Just In
- 4 hrs ago
ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ನೀವು Rank ಪಡೆಯಲು ಈ ಆಪ್ಗಳನ್ನು ಬಳಕೆ ಮಾಡಿ!
- 4 hrs ago
ನಿಮ್ಮ ಉಂಗುರದ ಗಾತ್ರವನ್ನು ಫೋನ್ ಮೂಲಕವೇ ಅಳತೆ ಮಾಡಿ: ಹೇಗೆ ಗೊತ್ತಾ?
- 5 hrs ago
ಫೈರ್-ಬೋಲ್ಟ್ನ ಈ ಸ್ಮಾರ್ಟ್ವಾಚ್ ಖರೀದಿಗೆ ಲಭ್ಯ!..ಇದರ ಲುಕ್ಗೆ ನೀವು ಕ್ಲೀನ್ ಬೋಲ್ಡ್!
- 6 hrs ago
ಸೋನಿ ಸಂಸ್ಥೆಯಿಂದ ಹೊಸ ಮಾದರಿಯ ವಾಕ್ಮ್ಯಾನ್ ಲಾಂಚ್!..ಜಬರ್ದಸ್ತ್ ಫೀಚರ್ಸ್!
Don't Miss
- Lifestyle
ಜನವರಿ 30ಕ್ಕೆ ಶನಿ ಅಸ್ತ: 35 ದಿನದವರೆಗೆ ಈ 6 ರಾಶಿಯವರು ಹೆಚ್ಚು ಜಾಗ್ರತೆವಹಿಸಬೇಕು
- News
ಚಿಕ್ಕಬಳ್ಳಾಪುರದಲ್ಲಿ ಕುಷ್ಠರೋಗ ನಿಯಂತ್ರಣ ಜಾಗೃತಿ ಅಭಿಯಾನ ರಥಕ್ಕೆ ಚಾಲನೆ
- Movies
ವಿಷ್ಣು ಸ್ಮಾರಕಕ್ಕೆ ಕಾರಣರಾದ ಇಬ್ಬರಿಗೆ ಧನ್ಯವಾದ ಅರ್ಪಿಸಿದ ನಟ ದರ್ಶನ್
- Sports
ವಿಶ್ವದ ಮೊದಲ ಆನ್ಲೈನ್ ಕ್ರಿಕೆಟ್ ಕೋಚ್ ನೇಮಕಕ್ಕೆ ಮುಂದಾದ ಪಾಕಿಸ್ತಾನ ತಂಡ
- Finance
ಫೆಬ್ರವರಿ 1ರಿಂದ ಯಾವೆಲ್ಲ ಹಣಕಾಸು ನಿಯಮ ಬದಲಾವಣೆಯಾಗಲಿದೆ?
- Automobiles
ಭಾರತದಲ್ಲಿ ಅಬ್ಬರಿಸಲು ಬಿಡುಗಡೆಯಾಯ್ತು ಹೀರೋ Xoom 110 ಸ್ಕೂಟರ್: ಬೆಲೆ ರೂ.68,599...!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಏರ್‌ಟೆಲ್‌ನ ಹೊಸ 599ರೂ.ಪ್ಲ್ಯಾನಿನೊಂದಿಗೆ 4ಲಕ್ಷದ ಇನ್ಸೂರೆನ್ಸ್ ಉಚಿತ!
ಭಾರತೀಯ ಟೆಲಿಕಾಂ ವಲಯದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಏರ್‌ಟೆಲ್, ತನ್ನ ಗ್ರಾಹಕರಿಗೆ ಈಗಾಗಲೇ ಹಲವು ಹೊಸ ಪ್ರೀಪೇಡ್ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಬಹುತೇಕ ಪ್ಲ್ಯಾನ್‌ಗಳು ಪ್ರತಿದಿನ ಅಧಿಕ ಡೇಟಾ, ಅನಿಯಮಿತ ಕರೆಗಳ ಆಯ್ಕೆ ಮತ್ತು ಉಚಿತ ಎಸ್‌ಎಮ್‌ಎಸ್‌ಗಳು ಪ್ರಯೋಜನಗಳನ್ನು ಒಳಗೊಂಡಿವೆ. ಆದರೆ ಏರ್‌ಟೆಲ್ ಈಗ ಭಿನ್ನವಾದ ಹೆಜ್ಜೆಯನ್ನಿಟ್ಟಿದ್ದು, ಪ್ರೀಪೇಡ್ ಪ್ಲ್ಯಾನ್‌ನೊಂದಿಗೆ ಲೈಫ್ ಇನ್ಸೂರೆನ್ಸ್ ಉಚಿತವಾಗಿ ನೀಡಲು ಮುಂದಾಗಿದೆ.

ಹೌದು, ಏರ್‌ಟೆಲ್ ಸಂಸ್ಥೆಯು ಇದೀಗ ಹೊಸದಾಗಿ 599ರೂ ಪ್ರೀಪೇಡ್ ಪ್ಲ್ಯಾನ್ ಬಿಡುಗಡೆ ಮಾಡಿದ್ದು, ಈ ಪ್ಲ್ಯಾನ್‌ನೊಂದಿಗೆ ಗ್ರಾಹಕರಿಗೆ 4ಲಕ್ಷದ ಲೈಫ್ ಇನ್ಸೂರೆನ್ಸ್ ನೀಡುವುದಾಗಿ ಘೋಷಿಸಿದೆ. ಈ ನೂತನ 599ರೂ.ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಅನಿಯಮಿತ ಉಚಿತ ಕರೆ, ಪ್ರತಿದಿನ 2GB ಡೇಟಾ ಮತ್ತು ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳು ಸಿಗಲಿದ್ದು, ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ.

ಏರ್‌ಟೆಲ್ ಕಂಪನಿಯು ತನ್ನ ಹೊಸ 599ರೂ ಪ್ರೀಪೇಡ್ ಪ್ಲ್ಯಾನ್ ರೀಚಾರ್ಜ್ ಮಾಡಿಸುವ ಗ್ರಾಹಕರಿಗೆ ಲೈಫ್ ಇನ್ಸೂರೆನ್ಸ್ ನೀಡಲು ಯೋಜಿಸಿದೆ. ಅದಕ್ಕಾಗಿ 'ಭಾರತಿ AXA' ಲೈಫ್ ಇನ್ಸೂರೆನ್ಸ್ ಕಂಪನಿಯ ಸಹಭಾಗಿತ್ವದೊಂದಿಗೆ 599ರೂ. ರೀಚಾರ್ಜ್ ಮಾಡಿಸುವ ಗ್ರಾಹಕರಿಗೆ 4ಲಕ್ಷ ಮೊತ್ತದ ಲೈಫ್ ಇನ್ಸೂರೆನ್ಸ್ ಲಭ್ಯವಾಗಲಿದೆ. ಹಾಗಾದರೇ ಏರ್‌ಟೆಲ್‌ನ 599ರೂ. ಪ್ಲ್ಯಾನಿನ ಕುರಿತಾಗಿ ಇನ್ನಷ್ಟು ಮಾಹಿತಿ ಮುಂದೆ ನೋಡೋಣ ಬನ್ನಿರಿ.

ಏರ್‌ಟೆಲ್‌ನ ಹೊಸ ಪ್ರೀಪೇಡ್ ಪ್ಲ್ಯಾನ್
ಏರ್‌ಟೆಲ್ ಟೆಲಿಕಾಂ ಸಂಸ್ಥೆಯು ಸದ್ಯ ಮಾರುಕಟ್ಟೆಯಲ್ಲಿ ಆಕರ್ಷಕ ಪ್ರೀಪೇಡ್ ಪ್ಲ್ಯಾನ್‌ಗಳನ್ನು ಪರಿಚಯಿಸುವ ಮೂಲಕ, ಜಿಯೋ ಟೆಲಿಕಾಂ ಸಂಸ್ಥೆಗೆ ಪ್ರಬಲ ಎದುರಾಳಿ ಎಂದೆನಿಸಿಕೊಂಡಿದೆ. ಈಗ ಮತ್ತೊಂದು ಹೊಸ ಪ್ರಯತ್ನಕ್ಕೆ ಮುಂದಾಗಿದ್ದು, 599ರೂ ಪ್ರೀಪೇಡ್ ಪ್ಲ್ಯಾನ್ ಬಿಡುಗಡೆ ಮಾಡಿದೆ. ಈ ಪ್ಲ್ಯಾನ್ ಜೊತೆಯಾಗಿ ಗ್ರಾಹಕರಿಗೆ 4 ಲಕ್ಷದ ಲೈಫ್ ಇನ್ಸೂರೆನ್ಸ್ ನೀಡುವುದಾಗಿ ತಿಳಿಸಿದೆ.

599ರೂ. ಪ್ಲ್ಯಾನಿನ್ ಪ್ರಯೋಜನಗಳೆನು
ಏರ್‌ಟೆಲ್ ಬಿಡುಗಡೆ ಮಾಡಿರುವ ಹೊಸ 599ರೂ. ಪ್ರೀಪೇಡ್ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಪ್ರತಿದಿನ 2GB ಡೇಟಾ, ಅನಿಯಮಿತ ಉಚಿತ ರಾಷ್ಟ್ರೀಯ ಮತ್ತು ಸ್ಥಳೀಯ ಕರೆಗಳು, ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್ಎಸ್‌ಗಳು ಲಭ್ಯವಾಗಲಿವೆ. ಇದರೊಂದಿಗೆ ಲೈಫ್ ಇನ್ಸೂರೆನ್ಸ್ ಸಿಗಲಿದೆ. ಹಾಗೆಯೇ ಈ ಪ್ಲ್ಯಾನಿನ ವ್ಯಾಲಿಡಿಟಿಯು 84 ದಿನಗಳು ಆಗಿದೆ.

ಲೈಫ್ ಇನ್ಸೂರೆನ್ಸ್ ಹೇಗೆ ಪಡೆಯುವುದು
ಏರ್‌ಟೆಲ್‌ನ 599ರೂ. ಪ್ರೀಪೇಡ್ ಪ್ಲ್ಯಾನಿನೊಂದಿಗೆ ಗ್ರಾಹಕರಿಗೆ 'ಭಾರತಿ AXA' ಲೈಫ್ ಇನ್ಸೂರೆನ್ಸ್ ಕಂಪನಿಯ 4 ಲಕ್ಷದ ಲೈಫ್ ಇನ್ಸೂರೆನ್ಸ್ ಸಿಗಲಿದೆ. ಅದಕ್ಕಾಗಿ ಗ್ರಾಹಕರು 599ರೂ. ಪ್ಲ್ಯಾನಿನ ಮೊದಲ ರೀಚಾರ್ಜ್ ನಂತರ 'ಏರ್‌ಟೆಲ್ ಥ್ಯಾಂಕ್ಸ್ ಆಪ್' ಅಥವಾ ಏರ್‌ಟೆಲ್ ರೀಟೈಲರ್ ಬಳಿ ಲೈಫ್ ಇನ್ಸೂರೆನ್ಸ್‌ಗಾಗಿ ಪಡೆಯಲು ಹೆಸರು ನೊಂದಾಯಿಸುವುದು.

ಯಾರಿಗೆ ಲೈಫ್ ಇನ್ಸೂರೆನ್ಸ್ ಲಭ್ಯ
ಏರ್‌ಟೆಲ್‌ನ 599ರೂ. ಪ್ರೀಪೇಡ್ ಪ್ಲ್ಯಾನ್ ರೀಚಾರ್ಜ್ ಮಾಡಿಸುವ 18 ರಿಂದ 54 ವರ್ಷ ವಯಸ್ಸಿನ ಎಲ್ಲ ಗ್ರಾಹಕರು ಲೈಫ್ ಇನ್ಸೂರೆನ್ಸ್ ಪ್ರಯೋಜನ ದೊರೆಯಲಿದೆ. ಲೈಫ್ ಇನ್ಸೂರೆನ್ಸ್ ವ್ಯವಸ್ಥೆಯು ಸಂಪೂರ್ಣ ಡಿಜಿಟಲ್ ಆಗಿದ್ದು, ಯಾವುದೇ ಪೇಪರ್‌ವರ್ಕ್ ಹಾಗೂ ಯಾವುದೇ ಮೆಡಿಕಲ್ ಚೆಕ್‌ಅಪ್ ಸಹ ಅಗತ್ಯ ಇರುವುದಿಲ್ಲ. ಒಂದು ವೇಳೆ ಗ್ರಾಹಕರಿಗೆ ಲೈಫ್ ಇನ್ಸೂರೆನ್ಸ್‌ನ ಹಾರ್ಡ್‌ಕಾಪಿ ಬೇಕಿದ್ದರೇ ಕೇಳಿ ಪಡೆಯಬಹದಾಗಿದೆ.

ಪ್ಲ್ಯಾನ್ ಲಭ್ಯತೆ
ಏರ್‌ಟೆಲ್‌ನ ಈ ಲೈಫ್ ಇನ್ಸೂರೆನ್ಸ್ ಪ್ರಯೋಜನವು ಸದ್ಯ ಪಾಂಡಿಚೆರಿ ಮತ್ತು ತಮಿಳನಾಡು ಪ್ರದೇಶದ ವ್ಯಾಪ್ತಿಯಲ್ಲಿ ಲಭ್ಯವಿದೆ. ಮುಂದಿನ ಕೆಲವು ತಿಂಗಳ ಬಳಿಕ ಪ್ಯಾನ್-ಇಂಡಿಯಾಗೆ ವಿಸ್ತರಿಸುವ ಯೋಜನೆ ಇದೆ ಎಂದು ಏರ್‌ಟೆಲ್ ತಿಳಿಸಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470