ಏರ್‌ಟೆಲ್‌ನ ಟ್ರೂಲೀ ಅನ್‌ಲಿಮಿಟೆಡ್ ಪ್ಲ್ಯಾನ್‌ಗಳಲ್ಲಿ ಈಗ ಹೆಚ್ಚುವರಿ ಸೌಲಭ್ಯ!
ದೇಶದ ಟೆಲಿಕಾಂ ಕ್ಷೇತ್ರದಲ್ಲಿ ತನ್ನದೇ ಗಟ್ಟಿ ಸ್ಥಾನದಲ್ಲಿ ಗುರುತಿಸಿಕೊಂಡಿರುವ ಏರ್‌ಟೆಲ್ ಟೆಲಿಕಾಂ ಈಗಾಗಲೆ ಹಲವು ಭಿನ್ನ ಶ್ರೇಣಿಯ ಪ್ರೀಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಹಲವು ಅತ್ಯುತ್ತಮ ಡೇಟಾ ಪ್ರಯೋಜನ ಒಳಗೊಂಡಿದ್ದರೇ, ಮತ್ತೆ ಕೆಲವು ಯೋಜನೆಗಳು ದೀರ್ಘ ಅವಧಿಯ ವ್ಯಾಲಿಡಿಟಿಯ ಪ್ರಯೋಜನವನ್ನು ಹೊಂದಿವೆ. ಇನ್ನೂ ಕೆಲವು ಪ್ಲ್ಯಾನ್‌ಗಳು ಡೇಟಾ ಮತ್ತು ವ್ಯಾಲಿಡಿಟಿ ಜೊತೆಗೆ ಹೆಚ್ಚುವರಿ ಪ್ರಯೋಜನ ಹೊಂದಿವೆ.

ಹೌದು, ಏರ್‌ಟೆಲ್ ಟೆಲಿಕಾಂ ಡೇಟಾ, ವಾಯಿಸ್ ಕರೆ ಹಾಗೂ ವ್ಯಾಲಿಡಿಟಿ ಸೌಲಭ್ಯದ ಆಕರ್ಷಕ ಯೋಜನೆಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಕೆಲವು ಯೋಜನೆಗಳು ಏರ್‌ಟೆಲ್ ಎಕ್ಸ್‌ಟ್ರೀಮ್, ಜೀ5 ಪ್ರೀಮಿಯಂ, ವಿಂಕ್ ಮ್ಯೂಸಿಕ್ ಹಾಗೂ ಶಾ ಅಕಾಡೆಮಿ (Shaw Academy ) ಗಳಂತಹ ಹೆಚ್ಚುವರಿ ಸೌಲಭ್ಯಗಳನ್ನು ಒಳಗೊಂಡಿವೆ. ಏರ್‌ಟೆಲ್ ಇದೀಗ ಶಾ ಅಕಾಡೆಮಿ ಸೌಲಭ್ಯ ಪಡೆದ ತನ್ನ ಕೆಲವು ಯೋಜನೆಗಳ ವ್ಯಾಲಿಡಿಟಿ ಹೆಚ್ಚಿಸಿದೆ.

ಶಾ ಅಕಾಡೆಮಿ ಸೌಲಭ್ಯ
ಏರ್‌ಟೆಲ್ ಟೆಲಿಕಾಂನ ಯಾವುದೇ ಟ್ರೂಲಿ ಅನ್ಲಿಮಿಟೆಡ್ ಯೋಜನೆಗಳನ್ನು ರೀಚಾರ್ಜ್ ಮಾಡಿಸಿಕೊಳ್ಳುವ ಗ್ರಾಹಕರಿಗೆ ಶಾ ಅಕಾಡೆಮಿಯ ಒಂದು ವರ್ಷದ ಚಂದಾದಾರಿಕೆಯ ಪ್ರಯೋಜನ ಲಭ್ಯವಾಗಲಿದೆ. ಈ ಮೊದಲು ಶಾ ಅಕಾಡೆಮಿ ಪ್ರಯೋಜನವು 28 ದಿನಗಳವರೆಗೆ ಮಾತ್ರ ಲಭ್ಯವಾಗುತ್ತಿತ್ತು. ಆದರೆ ಈಗ ಈ ಸೌಲಭ್ಯವನ್ನು ಇಡೀ ವರ್ಷಕ್ಕೆ ಬದಲಾಯಿಸಲಾಗಿದೆ. ಹಾಗೆಯೇ ಜಿ5 ಸೌಲಭ್ಯ ಹಾಗೂ ಏರ್‌ಟೆಲ್ ಎಕ್ಸ್‌ಟ್ರಿಮ್ ಪ್ರಯೋಜನದ ಆಕರ್ಷಕ ಪ್ಲ್ಯಾನ್‌ಗಳ ಬಗ್ಗೆ ಮುಂದೆ ತಿಳಿಯಿರಿ.

