ಚಂದ್ರಯಾನ 3: ನಮಸ್ಕಾರ ಚಂದಮಾಮ... ದೇಶದ ದೈತ್ಯ ಕಂಪೆನಿಗಳು ಸಂಭ್ರಮಿಸಿದ್ದು ಹೀಗೆ!
ಚಂದ್ರಯಾನ 3 ರ (Chandrayaan 3) ಯಶಸ್ಸು ಕೇವಲ ಭಾರತಕ್ಕಷ್ಟೇ ಅಲ್ಲದೆ ಇಡೀ ಜಗತ್ತಿಗೆ ಪಸರಿಸಿದೆ. ಈ ನಡುವೆ ಇಡೀ ಜಗತ್ತೆ ಖುಷಿ ಪಟ್ಟಿದ್ದು, ಅದೆಲ್ಲಕ್ಕಿಂತ ಮಿಗಿಲಾಗಿ ಹಲವಾರು ಐಟಿ ಕಂಪೆನಿಗಳು ಹಾಗೂ ಸಾರ್ವಜನಿಕ ಸಂಸ್ಥೆಗಳು ದೊಡ್ಡ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿವೆ.
ಹೌದು, ಚಂದ್ರಯಾನ 3 ಭಾರತಕ್ಕೆ ದೊಡ್ಡ ಕೀರ್ತಿ ತಂದುಕೊಟ್ಟಿದೆ. 40 ದಿನಗಳ ಪ್ರಯಾಣದ ನಂತರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದ ಬಳಿ ತನ್ನ ಲ್ಯಾಂಡರ್ ವಿಕ್ರಮ್‌ನೊಂದಿಗೆ (Vikram Lander) ಯಶಸ್ವಿ ಸ್ಪರ್ಶ ಮಾಡಿದೆ. ಈ ಮೂಲಕ ಇಡೀ ಜಗತ್ತೇ ಭಾರತದ ಕಡೆ ತಿರುಗಿ ನೋಡುವಂತೆ ಮಾಡಲಾಗಿದೆ. ಅದರಲ್ಲೂ ಭಾರತವು ಚಂದ್ರನ ಮೇಲೆ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ದೇಶವಾಗಿದೆ.

ಇನ್ನು ಯುನೈಟೆಡ್ ಸ್ಟೇಟ್ಸ್, ಚೀನಾ ಮತ್ತು ರಷ್ಯಾ (United States, China, Russia) ಶ್ರೇಯಾಂಕಗಳಿಗೆ ಭಾರತದ ಸಹ ಸೇರಲಿದ್ದು, ಸಾಫ್ಟ್ ಲೂನಾರ್ ಲ್ಯಾಂಡಿಂಗ್(Soft Lunar Landing) ತಂತ್ರಜ್ಞಾನವನ್ನು ಕರಗತ ಮಾಡಿಕೊಂಡ ನಾಲ್ಕನೇ ರಾಷ್ಟ್ರವಾಗಿ ಹೆಸರು ಪಡೆದಿದೆ. ಈ ನಡುವೆ ಭಾರತೀಯ ಕಂಪನಿಗಳು ಇಸ್ರೋ ವಿಜ್ಞಾನಿಗಳು ಮತ್ತು ದೇಶದ ಜನರಿಗೆ ಅಭಿನಂದನಾ ಸಂದೇಶಗಳನ್ನು ಕಳುಹಿಸುವ ಮೂಲಕ ಸಂಭ್ರಮ ಪಟ್ಟಿವೆ. ಹಾಗಿದ್ರೆ, ಈ ಸಂಬಂಧ ಭಾರತದ ಯಾವೆಲ್ಲಾ ದೊಡ್ಡ ಟೆಕ್ ಕಂಪನಿಗಳು ಹೇಗೆ ಶುಭಾಶಯ ಕೋರಿವೆ ಎಂಬುದನ್ನು ನೋಡೋಣ ಬನ್ನಿ.
TCS ಈ ಬಗ್ಗೆ ಟ್ವೀಟ್ ಮಾಡಿದ್ದು, ಚಂದ್ರಯಾನ-3 ರ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದಿದೆ. ನಾವೀನ್ಯತೆ ಮತ್ತು ನಿರ್ಣಯದಿಂದ ನಡೆಸಲ್ಪಟ್ಟ ಐತಿಹಾಸಿಕ ಸಾಧನೆಗೆ ಅಭಿನಂದನೆಗಳು ಎಂದು ಹೇಳಿದೆ. ಜೊತೆಗೆ ರಿಲಯನ್ಸ್ ಜಿಯೋ ಒಂದೇ ಪದದಲ್ಲಿ ನಮಸ್ತೆ ಮೂನ್! ನಿನ್ನೊಂದಿಗೆ ಸಂಪರ್ಕ ಸಾಧಿಸಲು ಸಂತೋಷವಾಗಿದೆ ಎಂದು ಶುಭಕೋರಿದೆ.
ಜೊತೆಗೆ ಟೆಕ್ ಮಹೀಂದ್ರಾ ಸಹ ವಿಶೇಷವಾಗಿ ಶುಭ ಕೋರಿದ್ದು, ಅಭಿನಂದನೆಗಳು, ಭಾರತ! ಇದು ಹೆಮ್ಮೆಯ ದಿನ, ಪ್ರತಿಯೊಬ್ಬರಿಗೂ ನಮ್ಮ ಹೃತ್ಪೂರ್ವಕ ಶುಭಾಶಯಗಳು ಎಂದಿದೆ. ಜೊತೆಗೆ ಈ ಐತಿಹಾಸಿಕ ಕ್ಷಣದಲ್ಲಿ ಇಸ್ರೋ ಎಂದು ಉಲ್ಲೇಖ ಮಾಡಿದೆ. ಹಾಗೆಯೇ ದೇಶದ ಹೆಮ್ಮೆಯ ಮತ್ತೊಂದು ಟೆಕ್ ಕಂಪೆನಿ ಆಗಿರುವ ಇನ್ಫೋಸಿಸ್, ನೀವು ನಮಗೆ ಹೆಮ್ಮೆ ತಂದಿದ್ದೀರಿ ಎಂದು ಇಸ್ರೋಗೆ ಶುಭಾಶಯ ಕೋರಿದೆ.
ಇನ್ನು ಹೆಚ್‌ಸಿಎಲ್ ಸಹ ಶುಭಾಶಯ ಕೋರಿದ್ದು, ಚಂದ್ರನ ದಕ್ಷಿಣ ಧ್ರುವದಲ್ಲಿ ಮೊದಲ ಬಾರಿಗೆ ಸಾಫ್ಟ್ ಲ್ಯಾಂಡಿಂಗ್ ಅನ್ನು ಪೂರ್ಣಗೊಳಿಸುವ ಮೂಲಕ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನದ ಸ್ಪೂರ್ತಿದಾಯಕ ಸಾಧನೆಯು ದೈತ್ಯ ಜಿಗಿತವಾಗಿದೆ. ಇದು ಬಾಹ್ಯಾಕಾಶ ಪರಿಶೋಧನೆಯ ಮುಂದಿನ ಮಹಾನ್ ಯುಗಕ್ಕೆ ಪ್ರವರ್ತಕವಾಗಿದೆ. ಇಸ್ರೋಗೆ ಅಭಿನಂದನೆಗಳು ಹಾಗೂ ಚಂದ್ರಯಾನ-3 ರ ಹಿಂದೆ ಇರುವ ಎಲ್ಲಾ ತಂಡಕ್ಕೂ ಧನ್ಯವಾದ ಎಂದು ಹೇಳಿದೆ.
ಇದರೊಂದಿಗೆ LTI ಮೈಂಡ್ ಟ್ರೀ, ಚಂದ್ರನ ಮೇಲೆ ಹೊಸ ಹೆಜ್ಜೆಗುರುತುಗಳಿವೆ. ಇತಿಹಾಸವನ್ನು ಸೃಷ್ಟಿಸಿದ್ದಕ್ಕಾಗಿ ಇಸ್ರೋಗೆ ಅಭಿನಂದನೆಗಳು. ನಿಮ್ಮ ಅಸಾಧಾರಣ ಪ್ರಯಾಣವು ಉಜ್ವಲ ಭವಿಷ್ಯಕ್ಕಾಗಿ ಕೆಲಸ ಮಾಡುವ ನಮ್ಮ ನಡುವಿನ ಪ್ರತಿಯೊಬ್ಬ ಕನಸುಗಾರನಿಗೆ ಸ್ಫೂರ್ತಿಯಾಗಿದೆ ಎಂದು ಹಾಡಿ ಹೊಗಳಿದೆ. ಇದರೊಂದಿಗೆ ಪ್ರಮುಖ ಟೆಲಿಕಾಂ ಸಂಸ್ಥೆ ಆಗಿರುವ ಏರ್‌ಟೆಲ್, ನಾವು ಚಂದ್ರನ ಮೇಲೆ ಎಂದು ಉಲ್ಲೇಖಿಸಿದೆ.
ಉಳಿದಂತೆ ಟಾಟಾ ಕಮ್ಯುನಿಕೇಷನ್ಸ್, ಹಲೋ ಮೂನ್! ಕನಸುಗಳ ಕ್ಷೇತ್ರದಲ್ಲಿ ಮತ್ತು ಅದರಾಚೆ! ಚಂದ್ರಯಾನ 3 ರ ವಿಕ್ರಮ್ ಲ್ಯಾಂಡರ್‌ನ ಯಶಸ್ವಿ ಸಾಫ್ಟ್ ಲ್ಯಾಂಡಿಂಗ್‌ಗಾಗಿ ಇಸ್ರೋಗೆ ಚಪ್ಪಾಳೆ. ಭಾರತವು ಚಂದ್ರನ ಭೂದೃಶ್ಯದಲ್ಲಿ ತನ್ನ ಅಸ್ತಿತ್ವವನ್ನು ಗುರುತಿಸಿಕೊಳ್ಳುತ್ತಿರುವುದು ಹೆಮ್ಮೆಯ ಕ್ಷಣ ಎಂದು ಬಣ್ಣಿಸಿದೆ. ಹಾಗೆಯೇ ಓಲಾ ಎಲೆಕ್ಟ್ರಿಕ್ ಸಹ ಟ್ವೀಟ್ ಮಾಡಿದ್ದು, ಭಾರತವು ಹೆಮ್ಮೆಯಿಂದ ನೋಡುತ್ತಿದೆ, ಆದರೆ ಜಗತ್ತು ಭಾರತದತ್ತ ನೋಡುತ್ತದೆ ಎಂದಿದೆ.

ಇಷ್ಟೇ ಅಲ್ಲದೆ ಜೊಮೊಟೊ ಸಹ ಶುಭಾಶಯ ಕೋರಿದ್ದು, ನೀವು ರಾಷ್ಟ್ರಕ್ಕೆ ಹೆಮ್ಮೆ ತಂದಿದ್ದೀರಿ ಎಂದು ಇಸ್ರೋ ಅನ್ನು ಅಭಿನಂಧಿಸಿದ್ದು, ಸ್ವಿಗ್ಗಿ ಸಹ ಇಂಡಿಯಾ ಇಂದು ಚಂದ್ರನ ಮೇಲಿದೆ. ಜಿ ಹಾನ್ ಚಂದ್ರಯಾನ್ 3 ಅನ್ನು ತಲುಪಿಸಲಾಗಿದೆ ಎಂದು ಬರೆದುಕೊಂಡಿದೆ. ಇದರೊಂದಿಗೆ ವೊಡಾಫೋನ್ ಇಂಡಿಯಾ, ಇಸ್ರೋ ತಂಡಕ್ಕೆ ಅಭಿನಂದನೆಗಳು! ಚಂದ್ರಯಾನ-3 ರ ಬೋಲ್ಡ್ ಟಚ್‌ಡೌನ್‌ಗಾಗಿ ಹಾಗೂ ಇಸ್ರೋ ನಲ್ಲಿರುವ ಅದ್ಭುತ ಮನಸ್ಸುಗಳಿಗೆ ಅಭಿನಂದನೆಗಳು ಎಂದಿದೆ.


Click it and Unblock the Notifications








