ನಿಮ್ಮ ಏರ್‌ಟೆಲ್ ನಂಬರ್‌ಗೆ ರೀಚಾರ್ಜ್ ಮಾಡುವ ಮುನ್ನ ಈ ಪ್ಲ್ಯಾನ್ ಒಮ್ಮೆ ಗಮನಿಸಿ!
ಟೆಲಿಕಾಂ ದಿಗ್ಗಜ ಜಿಯೋ ಸೇರಿದಂತೆ ಏರ್‌ಟೆಲ್ ಹಾಗೂ ವಿ ಟೆಲಿಕಾಂ ಸಂಸ್ಥೆಗಳು ತನ್ನ ಯೋಜನೆಗಳ ಬೆಲೆಯಲ್ಲಿ ಹೆಚ್ಚಳ ಮಾಡುವ ಮೂಲಕ ಚಂದಾದಾರರಿಗೆ ಅಚ್ಚರಿ ಮೂಡಿಸಿವೆ. ಇನ್ನು ಗ್ರಾಹಕರು ಬೆಲೆ ಏರಿಕೆ ಬಳಿಕ ಯಾವುದು ಗ್ರಾಹಕರ ಸ್ನೇಹಿ ಯೋಜನೆ ಎಂದು ನೋಡುತ್ತಿದ್ದಾರೆ. ಆ ಪೈಕಿ ಏರ್‌ಟೆಲ್ ಟೆಲಿಕಾಂನ ಕೆಲವು ಯೋಜನೆಗಳು ಗ್ರಾಹಕರಿಗೆ ಬೊಂಬಾಟ್ ಎನಿಸಿವೆ. ಇನ್ನು ಸಂಸ್ಥೆಯ ಬಹುತೇಕ ರೀಚಾರ್ಜ್ ಪ್ಲ್ಯಾನ್‌ಗಳು ಡೇಟಾ ಸೌಲಭ್ಯದ ಜೊತೆಗೆ ದೀರ್ಘಾವಧಿ ವ್ಯಾಲಿಡಿಟಿ ಪ್ರಯೋಜನ ಕೂಡಾ ಪಡೆದಿವೆ. ಅದಾಗ್ಯೂ, ಬೆಲೆ ಏರಿಕೆ ಬಳಿಕ ಬಿಗ್ ವ್ಯಾಲಿಡಿಟಿ ಸೌಲಭ್ಯ ಪಡೆದಿರುವ ಈ ಯೋಜನೆ ಹೆಚ್ಚು ಆಕರ್ಷಕ ಎನಿಸಿದೆ.
ಹೌದು, ಏರ್‌ಟೆಲ್ ಸಂಸ್ಥೆಯ 929ರೂ. ಪ್ರೀಪೇಯ್ಡ್ ರೀಚಾರ್ಜ್ ಪ್ಲ್ಯಾನ್ ಗಮನ ಸೆಳೆವ ಪ್ಲ್ಯಾನ್‌ಗಳ ಲಿಸ್ಟ್‌ನಲ್ಲಿ ಕಾಣಿಸಿಕೊಂಡಿದೆ. ಈ ಯೋಜನೆಯಲ್ಲಿ ಪ್ರತಿದಿನ ಡೇಟಾ ಜೊತೆಗೆ ದೀರ್ಘಾವಧಿಯ ವ್ಯಾಲಿಡಿಟಿ ಸೌಲಭ್ಯ ಗ್ರಾಹಕರಿಗೆ ಸಿಗಲಿದೆ. ಹಾಗಾದರೇ ಏರ್‌ಟೆಲ್ ಟೆಲಿಕಾಂನ 929ರೂ. ಪ್ರೀಪೇಯ್ಡ್ ಪ್ಲ್ಯಾನಿನ ಇತರೆ ಸೌಲಭ್ಯಗಳೆನು ಹಾಗೂ ಇತರೆ ಜನಪ್ರಿಯ ಪ್ಲ್ಯಾನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಏರ್‌ಟೆಲ್ ಟೆಲಿಕಾಂನ 929ರೂ. ಪ್ರೀಪೇಯ್ಡ್ ಪ್ಲ್ಯಾನ್
ಏರ್‌ಟೆಲ್ ಟೆಲಿಕಾಂನ 929ರೂ. ರೀಚಾರ್ಜ್ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 90 ದಿನಗಳ ವ್ಯಾಲಿಡಿಟಿ ಅವಧಿ ಅನ್ನು ಪಡೆದಿದೆ. ಈ ಅವಧಿಯಲ್ಲಿ ಬಳಕೆದಾರರಿಗೆ ಪ್ರತಿದಿನ 1.5 GB ಡೇಟಾ ಪ್ರಯೋಜನ ಖಚಿತ. ಇದಲ್ಲದೇ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಇದ್ದು, ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಇನ್ನು ಈ ಯೋಜನೆಯಲ್ಲಿ ಹೆಚ್ಚುವರಿಯಾಗಿ ಪ್ರೀ ಹೆಲೋ ಟ್ಯೂನ್, ವೆಂಕ್ ಮ್ಯೂಸಿಕ್ ಪ್ರಯೋಜನ ಕೂಡಾ ಗ್ರಾಹಕರಿಗೆ ಲಭ್ಯ.
