Subscribe to Gizbot

ನಿಮ್ಮ ಹಣಕ್ಕೆ ಬಡ್ಡಿ ನೀಡಲಿದೆ ಜಿಯೋ: ಶುರುವಾಗಲಿದೆ ಜಿಯೋ ಪೇಮೆಂಟ್ ಬ್ಯಾಂಕ್..!

Written By:

ಗುರುವಾರದಿಂದ ದೇಶದಲ್ಲಿ ರಿಲಯನ್ಸ್ ಮಾಲೀಕತ್ವದ ಜಿಯೋ, ಜಿಯೋ ಪೇಮೆಂಟ್ ಬ್ಯಾಂಕ್ ಸೇವೆಯನ್ನು ಆರಂಭಿಸಲಿದೆ. ಈ ಕುರಿತು RBI ಮಾಹಿತಿಯನ್ನು ನೀಡಿದ್ದು, ಜಿಯೋ ಪೇಮೆಂಟ್ ಬ್ಯಾಂಕ್ ಸೇವೆಯನ್ನು ಆರಂಭಿಸಲು ಅನುಮತಿಯನ್ನು ನೀಡಿರುವುದಾಗಿ ತಿಳಿಸಿದೆ. ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ಸಾಕಷ್ಟು ಹೊಸತನಗಳಿಗೆ ಸಾಕ್ಷಿಯಾಗಿರುವ ಜಿಯೋ, ಪೇಮೆಂಟ್ ಬ್ಯಾಂಕ್ ನಲ್ಲಿಯೂ ಯಶಸ್ಸು ಸಾಧಿಸಲಿದೆ ಎನ್ನಲಾಗಿದೆ.

ನಿಮ್ಮ ಹಣಕ್ಕೆ ಬಡ್ಡಿ ನೀಡಲಿದೆ ಜಿಯೋ: ಶುರುವಾಗಲಿದೆ ಜಿಯೋ ಪೇಮೆಂಟ್ ಬ್ಯಾಂಕ್..!

ಜಿಯೋ ಪೇಮೆಂಟ್ ಬ್ಯಾಂಕಿನಲ್ಲಿ ರಿಲಯನ್ಸ್ ಶೇ.70 ಪಾಲು ಹೊಂದಿದ್ದರೆ, ಇದರೊಂದಿಗೆ SBI ಶೇ.30 ಪಾಲುದಾರಿಕೆಯನ್ನು ಹೊಂದಿರಲಿದೆ ಎನ್ನಲಾಗಿದ್ದು, ಮಾರ್ಚ್ ನಿಂದಲೇ ಜಿಯೋ ಪೇಮೆಂಟ್ ಬ್ಯಾಂಕ್ ಸೇವೆಯನ್ನು ಆರಂಭಿಸಬಹುದಾಗಿದ್ದು, ಮೂಲಗಳ ಪ್ರಕಾರ ಗುರುವಾರದಿಂದಲೇ ಪೇಮೆಂಟ್ ಬ್ಯಾಂಕ್ ಸೇವೆಯೂ ಶುರುವಾಗಲಿದೆ. ಜಿಯೋ ದೊಂದಿಗೆ ಇನ್ನು 11 ಕಂಪನಿಗಳು ಪೇಮೆಂಟ್ ಬ್ಯಾಂಕ್ ಸೇವೆಯನ್ನು ಶುರು ಮಾಡಲು ಅರ್ಜಿ ಸಲ್ಲಿಸಿದ್ದವು ಎನ್ನಲಾಗಿದೆ.

ಪೇಮೆಂಟ್ ಬ್ಯಾಂಕ್‌ಗಳು ಸಣ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿದ್ದು, ಬ್ಯಾಂಕ್ ಮಾದರಿಯಲ್ಲಿ ಇರಲಿವೆ. ಆದರೆ ಯಾವುದೇ ಸಾಲಗಳನ್ನು ನೀಡುವ ಯೋಜನೆಯನ್ನು ಹೊಂದಿರುವುದಿಲ್ಲ ಎನ್ನಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ಕಂಪನಿಗಳು ಪೇಮೆಂಟ್ ಬ್ಯಾಂಕ್ ಸೇವೆಯನ್ನು ನೀಡುತ್ತಿವೆ ಎನ್ನಲಾಗಿದೆ.

ನಿಮ್ಮ ಹಣಕ್ಕೆ ಬಡ್ಡಿ ನೀಡಲಿದೆ ಜಿಯೋ: ಶುರುವಾಗಲಿದೆ ಜಿಯೋ ಪೇಮೆಂಟ್ ಬ್ಯಾಂಕ್..!

ಈಗಾಗಲೇ ಟೆಲಿಕಾಂ ಸೇವೆಯನ್ನು ನೀಡುತ್ತಿರುವ ಏರ್‌ಟೆಲ್ ಪೇಮೆಂಟ್ ಬ್ಯಾಂಕ್ ಆರಂಭಿಸಿದ್ದು, ಇದೇ ಮಾದರಿಯಲ್ಲಿ ಪೇಟಿಎಂ ಸಹ ತನ್ನದೇ ಪೇಮೆಂಟ್ ಬ್ಯಾಂಕ್ ಸೇವೆಯನ್ನು ಶುರು ಮಾಡಿದೆ. ಇದೇ ಮಾದರಿಯಲ್ಲಿ ಜಿಯೋ ಸಹ ಪೇಮೆಂಟ್ ಬ್ಯಾಂಕ್ ಸೇವೆಯನ್ನು ಕಾರ್ಯಾರಂಭ ಮಾಡಲಿದೆ.

ಪೇಮೆಂಟ್ ಬ್ಯಾಂಕ್‌ಗಳಲ್ಲಿ ಜಿರೋ ಬ್ಯಾಲೆನ್ಸ್ ಅಕೌಂಟ್ ಅನ್ನು ತೆರೆಯಬಹುದಾಗಿದ್ದು, ಬಳಕೆದಾರರಿಗೆ ಯಾವುದೇ ಶುಲ್ಕಗಳನ್ನು ವಿಧಿಸುವುದಿಲ್ಲ ಎನ್ನಲಾಗಿದ್ದು, ರೂ.100000ದ ವರೆಗೆ ಮಾತ್ರವೇ ಡೆಪಾಸಿಟ್ ಗಳನ್ನು ಸ್ವೀಕರಿಸುತ್ತವೆ. ಅಲ್ಲದೇ 4% ಬಡ್ಡಿಯನ್ನು ನೀಡುತ್ತವೆ. ಈ ಹಿನ್ನಲೆಯಲ್ಲಿ ನೀವು ಇಡುವ ದುಡ್ಡಿಗೆ ಜಿಯೋ ಬಡ್ಡಿಯನ್ನು ನೀಡಲಿದೆ.

English summary
Jio Payments Bank begins operations. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot