Subscribe to Gizbot

ಏರ್‌ಟೆಲ್ 'ಡಬ್ಬಲ್ ಹಾಲಿಡೇ ಸರ್ಪ್ರೈಸ್ ಆಫರ್'.!!

Written By:

ಜಿಯೋ ವಿರುದ್ಧ ಜಿದ್ದಿಗೆ ಬಿದ್ದಿರುವ ಏರ್‌ಟೆಲ್ ಇತ್ತಿಚೀಗೆ ಘೋಷಣೆ ಮಾಡಿದ್ದ ಹಾಲಿಡೇ ಆಫರ್ ಅನ್ನು ಡಬ್ಬಲ್ ಮಾಡಿದ್ದು, ಅಲ್ಲದೇ ಸರ್ಪ್ರೈಸ್ ಆಫರ್ ಅನ್ನು 30 ದಿನಗಳ ಕಾಲ ವಿಸ್ತರಣೆಯನ್ನು ಮಾಡಿದೆ. ಈ ಹಿನ್ನಲೆಯಲ್ಲಿ ಏರ್‌ಟೆಲ್ ಪೋಸ್ಟ್ ಪೇಯ್ಡ್ ಗ್ರಾಹಕರು ಮತ್ತೇ ಏಕ್ಸ್‌ಟ್ರಾ ಡೇಟಾ ಲಾಭವನ್ನು ಪಡೆಯಬಹುದಾಗಿದೆ.

ಏರ್‌ಟೆಲ್ 'ಡಬ್ಬಲ್ ಹಾಲಿಡೇ ಸರ್ಪ್ರೈಸ್ ಆಫರ್'.!!

ಓದಿರಿ: ಉಚಿತವಾಗಿ ಆನ್‌ಲೈನಿನಲ್ಲಿ ಪಾಸ್‌ಪೋರ್ಟ್ ಮಾಡಿಸಿಕೊಳ್ಳುವುದು ಹೇಗೆ..? ಇಲ್ಲಿದೇ ಮಾಹಿತಿ

ಇದಲ್ಲದೇ ಏರ್‌ಟೆಲ್ ತನ್ನ ಗ್ರಾಹಕರಿಗೆ ಇಂಟೆರ್ನ್ಯಾಷಿನಲ್ ಕಾಲಿಂಗ್ ಮೇಲೆ ಒಳ್ಳೆಯ ಆಫರ್ ಗಳನ್ನು ನೀಡಲು ಮುಂದಾಗಿದೆ. ಅಲ್ಲದೇ ಇದಕ್ಕಾಗಿ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಉತ್ತಮ ಪ್ಲಾನ್ ಗಳನ್ನು ಆಫರ್ ಮಾಡಿದೆ.

ಏಪ್ರಿಲ್ 30ರ ವರೆಗೆ ಸರ್ಪ್ರೈಸ್ ಆಫರ್ ವಿಸ್ತರಣೆಯಾಗಿದ್ದು, ಇದರಲ್ಲಿ ಏರ್‌ಟೆಲ್ ಪೋಸ್ಟ್ ಪೇಯ್ಡ್ ಗ್ರಾಹಕರು 30 GB, ಡೇಟಾವನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಅದುವೇ ಮೂರು ತಿಂಗಳು 10 GB ಯಂತೆ ಪ್ರತಿ ತಿಂಗಳು ಉಚಿತ 4G ಡೇಟಾವನ್ನು ತಮ್ಮದಾಗಿಸಿಕೊಳ್ಳಬಹುದು.

ಏರ್‌ಟೆಲ್ 'ಡಬ್ಬಲ್ ಹಾಲಿಡೇ ಸರ್ಪ್ರೈಸ್ ಆಫರ್'.!!

ಓದಿರಿ: ಜಿಯೋ ಗ್ರಾಹಕರಿಗೆ ಸಂಕಷ್ಟ: ಶೀಘ್ರವೇ ಬ್ಲಾಕ್ ಆಗಲಿದೆ ಜಿಯೋ ಸಿಮ್‌ಗಳು..!!

ಇದಲ್ಲದೇ 399 ಪ್ಲಾನ್ ಪಡೆದುಕೊಳ್ಳಲು ಸಹ ಅವಧಿಯೂ ವಿಸ್ತರಣೆಗೊಂಡಿದೆ, 70 ದಿನ ವ್ಯಾಲಿಡಿಟಿಯನ್ನು ಹೊಂದಿದೆ. ಪ್ರತಿ ನಿತ್ಯ 1GB 4G ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ. ಜಿಯೋ ಧನ್ ಧನಾ ಧನ್ ಆಫರ್ ಘೋಷಣೆ ಮಾಡಿದ ಹಿನ್ನಲೆಯಲ್ಲಿ ಏರ್‌ಟೆಲ್ ಈ ಕೊಡುಗೆಯನ್ನು ನೀಡಲು ಮುಂದಾಗಿದೆ.

ಒಟ್ಟಿನಲ್ಲಿ ಜಿಯೋ- ಏರ್‌ಟೆಲ್ ದರ ಸಮರ ದಿಂದ ಗ್ರಾಹಕರಿಗೆ ಒಂದು ಕಡೆ ಲಾಭವಾಗುತ್ತಿದ್ದರೆ, ಇನ್ನೊಂದು ಕಡೆಯಲ್ಲಿ ಯಾವ ಆಫರ್ ಬೆಸ್ಟ್ ಯಾವುದನ್ನು ಪಡೆಯಬೇಕು ಎಂಬುದರ ಗೊಂದಲ ಸಹ ಉಂಟಾಗುತ್ತಿದೆ.

Read more about:
English summary
Airtel has extended the validity for its 'Surprise' offer by another 30 days. This means the postpaid users can use the extra data for one more billing cycle. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot