ಏರ್‌ಟೆಲ್ ಬಿಗ್ ಆಫರ್: ಒಮ್ಮೆ ರಿಚಾರ್ಜ್ ಮಾಡಿಸಿ, ಆರು ತಿಂಗಳು ಆನಂದಿಸಿ...!

|

ಟೆಲಿಕಾಂ ಮಾರುಕಟ್ಟೆಯ ದರ ಸಮರವು ಗ್ರಾಹಕರ ಜೇಬಿಗೆ ಉಳಿತಾಯವನ್ನು ಮಾಡುತ್ತಿದೆ ಎಂದರೆ ತಪ್ಪಾಗುವುದಿಲ್ಲ. ಗ್ರಾಹಕರು ಜಾಣ್ಮೆಯಿಂದ ಪ್ಲಾನ್‌ಗಳನ್ನು ಆಯ್ದುಕೊಂಡರೆ ಅತೀ ಕಡಿಮೆ ಬೆಲೆಗೆ ಹೆಚ್ಚಿನ ಆಯ್ಕೆಗಳನ್ನು ಪಡೆದುಕೊಳ್ಳಬಹುದಾಗಿದೆ. ಇದೇ ಮಾದರಿಯಲ್ಲಿ ಏರ್‌ಟೆಲ್ ಬಳಕೆದಾರರಿಗೆ ಅತಿ ಹೆಚ್ಚಿನ ಅವಧಿಯ ಪ್ಲಾನ್‌ವೊಂದನ್ನು ಲಾಂಚ್ ಮಾಡಿದ್ದು, ಇದರಿಂದಾಗಿ ಪದೇ ಪದೇ ರೀಚಾರ್ಜ್ ಮಾಡಿಸುವುದ ತಪ್ಪಲಿದೆ.

ಏರ್‌ಟೆಲ್ ಬಿಗ್ ಆಫರ್: ಒಮ್ಮೆ ರಿಚಾರ್ಜ್ ಮಾಡಿಸಿ, ಆರು ತಿಂಗಳು ಆನಂದಿಸಿ...!

ಈಗಾಗಲೇ ಎಲ್ಲಾ ಟೆಲಿಕಾಂ ಕಂಪನಿಗಳು ಮಾಸಿಕ ಪ್ಲಾನ್‌ಗಳ ಕಡೆಗೆ ಹೆಚ್ಚಿನ ಒಲವು ತೋರಿಸುವ ಮೂಲಕ ಹೊಸ ಹೊಸ ಪ್ಲಾನ್ ಗಳನ್ನು ಘೋಷಣೆ ಮಾಡುತ್ತಿವೆ. ಆದರೆ ಏರ್‌ಟೆಲ್ ಮಾತ್ರವೇ ಆರು ತಿಂಗಳ ವ್ಯಾಲಿಡಿಟಿ ಇರುವಂತಹ ಬೆಸ್ಟ್ ಆಫರ್ ವೊಂದನ್ನು ಮಾರುಕಟ್ಟೆಗೆ ಪರಿಚಯಿಸಿದೆ. ತಿಂಗಳಿಗೊಮ್ಮೆ ರಿಚಾರ್ಜ್ ಮಾಡಿಸಿಕೊಳ್ಳುವುದು ಬೇಡ ಎನ್ನುವವರು ಈ ಪ್ಲಾನ್ ರಿಚಾರ್ಜ್ ಮಾಡಿಸಿಕೊಳ್ಳಬಹುದಾಗಿದೆ.

ರೂ.995 ಪ್ಲಾನ್:

ರೂ.995 ಪ್ಲಾನ್:

ಏರ್‌ಟೆಲ್ ಬಳಕೆದಾರರಿಗೆ ರೂ.995 ಪ್ಲಾನ್ ಘೋಷಣೆ ಮಾಡಿದ್ದು, ಇದರಲ್ಲಿ 180 ದಿನಗಳ ವ್ಯಾಲಿಡಿಟಿಯನ್ನು ಬಳಕೆದಾರರಿಗೆ ನೀಡಲಿದೆ. ಅಲ್ಲದೇ ಇಷ್ಟು ದಿನಗಳ ಅವಧಿಗೆ ಅನ್‌ಲಿಮಿಟೆಡ್ ಕರೆ ಮಾಡುವ ಮತ್ತು ದಿನ 100 SMS ಉಚಿತವಾಗಿ ಕಳುಹಿಸುವ ಅವಕಾಶವನ್ನು ಮಾಡಿಕೊಟ್ಟಿದೆ.

180 GB ಡೇಟಾ:

180 GB ಡೇಟಾ:

ರೂ.995 ಪ್ಲಾನ್ ಬಳಕೆದಾರರಿಗೆ ಏರ್‌ಟೆಲ್ 180GB ಡೇಟಾವನ್ನು ಬಳಕೆಗೆ ನೀಡಲಿದ್ದು, ಪ್ರತಿ ನಿತ್ಯ 1GB ಡೇಟಾವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದಲ್ಲದೇ ಇದು 3G/4G ಬಳಕೆದಾರರಿಗೆ ಲಭ್ಯವಿದ್ದು, ವೇಗವಾಗಿ ದೊರೆಯುವ ನೆಟ್‌ವರ್ಕಿಗೆ ಸಫೋರ್ಟ್ ಮಾಡಲಿದೆ ಎನ್ನಲಾಗಿದೆ.

ವಾಯ್ಸ್‌ಕರೆಗೆ ಮಿತಿ ಇಲ್ಲ:

ವಾಯ್ಸ್‌ಕರೆಗೆ ಮಿತಿ ಇಲ್ಲ:

ಈ ಹಿಂದೆ ವಾಯ್ಸ್ ಕರೆಯನ್ನು ಉಚಿತವಾಗಿ ನೀಡುವ ಸಂದರ್ಭದಲ್ಲಿ ಏರ್‌ಟೆಲ್ ಮಿತಿಗಳನ್ನು ವಿಧಿಸುತ್ತಿತು, ಆದರೆ ಈ ಬಾರಿ ತನ್ನ ವಾಯ್ಸ್ ಕರೆಯ ಮೇಲೆ ಯಾವುದೇ ಮಿತಿಗಳನ್ನು ಹೇರಿಲ್ಲ ಮತ್ತು ಬಳಕೆದಾರರಿಗೆ ಸಂಪೂರ್ಣ ಸ್ವಾತಂತ್ರವನ್ನು ನೀಡಿದೆ.

ಇನ್ನು ಇದೆ:

ಇನ್ನು ಇದೆ:

ಇದಲ್ಲದೇ ನೀವು ಇನ್ನು ಹೆಚ್ಚಿನ ಡೇಟಾವನ್ನು ಪಡೆದುಕೊಳ್ಳಬೇಕಾಗಿದರೆ ರೂ.193 ಆಡ್ ಆನ್ ರಿಚಾರ್ಜ್ ಮಾಡಿಸಿದರೆ ಒಂದು GB ಡೇಟಾದೊಂದಿಗೆ ಮತ್ತೊಂದು GB ಡೇಟಾವನ್ನು ಪ್ರತಿ ನಿತ್ಯವು ಪಡೆದುಕೊಳ್ಳಬಹುದಾಗಿದೆ. ಇದರಿಂದಾಗಿ ನೀವು ನಿತ್ಯ 2GB ಡೇಟಾವನ್ನು ಬಳಕೆ ಮಾಡಿಕೊಳ್ಳಬಹುದು.

ಜಿಯೋದಲ್ಲಿಯೂ ಇಲ್ಲ:

ಜಿಯೋದಲ್ಲಿಯೂ ಇಲ್ಲ:

ಈ ಆಫರ್ ಜಿಯೋದಲ್ಲಿಯೂ ಇಲ್ಲ ಎನ್ನಲಾಗಿದೆ. ಜಿಯೋದಲ್ಲಿ 180 ದಿನಗಳ ಪ್ಲಾನ್ ಬೇಕು ಎಂದರೆ ಬಳಕೆದಾರರು ರೂ.1995 ಪಾವತಿ ಮಾಡಬೇಕಾಗಿದೆ. ಈ ಹಿನ್ನಲೆಯಲ್ಲಿ ಈ ಆಫರ್ ಜಿಯೋಗಿಂತಲೂ ಬೆಸ್ಟ್ ಎನ್ನಬಹುದಾಗಿದೆ.

ಏರ್‌ಟೆಲ್‌ USSD ಕೋಡ್‌ಗಳು:

ಏರ್‌ಟೆಲ್‌ USSD ಕೋಡ್‌ಗಳು:

ದೇಶಿಯ ಟೆಲಿಕಾಂ ಮಾರುಕಟ್ಟೆಯ ದೈತ್ಯ ಕಂಪನಿ ಏರ್‌ಟೆಲ್ ತನ್ನ ಬಳಕೆದಾರರಿಗೆ ಅನೇಕ ಸೇವೆಗಳನ್ನು ಬೆರಳ ತುದಿಗೆ ನೀಡುತ್ತಿದೆ. ವಿವಿಧ ಮಾದರಿಯ ಸೇವೆಯನ್ನು ನೀಡುತ್ತಿರುವ ಹಿನ್ನಲೆಯಲ್ಲಿ ಎಲ್ಲಾ ಸೇವೆಗಳ ಮಾಹಿತಿಯೂ ಬಳಕೆದಾರರಿಗೆ ದೊರೆಯಲಿ ಎನ್ನುವ ಕಾರಣಕ್ಕೆ ಅನೇಕ ಕೋಡ್ ಗಳನ್ನು ನೀಡುತ್ತಿದೆ. ಈ ಮೂಲಕ ಏರ್‌ಟೆಲ್ ಬಳಕೆದಾರರು ತಾವು ಪಡೆಯುತ್ತಿರುವ ಸೇವೆಗಳ ಕುರಿತು ಸಂಫೂರ್ಣ ಮಾಹಿತಿಯನ್ನು ನೀಡುವ ಪ್ರಯತ್ನವು ಇದಾಗಿದೆ.

ಯಾರು ಹೇಳಿಕೊಡದ ವಿಷಯಗಳು.! ತಿಳಿದರೆ ಒಳ್ಳೆಯದು.!

ಯಾರು ಹೇಳಿಕೊಡದ ವಿಷಯಗಳು.! ತಿಳಿದರೆ ಒಳ್ಳೆಯದು.!

ಏರ್‌ಟೆಲ್ ಬಳಕೆದಾರರು ಬ್ಯಾಲೆನ್ಸ್ ಚೆಕ್ ಮಾಡುವುದರಿಂದ ಹಿಡಿದ್ದು, SMS ಬ್ಯಾಲೆನ್ಸ್, ಹೆಲೋ ಟೊನ್ಸ್, ಡೇಟಾ ಬ್ಯಾಲೆನ್ಸ್ ಚೆಕ್ ಮಾಡಲು ಹೀಗೆ ಒಂದಕ್ಕೆ ಒಂದು ಕೋಡ್ ಗಳನ್ನು ನೀಡಿದೆ. ಈ ಹಿನ್ನಲೆಯಲ್ಲಿ ಎಲ್ಲಾ ಏರ್‌ಟೆಲ್ ಬಳಕೆದಾರರು ತಿಳಿಯಲೇ ಬೇಕಾದ ವಿಚಾರವು ಇದಾಗಿದೆ ಎನ್ನಲಾಗಿದೆ.

ಏರ್‌ಟೆಲ್ ಕಸ್ಟಮ್ ಕೇರ್ ನಂಬರ್:

ಏರ್‌ಟೆಲ್ ಕಸ್ಟಮ್ ಕೇರ್ ನಂಬರ್:

ನೀವು ಏರ್‌ಟೆಲ್ ಕುರಿತ ಯಾವುದೇ ಮಾಹಿತಿಯನ್ನು ಪಡೆಯಲು 121 ನಂಬರ್‌ಗೆ ಕರೆ ಮಾಡಬಹುದಾಗಿದೆ, ಇದು ಉಚಿತವಾಗಿ ಯಾವುದೇ ದರಗಳನ್ನು ಇದಕ್ಕೆ ವಿಧಿಸುವುದಿಲ್ಲ.

ಏರ್‌ಟೆಲ್ ದೂರು ದಾಖಲಿಸಿಸಲು:

ಏರ್‌ಟೆಲ್ ದೂರು ದಾಖಲಿಸಿಸಲು:

ಏರ್‌ಟೆಲ್ ಸೇವೆಗಳ ಕುರಿತು ದೂರು ದಾಖಲು ಮಾಡಬೇಕಾದರೆ ನೀವು 198ಗೆ ಕರೆ ಮಾಡಬಹುದಾಗಿದೆ. ಇದು ಉಚಿತವಾಗಿ ಯಾವುದೇ ದರಗಳನ್ನು ಇದಕ್ಕೆ ವಿಧಿಸುವುದಿಲ್ಲ.

ಏರ್‌ಟೆಲ್ ಬ್ಯಾಲೆನ್ಸ್ ಚೆಕ್ ಮಾಡಲು:

ಏರ್‌ಟೆಲ್ ಬ್ಯಾಲೆನ್ಸ್ ಚೆಕ್ ಮಾಡಲು:

ಇದಲ್ಲದೇ ಏರ್‌ಟೆಲ್ ಬ್ಯಾಲೆನ್ಸ್ ಚೆಕ್ ಮಾಡಲು *123# ಡಯಲ್ ಮಾಡಬೇಕಾಗಿದೆ. ಇಲ್ಲಿ ನಿಮ್ಮ ಉಳಿಕೆಯ ಬ್ಯಾಲೆನ್ಸ್ ನೋಡಬಹುದಾಗಿದೆ.

ಏರ್‌ಟೆಲ್ 4G ಡೇಟಾ ಬ್ಯಾಲೆನ್ಸ್ ಚೆಕ್ ಮಾಡಲು:

ಏರ್‌ಟೆಲ್ 4G ಡೇಟಾ ಬ್ಯಾಲೆನ್ಸ್ ಚೆಕ್ ಮಾಡಲು:

ಏರ್‌ಟೆಲ್ ನೀಡುವ ಡೇಟಾ ಬ್ಯಾಲೆನ್ಸ್ ಚೆಕ್ ಮಾಡಲು *123*8# ಡಯಲ್ ಮಾಡಬೇಕಾಗಿದೆ. ಇಲ್ಲಿ ನಿಮ್ಮ ಉಳಿಕೆಯ ಡೇಟಾ ಬ್ಯಾಲೆನ್ಸ್ ಕಾಣಿಸಿಕೊಳ್ಳಲಿದೆ.

ಏರ್‌ಟೆಲ್ ಲೋನ್ ತೆಗೆದುಕೊಳ್ಳಲು:

ಏರ್‌ಟೆಲ್ ಲೋನ್ ತೆಗೆದುಕೊಳ್ಳಲು:

ನಿಮ್ಮ ಬ್ಯಾಲೆನ್ಸ್ ಕಡಿಮೆಯಾಗಿ ಲೋನ್ ತೆಗೆದುಕೊಳ್ಳಲು *141*10# or 52141 ಡಯಲ್ ಮಾಡಬೇಕಾಗಿದೆ. ಇದು ಉಚಿತವಾಗಿ ಯಾವುದೇ ದರಗಳನ್ನು ಇದಕ್ಕೆ ವಿಧಿಸುವುದಿಲ್ಲ.

ಏರ್‌ಟೆಲ್ ಆಫರ್‌ಗಳನ್ನು ಚೆಕ್ ಮಾಡಲು:

ಏರ್‌ಟೆಲ್ ಆಫರ್‌ಗಳನ್ನು ಚೆಕ್ ಮಾಡಲು:

ಏರ್‌ಟೆಲ್ ನಿಮಗೆ ಮಾತ್ರವೇ ನೀಡುವ ಆಫರ್‌ಗಳನ್ನು ಚೆಕ್ ಮಾಡಲು *121# ಡಯಲ್ ಮಾಡಿ. ಇಲ್ಲಿ ನಿಮ್ಮ ಸ್ಪೆಷಲ್ ಆಫರ್‌ಗಳು ಕಾಣಿಸಿಕೊಳ್ಳಲಿದೆ.

ಏರ್‌ಟೆಲ್ ಹೆಲೋ ಟೋನ್:

ಏರ್‌ಟೆಲ್ ಹೆಲೋ ಟೋನ್:

ಏರ್‌ಟೆಲ್ ಬಳಕೆದಾರರು ಹೆಲೋ ಟೋನ್ ಬದಲಾವಣೆ ಮಾಡಿಕೊಳ್ಳಲು, ಹೊಸ ಹೊಸ ಟೋನ್‌ಗಳನ್ನು ಹುಡುಕಲು *678# ಡಯಲ್ ಮಾಡಬೇಕಾಗಿದೆ.

ನಿಮ್ಮ ಏರ್‌ಟೆಲ್ ನಂಬರ್ ನೋಡಲು:

ನಿಮ್ಮ ಏರ್‌ಟೆಲ್ ನಂಬರ್ ನೋಡಲು:

ನಿಮ್ಮ ಏರ್‌ಟೆಲ್ ನಂಬರ್ ಮರೆತು ಹೋದ ಸಂದರ್ಭದಲ್ಲಿ *282# ಡಯಲ್ ಮಾಡಿದರೆ ನಿಮ್ಮ ನಂಬರ್ ಕಾಣಿಸಿಕೊಳ್ಳಲಿದೆ.

ಏರ್‌ಟೆಲ್ ಮೊಬೈಲ್ ನಂಬರ್ ಪೋರ್ಟಬಲಿಟಿ:

ಏರ್‌ಟೆಲ್ ಮೊಬೈಲ್ ನಂಬರ್ ಪೋರ್ಟಬಲಿಟಿ:

ಇದಲ್ಲದೇ ನಿಮ್ಮ ಏರ್‌ಟೆಲ್ ಮೊಬೈಲ್ ನಂಬರ್ ಪೋರ್ಟಬಲಿಟಿ ಗಾಗಿ ನೀವು PORT ಎಂದು ಟೈಪ್ ಮಾಡಿ ನಿಮ್ಮ ನಂಬರ್ ಹಾಕಿ 1909 ಗೆ ಕಳುಹಿಸಬೇಕಾಗಿದೆ.

ಏರ್‌ಟೆಲ್ ಆಡ್‌-ಆನ್‌ ಪ್ಯಾಕ್‌:

ಏರ್‌ಟೆಲ್ ಆಡ್‌-ಆನ್‌ ಪ್ಯಾಕ್‌:

ಸದ್ಯ ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋವೊಂದಿಗಿನ ಸ್ಪರ್ಧೆಯಲ್ಲಿ ಸದ್ದು ಮಾಡುತ್ತಿರುವ ಏರ್‌ಟೆಲ್, ನೂತನ ಆಫರ್ ವೊಂದನ್ನು ಲಾಂಚ್ ಮಾಡಿದೆ. ಬಳಕೆದಾರರ ಮನಗೆಲ್ಲಲು ಇದು ಏರ್‌ಟೆಲ್‌ಗೆ ಸಹಾಯಕಾರಿಯಾಗಲಿದೆ. ಜಿಯೋ ಸಹ ಈ ಮಾದರಿಯ ಆಫರ್ ಅನ್ನು ಇದುವರೆಗೂ ನೀಡುವ ಮನಸ್ಸು ಮಾಡಿಲ್ಲ. ಇದೇ ಮೊದಲ ಬಾರಿಗೆ ಜಿಯೋ ಕಾಪಿ ಮಾಡ ಏರ್‌ಟೆಲ್ ತನ್ನದೇ ಹೊಸ ಮಾದರಿಯ ಪ್ಲಾನ್ ಅನ್ನು ಮಾರುಕಟ್ಟೆಗೆ ಪರಿಚಯ ಮಾಡಿದೆ.

ಮಿತಿ ಇಲ್ಲದ ಡೇಟಾ..! ಜಿಯೋದಲ್ಲಿಯೂ ಈ ಆಫರ್ ಇಲ್ಲ..!

ಮಿತಿ ಇಲ್ಲದ ಡೇಟಾ..! ಜಿಯೋದಲ್ಲಿಯೂ ಈ ಆಫರ್ ಇಲ್ಲ..!

ಈಗಾಗಲೇ ಮಾರುಕಟ್ಟೆಯಲ್ಲಿ ಆಡ್ ಆನ್ ಪ್ಯಾಕ್‌ಗಳು ಹೆಚ್ಚು ಬಳಕೆಯಾಗುತ್ತಿದ್ದು, ದಿನಕ್ಕೇ ಒಂದು GB ಡೇಟಾ ಬಳಕೆದಾರರಿಗೆ ಸಾಕಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಏರ್‌ಟೆಲ್ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಆಡ್ ಆನ್ ಪ್ಲಾನ್ ನೀಡಿದ್ದು, ಇದರಲ್ಲಿ ಬಳಕೆದಾರರಿಗೆ ಇಷ್ಟು ಮಾತ್ರವೇ ಎನ್ನುವ ಡೇಟಾ ಲಿಮಿಟ್ ಇಲ್ಲವೇ ಇಲ್ಲ ಎನ್ನಲಾಗಿದೆ.

ಏರ್‌ಟೆಲ್ ರೂ.193 ಪ್ಲಾನ್:

ಏರ್‌ಟೆಲ್ ರೂ.193 ಪ್ಲಾನ್:

ಜಿಯೋ ಮಾರುಕಟ್ಟೆಗೆ ಪರಿಚಯ ಮಾಡಿದ್ದ ಆಡ್ ಅನ್ನು ಪ್ಯಾಕ್‌ಗಳಿಗೆ ಏರ್‌ಟೆಲ್ ಹೊಸ ರೂಪವನ್ನು ನೀಡಿದೆ ಎನ್ನಲಾಗಿದೆ. ಏರ್‌ಟೆಲ್ ರೂ.193ಕ್ಕೆ ಯಾವುದೇ ವ್ಯಾಲಿಡಿಟಿ ಇಲ್ಲದ ಆಡ್ ಆನ್ ಪ್ಯಾಕ್ ನೀಡಿದ್ದು, ಡೇಟಾ ಬಳಕೆಗೂ ಯಾವುದೇ ಲಿಮಿಟ್ ಇಲ್ಲ ಮತ್ತು ಇಷ್ಟೆ ಪ್ರಮಾಣದ ಡೇಟಾ ನೀಡುವುದಾಗಿಯೂ ತಿಳಿಸಿಲ್ಲ.

ವ್ಯಾಲಿಡಿಟಿ ಹೇಗೆ..?

ವ್ಯಾಲಿಡಿಟಿ ಹೇಗೆ..?

