ಏರ್‌ಟೆಲ್ ಗ್ರಾಹಕರೇ, ನಿಮ್ಮ ಮೊಬೈಲ್ ಡೇಟಾ ಖಾಲಿ ಆದಾಗ ಈ ಪ್ಲ್ಯಾನ್ ಖಂಡಿತಾ ಉಪಯುಕ್ತ!
ದೇಶದ ಟೆಲಿಕಾಂ ಪೂರೈಕೆದಾರ ಸಂಸ್ಥೆಗಳಾದ ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಮತ್ತು ವಿ ಟೆಲಿಕಾಂಗಳು ಅಧಿಕ ಚಂದಾದಾರರನ್ನು ಸೆಳೆಯಲು ಕೆಲವು ಆಕರ್ಷಕ ರೀಚಾರ್ಜ್ ಯೋಜನೆಗಳನ್ನು ಪರಿಚಯಿಸಿವೆ. ಆ ಪೈಕಿ ಏರ್‌ಟೆಲ್ ಸಂಸ್ಥೆಯ ಬಹುತೇಕ ಯೋಜನೆಗಳು ಹೆಚ್ಚುವರಿ ಡೇಟಾ ಪ್ರಯೋಜನ್ ಪಡೆದಿದ್ದು, ಕೆಲವು ಅಗ್ಗದ ರೀಚಾರ್ಜ್ ಪ್ಲ್ಯಾನ್ ಆಯ್ಕೆ ಸಹ ನೀಡಿವೆ. ಅಲ್ಲದೇ ಹೆಚ್ಚುವರಿ ಡೇಟಾ ಅಗತ್ಯತೆಗಾಗಿ ಕೆಲವು ಡೇಟಾ ರೀಚಾರ್ಜ್‌ಗಳ ಆಯ್ಕೆ ಸಹ ಹೊಂದಿದ್ದು, 9ರೂ. ಗಳಿಗೂ ಸಹ ಡೇಟಾ ಪ್ಲ್ಯಾನ್ ಲಭ್ಯ.
ಹೌದು, ಜನಪ್ರಿಯ ಏರ್‌ಟೆಲ್ ಟೆಲಿಕಾಂ ಭಿನ್ನ ಶ್ರೇಣೀಯಲ್ಲಿ ಡೇಟಾ ರೀಚಾರ್ಜ್ ಪ್ಯಾಕ್‌ಗಳ ಆಯ್ಕೆ ಅನ್ನು ತನ್ನ ಚಂದಾದಾರರಿಗೆ ಲಭ್ಯ ಮಾಡಿದೆ. ಏರ್‌ಟೆಲ್ ಟೆಲಿಕಾಂನ ಡೇಟಾ ರೀಚಾರ್ಜ್ ಪ್ಯಾಕ್‌ಗಳು ಹೆಚ್ಚುವರಿ ಡೇಟಾ ಪ್ರಯೋಜನ ಬಯಸುವ ಬಳಕೆದಾರರಿಗೆ ಹೆಚ್ಚು ಉಪಯುಕ್ತ ಎನಿಸಿವೆ. ಸಂಸ್ಥೆಯು ಇತ್ತೀಚಿಗೆ 9ರೂ. ಗಳ ಪ್ಲ್ಯಾನ್ ಪರಿಚಯಿಸಿದ್ದು, ಇದು ಅನಿಯಮಿತ ಡೇಟಾ ಪ್ರಯೋಜನ ಒಳಗೊಂಡಿದೆ. ಇನ್ನುಳಿಂದತೆ ಏರ್‌ಟೆಲ್‌ನ ಇತರೆ ಡೇಟಾ ಪ್ಲ್ಯಾನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಏರ್‌ಟೆಲ್ 9ರೂ. ರೀಚಾರ್ಜ್ ಪ್ಯಾಕ್
ಏರ್‌ಟೆಲ್ ಸಂಸ್ಥೆಯ ಹೊಸ 9ರೂ. ರೀಚಾರ್ಜ್ ಯೋಜನೆಯು ಸ್ಪೆಷಲ್ ಪ್ಯಾಕ್ ಆಗಿದ್ದು, ಇದರಲ್ಲಿ ಚಂದಾದಾರರಿಗೆ ಅನಿಯಮಿತ ಇಂಟರ್ನೆಟ್ ಕನೆಕ್ಟಿವಿಟಿ ಸೌಲಭ್ಯ ಮಾತ್ರ ಸಿಗಲಿದೆ. ಇನ್ನು ಇದು ಒಂದು ಗಂಟೆಯ ವ್ಯಾಲಿಡಿಟಿ (60 ಸೆಕೆಂಡಗಳು) ಪಡೆದಿದೆ. ಉಳಿದಂತೆ ಈ ರೀಚಾರ್ಜ್ ಯೋಜನೆಯಲ್ಲಿ ಯಾವುದೇ ವಾಯಿಸ್ ಕರೆಗಳ ಪ್ರಯೋಜನ, ಎಸ್‌ಎಮ್‌ಎಸ್ ಸೌಲಭ್ಯಗಳು ಲಭ್ಯ ಇರುವುದಿಲ್ಲ.
