ನೀವು ಏರ್‌ಟೆಲ್ ಗ್ರಾಹಕರೇ?..ಹಾಗಿದ್ರೆ, ಯಾವುದಕ್ಕೂ ಈ ಪ್ಲ್ಯಾನ್‌ಗಳನ್ನು ಒಮ್ಮೆ ನೋಡಿ!
ದೇಶದ ಟೆಲಿಕಾಂ ವಲಯದಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳು ಚಂದಾದಾರರನ್ನು ಆಕರ್ಷಿಸಿಲು ಹೊಸ ಪ್ಲ್ಯಾನ್ ಪರಿಚಯಿಸುತ್ತಾ ಸಾಗಿವೆ. ಈ ನಿಟ್ಟಿನಲ್ಲಿ ಜಿಯೋ, ಏರ್‌ಟೆಲ್ ಹಾಗೂ ವಿ ಟೆಲಿಕಾಂಗಳ ನಡುವೆ ಪೈಪೋಟಿ ಇದೆ. ಅದಾಗ್ಯೂ, ಭಾರ್ತಿ ಏರ್‌ಟೆಲ್ ಟೆಲಿಕಾಂ ಕೆಲವು ಆಕರ್ಷಕ ಯೋಜನೆಗಳು ಗ್ರಾಹಕರಿಗೆ ಇಷ್ಟ ಎನಿಸಿವೆ. ಹಾಗೆಯೇ ಏರ್‌ಟೆಲ್ ಸಂಸ್ಥೆಯು ಚಂದಾದಾರರ ಅನುಕೂಲಕ್ಕಾಗಿ ಅಗ್ಗದ ಬೆಲೆಯಲ್ಲಿ ಟಾಪ್ ಅಪ್ ರೀಚಾರ್ಜ್ ಆಯ್ಕೆಗಳನ್ನು ನೀಡಿದೆ.
ಹೌದು, ಭಾರ್ತಿ ಏರ್‌ಟೆಲ್ ಹಲವು ಭಿನ್ನ ಬೆಲೆಯ ಟಾಕ್‌ಟೈಮ್ ರೀಚಾರ್ಜ್ ವೋಚರ್ ಆಯ್ಕೆ ಹೊಂದಿದೆ. ಟಾಕ್‌ಟೈಮ್ ವೋಚರ್‌ಗಳು ಕನಿಷ್ಠ 10ರೂ. ಗಳಿಂದ ಆರಂಭವಾಗಿ 5,000ರೂ.ಗಳ ವರೆಗೂ ರೀಚಾರ್ಜ್ ಆಯ್ಕೆಗಳನ್ನು ನೀಡಿದೆ. ಈ ಟಾಪ್‌ಅಪ್ ಯೋಜನೆಗಳು ಟಾಕ್‌ಟೈಮ್ ಸೌಲಭ್ಯ ಮಾತ್ರ ನೀಡಲಿದ್ದು, ಇತರೆ ಯಾವುದೇ ಹೆಚ್ಚುವರಿ ವ್ಯಾಲಿಡಿಟಿ ಪ್ರಯೋಜನ ಒದಗಿಸಲ್ಲ. ಹಾಗಾದರೇ ಏರ್‌ಟೆಲ್ ಟೆಲಿಕಾಂನ ಟಾಪ್‌ಅಪ್ ರೀಚಾರ್ಜ್ ವೋಚರ್‌ಗಳ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಏರ್‌ಟೆಲ್ 10ರೂ. ರೀಚಾರ್ಜ್ ವೋಚರ್ ಮಾಹಿತಿ
ಏರ್‌ಟೆಲ್ ಟೆಲಿಕಾಂನ ಈ ವೋಚರ್ ಸಂಸ್ಥೆಯ ಆರಂಭಿಕ ಟಾಪ್‌ಅಪ್ ಪ್ಲ್ಯಾನ್ ಆಗಿದ್ದು, ಈ ಪ್ಲ್ಯಾನಿನಲ್ಲಿ ಬಳಕೆದಾರರಿಗೆ 7.47ರೂ. ಗಳ ಟಾಕ್‌ಟೈಮ್ ಲಭ್ಯ. ಇತರೆ ಯಾವುದೇ ಹೆಚ್ಚುವರಿ ವ್ಯಾಲಿಡಿಟಿ ಹಾಗೂ ಎಸ್‌ಎಮ್‌ಎಸ್, ಡೇಟಾ ಪ್ರಯೋಜನ ಇರಲ್ಲ. ಜೊತೆಗೆ ಟಾಕ್‌ಟೈಮ್ ಅನ್ನು ಅಂತರರಾಷ್ಟ್ರೀಯ ಸೇವೆಗಳಿಗೆ ಸಹ ಬಳಸಬಹುದು.

ಏರ್‌ಟೆಲ್ 20ರೂ. ರೀಚಾರ್ಜ್ ವೋಚರ್ ಮಾಹಿತಿ
ಇನ್ನು ಈ ವೋಚರ್ ಸಹ ಅಗ್ಗದ ಟಾಪ್‌ಅಪ್ ಯೋಜನೆಗಳಲ್ಲಿ ಸೇರಿದ್ದು, ಈ ವೋಚರ್‌ನಲ್ಲಿ ಬಳಕೆದಾರರಿಗೆ 14.95ರೂ. ಗಳ ಟಾಕ್‌ಟೈಮ್ ಸಿಗಲಿದೆ. ಟಾಕ್‌ಟೈಮ್ ಅನ್ನು ಅಂತರರಾಷ್ಟ್ರೀಯ ಸೇವೆಗಳಿಗೆ ಸಹ ಬಳಸಬಹುದು. ಆದರೆ ಈ ವೋಚರ್‌ನಲ್ಲಿ ಯಾವುದೇ ಹೆಚ್ಚುವರಿ ವ್ಯಾಲಿಡಿಟಿ ಆಗಲಿ, ಎಸ್‌ಎಮ್‌ಎಸ್, ಡೇಟಾ ಪ್ರಯೋಜನ ಆಗಲಿ ಸಿಗಲ್ಲ.
ಏರ್‌ಟೆಲ್ 100ರೂ. ರೀಚಾರ್ಜ್ ವೋಚರ್ ಮಾಹಿತಿ
ಏರ್‌ಟೆಲ್ ಟೆಲಿಕಾಂನ ಈ ವೋಚರ್ ಟಾಪ್‌ಅಪ್ ಯೋಜನೆಗಳಲ್ಲಿ ಒಂದಾಗಿದೆ. ಈ ಪ್ಲ್ಯಾನಿನಲ್ಲಿ ಬಳಕೆದಾರರಿಗೆ 81.75ರೂ. ಗಳ ಟಾಕ್‌ಟೈಮ್ ದೊರೆಯುತ್ತದೆ. ಅಲ್ಲದೇ ಯಾವುದೇ ಹೆಚ್ಚುವರಿ ವ್ಯಾಲಿಡಿಟಿ ಆಗಲಿ, ಎಸ್‌ಎಮ್‌ಎಸ್ ಆಗಲಿ ಅಥವಾ ಡೇಟಾ ಪ್ರಯೋಜನ ಸಹ ಲಭ್ಯ ಇಲ್ಲ. ಅದಾಗ್ಯೂ, ಟಾಕ್‌ಟೈಮ್ ಅನ್ನು ಅಂತರರಾಷ್ಟ್ರೀಯ ಸೇವೆಗಳಿಗೆ ಸಹ ಬಳಸಬಹುದು.
ಏರ್‌ಟೆಲ್ 500ರೂ. ರೀಚಾರ್ಜ್ ವೋಚರ್ ಮಾಹಿತಿ
ದೇಶದ ಎರಡನೇ ದೊಡ್ಡ ಟೆಲಿಕಾಂ ಆಗಿ ಗುರುತಿಸಿಕೊಂಡಿರುವ ಏರ್‌ಟೆಲ್ ಸಂಸ್ಥೆಯ ಈ ವೋಚರ್ ನಲ್ಲಿ ಬಳಕೆದಾರರಿಗೆ 423.73ರೂ. ಗಳ ಟಾಕ್‌ಟೈಮ್ ದೊರೆಯುತ್ತದೆ. ಅಲ್ಲದೇ ಇದ್ರಲ್ಲಿ ಯಾವುದೇ ಹೆಚ್ಚುವರಿ ವ್ಯಾಲಿಡಿಟಿ ಹಾಗೂ ಎಸ್‌ಎಮ್‌ಎಸ್, ಡೇಟಾ ಪ್ರಯೋಜನ ಲಭ್ಯ ಇರುವುದಿಲ್ಲ. ಜೊತೆಗೆ ಟಾಕ್‌ಟೈಮ್ ಅನ್ನು ಅಂತರರಾಷ್ಟ್ರೀಯ ಸೇವೆಗಳಿಗೆ ಸಹ ಬಳಸಬಹುದು.
ಏರ್‌ಟೆಲ್ 1000ರೂ. ರೀಚಾರ್ಜ್ ವೋಚರ್ ಮಾಹಿತಿ
ಹಾಗೆಯೇ ಏರ್‌ಟೆಲ್ ಟೆಲಿಕಾಂನ ಈ ವೋಚರ್ ನಲ್ಲಿ ಬಳಕೆದಾರರಿಗೆ 847.46ರೂ. ಗಳ ಟಾಕ್‌ಟೈಮ್ ಲಭ್ಯ. ಆದರೆ ಯಾವುದೇ ಹೆಚ್ಚುವರಿ ವ್ಯಾಲಿಡಿಟಿ ಹಾಗೂ ಎಸ್‌ಎಮ್‌ಎಸ್, ಡೇಟಾ ಪ್ರಯೋಜನ ದೊರೆಯಲ್ಲ. ಅದಾಗ್ಯೂ, ಟಾಕ್‌ಟೈಮ್ ಅನ್ನು ಅಂತರರಾಷ್ಟ್ರೀಯ ಸೇವೆಗಳಿಗೆ ಸಹ ಬಳಸಬಹುದು.
ಏರ್‌ಟೆಲ್ 5000ರೂ. ರೀಚಾರ್ಜ್ ವೋಚರ್ ಮಾಹಿತಿ
ಭಾರ್ತಿ ಏರ್‌ಟೆಲ್ ಟೆಲಿಕಾಂನ ಈ ವೋಚರ್ ನಲ್ಲಿ ಬಳಕೆದಾರರಿಗೆ 4237.29ರೂ. ಗಳ ಟಾಕ್‌ಟೈಮ್ ಸಿಗಲಿದೆ. ಯಾವುದೇ ಹೆಚ್ಚುವರಿ ವ್ಯಾಲಿಡಿಟಿ ಹಾಗೂ ಎಸ್‌ಎಮ್‌ಎಸ್, ಡೇಟಾ ಪ್ರಯೋಜನ ಸಿಗುವುದಿಲ್ಲ. ಟಾಕ್‌ಟೈಮ್ ಅನ್ನು ಅಂತರರಾಷ್ಟ್ರೀಯ ಸೇವೆಗಳಿಗೆ ಸಹ ಬಳಸಬಹುದು.


Click it and Unblock the Notifications








