Home
ಸುದ್ದಿಜಾಲ

ಏರ್‌ಟೆಲ್‌ನಿಂದ 9ರೂ. ಪ್ಲ್ಯಾನ್‌ ಲಾಂಚ್‌; ಇದರಲ್ಲಿ ಅನಿಯಮಿತ ಡೇಟಾ ಪಕ್ಕಾ!

ಭಾರ್ತಿ ಏರ್‌ಟೆಲ್‌ ಟೆಲಿಕಾಂ ಸಂಸ್ಥೆಯು ದೇಶದ ಎರಡನೇ ದೊಡ್ಡ ಟೆಲಿಕಾಂ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಏರ್‌ಟೆಲ್‌ ಸಂಸ್ಥೆಯು ಹಲವು ಭಿನ್ನ ಮಾದರಿಯ ರೀಚಾರ್ಜ್‌ ಯೋಜನೆಗಳನ್ನು ಪರಿಚಯಿಸಿದ್ದು, ಅಧಿಕ ಡೇಟಾ ಯೋಜನೆಗಳ ಮೂಲಕವು ಗ್ರಾಹಕರ ಗಮನ ಸೆಳೆದಿದೆ. ಇನ್ನು ಕೆಲವು ರೀಚಾರ್ಜ್‌ ಪ್ರಿಪೇಯ್ಡ್‌ ಯೋಜನೆಗಳು ದೈನಂದಿನ ಡೇಟಾ ಜೊತೆಗೆ ದೀರ್ಘ ವ್ಯಾಲಿಡಿಟಿ ಸೌಲಭ್ಯ ಸಹ ಪಡೆದಿವೆ. ಇದೀಗ ಏರ್‌ಟೆಲ್‌ ಸಂಸ್ಥೆಯು ಹೊಸದೊಂದು ರೀಚಾರ್ಜ್‌ ಪ್ಲ್ಯಾನ್‌ ಪರಿಚಯಿಸಿದ್ದು, ಇದು ಗ್ರಾಹಕರಿಗೆ ಅನಿಯಮಿತ ಡೇಟಾ ಬಳಕೆಯ ಸೌಲಭ್ಯ ನೀಡುತ್ತದೆ.

ಹೌದು, ಭಾರ್ತಿ ಏರ್‌ಟೆಲ್‌ ಟೆಲಿಕಾಂ ಹೊಸದಾಗಿ 9ರೂ. ರೀಚಾರ್ಜ್‌ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯು ಅನ್‌ಲಿಮಿಟೆಡ್‌ ಡೇಟಾ ಬಳಕೆಯ ಪ್ರಯೋಜನ ಒಳಗೊಂಡಿದ್ದು, ಜೊತೆಗೆ ಈ ಯೋಜನೆಯ ಬೆಲೆಯು ಅಗ್ಗ ಇದೆ. ಹೀಗಾಗಿ ಅಧಿಕ ಡೇಟಾ ಬಯಸುವ ಗ್ರಾಹಕರಿಗೆ ಈ ಯೋಜನೆಯು ಗಮನ ಸೆಳೆಯುತ್ತದೆ. ಹಾಗಾದರೇ ಏರ್‌ಟೆಲ್‌ನ 9ರೂ. ಬೆಲೆಯ ರೀಚಾರ್ಜ್‌ ಯೋಜನೆಯ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಏರ್‌ಟೆಲ್‌ನಿಂದ 9ರೂ. ಪ್ಲ್ಯಾನ್‌ ಲಾಂಚ್‌; ಇದರಲ್ಲಿ ಅನಿಯಮಿತ ಡೇಟಾ ಪಕ್ಕಾ!

ಏರ್‌ಟೆಲ್ 9ರೂ. ರೀಚಾರ್ಜ್‌ ಯೋಜನೆ

ಭಾರ್ತಿ ಏರ್‌ಟೆಲ್ ಸಂಸ್ಥೆಯು ದೇಶದಲ್ಲಿ ಹೊಸದಾಗಿ 9ರೂ. ರೀಚಾರ್ಜ್‌ ಯೋಜನೆಯನ್ನು ಪ್ರಾರಂಭಿಸಿದೆ. ಈ ರೀಚಾರ್ಜ್‌ ಪ್ಲ್ಯಾನ್ ವಿಶೇಷ ಪ್ಯಾಕ್ ಆಗಿದ್ದು, ಇದರಲ್ಲಿ ಬಳಕೆದಾರರಿಗೆ ಅನಿಯಮಿತ ಇಂಟರ್ನೆಟ್ ಕನೆಕ್ಟಿವಿಟಿ ಸೌಲಭ್ಯ ಮಾತ್ರ ಲಭ್ಯವಾಗಲಿದೆ. ಇನ್ನು ಇದು ಒಂದು ಗಂಟೆಯ ವ್ಯಾಲಿಡಿಟಿ (60 ಸೆಕೆಂಡಗಳು) ಪಡೆದಿದೆ. ಉಳಿದಂತೆ ಈ ರೀಚಾರ್ಜ್‌ ಯೋಜನೆಯಲ್ಲಿ ಯಾವುದೇ ವಾಯಿಸ್‌ ಕರೆಗಳ ಪ್ರಯೋಜನ, ಎಸ್‌ಎಮ್‌ಎಸ್‌ ಸೌಲಭ್ಯಗಳು ಲಭ್ಯ ಇರುವುದಿಲ್ಲ.

ಆಸಕ್ತ ಗ್ರಾಹಕರು ಈ ಡೇಟಾ ಯೋಜನೆಯನ್ನು ರೀಚಾರ್ಜ್‌ ಮಾಡಲು ಬಯಸಿದರೆ, ಅಧಿಕೃತ ಏರ್‌ಟೆಲ್ ವೆಬ್‌ಸೈಟ್ ಮೂಲಕ ಈ ಪ್ಯಾಕ್‌ ಸುಲಭವಾಗಿ ಲಭ್ಯವಿದೆ. ಈ ಯೋಜನೆಯು ಗ್ರಾಹಕರಿಗೆ ಡೇಟಾ ಮಾತ್ರ ಒದಗಿಸಲಿದೆ. ಇನ್ನುಳಿದಂತೆ ಏರ್‌ಟೆಲ್‌ ಇತರೆ ಜನಪ್ರಿಯ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಏರ್‌ಟೆಲ್‌ 699ರೂ. ರೀಚಾರ್ಜ್‌ ಪ್ಲ್ಯಾನ್‌

ಏರ್‌ಟೆಲ್‌ ಟೆಲಿಕಾಂನ ಈ 699 ರೂ. ಯೋಜನೆ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಯೋಜನೆಯು ಪ್ರತಿದಿನ 3 GB ಡೇಟಾ ಪ್ರಯೋಜನ ಪ್ರಯೋಜನ ಗ್ರಾಹಕರಿಗೆ ಲಭ್ಯ, ಅನಿಯಮಿತ ವಾಯಿಸ್‌ ಕರೆ ಪ್ರಯೋಜನ ಗಳನ್ನು ಹೊಂದಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್ಎಸ್‌ ಪ್ರಯೋಜನ ಪಡೆದಿದೆ. ಅಲ್ಲದೇ ಈ ಯೋಜನೆಯಲ್ಲಿ ಹೆಚ್ಚುವರಿಯಾಗಿ ಅಮೆಜಾನ್‌ ಪ್ರೈಮ್‌ ವಿಡಿಯೋ ಚಂದಾದಾರಿಕೆ ಸೌಲಭ್ಯ, Wynk ಮ್ಯೂಸಿಕ್, ಏರ್‌ಟೆಲ್‌ ಎಕ್ಸ್‌ಟ್ರಿಮ್ ಪ್ಲೇ ಹಾಗೂ ಹೆಲ್ಲೋ ಟ್ಯೂನ್‌ ಸಹ ಲಭ್ಯ.

ಏರ್‌ಟೆಲ್‌ 549ರೂ. ರೀಚಾರ್ಜ್‌ ಪ್ಲ್ಯಾನ್‌

ಏರ್‌ಟೆಲ್‌ ಟೆಲಿಕಾಂನ ಈ 549 ರೂ. ಯೋಜನೆ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಯೋಜನೆಯು ಪ್ರತಿದಿನ 2 GB ಡೇಟಾ ಪ್ರಯೋಜನ ಪ್ರಯೋಜನ ಗ್ರಾಹಕರಿಗೆ ಲಭ್ಯ, ಅನಿಯಮಿತ ವಾಯಿಸ್‌ ಕರೆ ಪ್ರಯೋಜನಗಳನ್ನು ಹೊಂದಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್ಎಸ್‌ ಪ್ರಯೋಜನ ಪಡೆದಿದೆ. ಅಲ್ಲದೇ ಈ ಯೋಜನೆಯಲ್ಲಿ ಹೆಚ್ಚುವರಿಯಾಗಿ Wynk ಮ್ಯೂಸಿಕ್ ಹಾಗೂ ಹೆಲ್ಲೋ ಟ್ಯೂನ್‌ ಸಹ ಲಭ್ಯ.

ಏರ್‌ಟೆಲ್‌ 479ರೂ. ರೀಚಾರ್ಜ್‌ ಪ್ಲ್ಯಾನ್‌

ಏರ್‌ಟೆಲ್‌ ಟೆಲಿಕಾಂನ 479ರೂ. ರೀಚಾರ್ಜ್‌ ಯೋಜನೆಯು ಒಟ್ಟು 90 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಪ್ಲ್ಯಾನಿನಲ್ಲಿ ಪ್ರತಿದಿನ 1.5 GB ಡೇಟಾ ಪ್ರಯೋಜನ ಪ್ರಯೋಜನ ಗ್ರಾಹಕರಿಗೆ ಲಭ್ಯ ಆಗಲಿದ್ದು, ಇದರ ಜೊತೆಗೆ ಅನಿಯಮಿತ ವಾಯಿಸ್‌ ಕರೆ ಪ್ರಯೋಜನಗಳನ್ನು ಪಡೆದಿದೆ. ಇದಲ್ಲದೇ ಪ್ರತಿದಿನ 100 ಎಸ್‌ಎಮ್ಎಸ್‌ ಪ್ರಯೋಜನ ಕೂಡಾ ದೊರೆಯುತ್ತದೆ. ಅಲ್ಲದೇ ಈ ಯೋಜನೆಯಲ್ಲಿ ಹೆಚ್ಚುವರಿಯಾಗಿ Wynk ಮ್ಯೂಸಿಕ್ ಹಾಗೂ ಹೆಲ್ಲೋ ಟ್ಯೂನ್‌ ಸಹ ಲಭ್ಯ.

Best Mobiles in India

English summary
Airtel Rs 9 recharge plan comes with unlimited data. check other benefits and more details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+