ಏರ್‌ಟೆಲ್ 19ರೂ ಮತ್ತು 29ರೂ ರೀಚಾರ್ಜ್ ಪ್ಲ್ಯಾಕ್
ಏರ್‌ಟೆಲ್ ಸಂಸ್ಥೆಯ 19ರೂ ರೀಚಾರ್ಜ್ ಪ್ಲ್ಯಾಕ್ ಮತ್ತು 29ರೂ ರೀಚಾರ್ಜ್ ಪ್ಲ್ಯಾಕ್ ಗಳು ಅಲ್ಪಾವಧಿಯ ಡೇಟಾ ಯೋಜನೆಗಳಾಗಿವೆ. ಇವು ಕ್ರಮವಾಗಿ 1GB ಹಾಗೂ 2GB ಡೇಟಾ ಸೌಲಭ್ಯವನ್ನು ಪಡೆದಿವೆ. ಅಲ್ಲದೇ ಈ ಯೋಜನೆಗಳು ಒಂದು ದಿನ ವ್ಯಾಲಿಡಿಟಿ ಪ್ರಯೋಜನ ಪಡೆದಿವೆ.
ಏರ್‌ಟೆಲ್ 39ರೂ ರೀಚಾರ್ಜ್ ಪ್ಲ್ಯಾಕ್
ಏರ್‌ಟೆಲ್ 39ರೂ ರೀಚಾರ್ಜ್ ಪ್ಲ್ಯಾಕ್ ರೀಚಾರ್ಜ್ ಯೋಜನೆ ಅನಿಯಮಿತ ಡೇಟಾ ಸೌಲಭ್ಯ ಅನ್ನು ಹೊಂದಿದೆ. ಇನ್ನು ಈ ಡೇಟಾ ಪ್ಲ್ಯಾನಿನ ವ್ಯಾಲಿಡಿಟಿಯು ಒಂದು ದಿನ ಆಗಿದೆ. ಇನ್ನುಳಿದಂತೆ ಈ ಯೋಜನೆಯಲ್ಲಿ ಬಳಕೆದಾರರಿಗೆ ಯಾವುದೇ ಹೆಚ್ಚುವರಿ ಪ್ರಯೋಜನ ಲಭ್ಯ ಆಗುವುದಿಲ್ಲ.
ಏರ್‌ಟೆಲ್ 49ರೂ ರೀಚಾರ್ಜ್ ಪ್ಲ್ಯಾಕ್
ಏರ್‌ಟೆಲ್ 49ರೂ ರೀಚಾರ್ಜ್ ಪ್ಲ್ಯಾಕ್ ರೀಚಾರ್ಜ್ ಯೋಜನೆ ಅನಿಯಮಿತ ಡೇಟಾ ಸೌಲಭ್ಯ ಅನ್ನು ಹೊಂದಿದೆ. ಇನ್ನು ಈ ಡೇಟಾ ಪ್ಲ್ಯಾನಿನ ವ್ಯಾಲಿಡಿಟಿಯು ಒಂದು ದಿನ ಆಗಿದೆ. ಅಲ್ಲದೇ ಮೆಂಕ್ ಮ್ಯೂಸಿಕ್ ಪ್ರಿಮಿಯಂ ಸೇವೆ ಲಭ್ಯ ಇನ್ನುಳಿದಂತೆ ಯಾವುದೇ ಹೆಚ್ಚುವರಿ ಪ್ರಯೋಜನ ಲಭ್ಯ ಇರುವುದಿಲ್ಲ.
ಏರ್‌ಟೆಲ್ 79ರೂ ರೀಚಾರ್ಜ್ ಪ್ಲ್ಯಾಕ್
ಏರ್‌ಟೆಲ್ 79ರೂ ರೀಚಾರ್ಜ್ ಪ್ಲ್ಯಾಕ್ ರೀಚಾರ್ಜ್ ಯೋಜನೆ ಕೂಡಾ ಅನಿಯಮಿತ ಡೇಟಾ ಪ್ರಯೋಜನ ಅನ್ನು ಹೊಂದಿದೆ. ಇನ್ನು ಈ ಡೇಟಾ ಪ್ಲ್ಯಾನಿನ ವ್ಯಾಲಿಡಿಟಿಯು ಎರಡು ದಿನ ಆಗಿದೆ. ಡೇಟಾ ಹೊರತುಪಡಿಸಿ ಈ ಯೋಜನೆಯಲ್ಲಿ ಯಾವುದೇ ಹೆಚ್ಚುವರಿ ಪ್ರಯೋಜನ ಲಭ್ಯ ಇರುವುದಿಲ್ಲ.
ಏರ್‌ಟೆಲ್ 98ರೂ ರೀಚಾರ್ಜ್ ಡೇಟಾ ಪ್ಯಾಕ್
ಏರ್‌ಟೆಲ್ ಸಂಸ್ಥೆಯ 98ರೂ. ಡೇಟಾ ರೀಚಾರ್ಜ್ ಯೋಜನೆಯು ಒಟ್ಟು 5 GB ಡೇಟಾ ಸೌಲಭ್ಯ ಅನ್ನು ಪಡೆದಿದೆ. ಇನ್ನು ಈ ಡೇಟಾ ಯೋಜನೆಯ ವ್ಯಾಲಿಡಿಟಿಯು ಗ್ರಾಹಕರ ಮೂಲ ರೀಚಾರ್ಜ್ ಯೋಜನೆಯ ವ್ಯಾಲಿಡಿಟಿ ಲಭ್ಯ ಇರುವವರೆಗೂ ಮಾನ್ಯ ಆಗಿರುತ್ತದೆ.


Click it and Unblock the Notifications








