Home
ಸುದ್ದಿಜಾಲ

ಏರ್‌ಟೆಲ್‌, ಜಿಯೋ ಗ್ರಾಹಕರಿಗೆ ಸದ್ಯದಲ್ಲೇ ಬಿಗ್ ಶಾಕ್‌!..ಇಂಥ ನಿರ್ಧಾರ ಯಾಕೆ?

ನೀವು ಏರ್‌ಟೆಲ್‌ ಟೆಲಿಕಾಂ ಬಳಕೆದಾರರೇ? ಹಾಗಿದ್ರೆ, ಈ ಸುದ್ದಿ ನಿಮಗೆ ಶಾಕ್ ಎನಿಸಬಹುದು. ಏಕೆಂದರೆ ದೇಶದ ಎರಡನೇ ಅತೀ ದೊಡ್ಡ ಟೆಲಿಕಾಂ ಸಂಸ್ಥೆ ಆಗಿ ಗುರುತಿಸಿಕೊಂಡಿರುವ ಭಾರ್ತಿ ಏರ್‌ಟೆಲ್‌ ಸದ್ಯದಲ್ಲೇ ಶುಲ್ಕ ಹೆಚ್ಚಳ ಮಾಡುವ ಸಾಧ್ಯತೆಗಳು ಇವೆ ಎಂದು ವರದಿಯಾಗಿದೆ.

ಹೌದು, ಜನಪ್ರಿಯ ಭಾರ್ತಿ ಏರ್‌ಟೆಲ್‌ ಸಂಸ್ಥೆಯು ಶುಲ್ಕ ಏರಿಕೆ ಮಾಡಬಹುದು ಎಂದು ಏರ್‌ಟೆಲ್‌ನ ಅಧ್ಯಕ್ಷ ಸುನೀಲ್‌ ಮಿತ್ತಲ್ ತಿಳಿಸಿದ್ದಾರೆ. ಇತ್ತೀಚಿಗೆ ಎನ್‌ಡಿಟಿವಿ ಪ್ರಾಫಿಟ್‌ಗೆ ನೀಡಿದ ಸಂದರ್ಶನವೊಂದರಲ್ಲಿ, ಮಾತನಾಡಿದ ಅವರು ಮಾರುಕಟ್ಟೆಯನ್ನು ಸುಸ್ಥಿರವಾಗಿಡಲು ಸಂಸ್ಥೆಯು ಟೆಲಿಕಾಂ ದರಗಳನ್ನು ಹೆಚ್ಚಿಸಲಿದೆ ಎಂದು ಹೇಳಿದ್ದಾರೆ.

ಏರ್‌ಟೆಲ್‌, ಜಿಯೋ ಗ್ರಾಹಕರಿಗೆ ಸದ್ಯದಲ್ಲೇ ಬಿಗ್ ಶಾಕ್‌!..ಇಂಥ ನಿರ್ಧಾರ ಯಾಕೆ?

ಇನ್ನು ಪರಿಷ್ಕೃತ ದರಗಳಿಗೆ ನಿರ್ದಿಷ್ಟ ಕಾಲಮಿತಿಯ ಮಾಹಿತಿ ಅನ್ನು ಸುನೀಲ್‌ ಮಿತ್ತಲ್ ಬಹಿರಂಗಪಡಿಸಿಲ್ಲ. ಅದಾಗ್ಯೂ, ಪ್ರಸಕ್ತ - 2024 ರ ದ್ವಿತೀಯಾರ್ಧದಲ್ಲಿ ಟೆಲಿಕಾಂ ಶುಲ್ಕಗಳಲ್ಲಿ ಬದಲಾವಣೆಗಳನ್ನು ಕಾಣಬಹುದಾಗಿದೆ. ಮುಂದಿನ ತಿಂಗಳುಗಳಲ್ಲಿ ಪ್ರತಿ ಬಳಕೆದಾರರ ಸರಾಸರಿ ಆದಾಯವನ್ನು (ARPU) 208 ರೂ. ನಿಂದ 300 ರೂ. ಗೆ ಹೆಚ್ಚಿಸುವ ಗುರಿಯನ್ನು ಏರ್‌ಟೆಲ್‌ ಟೆಲಿಕಾಂ ಹೊಂದಿದೆ. ಅಲ್ಲದೇ ಭಾರ್ತಿ ಏರ್‌ಟೆಲ್ ಸಂಸ್ಥೆಯು ಭಾರತದಲ್ಲಿ ತನ್ನ 5G ಸೇವೆಗಳನ್ನು ನಿರಂತರವಾಗಿ ವಿಸ್ತರಿಸುತ್ತಾ ಸಾಗಿದೆ.

ಏರ್‌ಟೆಲ್‌, ಜಿಯೋ ಗ್ರಾಹಕರಿಗೆ ಸದ್ಯದಲ್ಲೇ ಬಿಗ್ ಶಾಕ್‌!..ಇಂಥ ನಿರ್ಧಾರ ಯಾಕೆ?

ಜಿಯೋ ಮತ್ತು ವಿ ಟೆಲಿಕಾಂ ಕೂಡ ಏರ್‌ಟೆಲ್‌ ಹಾದಿ ಹಿಡಿಯಬಹುದು

ದೇಶದ ಟೆಲಿಕಾಂ ವಲಯವು ಜಿಯೋ, ಏರ್‌ಟೆಲ್‌ ಹಾಗೂ ವಿ ಟೆಲಿಕಾಂಗಳು ಪ್ರಮುಖ ಸಂಸ್ಥೆಗಳಾಗಿ ಮುನ್ನಡೆದಿವೆ. ಈ ಮೂರು ಟೆಲಿಕಾಂಗಳಲ್ಲದೆ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಟೆಲಿಕಾಂ ಸಹ ಇದೆ. ಆದರೆ ಬಿಎಸ್‌ಎನ್‌ಎಲ್‌ ಖಾಸಗಿ ಟೆಲಿಕಾಂಗಳಿಗೆ ಸ್ಪರ್ಧೆ ಒಡ್ಡುವ ನಿಟ್ಟಿನಲ್ಲಿ ಇಲ್ಲ.

ಭಾರ್ತಿ ಏರ್‌ಟೆಲ್ ಮತ್ತು ರಿಲಯನ್ಸ್‌ ಜಿಯೋ ದೇಶದಲ್ಲಿ ತಮ್ಮ ಅನಿಯಮಿತ 5G ಟ್ರಾಯಲ್‌ಗಳನ್ನು ಶೀಘ್ರದಲ್ಲೇ ಕೊನೆ ಮಾಡಬಹುದು ಎಂದು ಇತ್ತೀಚಿನ ಟೆಲಿಕಾಂ ವರದಿಯು ಸೂಚಿಸಿದೆ. ಅಂದಹಾಗೆ ಎರಡೂ ಟೆಲಿಕಾಂ ಸಂಸ್ಥೆಗಳು ಸಾಮಾನ್ಯ 4G ಪ್ಲ್ಯಾನ್‌ಗಿಂತ 5-10% ಹೆಚ್ಚಿನ ಬೆಲೆಯ ಯುಪಯುಕ್ತ/ಬೇಡಿಕೆಯ 5G ಪ್ಲ್ಯಾನ್‌ಗಳನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಇನ್ನು ಏರ್‌ಟೆಲ್‌ ಟೆಲಿಕಾಂನ ಕೆಲವು ಜನಪ್ರಿಯ ಪ್ಲ್ಯಾನ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಏರ್‌ಟೆಲ್‌ನ 779ರೂ. ಪ್ರೀಪೇಯ್ಡ್‌ ಯೋಜನೆಯು ಒಟ್ಟು 90 ದಿನಗಳ ವ್ಯಾಲಿಡಿಟಿ ಅವಧಿ ಕೂಡಾ ದೊರೆಯುತ್ತದೆ. ಈ ವೇಳೆಯಲ್ಲಿ ಪ್ರತಿದಿನ 1.5 GB ಡೇಟಾ ಪ್ರಯೋಜನ ಸಿಗಲಿವೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದೆ.

ಇದರೊಂದಿಗೆ ಈ ಯೀಜನೆಗಲ್ಲಿ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ ಖಚಿತ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 135 GB ಡೇಟಾ ಲಭ್ಯ ಆಗಲಿದೆ. ಅಲ್ಲದೇ ಏರ್‌ಟೆಲ್‌ ಆಪ್‌ಗಳ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ವೆಂಕ್ ಮ್ಯೂಸಿಕ್ ಹಾಗೂ ಉಚಿತ ಹಲೋ ಟ್ಯೂನ್ ಸೌಲಭ್ಯ ಲಭ್ಯ.

ಏರ್‌ಟೆಲ್‌ 999ರೂ. ಪೋಸ್ಟ್‌ಪೇಯ್ಡ್‌ ಯೋಜನೆಯು ಒಟ್ಟು 100 GB ಡೇಟಾ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಅನಿಯಮಿತ ವಾಯಿಸ್‌ ಕರೆಗಳ ಸೌಲಭ್ಯ ದೊರೆಯಲಿದೆ. ಹಾಗೆಯೇ 100 ಎಸ್‌ಎಮ್‌ಎಸ್‌ ಪ್ರಯೋಜನ ಲಭ್ಯ. ಹೆಚ್ಚುವರಿ ಯಾಗಿ ಅಮೆಜಾನ್‌ ಪ್ರೈಮ್‌ ಪ್ರವೇಶ, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್, ವಿಂಕ್ ಮ್ಯೂಸಿಕ್ ಸೌಲಭ್ಯಗಳು ಸೇರಿದಂತೆ ಇತರೆ ಹಲವು ಸೌಲಭ್ಯಗಳು ಸಿಗುತ್ತವೆ.

ಹಾಗೆಯೇ ಏರ್‌ಟೆಲ್‌ ಟೆಲಿಕಾಂನ 839ರೂ. ಪ್ರೀಪೇಯ್ಡ್‌ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ವೇಳೆ ಅನಿಯಮಿತ ಉಚಿತ ಲೋಕಲ್ ಮತ್ತು ನ್ಯಾಶನಲ್ ಕರೆಗಳ ಸೌಲಭ್ಯ ಗ್ರಾಹಕರಿಗೆ ಲಭ್ಯವಾಗಲಿವೆ. ಅಲ್ಲದೇ ಪ್ರತಿದಿನ 2 GB ಡೇಟಾ ಪ್ರಯೋಜನ ಹಾಗೂ 100 ಎಸ್‌ಎಮ್‌ಎಸ್‌ ಸೌಲಭ್ಯ ಕೂಡಾ ಸಿಗಲಿವೆ. ಇದರೊಂದಿಗೆ ಹೆಚ್ಚುವರಿ ಸೌಲಭ್ಯಗಳು ಲಭ್ಯ.

Best Mobiles in India

English summary
Airtel telecom operator, could soon hike tariffs in the country, all report details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+