ಜಿಯೋ ಎಫೆಕ್ಟ್...ಮತ್ತೆ ಏರ್‌ಟೆಲ್‌ನಿಂದ ನೂತನ ರಿಚಾರ್ಜ್ ಆಫರ್!!
ಈಗಾಗಲೇ ಹಲವು ಹಲವು ಆಫರ್‌ಗಳನ್ನು ನಿಡಿರುವ ಏರ್‌ಟೆಲ್ ಇಂದು ಸಹ ನೂತನ ಆಫರ್ ಒಂದನ್ನು ಪರಿಚಯಿಸಿದೆ.!
ರಿಲಾಯನ್ಸ್ ಜಿಯೋ ಟೆಲಿಕಾಂ ಕ್ಷೇತ್ರಕ್ಕೆ ಕಾಲಿಟ್ಟ ನಂತರ ಟೆಲಿಕಾಂ ಕಂಪೆನಿಗಳು ನಡೆಯುತ್ತಿರುವ ದರಸಮರ ಇಲ್ಲಿಗೆ ನಿಲ್ಲುವ ಸಾಧ್ಯತೆ ಇಲ್ಲ.! ಹೌದು, ಹೇಗಾದರೂ ತನ್ನ ಗ್ರಾಹಕರನ್ನು ಹಿಡಿದಿಡಬೇಕು ಎಂದು ಎಲ್ಲಾ ಟೆಲಿಕಾಂಗಳು ಆಫರ್ ಮೇಲೆ ಆಫರ್‌ಗಳನ್ನು ನೀಡುತ್ತಿವೆ. ಈಗಾಗಲೇ ಹಲವು ಹಲವು ಆಫರ್‌ಗಳನ್ನು ನಿಡಿರುವ ಏರ್‌ಟೆಲ್ ಇಂದು ಸಹ ನೂತನ ಆಫರ್ ಒಂದನ್ನು ಪರಿಚಯಿಸಿದೆ.!

ಪ್ರಸ್ತುತ ಸಹ ಭಾರತದ ನಂಬರ್ 1 ಟೆಲಿಕಾಂ ಆಗಿಯೇ ಉಳಿದಿರುವ ಏರ್‌ಟೆಲ್, ಜಿಯೋ ವೆಲ್‌ಕಮ್ ಆಫರ್ 2 ಬಗ್ಗೆ ಕಳವಳಗೊಂಡಿದೆ. ಸರಿಯಾಗಿ ಆರು ತಿಂಗಳುಗಳ ಕಾಲ ಉಚಿತ ಇಂಟರ್‌ನೆಟ್ ಸೇವೆಯನ್ನು ನೀಡುತ್ತಿರುವ ಜಿಯೋಗೆ ಪೈಪೋಟಿ ನೀಡಲು ಏರ್‌ಟೆಲ್ ಇನ್ನಿಲ್ಲದ ಸಾಹಸ ಮಾಡುತ್ತಿದೆ. ಹಾಗಾಗಿ ತನ್ನ ಪೋಸ್ಟ್‌ಪೇಡ್ ಗ್ರಾಹಕರಿಗೆ 549 ರೂಪಾಯಿ ಮತ್ತು 799 ರೂಪಾಯಿಗಳ ಮೈ ಪ್ಲಾನ್ ಇನ್ಫಿನಿಟಿ ಎಂಬ ಎರಡು ಆಫರ್‌ಗಳನ್ನು ಪರಿಚಯಿಸಿದೆ.

ಮೊಬೈಲ್‌ನಲ್ಲಿ ಆನ್‌ಲೈನ್ ಶಾಪಿಂಗ್ ಮಾಡುತ್ತಿದ್ದಿರಾ? ಹಾಗಿದ್ದರೆ ನೀವು ಹೀಗೆ ಮಾಡಲೇಬೇಕು!?
ಏರ್‌ಟೆಲ್‌ನ ನೂತನ ಆಫರ್ 549 ರೂಪಾಯಿ ರೀಚಾರ್ಜ್‌ನೊಂದಿಗೆ ಭಾರತದಾಧ್ಯಂತ ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಕರೆ ಸೌಲಭ್ಯ ಮತ್ತು 3GB 4G ಡೇಟಾ ಪಡೆಯಬಹುದಾಗಿದೆ. ವಿಶೇಷವೆಂಬಂತೆ ಉಚಿತ 100 ಸ್ಥಳೀಯ ಮತ್ತು ಎಸ್‌ಟಿಡಿ ಎಸ್‌ಎಂಎಸ್ ಜೊತೆಗೆ ವ್ಯಾಂಕ್ ಮ್ಯೂಸಿಕ್ ಮತ್ತು ವ್ಯಾಂಕ್ ಮೂವಿಸ್‌ಗೆ ಉಚಿತ ಚಂದಾರರಾಗುವ ಅವಕಾಶವನ್ನು ನೀಡಿದೆ.

ಇನ್ನು ಏರ್‌ಟೆಲ್‌ನ 799 ರೂಪಾಯಿ ರೀಚಾರ್ಜ್ ಮಾಡಿಸಿದರೆ 549 ರೂಪಾಯಿ ರೀಚಾರ್ಜ್ ಮಾಡಿಸಿದರೆ ಸಿಗುವ ಆಫರ್‌ಗಳೆ ಲಭ್ಯವಿದ್ದು, ಭಾರತದಾಧ್ಯಂತ ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಕರೆ ಸೌಲಭ್ಯ ಮತ್ತು 5GB 4G ಡೇಟಾ ಪಡೆಯಬಹುದಾಗಿದೆ. ಇನ್ನು ಉಚಿತ 100 ಸ್ಥಳೀಯ ಮತ್ತು ಎಸ್‌ಟಿಡಿ ಎಸ್‌ಎಂಎಸ್ ಜೊತೆಗೆ ವ್ಯಾಂಕ್ ಮ್ಯೂಸಿಕ್ ಮತ್ತು ವ್ಯಾಂಕ್ ಮೂವಿಸ್‌ಗೆ ಉಚಿತ ಚಂದಾರರಾಗುವ ಅವಕಾಶವನ್ನು ನೀಡಿದೆ.
ಈ ಎರಡು ಆಫರ್‌ಗಳ ವ್ಯಾಲಿಡಿಟಿ 28 ದಿನಗಳಾಗಿದ್ದು, ಈ ನೂತನ ಆಫರ್ ಏರ್‌ಟೆಲ್ ಮೇಲೆ ವಿಶ್ವಾಸ ಇಟ್ಟಿರುವ ಹಳೆಯ ಗ್ರಾಹಕರಿಗೆ ಸ್ವಲ್ಪಮಟ್ಟಿನ ಖುಷಿಯನ್ನು ತಂದಿದೆ ಎನ್ನಬಹುದು.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications








