Subscribe to Gizbot

ಬೆಸ್ಟ್ ಪ್ಲಾನ್ ಅನ್ನು ರೀಲಾಂಚ್ ಮಾಡಿದ ಏರ್‌ಟೆಲ್‌; ಭರ್ಜರಿ ಡೇಟಾ..!

Written By:

ಈ ಹಿಂದೆ ಮಾರುಕಟ್ಟೆಯಿಂದ ಹಿಂಪಡೆದಿದ್ದ ಆಫರ್ ವೊಂದನ್ನು ಏರ್‌ಟೆಲ್ ರೀಲಾಂಚ್ ಮಾಡಿದ್ದು, ರೂ.649 ಪೋಸ್ಟ್ ಪೇಯ್ಡ್ ಪ್ಲಾನ್‌ ಅನ್ನು ಮತ್ತೆ ಗ್ರಾಹಕ ಬಳಕೆಗೆ ಮುಕ್ತಗೊಳಿಸಿದೆ. ಈ ಆಫರ್ ಏರ್‌ಟೆಲ್ ಬೆಸ್ಟ್ ಸೇಲಿಂಗ್ ಪೋಸ್ಟ್ ಪೇಯ್ಡ್ ಪ್ಲಾನ್ ಎನ್ನುವ ಖ್ಯಾತಿಗೆ ಪಾತ್ರವಾಗಿತ್ತು. ಈ ಪ್ಲಾನ್ ಅನ್ನು ಮತ್ತೇ ಬಿಡುಗಡೆ ಮಾಡಿರುವುದಲ್ಲದೇ 50GB ಡೇಟಾವನ್ನು ಬಳಕೆಗೆ ನೀಡಲು ಏರ್‌ಟೆಲ್ ಮುಂದಾಗಿದೆ.

ಬೆಸ್ಟ್ ಪ್ಲಾನ್ ಅನ್ನು ರೀಲಾಂಚ್ ಮಾಡಿದ ಏರ್‌ಟೆಲ್‌; ಭರ್ಜರಿ ಡೇಟಾ..!

ಏರ್‌ಟೆಲ್ ನೀಡಿರುವ ರೂ.649 ಪೋಸ್ಟ್ ಪೇಯ್ಡ್ ಪ್ಲಾನ್‌ನಲ್ಲಿ ಬಳಕೆದಾರರಿಗೆ 50GB ಡೇಟಾ ಪ್ರತಿ ತಿಂಗಳು ದೊರೆಯಲಿದ್ದು, ಯಾವುದೇ ಮಿತಿ ಇದಲ್ಲದೇ ಈ ಡೇಟಾವನ್ನು ಬಳಕೆದಾರರು ಉಪಯೋಗಿಸಬಹುದಾಗಿದೆ. ಅಲ್ಲದೇ ತಿಂಗಳ ಕೊನೆಯಲ್ಲಿ ಉಳಿದ ಡೇಟಾವನ್ನು ಮುಂದಿನ ತಿಂಗಳಿಗೆ ಕ್ಯಾರಿ ಮಾಡಿಕೊಳ್ಳುವ ಅವಕಾಶವನ್ನು ಏರ್‌ಟೆಲ್ ಮಾಡಿಕೊಟ್ಟಿದೆ.

ಓದಿರಿ: ನಿಮ್ಮ ಹಣಕ್ಕೆ ಬಡ್ಡಿ ನೀಡಲಿದೆ ಜಿಯೋ: ಶುರುವಾಗಲಿದೆ ಜಿಯೋ ಪೇಮೆಂಟ್ ಬ್ಯಾಂಕ್..!

ರೂ.649 ಪೋಸ್ಟ್ ಪೇಯ್ಡ್ ಪ್ಲಾನ್ ನೊಂದಿಗೆ ಇನ್ನು ಹಲವು ಆಯ್ಕೆಗಳನ್ನು ಬಳಕೆಗೆ ದೊರೆಯಲಿದ್ದು, ಒಂದು ವರ್ಷದ ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಪದುಕೊಳ್ಳಬಹುದಾಗಿದೆ. ಇದಲ್ಲದೇ ಏರ್‌ಟೆಲ್ ಬಿಡುಗಡೆ ಮಾಡಿರುವ ಆಪ್‌ಗಳನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳುವ ಅವಕಾಶವು ಈ ಪ್ಲಾನ್ ರಿಚಾರ್ಜ್ ನೊಂದಿಗೆ ದೊರೆಯಲಿದೆ. ಇದಲ್ಲದೇ ಹಾಂಡ್ ಸೆಟ್ ಪ್ರೋಟೆಕ್ಷನ್ ವ್ಯಾರೆಂಟಿ ಸಹ ಇದೆ.

ಬೆಸ್ಟ್ ಪ್ಲಾನ್ ಅನ್ನು ರೀಲಾಂಚ್ ಮಾಡಿದ ಏರ್‌ಟೆಲ್‌; ಭರ್ಜರಿ ಡೇಟಾ..!

ಇದಲ್ಲದೇ ರೂ.649 ಪೋಸ್ಟ್ ಪೇಯ್ಡ್ ಪ್ಲಾನ್ ಬಳಕೆದಾರರಿಗೆ ಅನ್‌ಲಿಮಿಟೆಡ್ ಕರೆಗಳನ್ನು ಮಾಡುವ ಅವಕಾಶವನ್ನು ಏರ್‌ಟೆಲ್ ಮಾಡಿಕೊಟ್ಟಿದ್ದು, ಇದರೊಂದಿಗೆ ರೋಮಿಂಗ್ ಕರೆಗಳು ಉಚಿತವಾಗಿದೆ. ಅಲ್ಲದೇ ಇದರೊಂದಿಗೆ ಇನ್ನಷ್ಟು ಪ್ಲಾನ್‌ಗಳನ್ನು ಏರ್‌ಟೆಲ್ ಬಳಕೆದಾರರಿಗೆ ನೀಡಿದೆ.

ಜಿಯೋ ಇದೇ ಮಾದರಿಯಲ್ಲಿ ಎರಡು ಪ್ಲಾನ್‌ಗಳನ್ನು ಹೊಂದಿದ್ದು, ರೂ.509 ಮತ್ತು ರೂ.799 ಫೋಸ್ಟ್ ಪೇಯ್ಡ್‌ಪ್ಲಾನ್ ಘೋಷಣೆ ಮಾಡಿದೆ. ಇದರಲ್ಲಿ ಬಳಕೆದಾರರು ಕ್ರಮವಾಗಿ ನಿತ್ಯ 2GB ಮತ್ತು 3GB ಡೇಟಾವನ್ನು ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

English summary
Airtel Rs. 649 Postpaid Plan With 50GB of 4G Data, Unlimited Calling Relaunched. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot