ಏರ್‌ಟೆಲ್‌ನಿಂದ ಹೊಸ ಪ್ರೀಪೇಡ್ ಪ್ಲ್ಯಾನ್ : ಪ್ರತಿದಿನ 3GB ಡೇಟಾ, ಅನಿಯಮಿತ ಕರೆ!
ಸದ್ಯ ದೇಶದ ಟೆಲಿಕಾಂ ವಲಯದಲ್ಲಿ ಸಾಕಷ್ಟು ಏರಿಳಿತಗಳು ಕಂಡುಬಂದಿದ್ದು, ಪ್ರಮುಖ ಟೆಲಿಕಾಂ ಸಂಸ್ಥೆಗಳ ನಡುವೆ ಪೈಪೋಟಿ ಮಾತ್ರ ನಡೆಯುತ್ತಲೆ ಸಾಗಿದೆ. ಈ ನಿಟ್ಟಿನಲ್ಲಿ ಜಿಯೋ ಸೇರಿದಂತೆ ಏರ್‌ಟೆಲ್, ವೊಡಾಫೋನ್ ಸಹ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಹೆಣಗಾಡುತ್ತಿವೆ. ಅವುಗಳಲ್ಲಿ ಭಾರ್ತಿ ಏರ್‌ಟೆಲ್ ಸಂಸ್ಥೆಯು ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಜಿಯೋ ಸೆಡ್ಡು ಹೊಡುವಂತಯ ಹೆಜ್ಜೆಗಳನ್ನು ಹಾಕುತ್ತಿದೆ.

ಹೌದು, ಏರ್‌ಟೆಲ್ ತನ್ನ ಗ್ರಾಹಕರಿಗೆ ಈಗಾಗಲೇ ಹಲವು ದೀರ್ಘಾವಧಿಯ ಪ್ರೀಪೇಡ್ ಪ್ಲ್ಯಾನ್‌ಗಳನ್ನು ಪರಿಚಯಿಸಿದ್ದು, ಸದ್ಯ ಅವುಗಳಲ್ಲಿ 558ರೂ.ಗಳ ಪ್ರೀಪೇಡ್ ಪ್ಲ್ಯಾನ್ ಬಳಕೆದಾರರಿಗೆ ಬೆಸ್ಟ್ ಎನಿಸಿದೆ. ಈ ಪ್ರೀಪೇಡ್ ಪ್ಲ್ಯಾನಿನಲ್ಲಿ ಬಳಕೆದಾರರಿಗೆ ಪ್ರತಿದಿನ 3GB ಡೇಟಾ ಸೌಲಭ್ಯ, ಅನಿಯಮಿತ ಉಚಿತ ವಾಯಿಸ್ ಕರೆಗಳು, ಉಚಿತ ಎಸ್‌ಎಮ್‌ಎಸ್ ಪ್ರಯೋಜನಗಳು ದೊರೆಯುತ್ತವೆ. ಹಾಗಾದರೇ ಏರ್‌ಟೆಲ್‌ನ 558ರೂ. ಪ್ಲ್ಯಾನಿನ ಬಗ್ಗೆ ಇನ್ನಷ್ಟು ಮಾಹಿತಿ ಮತ್ತು ಏರ್‌ಟೆಲ್‌ನ ಇತರೆ ಜನಪ್ರಿಯ ದೀರ್ಘಾವಧಿಯ ಪ್ಲ್ಯಾನ್‌ಗಳು ಯಾವುವು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

558ರೂ.ಗಳ ಪ್ರೀಪೇಡ್ ಪ್ಲ್ಯಾನ್
ಏರ್‌ಟೆಲ್‌ನ ಜನಪ್ರಿಯ ಪ್ರೀಪೇಡ್ ಪ್ಯಾನ್‌ಗಳಲ್ಲಿ ಒಂದಾಗಿರುವ 558ರೂ. ಪ್ರೀಪೇಡ್ ಪ್ಲ್ಯಾನ್ ಒಟ್ಟು 82 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಈ ಅವಧಿಯಲ್ಲಿ FUP ಲಿಮಿಟ್ ಇಲ್ಲದೇ ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನೆ ಲಭ್ಯವಾಗಲಿದೆ. ಇದರೊಂದಿಗೆ ಬಳಕೆದಾರರು ಪ್ರತಿದಿನ 3GB ಉಚಿತ ಡೇಟಾ, ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್ ಸೌಲಭ್ಯಗಳು ಲಭ್ಯವಾಗಲಿವೆ.
ಜಿಯೋ 509ರೂ. V/S ಏರ್‌ಟೆಲ್ 558ರೂ.ಪ್ಲ್ಯಾನ್
ಜಿಯೋದ 509ರೂ.ಗಳ ಪ್ರೀಪೇಡ್ ಪ್ಲ್ಯಾನ್ 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, ಈ ಅವಧಿಯಲ್ಲಿ ಪ್ರತಿದಿನ 4GB ಡೇಟಾ ಉಚಿತವಾಗಿ ದೊರೆಯಲಿದೆ. ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳು ಸಿಗಲಿವೆ. ಜಿಯೋದಿಂದ ಜಿಯೋ ಕರೆಗಳು ಉಚಿತವಾಗಿ ಲಭ್ಯವಾಗಲಿವೆ. ಈ ಪ್ಲ್ಯಾನ್ ಜೊತೆಗೆ ಏರ್‌ಟೆಲ್‌ನ 509ರೂ. ಪ್ಲ್ಯಾನ್ ಹೋಲಿಕೆ ಮಾಡಿದರೇ ಏರ್‌ಟೆಲ್ ಪ್ಲ್ಯಾನ್ ಬೆಸ್ಟ್ ಅನಿಸುತ್ತದೆ. ಏಕೆದಂರೆ 82 ದಿನಗಳ ವ್ಯಾಲಿಡಿಟಿ ಸಿಗಲಿದೆ ಮತ್ತು ಪ್ರತಿದಿನ 3GB ಡೇಟಾ ಸಹ ಸಿಗಲಿದೆ.

ಏರ್‌ಟೆಲ್- 597ರೂ.ಪ್ಲ್ಯಾನ್
ಏರ್‌ಟೆಲ್‌ನ 597ರೂ. ಪ್ರೀಪೇಡ್ ಪ್ಲ್ಯಾನ್ ಒಟ್ಟು 168 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದ್ದು, ಈ ಅವಧಿಗೆ 6GB ಡೇಟಾ ಸೌಲಭ್ಯ ನೀಡುತ್ತದೆ. ಇದರೊಂದಿಗೆ ಅನಿಯಮಿತ ಉಚಿತ ಕರಗೆಳು ಲಭ್ಯವಾಗಲಿದ್ದು, ಹಾಗೂ 28ದಿನಗಳಿಗೆ ಪ್ರತಿ ದಿನ 300ಎಸ್‌ಎಮ್‌ಎಸ್ ಉಚಿತವಾಗಿರುತ್ತವೆ. ಈ ಪ್ಲ್ಯಾನಿನಲ್ಲಿ ಡೇಟಾ ಸೌಲಭ್ಯವು ಕಡಿಮೆ ನೀಡಿರುವುದರಿಂದ, ಈ ಪ್ಲ್ಯಾನ್ ಹೆಚ್ಚು ವ್ಯಾಲಿಡಿಟಿ ಬಯಸುವ ಮತ್ತು ಕರೆಗಳನ್ನು ಹೆಚ್ಚಾಗಿ ಮಾಡುವ ಗ್ರಾಹಕರಿಗೆ ಉತ್ತಮ ಎನ್ನಬಹುದಾಗಿದೆ. ಜೊತೆಗೆ ಏರ್‌ಟೆಲ್ ಮ್ಯೂಸಿಕ್ ಮತ್ತು Norton ಮೊಬೈಲ್ ಸೆಕ್ಯುರಿಟಿ ಆಯ್ಕೆ ಸಿಗಲಿದೆ.

ಏರ್‌ಟೆಲ್-998ರೂ.ಪ್ಲ್ಯಾನ್
ಏರ್‌ಟೆಲ್‌ನ 998ರೂ. ಪ್ರೀಪೇಡ್ ಪ್ಲ್ಯಾನ್ ಸಹ ಡೇಟಾ ಬಳಕೆಗಿಂತ ಕರೆಗಳನ್ನು ಹೆಚ್ಚಾಗಿ ಮಾಡುವ ಮತ್ತು ಅಧಿಕ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಬೆಸ್ಟ್ ಆಗಿದೆ. ಈ ಪ್ಲ್ಯಾನ್ 336 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಪೂರ್ಣ ವ್ಯಾಲಿಡಿಟಿ ಅವಧಿಗೆ 12GB ಡೇಟಾ ಪ್ರಯೋಜನವನ್ನು ಒದಗಿಸಲಿದೆ. 28 ದಿನಗಳಿಗೆ ಪ್ರತಿ ದಿನ 300ಎಸ್‌ಎಮ್‌ಎಸ್ ಉಚಿತವಾಗಿರಲಿದ್ದು, ಜೊತೆಗೆ ಏರ್‌ಟೆಲ್ ಮ್ಯೂಸಿಕ್ ಮತ್ತು Norton ಮೊಬೈಲ್ ಸೆಕ್ಯುರಿಟಿ ಆಯ್ಕೆ ದೊರೆಯಲಿದೆ.

ಏರ್‌ಟೆಲ್-1699ರೂ. ಪ್ಲ್ಯಾನ್
ಏರ್‌ಟೆಲ್‌ನಲ್ಲಿ ದೀರ್ಘಾವಧಿ ಪ್ಲ್ಯಾನ್‌ಗಳಲ್ಲಿಯೇ 1699ರೂ. ಪ್ರೀಪೇಡ್ ಪ್ಲ್ಯಾನ್ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಈ ಪ್ಲ್ಯಾನ್ ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಈ ಅವಧಿಯಲ್ಲಿ ಪ್ರತಿದಿನ 1.4GB ಡೇಟಾ ಪ್ರಯೋಜನ ನೀಡಲಿದೆ. ಇದರೊಂದಿಗೆ ಅನಿಯಮಿತ ಕರೆಗಳು ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳು ಲಭ್ಯವಾಗಲಿವೆ. ಉಳಿದಂತೆ ಏರ್‌ಟೆಲ್ ಮ್ಯೂಸಿಕ್ ಮತ್ತು Norton ಮೊಬೈಲ್ ಸೆಕ್ಯುರಿಟಿ ಆಯ್ಕೆಯು ಸಹ ಲಭ್ಯವಾಗಲಿದೆ.

ಏರ್‌ಟೆಲ್-599ರೂ.ಪ್ಲ್ಯಾನ್
ಏರ್‌ಟೆಲ್‌ನ 599ರೂ. ಪ್ರೀಪೇಡ್ ಪ್ಲ್ಯಾನ್ ದೀರ್ಘಾವಧಿಯ ಎಂಟ್ರಿ ಲೆವೆಲ್ ಪ್ಲ್ಯಾನ್ ಇದ್ದಂತೆ. ಈ ಪ್ಲ್ಯಾನಿನಲ್ಲಿ ಒಟ್ಟು 84 ದಿನಗಳ ವ್ಯಾಲಿಡಿಟಿ ಲಭ್ಯವಾಗಲಿದ್ದು, ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಪ್ರಯೋಜನ ದೊರೆಯಲಿದೆ. ಇದರೊಂದಿಗೆ 4ಲಕ್ಷದ ಭಾರ್ತಿ AXA ಲೈಫ್ ಇನ್ಸೂರೆನ್ಸ್ ಸೌಲಭ್ಯವು ಸಹ ಗ್ರಾಹಕರಿಗೆ ಸಿಗಲಿದೆ. ಇದಲ್ಲದೇ ಏರ್‌ಟೆಲ್ ಮ್ಯೂಸಿಕ್ ಮತ್ತು Norton ಮೊಬೈಲ್ ಸೆಕ್ಯುರಿಟಿ ಪ್ರಯೋಜನಗಳಿರಲಿವೆ.

ಏರ್‌ಟೆಲ್-499ರೂ. ಪ್ಲ್ಯಾನ್
ಏರ್‌ಟೆಲ್ 499ರೂ.ಗಳ ವಿಶೇಷ ಪ್ಲ್ಯಾನ್ ಅನ್ನು ಪರಿಚಯಿಸಿದ್ದು, ಈ ಪ್ಲ್ಯಾನ್ 82 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ವಿಶೇಷವೆಂದರೇ ಈ ಪ್ಲ್ಯಾನಿನಲ್ಲಿ ಪ್ರತಿದಿನ 2GB ಡೇಟಾ ಸೌಲಭ್ಯ ಸಿಗಲಿದ್ದು, ಉಳಿದಂತೆ ಅನಿಯಮಿತ ಉಚಿತ ಕರೆಗಳು, ಉಚಿತ ಎಸ್‌ಎಮ್‌ಎಸ್‌ಗಳು ಲಭ್ಯವಾಗಲಿವೆ. ಹಾಗೆಯೇ ಈ ಪ್ಲ್ಯಾನಿನೊಂದಿಗೂ ಸಹ ಏರ್‌ಟೆಲ್ Wynk ಮ್ಯೂಸಿಕ್ ಚಂದಾದಾರತ್ವವು ಸಿಗಲಿದೆ.


Click it and Unblock the Notifications








