ಪ್ರೈಮ್ ಸದಸ್ಯರಿಗೆ ಹೊಸದೊಂದು ಕೊಡುಗೆ ಕೊಟ್ಟ ಅಮೆಜಾನ್..!

|

ದಿನೇ ದಿನೇ ಭಾರತೀಯ ಮಾರುಕಟ್ಟೆಯಲ್ಲಿ ಅಮೆಜಾನ್ ಖ್ಯಾತಿಯನ್ನು ಪಡೆದುಕೊಳ್ಳುತ್ತಿದ್ದು, ಈಗಾಗಲೇ ಅಮೆಜಾನ್ ಪ್ರೈಮ್ ಹೊಸ ಸಂಚಲನವನ್ನು ಮೂಡಿಸಿದೆ. ಅದರಲ್ಲಿಯೂ ಅಮೆಜಾನ್ ಪ್ರೈಮ್ ವಿಡಿಯೋ ಹೆಚ್ಚಿನ ಮಂದಿಯನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಈ ಹಿನ್ನಲೆಯಲ್ಲಿ ಅಮೆಜಾನ್ ತನ್ನ ಪ್ರೈಮ್ ಸದಸ್ಯರಿಗೆ ಹೊಸ ಸೇವೆಯನ್ನು ಪರಿಚಯ ಮಾಡಿದೆ.

 ಪ್ರೈಮ್ ಸದಸ್ಯರಿಗೆ ಹೊಸದೊಂದು ಕೊಡುಗೆ ಕೊಟ್ಟ ಅಮೆಜಾನ್..!

ಈ ಹಿಂದೆಯೇ ಅಮೆಜಾನ್ ಪ್ರೈಮ್ ಮ್ಯೂಸಿಕ್ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿತ್ತು. ಇದರಂತೆ ಅಮೆಜಾನ್ ಪ್ರೈಮ್ ಮ್ಯೂಸಿಕ್ ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಆಗಿದ್ದು, ಸಂಗೀತ ಪ್ರಿಯರಿಗೆ ಹೊಸ ಹೊಸ ಹಾಡುಗಳನ್ನು ನೀಡಲಿದೆ ಎನ್ನಲಾಗಿದೆ. ಈಗಾಗಲೇ ಹಿಟ್ ಆಗಿರುವ ಅಮೆಜಾನ್ ಪ್ರೈಮ್ ವಿಡಿಯೋ ಮಾದರಿಯಲ್ಲಿ ಇದು ಸಹ ಖ್ಯಾತಿಯನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ.

ಆಡ್ ಫ್ರೀ ಹಾಡುಗಳು:

ಆಡ್ ಫ್ರೀ ಹಾಡುಗಳು:

ಅಮೆಜಾನ್ ಪ್ರೈಮ್ ಮ್ಯೂಸಿಕ್ ಸೇವೆಯೂ ಜಾಹಿರಾತು ಮುಕ್ತವಾಗಿರಲಿದ್ದು, ಪ್ರೈಮ್ ಸದಸ್ಯರಿಗೆ ಸೇವೆಯನ್ನು ನೀಡಲಿದೆ. ಇದಲ್ಲದೇ ಅಮೆಜಾನ್ ಪ್ರೈಮ್ ಮ್ಯೂಸಿಕ್ ಅಮೆಜಾನ್ ಫೈರ್ ಟಿವಿ ಸ್ಟಿಕ್‌ಗಳಲ್ಲಿ ಮತ್ತು ಅಮೆಜಾನ್ ಇಕೋ ಡಿವೈಸ್‌ಗಳಲ್ಲಿ ಲಭ್ಯವಿರಲಿದೆ ಎನ್ನಲಾಗಿದೆ.

ಅಮೆಜಾನ್ ಪ್ರೈಮ್ ವಿಡಿಯೋಗಳನ್ನು ಡೌನ್‌ಲೋಡ್‌ ಮಾಡಿ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಹೇಗೆ..?
ಕನ್ನಡ ಹಾಡುಗಳು ಇದೆ:

ಕನ್ನಡ ಹಾಡುಗಳು ಇದೆ:

ಇದಲ್ಲದೇ ಅಮೆಜಾನ್ ಪ್ರೈಮ್ ಮ್ಯೂಸಿಕ್ ನಲ್ಲಿ ಕನ್ನಡ ಸೇರಿದಂತೆ, ಇಂಗ್ಲಿಷ್, ಹಿಂದಿ, ತಮಿಳ್, ಪಂಜಾಬಿ, ಬೆಂಗಾಲಿ, ತೆಲುಗು ಸೇರಿದಂತೆ ವಿವಿಧ ಭಾಷೆಗಳ ಹಾಡುಗಳನ್ನು ಸಂಗೀತಗಳನ್ನು ಪ್ರಸಾರ ಮಾಡಲಿದೆ ಎನ್ನಲಾಗಿದೆ.

ವಾಯ್ಸ್ ಅಸಿಸ್ಟೆಂಟ್:

ವಾಯ್ಸ್ ಅಸಿಸ್ಟೆಂಟ್:

ಇದಲ್ಲದೇ ಅಮೆಜಾನ್ ಪ್ರೈಮ್ ಮ್ಯೂಸಿಕ್ ಅಲೆಕ್ಸಾ ವಾಯ್ಸ್ ಅಸಿಸ್ಟೆಂಟ್ ನೊಂದಿಗೆ ಕಾಣಿಸಿಕೊಂಡಿದ್ದು, ನೀವು ಹಾಡುಗನ್ನು ವಾಯ್ಸ್ ಕಾಮೆಂಡಿಗ್ ಮೂಲಕವೇ ಕಾರ್ಯನಿರ್ವಹಿಸಬಹುದಾಗಿದೆ. ನೀವು ಕೇಳಿದ ಹಾಡುಗಳನ್ನು ಪ್ರಸಾರ ಮಾಡಲಿದೆ.

ಆಪ್-ವೆಬ್:

ಆಪ್-ವೆಬ್:

ಅಮೆಜಾನ್ ಪ್ರೈಮ್ ಮ್ಯೂಸಿಕ್ ಆಪ್ ಮತ್ತು ವೆಬ್ ಎರಡು ಸೇವೆಯನ್ನು ನೀಡಲಿದೆ. ಆಂಡ್ರಾಯ್ಡ್ ಮತ್ತು ಆಪಲ್ ನಲ್ಲಿ ಆಪ್ ಸಪೋರ್ಟ್ ಮಾಡಲಿದ್ದು, ಇದರೊಂದಿಗೆ ವೆಬ್‌ನಲ್ಲಿಯೂ ಹಾಡುಗಳನ್ನು ಪ್ರೈಮ್ ಸದಸ್ಯರು ಕೇಳಬಹುದಾಗಿದೆ.

Most Read Articles
Best Mobiles in India

English summary
Amazon Prime Music launched in India. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X