ಏರ್‌ಟೆಲ್ ಟೆಲಿಕಾಂನ 859ರೂ. ಪ್ರೀಪೇಯ್ಡ್ ಪ್ಲ್ಯಾನ್
ಏರ್‌ಟೆಲ್ ಟೆಲಿಕಾಂನ 859ರೂ. ರೀಚಾರ್ಜ್ ಪ್ರೀಪೇಯ್ಡ್ ಯೋಜನೆ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿ ಅನ್ನು ಪಡೆದಿದೆ. ಈ ಅವಧಿಯಲ್ಲಿ ಬಳಕೆದಾರರಿಗೆ ಪ್ರತಿದಿನ 1.5 GB ಡೇಟಾ ಪ್ರಯೋಜನ ದೊರೆಯುತ್ತದೆ. ಇದಲ್ಲದೇ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಪಡೆದಿದ್ದು, ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ಸಿಗಲಿದೆ. ಇನ್ನು ಈ ಯೋಜನೆಯಲ್ಲಿ ಹೆಚ್ಚುವರಿಯಾಗಿ ಪ್ರೀ ಹೆಲೋ ಟ್ಯೂನ್, ವೆಂಕ್ ಮ್ಯೂಸಿಕ್ ಪ್ರಯೋಜನ ಕೂಡಾ ಗ್ರಾಹಕರಿಗೆ ಸಿಗಲಿದೆ.
ಏರ್‌ಟೆಲ್ ಟೆಲಿಕಾಂನ 799ರೂ. ಪ್ರೀಪೇಯ್ಡ್ ಪ್ಲ್ಯಾನ್
ಏರ್‌ಟೆಲ್ ಟೆಲಿಕಾಂನ 799ರೂ. ರೀಚಾರ್ಜ್ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 77 ದಿನಗಳ ವ್ಯಾಲಿಡಿಟಿ ಅವಧಿ ಅನ್ನು ಪಡೆದಿದೆ. ಈ ಅವಧಿಯಲ್ಲಿ ಬಳಕೆದಾರರಿಗೆ ಪ್ರತಿದಿನ 1.5 GB ಡೇಟಾ ಪ್ರಯೋಜನ ಲಭ್ಯ. ಇದಲ್ಲದೇ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಇದ್ದು, ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ಲಭ್ಯ. ಇನ್ನು ಈ ಪ್ಲ್ಯಾನಿನಲ್ಲಿ ಹೆಚ್ಚುವರಿಯಾಗಿ ಪ್ರೀ ಹೆಲೋ ಟ್ಯೂನ್, ವೆಂಕ್ ಮ್ಯೂಸಿಕ್ ಸೌಲಭ್ಯ ಕೂಡಾ ಗ್ರಾಹಕರಿಗೆ ದೊರೆಯುತ್ತದೆ.
ಏರ್‌ಟೆಲ್ ಟೆಲಿಕಾಂನ 619ರೂ. ಪ್ರೀಪೇಯ್ಡ್ ಪ್ಲ್ಯಾನ್
ಏರ್‌ಟೆಲ್ ಸಂಸ್ಥೆಯ 619ರೂ. ರೀಚಾರ್ಜ್ ಪ್ರೀಪೇಯ್ಡ್ ಯೋಜನೆ ಒಟ್ಟು 60 ದಿನಗಳ ವ್ಯಾಲಿಡಿಟಿ ಅವಧಿ ಅನ್ನು ಪಡೆದಿದೆ. ಈ ಅವಧಿಯಲ್ಲಿ ಬಳಕೆದಾರರಿಗೆ ಪ್ರತಿದಿನ 1.5 GB ಡೇಟಾ ಪ್ರಯೋಜನ ಸಿಗಲಿದೆ. ಇದಲ್ಲದೇ ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನ ಹೊಂದಿದ್ದು, ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಇನ್ನು ಈ ಯೋಜನೆಯಲ್ಲಿ ಹೆಚ್ಚುವರಿಯಾಗಿ ಪ್ರೀ ಹೆಲೋ ಟ್ಯೂನ್, ವೆಂಕ್ ಮ್ಯೂಸಿಕ್ ಸೌಲಭ್ಯ ಸಹ ಗ್ರಾಹಕರಿಗೆ ದೊರೆಯುತ್ತದೆ.


Click it and Unblock the Notifications