ಏರ್‌ಟೆಲ್ 379ರೂ. ಪ್ಲ್ಯಾನ್
ಏರ್‌ಟೆಲ್‌ನ ಈ 379ರೂ. ಪ್ರಿಪೇಯ್ಡ್ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಇದು ಸಹ ಡೇಟಾ ಮತ್ತು ಕರೆ ಪ್ರಯೋಜನಗಳನ್ನು ಪಡೆದಿದೆ. ಒಟ್ಟು ಪೂರ್ಣ ವ್ಯಾಲಿಡಿಟಿ ಅವಧಿಗೆ 6GB ಡೇಟಾ ಸೌಲಭ್ಯವನ್ನು ಒಳದಗಿಸಲಿದ್ದು, ಇದರೊಂದಿಗೆ ಅನಿಯಮಿತ ಕರೆಗಳ ಸೌಲಭ್ಯ ಸಹ ಪಡೆದಿದೆ. ಜೊತೆಗೆ ಈ ಪ್ಲ್ಯಾನ್ Wynk ಮ್ಯೂಸಿಕ್, ಏರ್‌ಟೆಲ್ ಎಕ್ಸ್‌ಟ್ರಿಮ್ ಪ್ರೀಮಿಯಮ್, ಪ್ರತಿದಿನ 100ಎಸ್‌ಎಮ್ಎಸ್ ಪ್ರಯೋಜನ ಪಡೆದಿದೆ.

ಏರ್‌ಟೆಲ್ 598ರೂ.ಪ್ಲ್ಯಾನ್
ಏರ್‌ಟೆಲ್ 598ರೂ.ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ದೊರೆಯುತ್ತದೆ ಹಾಗೂ ರೋಮಿಂಗ್ ಕರೆಗಳ ಸೌಲಭ್ಯ ಸಹ ಸಿಗಲಿದೆ. ಇದರೊಂದಿಗೆ ಪ್ರತಿದಿನ 1.5GB ಡೇಟಾ ಪ್ರಯೋಜನ ಲಭ್ಯವಿದ್ದು, ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಪ್ರಯೋಜನಗಳು ದೊರೆಯಲಿದೆ. Wynk ಮ್ಯೂಸಿಕ್, ಏರ್‌ಟೆಲ್ ಎಕ್ಸ್‌ಟ್ರಿಮ್ ಪ್ರೀಮಿಯಮ್, ಪ್ರೀ ಹೆಲೋ ಟ್ಯೂನ್ ಹಾಗೂ ಜೀ 5 ಸೌಲಭ್ಯಗಳು ಸಿಗುತ್ತವೆ.

ಏರ್‌ಟೆಲ್‌ನ 698.ರೂ ಪ್ಲ್ಯಾನ್
ಏರ್‌ಟೆಲ್‌ನ 698.ರೂ ಪ್ರೀಪೇಡ್ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ಹಾಗೂ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಲಭ್ಯ. ಜೊತೆಗೆ ಈ ಪ್ಲ್ಯಾನ್ Wynk ಮ್ಯೂಸಿಕ್, ಏರ್‌ಟೆಲ್ ಎಕ್ಸ್‌ಟ್ರಿಮ್ ಪ್ರೀಮಿಯಮ್ ಹಾಗೂ ಜೀ 5 ಸೌಲಭ್ಯಗಳು ಸಿಗುತ್ತವೆ.


Click it and Unblock the Notifications








