ಜಿಯೋಗೆ ಠಕ್ಕರ್!..ಏರ್‌ಟೆಲ್ ಬಳಕೆದಾರರಿಗೆ ಬಂಪರ್ ಸುದ್ದಿ!

|

ಜಿಯೋಗೆ ಪೈಪೋಟಿ ನೀಡಲು ಹೆಣಗಾಡುತ್ತಿರುವ ಏರ್‌ಟೆಲ್ ಸಂಸ್ಥೆ ಇದೀಗ ತನ್ನ ಗ್ರಾಹಕರಿಗೆ ಒಂದು ವರ್ಷದ ಉಚಿತ ಆಯಂಟಿ ಮೊಬೈಲ್ ಸೆಕ್ಯುರಿಟಿ ಸೇವೆಯನ್ನು ನೀಡಲು ಮುಂದಾಗಿದೆ. ಏರ್‌ಟೆಲ್ ತನ್ನೆಲ್ಲಾ ಪ್ರೀಪೇಡ್ ಆಫರ್‌ಗಳ ಮೇಲೆ ಮತ್ತೊಂದು ಆಫರ್ ಮುಂದಿಟ್ಟಿದ್ದು, ಜನಪ್ರಿಯ ನಾರ್ಟನ್​ ಮೊಬೈಲ್ ಸೆಕ್ಯೂರಿಟಿಯನ್ನು ಒಂದು ವರ್ಷದವರೆಗೆ ಉಚಿತವಾಗಿ ನೀಡಿದೆ.

ಈ ಆಫರ್‌ನಲ್ಲಿ ಏರ್​ಟೆಲ್ ಬಳಕೆದಾರರು 199 ರೂ. ಅಥವಾ ಇದಕ್ಕಿಂತಲೂ ಹೆಚ್ಚಿನ ಮೌಲ್ಯದ ರಿಚಾರ್ಜ್​ ಮಾಡಿಕೊಂಡರೆ ನಾರ್ಟನ್​ ಮೊಬೈಲ್ ಸೆಕ್ಯೂರಿಟಿಯನ್ನು ಒಂದು ವರ್ಷದವರೆಗೆ ಉಚಿತವಾಗಿ ಪಡೆಯಬಹುದಾಗಿದೆ. ರಿಚಾರ್ಜ್​ ಮಾಡಿಕೊಂಡ ಗ್ರಾಹಕರು ಮೈ ಏರ್​ಟೆಲ್​ ಆಪ್​ಗೆ ಭೇಟಿ ನೀಡುವ ಮೂಲಕ ನಾರ್ಟನ್​ ಸೆಕ್ಯೂರಿಟಿಯನ್ನು ಆಯಕ್ಟೀವ್ ಮಾಡಿಕೊಳ್ಳಬಹುದು.

ಜಿಯೋಗೆ ಠಕ್ಕರ್!..ಏರ್‌ಟೆಲ್ ಬಳಕೆದಾರರಿಗೆ ಬಂಪರ್ ಸುದ್ದಿ!

ನಾರ್ಟನ್​ ಮೊಬೈಲ್ ಸೆಕ್ಯೂರಿಟಿ ಆಪ್ ಒಂದು ಉತ್ತಮ ಆಯಂಟಿ ವೈರಸ್​ ಸಾಫ್ಟ್​ವೇರ್ ಆಗಿದ್ದು, ಇದು ನಿಮ್ಮ ಮೊಬೈಲ್ ಅನ್ನು ಅಪಾಯಕಾರಿ ಆಪ್​ಗಳಿಂದ ಸಂರಕ್ಷಿಸುತ್ತದೆ. ವೆಬ್ ರಕ್ಷಣೆ, ಕಾಲ್ ಬ್ಲಾಕರ್, ಮಾಲ್ವೇರ್ ರಕ್ಷಣೆ, ಗೌಪ್ಯತೆ ಸಲಹೆಗಾರ, ಫಿಶಿಂಗ್ ವಿರೋಧಿ ಸುರಕ್ಷಿತ ಬ್ರೌಸಿಂಗ್ ಮತ್ತು ಹೆಚ್ಚಿನದನ್ನು ಈ ನಾರ್ಟನ್​ ಮೊಬೈಲ್ ಸೆಕ್ಯೂರಿಟಿ ಆಪ್ ಒಳಗೊಂಡಿರುತ್ತದೆ.

ಒಂದು ವೇಳೆ ನಿಮ್ಮ ಫೋನ್ ಕಳ್ಳತನವಾದರೆ ಅದರಲ್ಲಿನ ಗೌಪ್ಯತೆಯನ್ನು ಕಾಪಾಡಿ, ಫೋನ್​ ಅನ್ನು ಮರಳಿ ಪಡೆಯಲು ಕೂಡ ಈ ಆಪ್ ಸಹಾಯ ಮಾಡುತ್ತದೆ (ಫೋನ್​ ಅನ್ನು ಮರಳಿ ಪಡೆಯಲು ಸಾಧ್ಯವಾಗುವ ಎಲ್ಲಾ ಆಯ್ಕೆಗಳ ಪ್ರಯತ್ನ ಮಾಡುತ್ತದೆ). ಈ ಆಯ್ಕೆಯು ಏರ್​ಟೆಲ್ 199 ರೂ. ಪ್ರಿಪೇಯ್ಡ್​ ರಿಚಾರ್ಜ್​ ಮತ್ತು ಅದಕ್ಕಿಂತಲೂ ಹೆಚ್ಚಿನ ರಿಚಾರ್ಜ್​ನೊಂದಿಗೆ ಸಿಗುತ್ತಿದೆ.

ಜಿಯೋಗೆ ಠಕ್ಕರ್!..ಏರ್‌ಟೆಲ್ ಬಳಕೆದಾರರಿಗೆ ಬಂಪರ್ ಸುದ್ದಿ!

ಇನ್ನು 199ರೂ.ಗಳಿಗಿಂತ ಹೆಚ್ಚಿನ ಎಲ್ಲಾ ರಿಚಾರ್ಜ್​ಗಳ ಮೇಲೆ 200 ರೂ.ವಿನ ಕ್ಯಾಶ್​ ಬ್ಯಾಕ್ ಕೂಡ ಲಭ್ಯವಿದ್ದು, ಇದು ನಿಮ್ಮ ಮೈ ಏರ್​ಟೆಲ್ ಆಪ್​ನಲ್ಲಿ ಸಿಗಲಿದೆ. ಏರ್​ಟೆಲ್ ನೀಡಿರುವ 199ರೂ.ಗಳ ಈ ಪ್ಲ್ಯಾನ್​ನಲ್ಲಿ ಗ್ರಾಹಕರಿಗೆ ಪ್ರತಿದಿನ 1.4GB ಡೇಟಾ, ಅನಿಯಮಿತ ಕರೆಯೊಂದಿಗೆ 100 ಎಸ್​ಎಂಎಸ್​ಗಳು ಉಚಿತವಾಗಿ ದೊರೆಯುತ್ತದೆ. ಇದರ ವಾಲಿಡಿಟಿ 28 ದಿನಗಳಾಗಿವೆ.

ಓದಿರಿ: ಬೈಕ್ ಓಡಿಸುವಾಗಲೇ 'ವಿವೊ' ಮೊಬೈಲ್ ಸ್ಪೋಟ!..ಕೋಲಾರದ ಯುವಕ ಗಂಭೀರ!!

Best Mobiles in India

English summary
ಜಿಯೋಗೆ ಪೈಪೋಟಿ ನೀಡಲು ಹೆಣಗಾಡುತ್ತಿರುವ ಏರ್‌ಟೆಲ್ ಸಂಸ್ಥೆ ಇದೀಗ ತನ್ನ ಗ್ರಾಹಕರಿಗೆ ಒಂದು ವರ್ಷದ ಉಚಿತ ಆಯಂಟಿ ಮೊಬೈಲ್ ಸೆಕ್ಯುರಿಟಿ ಸೇವೆಯನ್ನು ನೀಡಲು ಮುಂದಾಗಿದೆ. ಏರ್‌ಟೆಲ್ ತನ್ನೆಲ್ಲಾ ಪ್ರೀಪೇಡ್ ಆಫರ್‌ಗಳ ಮೇಲೆ ಮತ್ತೊಂದು ಆಫರ್ ಮುಂದಿಟ್ಟಿದ್ದು, ಜನಪ್ರಿಯ ನಾರ್ಟನ್​ ಮೊಬೈಲ್ ಸೆಕ್ಯೂರಿಟಿಯನ್ನು ಒಂದು ವರ್ಷದವರೆಗೆ ಉಚಿತವಾಗಿ ನೀಡಿದೆ.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X