Airtel Voice Call Plans: ಏರ್‌ಟೆಲ್‌ನ ಅಧಿಕ ವ್ಯಾಲಿಡಿಟಿ ಮತ್ತು ಉಚಿತ ಕರೆ ಪ್ಲ್ಯಾನ್‌ಗಳು!

|

ದೇಶದ ಟೆಲಿಕಾಂ ವಲಯದಲ್ಲಿ ಖಾಸಗಿ ಟೆಲಿಕಾಂ ಸಂಸ್ಥೆಗಳ ಅಬ್ಬರ ಜೋರಾಗಿದ್ದು, ಚಂದಾದಾರರನ್ನು ಸೆಳೆಯಲು ನಾನಾ ಕಸರತ್ತು ನಡೆಸುತ್ತ ಸಾಗಿವೆ. ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಜಿಯೋ ಟೆಲಿಕಾಂಗೆ ಪ್ರಬಲ ಪೈಪೋಟಿ ನೀಡುತ್ತಿರುವುದು ಏರ್‌ಟೆಲ್ ಟೆಲಿಕಾಂ ಆಗಿದೆ. ಏರ್‌ಟೆಲ್‌ ಬಹುತೇಕ ಪ್ರೀಪೇಡ್‌ ಪ್ಲ್ಯಾನ್‌ಗಳು ಅನಿಯಮಿತ ಉಚಿತ ಕರೆಯನ್ನು ಹೊಂದಿರುವುದು ಪ್ಲಸ್‌ ಪಾಯಿಂಟ್ ಆಗಿದೆ.

ಏರ್‌ಟೆಲ್ ಟೆಲಿಕಾಂ

ಹೌದು, ಏರ್‌ಟೆಲ್ ಟೆಲಿಕಾಂ ಡಾಟಾ ಸೌಲಭ್ಯದ ಪ್ರೀಪೇಡ್‌ ಪ್ಲ್ಯಾನ್‌ಗಳನ್ನು ಹೊಂದಿದ್ದು, ಅದರ ಜೊತೆಗೆ ಡಾಟಾ ಬಯಸದ ಗ್ರಾಹಕರಿಗೆ ಕರೆ ಸೌಲಭ್ಯದ ಪ್ರೀಪೇಡ್ ಪ್ಲ್ಯಾನ್‌ಗಳನ್ನು ಒಳಗೊಂಡಿದೆ. ಈ ಮೂಲಕ ಎರಡು ವಿಧದ ಚಂದಾದಾರರನ್ನು ಆಕರ್ಷಿಸುವ ಪ್ರಯತ್ನ ನಡೆಸಿದೆ. ಡಾಟಾ ಪ್ರಯೋಜನ ಹೆಚ್ಚಾಗಿ ಬಳಸದ ಚಂದಾದಾರರಿಗೆ ಏರ್‌ಟೆಲ್‌ ಟೆಲಿಕಾಂನ ಪರ್ಯಾಯ ಪ್ರೀಪೇಡ್‌ ಪ್ಲ್ಯಾನ್‌ಗಳು ನೆರವಾಗಲಿವೆ. ಹಾಗಾದರೆ ಆ ಪ್ರೀಪೇಡ್‌ ಪ್ಲ್ಯಾನ್‌ಗಳು ಯಾವುವು ಎಂಬುದನ್ನು ಮುಂದೆ ನೋಡೋಣ.

ಏರ್‌ಟೆಲ್‌ 179ರೂ. ಪ್ಲ್ಯಾನ್

ಏರ್‌ಟೆಲ್‌ 179ರೂ. ಪ್ಲ್ಯಾನ್

ಏರ್‌ಟೆಲ್‌ನ 179 ರೂ ಪ್ರಿಪೇಯ್ಡ್ ಯೋಜನೆ 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದ್ದು, ಡೇಟಾ ಮತ್ತು ಕರೆ ಪ್ರಯೋಜನಗಳನ್ನು ಇದು ಒಳಗೊಂಡಿದೆ. ಒಟ್ಟು ಪೂರ್ಣ ವ್ಯಾಲಿಡಿಟಿ ಅವಧಿಗೆ 2GB ಡೇಟಾ ಸೌಲಭ್ಯವನ್ನು ಒಳದಗಿಸಲಿದ್ದು, ಇದರೊಂದಿಗೆ ಅನಿಯಮಿತ ಕರೆಗಳ ಸೌಲಭ್ಯ ಸಹ ಪಡೆದಿದೆ. ಜೊತೆಗೆ ಈ ಪ್ಲ್ಯಾನ್‌ ಸ್ಪಲ್ಪ ಭಿನ್ನವಾಗಿ ಕಾಣಿಸುತ್ತದೆ ಏಕೆಂದರೆ ಈ ಪ್ಲ್ಯಾನಿನಲ್ಲಿ ಹೆಚ್ಚುವರಿಯಾಗಿ ಭಾರ್ತಿ ಆಕ್ಸಾದಿಂದ 2 ಲಕ್ಷ ರೂಪಾಯಿ ಮೌಲ್ಯದ ಜೀವ ವಿಮೆ ಸಹ ದೊರೆಯಲಿದೆ. ಹಾಗೂ ಏರ್‌ಟೆಲ್‌ ಆಪ್‌ನ ಇತರೆ ಸೇವೆಗಳು ಸಿಗಲಿವೆ.

ಏರ್‌ಟೆಲ್‌ 379ರೂ. ಪ್ಲ್ಯಾನ್

ಏರ್‌ಟೆಲ್‌ 379ರೂ. ಪ್ಲ್ಯಾನ್

ಏರ್‌ಟೆಲ್‌ನ ಈ 379ರೂ. ಪ್ರಿಪೇಯ್ಡ್ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಇದು ಸಹ ಡೇಟಾ ಮತ್ತು ಕರೆ ಪ್ರಯೋಜನಗಳನ್ನು ಪಡೆದಿದೆ. ಒಟ್ಟು ಪೂರ್ಣ ವ್ಯಾಲಿಡಿಟಿ ಅವಧಿಗೆ 6GB ಡೇಟಾ ಸೌಲಭ್ಯವನ್ನು ಒಳದಗಿಸಲಿದ್ದು, ಇದರೊಂದಿಗೆ ಅನಿಯಮಿತ ಕರೆಗಳ ಸೌಲಭ್ಯ ಸಹ ಪಡೆದಿದೆ. ಜೊತೆಗೆ ಈ ಪ್ಲ್ಯಾನ್‌ Wynk ಮ್ಯೂಸಿಕ್, ಏರ್‌ಟೆಲ್‌ ಎಕ್ಸ್‌ಟ್ರಿಮ್ ಪ್ರೀಮಿಯಮ್, ಪ್ರತಿದಿನ 100ಎಸ್‌ಎಮ್ಎಸ್‌ ಪ್ರಯೋಜನ ಪಡೆದಿದೆ.

ಏರ್‌ಟೆಲ್‌ 1498ರೂ. ಪ್ಲ್ಯಾನ್

ಏರ್‌ಟೆಲ್‌ 1498ರೂ. ಪ್ಲ್ಯಾನ್

ಏರ್‌ಟೆಲ್‌ 1498ರೂ. ಪ್ಲ್ಯಾನ್ ಪ್ರೀಪೇಡ್‌ ಪ್ಲ್ಯಾನ್ 365 ದಿನಗಳ ವಾರ್ಷಿಕ ವ್ಯಾಲಿಡಿಟಿ ಪಡೆದಿದ್ದು, ಕರೆ ಮತ್ತು ಡೇಟಾ ಪ್ರಯೋಜನವನ್ನು ಒಳಗೊಂಡಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 24GB ಡೇಟಾ ಸೌಲಭ್ಯದ ಜೊತೆಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಪಡೆದುಕೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯವನ್ನು ಹೊಂದಿದೆ. ಇನ್ನು ಇದರೊಂದಿಗೆ Wynk ಮ್ಯೂಸಿಕ್, ಏರ್‌ಟೆಲ್‌ ಎಕ್ಸ್‌ಟ್ರಿಮ್ ಪ್ರೀಮಿಯಮ್, ಫಾಸ್ಟ್‌ಟ್ಯಾಗ್ ಕ್ಯಾಶ್‌ಬ್ಯಾಕ್ ಸೌಲಭ್ಯ ಹೊಂದಿದೆ. ದೀರ್ಘ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಈ ಆಯ್ಕೆ ಉತ್ತಮ ಅನಿಸಲಿದೆ.

Most Read Articles
Best Mobiles in India

English summary
Airtel has prepaid plans which start at Rs 179 per month and offer less data but truly unlimited calls to their subscribers. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X