ಏರ್‌ಟೆಲ್ ಬಳಕೆದಾರರು ಈಗಾಗಲೇ ರೀಚಾರ್ಜ್ ಮಾಡಿಸಿಕೊಂಡಿರುವ ಪ್ಲಾನ್ ವ್ಯಾಲಿಡಿಟಿ ಇರುವವರೆಗೂ ಈ ಆಡ್ ಆನ್ ಪ್ಲಾನ್ ಚಾಲನೆಯಲ್ಲಿ ಇರಲಿದೆ. ಅಲ್ಲದೇ ಪ್ರತಿ ದಿನವು ಒಂದು GB ಡೇಟಾವನ್ನು ಬಳಕೆ ನೀಡಲಿದೆ ಎನ್ನಲಾಗಿದೆ.

ಹೆಚ್ಚಿನ ಲಾಭ:

ಹೆಚ್ಚಿನ ಲಾಭ:

ಜಿಯೋ ತನ್ನ ಆಡ್ ಆನ್ ಪ್ಯಾಕ್‌ಗಳಲ್ಲಿ ಕೇವಲ ಇಷ್ಟೆ ಡೇಟಾ ನೀಡುವುದಾಗಿ ಘೋಷಣೆ ಮಾಡುವುದಲ್ಲದೇ, ವ್ಯಾಲಿಡಿಟಿಯನ್ನು ನಿಗಧಿ ಮಾಡಿದೆ. ಆದರೆ ಏರ್‌ಟೆಲ್ ಇದಕ್ಕೆ ವಿರುದ್ಧವಾಗಿ ತನ್ನ ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡುವ ಸಲುವಾಗಿ ಹೊಸ ಪ್ರಯತ್ನಕ್ಕೆ ಮುಂದಾಗಿದೆ.

ರೂ.49 ಪ್ಲಾನ್:

ರೂ.49 ಪ್ಲಾನ್:

ಇದಲ್ಲದೇ ಇನ್ನೊಂದು ಪ್ಲಾನ್ ಘೋಷಣೆ ಮಾಡಿದ್ದು, ಇದರಲ್ಲಿ ರೂ.49ಕ್ಕೆ ಏರ್‌ಟೆಲ್ ಯಾವುದೇ ವ್ಯಾಲಿಡಿಟಿ ಇಲ್ಲದೇ ಸದ್ಯದ ಪ್ಲಾನ್ ಅವಧಿಯ ವರೆಗೂ 1GB ಡೇಟಾವನ್ನು ಬಳಕೆಗೆ ನೀಡಲಿದೆ ಎನ್ನಲಾಗಿದೆ.

ಜಿಯೋದಲ್ಲಿಯೂ ಇಲ್ಲ:

ಜಿಯೋದಲ್ಲಿಯೂ ಇಲ್ಲ:

ಜಿಯೋ ರೂ.11 ರಿಂದ ರೂ.101ರ ವರೆಗೂ ಪ್ಲಾನ್‌ಗಳನ್ನು ಘೋಷಣೆ ಮಾಡಿದ್ದು, ಇದರಲ್ಲಿ ಹೆಚ್ಚು ಎಂದರೆ ಬಳಕೆದಾರರಿಗೆ 6GB ಡೇಟಾ ದೊರೆಯಲಿರದೆ. ಆದರೆ ಏರ್‌ಟೆಲ್ ನೀಡಿರುವ ಪ್ಲಾನ್‌ನಲ್ಲಿ ಬಳಕೆದಾರರು 90 GB ವರೆಗೂ ಡೇಟಾವನ್ನು ಪಡೆಯಬಹುದಾಗಿದೆ.

How To Link Aadhaar With EPF Account Without Login (KANNADA)

ಓದಿರಿ: ಪ್ರೈಮ್ ಸದಸ್ಯರಿಗೆ ಹೊಸದೊಂದು ಕೊಡುಗೆ ಕೊಟ್ಟ ಅಮೆಜಾನ್..!

Best Mobiles in India

English summary
Airtel Rs 995 Prepaid Plan Unveiled to Offer Unlimited Calls, 100 SMS Per Day for 180 Days. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X