Subscribe to Gizbot

ಜಿಯೋ ಗ್ರಾಹಕರಿಗೆ ಸಂಕಷ್ಟ: ಶೀಘ್ರವೇ ಬ್ಲಾಕ್ ಆಗಲಿದೆ ಜಿಯೋ ಸಿಮ್‌ಗಳು..!!

Written By:

ಜಿಯೋ ಗ್ರಾಹಕರಿಗೆ ಒಂದರ ಮೇಲೊಂದು ತೊಂದರೆಗಳು ಎದುರಾಗುತ್ತಿದ್ದು, ಸದ್ಯ 100 ಮಿಲಿಯನ್‌ಗೂ ಅಧಿಕ ಸಂಖ್ಯೆಯಲ್ಲಿರುವ ಜಿಯೋ ಸಿಮ್‌ಗಳ ಪೈಕಿ ಹಲವು ಸಿಮ್‌ ಕಾರ್ಡ್‌ಗಳು ಬ್ಲಾಕ್ ಆಗಲಿದೆ ಎನ್ನಲಾಗಿದೆ. ಕಾರಣ ಜಿಯೋ ಗ್ರಾಹಕರು ತಮ್ಮ ಸಿಮ್‌ ಕಾರ್ಡ್‌ಗಳನ್ನು ವೈರಿಫಿಕೇಷನ್ ಮಾಡಿಸಿಲ್ಲ ಹಾಗಾಗಿ ಸಿಮ್ ಕಾರ್ಡ್ ಬ್ಲಾಕ್ ಆಗಲಿದೆ.

ಜಿಯೋ ಗ್ರಾಹಕರಿಗೆ ಸಂಕಷ್ಟ: ಶೀಘ್ರವೇ ಬ್ಲಾಕ್ ಆಗಲಿದೆ ಜಿಯೋ ಸಿಮ್‌ಗಳು..!!

ಓದಿರಿ: ಉಚಿತವಾಗಿ ಆನ್‌ಲೈನಿನಲ್ಲಿ ಪಾಸ್‌ಪೋರ್ಟ್ ಮಾಡಿಸಿಕೊಳ್ಳುವುದು ಹೇಗೆ..? ಇಲ್ಲಿದೇ ಮಾಹಿತಿ

ಆಧಾರ್ ಮಾಹಿತಿಯನ್ನು ನೀಡಿ ಸಿಮ್ ಪಡೆದುಕೊಂಡಿದ್ದ ಗ್ರಾಹಕರು, ಸಿಮ್ ಕಾರ್ಡ್ ಆಕ್ಟಿವೆಟ್ ಆದ ನಂತರದಲ್ಲಿ ಟೆಲಿ ವೈರಿಫಿಕೆಷನ್ ಮಾಡಿಸಬೇಕಾಗಿತ್ತು. ಆದರೆ ಹಲವು ಗ್ರಾಹಕರು ಇದನ್ನು ಮಾಡಿರುವ ಕಾರಣ ಅವರ ಸಿಮ್‌ ಕಾರ್ಡ್‌ಗಳು ಬ್ಲಾಕ್ ಆಗಲಿದೆ.

ಓದಿರಿ: ಈ ಆಫರ್ ಕೇಳಿದ ಮೇಲೆ ಜಿಯೋ ಗಿಂತ ಏರ್‌ಟೆಲ್ ಬೆಸ್ಟು ಅಂತ ನೀವೆ ಅಂತೀರಾ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬ್ಲಾಕ್ ಯಾಕೆ..?

ಬ್ಲಾಕ್ ಯಾಕೆ..?

ಜಿಯೋ ಸಿಮ್ ಪಡೆಯುವ ವೇಳೆಯಲ್ಲಿ ದೇಶದಲ್ಲಿ ಮೊದಲ ಬಾರಿಗೆ ಆಧಾರ್ eKYC ಯನ್ನು ಬಳಸಿಕೊಳ್ಳಲಾಗಿತ್ತು. ಸುಮ್ಮನೆ ಗ್ರಾಹಕರಿಂದ ಗುರುತೀನ ಚೀಟಿಯ ನಕಲಿ ಪ್ರತಿಯನ್ನು ಪಡೆಯುವ ಬದಲು ಆಧಾರ್ ನಂಬರ್ ಮತ್ತು ಹೆಬ್ಬೆಟ್ಟಿನ ಗುರುತು ಸಂಗ್ರಹಿಸಿ ಜಿಯೋ ಸಿಮ್ ನೀಡಲಾಯಿತು. ಆದರೆ ಇದಾದ ನಂತರ ಗ್ರಾಹಕರು ಟೆಲಿ ವೈರಿಫಿಕೆಷನ್ ಮಾಡಿಸಿಲ್ಲ . ಹಾಗಾಗಿ ಬ್ಲಾಕ್ ಮಾಡಲಾಗುತ್ತಿದೆ.

