ಏರ್‌ಟೆಲ್‌ನ ಈ ಅಗ್ಗದ ಪ್ಲ್ಯಾನಿನಲ್ಲಿ ಭಾರೀ ಬದಲಾವಣೆ!.ಗ್ರಾಹಕರು ಫುಲ್ ಖುಷ್!
ಆಕರ್ಷಕ ಯೋಜನೆಗಳ ಮೂಲಕ ಗ್ರಾಹಕರ ಗಮನ ಸೆಳೆದಿರುವ ಭಾರ್ತಿ ಏರ್‌ಟೆಲ್ ಟೆಲಿಕಾಂ, ಜಿಯೋ ಟೆಲಿಕಾಂಗೆ ನೇರಾ ನೇರ ಫೈಟ್ ನೀಡುತ್ತ ಮುನ್ನಡೆದಿದೆ. ಸಂಸ್ಥೆಯು ತನ್ನ ಚಂದಾದಾರರಿಗೆ ಅಧಿಕ ಡೇಟಾ ಪ್ರಯೋಜನಗಳ ಜೊತೆಗೆ ಆಕರ್ಷಕ ವ್ಯಾಲಿಡಿಟಿ ಸೌಲಭ್ಯದ ಪ್ರೀಪೇಯ್ಡ್ ಯೋಜನೆಗಳ ಆಯ್ಕೆ ನೀಡಿದೆ. ಯೋಜನೆಗಳ ಲಿಸ್ಟ್‌ನಲ್ಲಿ ಅಗ್ಗದ ಪ್ಲ್ಯಾನ್‌ಗಳು ಇವೆ, ದುಬಾರಿ ಪ್ಲ್ಯಾನ್‌ಗಳು ಸೇರಿವೆ. ಆ ಪೈಕಿ ಏರ್‌ಟೆಲ್ ಈಗ ತನ್ನ ಅಗ್ಗದ ಯೋಜನೆಯೊಂದರಲ್ಲಿ ಭಾರೀ ಬದಲಾವಣೆ ತಿಳಿಸಿದೆ.

ಹೌದು, ಏರ್‌ಟೆಲ್ ಟೆಲಿಕಾಂ ತನ್ನ 265ರೂ. ಬೆಲೆಯ ಪ್ರೀಪೇಯ್ಡ್ ಯೋಜನೆಯಲ್ಲಿ ಇದೀಗ ಪರಿಷ್ಕರಣೆ ಮಾಡಲಾಗಿದೆ. ಈ ಯೋಜನೆಯು 1GB ಹೈ-ಸ್ಪೀಡ್ ದೈನಂದಿನ ಡೇಟಾದೊಂದಿಗೆ 28 ದಿನಗಳ ವ್ಯಾಲಿಡಿಟಿ ಸೌಲಭ್ಯವನ್ನು ಒಳಗೊಂಡಿದೆ. ಆದ್ರೆ, ಏರ್‌ಟೆಲ್ ಇದೀಗ ಹೊಸ ಅಪ್‌ಡೇಟ್‌ನಲ್ಲಿ ವ್ಯಾಲಿಡಿಟಿ ಮತ್ತು ದೈನಂದಿನ ಡೇಟಾವನ್ನು ಹೆಚ್ಚಳ ಮಾಡಿದೆ. ನೂತನ ಪರಿಷ್ಕೃತ ಪ್ರೀಪೇಯ್ಡ್ ಯೋಜನೆಯು ಈಗ ಆಯ್ದ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಏರ್‌ಟೆಲ್‌ನ ಪರಿಷ್ಕೃತ 265ರೂ. ಬೆಲೆಯ ಪ್ರಯೋಜನಗಳೆನು ಹಾಗೂ ಇತರೆ ಪ್ರಮುಖ ಯೋಜನೆಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ಏರ್‌ಟೆಲ್ 265 ರೂ.ಪ್ರಿಪೇಯ್ಡ್ ಪ್ಲಾನ್ ಪ್ರಯೋಜನಗಳು
ಏರ್‌ಟೆಲ್ 265ರೂ. ಬೆಲೆಯ ಪ್ರಿಪೇಯ್ಡ್ ಪ್ಲಾನ್ ಪರಿಷ್ಕರಣೆ ಆಗಿದ್ದು, 28 ದಿನಗಳ ಬದಲಾಗಿ 30 ದಿನಗಳ ವ್ಯಾಲಿಡಿಟಿ ಪಡೆದಿದೆ. ಈ ಪ್ಲಾನ್‌ನಲ್ಲಿ ನಿಮಗೆ ಪ್ರತಿದಿನ 1 GB ಹೈ ಸ್ಪೀಡ್ 4G ಡೇಟಾ ಲಭ್ಯವಿದ್ದು, ಒಟ್ಟು ಪೂರ್ಣ ವ್ಯಾಲಿಡಿಟಿ ಅವಧಿಗೆ 45GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದಲ್ಲದೆ ಎಲ್ಲಾ ನೆಟ್‌ವರ್ಕ್ ಬೆಂಬಲಿಸುವ ಅನಿಯಮಿತ ವಾಯಿಸ್ ಕರೆಗಳು ಹಾಗೂ ದಿನಕ್ಕೆ 100 ಎಸ್‌ಎಂಎಸ್ ಸೇವೆಗಳು ಲಭ್ಯವಾಗಲಿದೆ. ಈ ಯೋಜನೆಯೊಂದಿಗೆ ಏರ್‌ಟೆಲ್ ವೆಂಕ್ ಮ್ಯೂಸಿಕ್ ಹಾಗೂ ಹೆಲೊ ಟ್ಯೂನ್ ಸೌಲಭ್ಯ ಸಹ ದೊರೆಯಲಿದೆ. ಆದ್ರೆ ಈ ಯೋಜನೆಯು ಆಯ್ದ ಬಳಕೆದಾರರಿಗೆ ಮಾತ್ರ ಎನ್ನಲಾಗಿದೆ.

ಏರ್‌ಟೆಲ್ 109ರೂ. ಯೋಜನೆ ಪ್ರಯೋಜನಗಳು
ಈ ಹೊಸ ಏರ್‌ಟೆಲ್ 109 ರೂ. ದರ ಕಟ್ಟರ್ ಯೋಜನೆಯು 30 ದಿನಗಳವರೆಗೆ ಮಾನ್ಯವಾಗಿರುತ್ತದೆ. ಈ ರೀಚಾರ್ಜ್‌ನೊಂದಿಗೆ, ನೀವು 99 ಟಾಕ್-ಟೈಮ್ ಮತ್ತು 200 MB ಮೊಬೈಲ್ ಡೇಟಾವನ್ನು ಪಡೆಯುತ್ತೀರಿ. ಈ ಯೋಜನೆಯೊಂದಿಗೆ, ಎಲ್ಲಾ ಸ್ಥಳೀಯ, ಎಸ್‌ಟಿಡಿ ಮತ್ತು ಲ್ಯಾಂಡ್‌ಲೈನ್ ಕರೆಗಳಿಗೆ ಸೆಕೆಂಡಿಗೆ 2.5 ರೂ. ಪೈಸೆ ವೆಚ್ಚವಾಗುತ್ತದೆ. ಪ್ರತಿ ಸ್ಥಳೀಯ ಎಸ್‌ಎಂಎಸ್‌ಗೆ 1 ರೂ. ಮತ್ತು ಎಸ್‌ಟಿಡಿ ಪ್ರತಿ ಎಸ್‌ಎಂಎಸ್‌ಗೆ 1.5 ರೂ. ವೆಚ್ಚವಾಗುತ್ತದೆ.

ಏರ್‌ಟೆಲ್ 111ರೂ. ಯೋಜನೆ ಪ್ರಯೋಜನಗಳು
ಈ ಹೊಸ ಏರ್‌ಟೆಲ್ 111 ರೂ. ಸ್ಮಾರ್ಟ್ ಪ್ಲಾನ್ 99 ರೂ. ಟಾಕ್-ಟೈಮ್ ಮತ್ತು 200 MB ಮೊಬೈಲ್ ಡೇಟಾವನ್ನು ನೀಡುತ್ತದೆ. ಈ ಯೋಜನೆಯೊಂದಿಗೆ, ಎಲ್ಲಾ ಸ್ಥಳೀಯ, ಎಸ್‌ಟಿಡಿ ಮತ್ತು ಲ್ಯಾಂಡ್‌ಲೈನ್ ಕರೆಗಳಿಗೆ ಸೆಕೆಂಡಿಗೆ 2.5 ರೂ. ಪೈಸೆ ವೆಚ್ಚವಾಗುತ್ತದೆ. ಎಸ್‌ಎಂಎಸ್‌ಗೆ ಸಂಬಂಧಿಸಿದಂತೆ, ಸ್ಥಳೀಯ ಎಸ್‌ಎಂಎಸ್‌ಗೆ 1 ರೂ. ಮತ್ತು ಎಸ್‌ಟಿಡಿ ಪ್ರತಿ ಎಸ್‌ಎಂಎಸ್‌ಗೆ 1.5 ರೂ. ವೆಚ್ಚವಾಗಲಿದೆ. ಈ ಯೋಜನೆಯು ಒಂದು ತಿಂಗಳವರೆಗೆ ಮಾನ್ಯವಾಗಿರುತ್ತದೆ.

ಏರ್‌ಟೆಲ್ 128ರೂ. ಯೋಜನೆ ಪ್ರಯೋಜನಗಳು
ಏರ್‌ಟೆಲ್ ಟೆಲಿಕಾಂನ 128 ರೂ. ಸ್ಮಾರ್ಟ್ ಯೋಜನೆಯು ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳಿಗೆ ಸೆಕೆಂಡಿಗೆ ರೂ 2.5 ಪೈಸೆ ಮತ್ತು ರಾಷ್ಟ್ರೀಯ ವೀಡಿಯೊ ಕರೆಗಳಿಗೆ ಸೆಕೆಂಡಿಗೆ ರೂ 5 ಪೈಸೆ ವಿಧಿಸುತ್ತದೆ. ಹೆಚ್ಚುವರಿಯಾಗಿ, ಮೊಬೈಲ್ ಡೇಟಾಗೆ ಪ್ರತಿ MB ಗೆ 50 ಪೈಸೆ ವಿಧಿಸಲಾಗುತ್ತದೆ ಮತ್ತು ಸ್ಥಳೀಯ ಎಸ್‌ಎಮ್‌ಎಸ್ ಗೆ 1 ರೂ. ಮತ್ತು ಎಸ್‌ಟಿಡಿ ಗೆ ಪ್ರತಿ ಎಸ್‌ಎಮ್‌ಎಸ್ ಗೆ 1.5 ರೂ. ಈ ಪ್ಯಾಕ್ 30 ದಿನಗಳವರೆಗೆ ಮಾನ್ಯವಾಗಿರುತ್ತದೆ.

ಏರ್‌ಟೆಲ್ 131ರೂ. ಯೋಜನೆ ಪ್ರಯೋಜನಗಳು
ಏರ್‌ಟೆಲ್ ಟೆಲಿಕಾಂನ 131 ರೂ. ಸ್ಮಾರ್ಟ್ ಪ್ಲಾನ್ ಬಹುತೇಕ 128 ರೂ. ಪ್ಯಾಕ್ ಅನ್ನು ಹೋಲುತ್ತದೆ. ಈ ಪ್ಯಾಕ್ ಒಂದು ತಿಂಗಳವರೆಗೆ ಮಾನ್ಯವಾಗಿರುತ್ತದೆ. ಬಳಕೆದಾರರಿಗೆ ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳಿಗೆ ಸೆಕೆಂಡಿಗೆ ರೂ 2.5 ಪೈಸೆ ಮತ್ತು ರಾಷ್ಟ್ರೀಯ ವೀಡಿಯೊ ಕರೆಗಳಿಗೆ ಸೆಕೆಂಡಿಗೆ ರೂ 5 ಪೈಸೆ ವಿಧಿಸಲಾಗುತ್ತದೆ. ಪ್ರತಿ MB ಡೇಟಾಗೆ 50 ಪೈಸೆ ವಿಧಿಸಲಾಗುತ್ತದೆ ಮತ್ತು ಕೊನೆಯದಾಗಿ, ಸ್ಥಳೀಯ ಎಸ್‌ಎಮ್‌ಎಸ್ ಗೆ 1 ರೂ. ಮತ್ತು ಎಸ್‌ಟಿಡಿ ಗೆ ಪ್ರತಿ ಎಸ್‌ಎಮ್‌ಎಸ್ ಗೆ 1.5 ರೂ. ಆಗಿದೆ.

ಏರ್‌ಟೆಲ್ 599ರೂ. ಯೋಜನೆ ಪ್ರಯೋಜನಗಳು
ಏರ್‌ಟೆಲ್ ಟೆಲಿಕಾಂನ 599ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ FUP ಲಿಮಿಟ್ ಇಲ್ಲದೇ ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನೆ ಲಭ್ಯವಾಗಲಿದೆ. ಇದರೊಂದಿಗೆ ಬಳಕೆದಾರರು ಪ್ರತಿದಿನ 3 GB ಡೇಟಾ ಪ್ರಯೋಜನ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್ ಸೌಲಭ್ಯಗಳು ಲಭ್ಯವಾಗಲಿವೆ. ಹೆಚ್ಚುವರಿಯಾಗಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆ ಲಭ್ಯ. ಹಾಗೂ ಏರ್‌ಟೆಲ್ Xstream ಪ್ರೀಮಿಯಂ, ವಿಂಕ್ ಮ್ಯೂಸಿಕ್, ಫಾಸ್ಟ್ಯಾಗ್ ಕ್ಯಾಶ್‌ಬ್ಯಾಕ್ ಸೇವೆಗಳು ಲಭ್ಯ.

ಏರ್‌ಟೆಲ್ 699ರೂ. ಯೋಜನೆ ಪ್ರಯೋಜನಗಳು
ಏರ್‌ಟೆಲ್‌ನ ಜನಪ್ರಿಯ ಪ್ರೀಪೇಡ್ ಪ್ಯಾನ್‌ಗಳಲ್ಲಿ ಒಂದಾಗಿರುವ 699 ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ FUP ಲಿಮಿಟ್ ಇಲ್ಲದೇ ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನೆ ಲಭ್ಯವಾಗಲಿದೆ. ಇದರೊಂದಿಗೆ ಬಳಕೆದಾರರು ಪ್ರತಿದಿನ 3 GB ಡೇಟಾ ಪ್ರಯೋಜನ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್ ಸೌಲಭ್ಯಗಳು ಲಭ್ಯವಾಗಲಿವೆ. ಹೆಚ್ಚುವರಿಯಾಗಿ ಅಮೆಜಾನ್ ಪ್ರೈಮ್ ಸದಸ್ಯತ್ವ, ಏರ್‌ಟೆಲ್ Xstream ಪ್ರೀಮಿಯಂ, ವಿಂಕ್ ಮ್ಯೂಸಿಕ್, ಫಾಸ್ಟ್ಯಾಗ್ ಕ್ಯಾಶ್‌ಬ್ಯಾಕ್ ಸೇವೆಗಳು ಲಭ್ಯ.


Click it and Unblock the Notifications








