಫಾಸ್ಟ್‌ಟ್ಯಾಗ್ ಪ್ರಯೋಜನ ಖಚಿತ ಲಭ್ಯ.


Click it and Unblock the Notifications