ಏನೀದು ಟೆಲಿ ವೈರಿಫಿಕೆಷನ್:

ಏನೀದು ಟೆಲಿ ವೈರಿಫಿಕೆಷನ್:

ನೀವು ಯಾವುದೇ ಸಿಮ್ ಕಾರ್ಡ್ ಪಡೆದ ಮೇಲೆ ನೀವು ನೀಡಿರುವ ಗುರುತಿನ ಪತ್ರದ ವಿವರಗಳು ಸರಿಯಾಗಿಯೇ ಎಂಬುದನ್ನು ಪರೀಕ್ಷಿಸಲು ಟೆಲಿಕಾಂ ಕಂಪನಿಗಳು ಟೆಲಿ ವೈಲಿಫಿಕೇಷನ್ ನಡೆಸುತ್ತವೆ. ಸಿಮ್ ಕಾರ್ಡ್ ದುರುಪಯೋಗವಾಗಬಾರದು ಎಂಬ ಕಾರಣದಿಂದ ಹೀಗೆ ಮಾಡಲಾಗುತ್ತದೆ.

ಈಗಾಗಲೇ ಗ್ರಾಹಕರಿಗೆ ಮೇಸೆಜ್ ಕಳುಹಿಸಲಾಗಿದೆ:

ಈಗಾಗಲೇ ಗ್ರಾಹಕರಿಗೆ ಮೇಸೆಜ್ ಕಳುಹಿಸಲಾಗಿದೆ:

ಜಿಯೋ ಈಗಾಗಲೇ ಟೆಲಿ ವೆರಿಫಿಕೆಷನ್ ಮಾಡದ ಸಿಮ್ ಕಾರ್ಡ್‌ಗಳನ್ನು ಬ್ಲಾಕ್ ಮಾಡುವುದಾಗಿ ತನ್ನ ಗ್ರಾಹಕರಿಗೆ ಮೇಸೆಜ್ ಕಳುಹಿಸಿದೆ. ಹಾಗಾಗಿ ನೀವು ನಿರಂತರ ಜಿಯೋ ಸೇವೆಯನ್ನು ಅನುಭವಿಸಬೇಕಾದರೆ ಶೀಗ್ರವೇ ಜಿಯೋ ಟೆಲಿ ವೈರಿಫಿಕೇಷನ್ ಮಾಡಿಸಿಕೊಳ್ಳಿ.

ಕಸ್ಟಮರ್ ಕೇರ್‌ಗೆ ಕರೆ ಮಾಡಿ:

ಕಸ್ಟಮರ್ ಕೇರ್‌ಗೆ ಕರೆ ಮಾಡಿ:

ಯಾವ ಜಿಯೋ ಗ್ರಾಹಕರು ತಮ್ಮ ಟೆಲಿ ವೈರಿಫಿಕೆಷನ್ ಮಾಡಿಸಿಕೊಂಡಿಲ್ಲ. ಅವರು ಶೀಘ್ರವೇ ಜಿಯೋ ಕಸ್ಟಮರ್ ಕೇರ್‌ಗೆ ಕರೆ ಮಾಡಿ, ತಮ್ಮ ನಂಬರ್ ಅನ್ನು ವೈರಿಫಿಕೇಷನ್ ಮಾಡಿಸಿಕೊಳ್ಳಿ,. ಇಲ್ಲವಾದರೆ ನಿಮ್ಮ ಸಿಮ್ ಕಾರ್ಡ್ ಬ್ಲಾಕ್ ಆಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Reliance Jio may soon have several SIM blocked due to non-verification of the SIM cards, as per media reports. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot