Airtel ಗ್ರಾಹಕರೇ, ಈ ಪ್ಲ್ಯಾನಿನಲ್ಲಿ ನೀವು ಬೇಡಾ ಅಂದ್ರೂ, Amazon Prime ಚಂದಾದಾರಿಕೆ ಸಿಗುತ್ತೆ!
ಭಾರ್ತಿ ಏರ್‌ಟೆಲ್ ದೇಶದ ಎರಡನೇ ದೊಡ್ಡ ಟೆಲಿಕಾಂ ಸಂಸ್ಥೆ ಆಗಿ ಗುರುತಿಸಿಕೊಂಡಿದೆ. ಇನ್ನು ಏರ್‌ಟೆಲ್ ಕೆಲವು ಅತ್ಯುತ್ತಮ ಪ್ರೀಪೇಯ್ಡ್ ಯೋಜನೆಗಳ ಮೂಲಕ ತನ್ನ ಪ್ರತಿಸ್ಪರ್ಧಿಗಳಿಗೆ ನೇರ ಪೈಪೋಟಿ ನೀಡುತ್ತಾ ಮುನ್ನಡೆದಿದೆ. ಆ ಪೈಕಿ ಭಾರ್ತಿ ಏರ್‌ಟೆಲ್ ಕಂಪನಿಯ ಬಹುತೇಕ ರೀಚಾರ್ಜ್ ಪ್ಲ್ಯಾನ್‌ಗಳು ಅನಿಯಮಿತ ವಾಯಿಸ್ ಕರೆ, ದೈನಂದಿನ ಡೇಟಾ ಸೌಲಭ್ಯ ಪಡೆದಿವೆ. ಅದೇ ರೀತಿ ಏರ್‌ಟೆಲ್ ಕೆಲವು ಬಜೆಟ್ ದರದ ಪ್ಲ್ಯಾನ್ ಒಂದರಲ್ಲಿ ಅಮೆಜಾನ್ ಪ್ರೈಮ್ ವಿಡಿಯೋ (Amazon Prime subscription) ಚಂದಾದಾರಿಕೆ ಪ್ರಯೋಜನ ಸಹ ನೀಡಿದೆ.
ಹೌದು, ಏರ್‌ಟೆಲ್ (Airtel) ಟೆಲಿಕಾಂ ತನ್ನ 838ರೂ. ರೀಚಾರ್ಜ್ ಪ್ಲ್ಯಾನಿನಲ್ಲಿ ಅಮೆಜಾನ್ ಪ್ರೈಮ್ ವಿಡಿಯೋ (Amazon Prime subscription) ಚಂದಾದಾರಿಕೆ ಸೌಲಭ್ಯ ಲಭ್ಯ ಮಾಡಿದೆ. ಈ ರೀಚಾರ್ಜ್ ಪ್ಲ್ಯಾನ್ ದೇಶಾದ್ಯಂತ ಎಲ್ಲ ಟೆಲಿಕಾಂ ವಲಯಗಳಲ್ಲಿಯೂ ಗ್ರಾಹಕರಿಗೆ ಲಭ್ಯವಿದೆ. ಅಂದಹಾಗೆ ಏರ್‌ಟೆಲ್‌ನ ಈ ಯೋಜನೆಯು ದೈನಂದಿನ ಡೇಟಾ, ಆಕರ್ಷಕ ವ್ಯಾಲಿಡಿಟಿ ಸೌಲಭ್ಯ ಪಡೆದುಕೊಂಡಿದೆ. ಹಾಗಾದರೇ 838ರೂ. ರೀಚಾರ್ಜ್ ಪ್ಲ್ಯಾನಿನ ಇತರೆ ಸೌಲಭ್ಯಗಳೆನು ಹಾಗೂ ಇತರೆ ಜನಪ್ರಿಯ ಪ್ಲ್ಯಾನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಏರ್‌ಟೆಲ್ 838ರೂ. ರೀಚಾರ್ಜ್ ಯೋಜನೆ
ಭಾರ್ತಿ ಏರ್‌ಟೆಲ್ ಟೆಲಿಕಾಂನ ಈ 838ರೂ. ರೀಚಾರ್ಜ್ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದುಕೊಂಡಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ ಪ್ರತಿದಿನ 3GB ಡೇಟಾ ಸೌಲಭ್ಯಗಳು ದೊರೆಯಲಿದ್ದು, ಇದರ ಜೊತೆಗೆ ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಸಹ ಲಭ್ಯ. ಇದಲ್ಲದೇ ನಿತ್ಯ 100 ಉಚಿತ ಎಸ್‌ಎಮ್ಎಸ್ ಸೌಲಭ್ಯ ಕೂಡಾ ಪಡೆಯಬಹುದು.
ಇನ್ನು ಬಳಕೆದಾರರಿಗೆ ಹೆಚ್ಚುವರಿಯಾಗಿ ಅಮೆಜಾನ್ ಪ್ರೈಮ್ ವಿಡಿಯೋ (Amazon Prime subscription) ಚಂದಾದಾರಿಕೆ ಕೂಡಾ ದೊರೆಯುತ್ತದೆ. ಹಾಗೆಯೇ ಏರ್‌ಟೆಲ್ ಎಕ್ಸ್‌ಟ್ರೀಮ್ ಪ್ಲೇ, ಹೆಲ್ಲೋ ಟ್ಯೂನ್ ಸೌಲಭ್ಯ, ವೆಂಕ್ ಮ್ಯೂಸಿಕ್ ಪ್ರಯೋಜನ ಸಹ ಬಳಕೆದಾರರಿಗೆ ಲಭ್ಯವಾಗಲಿದೆ.
ಏರ್‌ಟೆಲ್ 799ರೂ. ರೀಚಾರ್ಜ್ ಯೋಜನೆ
ಭಾರ್ತಿ ಏರ್‌ಟೆಲ್ ಟೆಲಿಕಾಂನ 799ರೂ. ರೀಚಾರ್ಜ್ ಯೋಜನೆಯು ಒಟ್ಟು 77 ದಿನಗಳ ವ್ಯಾಲಿಡಿಟಿ ಪ್ರಯೋಜನ ಹೊಂದಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 1.5GB ಡೇಟಾ ಸೌಲಭ್ಯಗಳು ಸಿಗಲಿದ್ದು, ಇದರ ಜೊತೆಗೆ ಅನಿಯಮಿತ ವಾಯಿಸ್ ಕರೆಯ ಪ್ರಯೋಜನ ಸಹ ಲಭ್ಯ. ಇದಲ್ಲದೇ ನಿತ್ಯ 100 ಉಚಿತ ಎಸ್‌ಎಮ್ಎಸ್ ಸೌಲಭ್ಯ ಲಭ್ಯ. ಹೆಚ್ಚುವರಿಯಾಗಿ ಹೆಲ್ಲೋ ಟ್ಯೂನ್ ಸೌಲಭ್ಯ, ವೆಂಕ್ ಮ್ಯೂಸಿಕ್ ಪ್ರಯೋಜನ ಸಹ ಬಳಕೆದಾರರಿಗೆ ಲಭ್ಯ.
ಏರ್‌ಟೆಲ್ 649ರೂ. ರೀಚಾರ್ಜ್ ಯೋಜನೆ
ಭಾರ್ತಿ ಏರ್‌ಟೆಲ್ ಟೆಲಿಕಾಂನ 649ರೂ. ರೀಚಾರ್ಜ್ ಯೋಜನೆಯು ಒಟ್ಟು 56 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ ಪ್ರತಿದಿನ 2GB ಡೇಟಾ ಸೌಲಭ್ಯಗಳು ದೊರೆಯಲಿದ್ದು, ಇದರ ಜೊತೆಗೆ ಅನಿಯಮಿತ ವಾಯಿಸ್ ಕರೆಯ ಪ್ರಯೋಜನ ಸಹ ಸಿಗುತ್ತದೆ. ಹಾಗೆಯೇ ನಿತ್ಯ 100 ಉಚಿತ ಎಸ್‌ಎಮ್ಎಸ್ ಸೌಲಭ್ಯ ಲಭ್ಯ. ಹೆಚ್ಚುವರಿಯಾಗಿ ಹೆಲ್ಲೋ ಟ್ಯೂನ್ ಸೌಲಭ್ಯ, ವೆಂಕ್ ಮ್ಯೂಸಿಕ್ ಪ್ರಯೋಜನ ಸಹ ಬಳಕೆದಾರರಿಗೆ ಲಭ್ಯ.
ಏರ್‌ಟೆಲ್ 619ರೂ. ರೀಚಾರ್ಜ್ ಯೋಜನೆ
ಭಾರ್ತಿ ಏರ್‌ಟೆಲ್ ಟೆಲಿಕಾಂನ 619ರೂ. ರೀಚಾರ್ಜ್ ಪ್ಲ್ಯಾನ್ ಒಟ್ಟು 60 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದಿದೆ. ಇನ್ನು ಈ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 1.5GB ಡೇಟಾ ಪ್ರಯೋಜನ ಲಭ್ಯ ಇದ್ದು, ಇದರ ಜೊತೆಗೆ ಅನಿಯಮಿತ ವಾಯಿಸ್ ಕರೆಯ ಪ್ರಯೋಜನ ಸಹ ಖಚಿತ. ಹಾಗೆಯೇ ಪ್ರತಿದಿನ 100 ಉಚಿತ ಎಸ್‌ಎಮ್ಎಸ್ ಸೌಲಭ್ಯ ಲಭ್ಯ. ಹೆಚ್ಚುವರಿಯಾಗಿ ಹೆಲ್ಲೋ ಟ್ಯೂನ್ ಸೌಲಭ್ಯ, ವೆಂಕ್ ಮ್ಯೂಸಿಕ್ ಪ್ರಯೋಜನ ಸಹ ಬಳಕೆದಾರರಿಗೆ ಲಭ್ಯ.


Click it and Unblock the Notifications








