Home
ಸುದ್ದಿಜಾಲ

ಏರ್‌ಟೆಲ್‌ 449ರೂ. ಮತ್ತು ವಿ 449ರೂ. ಪ್ಲ್ಯಾನ್: ರೀಚಾರ್ಜ್‌ಗೆ ಯಾವುದು ಓಕೆ!

ಪ್ರಸ್ತುತ ದೇಶಿಯ ಟೆಲಿಕಾಂ ಕಂಪನಿಗಳು ಚಂದಾದಾರರ ಸಂಖ್ಯೆ ಹೆಚ್ಚಿಸಿಕೊಳ್ಳಲು ಆಕರ್ಷಕ ಪ್ರೀಪೇಯ್ಡ್‌ ಯೋಜನೆಗಳನ್ನು ನೀಡುತ್ತ ಸಾಗಿವೆ. ಅವುಗಳಲ್ಲಿ ಬಹುತೇಕ ಪ್ರೀಪೇಯ್ಡ್‌ ಯೋಜನೆಗಳು ದೈನಂದಿನ ಡೇಟಾ ಜೊತೆಗೆ ಅನಿಯಮಿತ ವಾಯಿಸ್‌ ಕರೆಗಳು ಹಾಗೂ ದೀರ್ಘಾವಧಿಯ ವ್ಯಾಲಿಡಿಟಿ ಪ್ರಯೋಜನ ಪಡೆದಿವೆ. ಆದರೆ ಹೆಚ್ಚಿನ ಬಳಕೆದಾರರು ಬಜೆಟ್‌ ದರದಲ್ಲಿ ಲಭ್ಯವಿದ್ದು, ಆಕರ್ಷಕ ಸೌಲಭ್ಯ ಹೊಂದಿರುವ ರೀಚಾರ್ಜ್‌ ಪ್ಲ್ಯಾನ್‌ ಆಯ್ಕೆ ಮಾಡುತ್ತಾರೆ. ಈ ಪೈಕಿ ಏರ್‌ಟೆಲ್‌ ಹಾಗೂ ವಿ 449ರೂ.ಪ್ಲ್ಯಾನ್‌ ಗಮನ ಸೆಳೆದಿದೆ.

ಟೆಲಿಕಾಂ

ಹೌದು, ಭಾರ್ತಿ ಏರ್‌ಟೆಲ್‌ ಹಾಗೂ ವಿ ಟೆಲಿಕಾಂ ಸಂಸ್ಥೆಗಳು ಹಲವು ಭಿನ್ನ ಬೆಲೆಯ ಯೋಝನೆಗಳನ್ನು ಹೊಂದಿದೆ. ಅವುಗಳಲ್ಲಿ ಮುಖ್ಯವಾಗಿ 449ರೂ. ಪ್ಲ್ಯಾನ್‌ ಆಕರ್ಷಕ ಪ್ರಯೋಜನಗಳ ಮೂಲಕ ಬಳಕೆದಾರರ ಗಮನ ಸೆಳೆದಿದೆ. ಈ ಯೋಜನೆಗಳು ದೈನಂದಿನ ಡೇಟಾ, ಅನಿಯಮಿತ ವಾಯಿಸ್‌ ಕರೆ, ಎಸ್‌ಎಮ್‌ಎಸ್‌ ಸೌಲಭ್ಯಗಳನ್ನು ಒಳಗೊಂಡಿವೆ. ಹಾಗಾದರೇ ಏರ್‌ಟೆಲ್‌ 449ರೂ. ಮತ್ತು ವಿ 449ರೂ. ಪ್ಲ್ಯಾನ್‌ಗಳ ಪ್ರಯೋಜನಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ವಿ ಟೆಲಿಕಾಂ 449ರೂ. ಪ್ರೀಪೇಯ್ಡ್‌ ಪ್ಲ್ಯಾನ್

ವಿ ಟೆಲಿಕಾಂ 449ರೂ. ಪ್ರೀಪೇಯ್ಡ್‌ ಪ್ಲ್ಯಾನ್

ವಿ ಟೆಲಿಕಾಂನ 449ರೂ. ಪ್ಲ್ಯಾನ್‌ ಸಹ ಪ್ರತಿದಿನ 2GB ಡೇಟಾ ಮತ್ತು ಡಬಲ್ ಡೇಟಾ ಆಫರ್‌ನಿಂದಾಗಿ ಹೆಚ್ಚುವರಿ 2GB ಡೇಟಾ ಸೇರಿ ಒಟ್ಟು 4GB ಡೇಟಾ ಸಿಗುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

ಏರ್‌ಟೆಲ್‌ 449ರೂ. ಪ್ರೀಪೇಯ್ಡ್‌ ಪ್ಲ್ಯಾನ್

ಏರ್‌ಟೆಲ್‌ 449ರೂ. ಪ್ರೀಪೇಯ್ಡ್‌ ಪ್ಲ್ಯಾನ್

ಏರ್‌ಟೆಲ್‌ 449ರೂ.ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿಯ ಅವಧಿಯನ್ನು ಒಳಗೊಂಡಿದೆ. ಜೊತೆಗೆ ದಿನಕ್ಕೆ 100 ಎಸ್‌ಎಂಎಸ್ ಮತ್ತು ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಹೊಂದಿದೆ. ಇದರೊಂದಿಗೆ ಪ್ರತಿದಿನ 2GB ಡೇಟಾವನ್ನು ಪಡೆದಿದೆ. ಇದರೊಂದಿಗೆ ಡಿಸ್ನಿ ಹಾಟ್‌ಸ್ಟಾರ್ ಚಂದಾದಾರಿಕೆ ಪ್ರಯೋಜನ ಸಹ ಲಭ್ಯವಾಗಲಿದೆ.

ಯಾವುದು ಯೋಗ್ಯ?

ಯಾವುದು ಯೋಗ್ಯ?

ಏರ್‌ಟೆಲ್‌ 449ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಹಾಗೂ ವಿ ಟೆಲಿಕಾಂನ 449ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಎರಡು ಟೆಲಿಕಾಂಗಳ ಯೋಜನೆಗಳು ಆಕರ್ಷಕ ಪ್ರಯೋಜನಗಳನ್ನು ಪಡೆದಿವೆ. ಈ ಎರಡು ಪ್ರೀಪೇಯ್ಡ್‌ ಯೋಜನೆಗಳು ಡೇಟಾ ಪ್ರಯೋಜನದ ಜೊತೆಗೆ ಎಸ್‌ಎಮ್‌ಎಸ್‌ ಸೌಲಭ್ಯ ಒದಗಿಸಿವೆ. ಆದರೆ ವಿ ಟೆಲಿಕಾಂ ಡಬಲ್ ಡೇಟಾ ಪ್ರಯೋಜನ ಒಳಗೊಂಡಿದ್ದು, ಗ್ರಾಹಕರನ್ನು ಆಕರ್ಷಿಸಿದೆ.

Best Mobiles in India

English summary
Airtel Rs 499 VS Vi Rs 499 Prepaid Plan: Which One Better To Recharge.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+