Home
ಸುದ್ದಿಜಾಲ

ಏರ್‌ಟೆಲ್‌ನ ಈ ಪ್ಲ್ಯಾನ್‌ ರೀಚಾರ್ಜ್‌ ಮಾಡಿದ್ರೆ, ವೈ-ಫೈ, ಟಿವಿ, ಓಟಿಟಿ ಎಲ್ಲವೂ ಲಭ್ಯ!

ದೇಶದ ಎರಡನೇ ದೊಡ್ಡ ಟೆಲಿಕಾಂ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಭಾರ್ತಿ ಏರ್‌ಟೆಲ್ ಟೆಲಿಕಾಂ ತನ್ನ ಗ್ರಾಹಕರಿಗೆ ಭಿನ್ನ ಪ್ರಯೋಜನಗಳ ಯೋಜನೆಗಳನ್ನು ಪರಿಚಯಿಸಿದೆ. ಇನ್ನು ನೀವೇನಾದರೂ ಏರ್‌ಟೆಲ್‌ ಚಂದಾದಾರರಾಗಿದ್ದು ವೈ-ಫೈ ಸಂಪರ್ಕ, ಟಿವಿ ಚಾನೆಲ್‌ ವೀಕ್ಷಣೆಗಾಗಿ ಹಾಗೂ ಓಟಿಟಿ ಗಾಗಿ ಹೆಚ್ಚು ಹಣ ವ್ಯಯ ಮಾಡುತ್ತಿದ್ದರೆ, ಅದಕ್ಕಾಗಿ ಇನ್ಮುಂದೆ ನೀವು ಚಿಂತಿಸಬೇಕಾಗಿಲ್ಲ ಬಿಡಿ.

ಟೆಲಿಕಾಂ

ಹೌದು, ಏರ್‌ಟೆಲ್‌ ಟೆಲಿಕಾಂ ಈಗ ತನ್ನ ಚಂದಾದಾರರಿಗೆ ತನ್ನ ಸೇವೆಗಳನ್ನು ಅತ್ಯಂತ ಕೈಗೆಟುಕುವ ದರದಲ್ಲಿ ಪಡೆಯಲು ಅವಕಾಶ ನೀಡುತ್ತಿದ್ದು, ಅದರೊಂದಿಗೆ ಭರ್ಜರಿ ಅನುಕೂಲಕರ ಸೇವೆ ನೀಡುತ್ತಿದೆ. ಅದೇನೆಂದರೆ ವೈ-ಫೈ, ಟಿವಿ ಮತ್ತು ಒಟಿಟಿಗಳು ಸೇರಿದಂತೆ ಹಲವು ವಿಭಾಗಗಳಲ್ಲಿ ಏರ್‌ಟೆಲ್‌ನ ಸೇವೆಗಳನ್ನು ಬಯಸುವ ಗ್ರಾಹಕರಿಗೆ ಏರ್‌ಟೆಲ್ ಬ್ಲ್ಯಾಕ್, ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಸೇವೆಗಳನ್ನು ಒದಗಿಸುತ್ತಿದೆ.

ಏರ್‌ಟೆಲ್‌ ಬ್ಲಾಕ್ ಪ್ಲಾನ್

ಏರ್‌ಟೆಲ್ ಟೆಲಿಕಾಂನ ಏರ್‌ಟೆಲ್‌ ಬ್ಲಾಕ್ ಪ್ಲಾನ್ 699 ರೂ. ಈ ಯೋಜನೆಯು ಮೊಬೈಲ್ ಸಂಪರ್ಕಗಳ ಜೊತೆಗೆ ಆದರೆ ಟಿವಿ ಮತ್ತು ಫೈಬರ್ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಬಯಸುವ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿದೆ. ಏರ್‌ಟೆಲ್ ಪ್ರಕಾರ, ಈ ಯೋಜನೆಯು 2199ರೂ. ಮೌಲ್ಯದ ಪ್ರಯೋಜನಗಳನ್ನು ಒದಗಿಸುತ್ತದೆ. ಹಾಗಾದರೆ ಈ ಬಗ್ಗೆ ಇನ್ನಷ್ಟು ಮಾಹಿತಿ ಹಾಗೂ ಇತರೆ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಏರ್‌ಟೆಲ್ ಬ್ಲ್ಯಾಕ್‌ 699ರೂ. ಪ್ಲಾನ್ ಪ್ರಯೋಜನಗಳು

ಏರ್‌ಟೆಲ್ ಬ್ಲ್ಯಾಕ್‌ 699ರೂ. ಪ್ಲಾನ್ ಪ್ರಯೋಜನಗಳು

ಏರ್‌ಟೆಲ್ ಬ್ಲ್ಯಾಕ್‌ 699ರೂ. ಪ್ಲಾನಿನಲ್ಲಿ ಬಳಕೆದಾರರಿಗೆ 40 Mbps ವೇಗದೊಂದಿಗೆ ಎಕ್ಸ್‌ಸ್ಟ್ರೀಮ್ ಫೈಬರ್ ಕನೆಕ್ಷನ್‌ ದೊರೆಯಲಿದ್ದು, ತಿಂಗಳಿಗೆ 3.33TB ಡೇಟಾ ಸೌಲಭ್ಯವನ್ನು ಪಡೆದಿದೆ. ಇದರೊಂದಿಗೆ ಅನಿಯಮಿತ ವಾಯಿಸ್‌ ಕರೆಗಳ ಜೊತೆಗೆ ಸ್ಥಿರ ವಾಯಿಸ್‌ ಕರೆ ಸಂಪರ್ಕ ಸಿಗಲಿದೆ. ನಂತರ, ಗ್ರಾಹಕರು 300ರೂ. ಮೌಲ್ಯದ ಟಿವಿ ಚಾನೆಲ್‌ಗಳೊಂದಿಗೆ ಡಿಟಿಎಚ್ (DTH ಡೈರೆಕ್ಟ್-ಟು-ಹೋಮ್) ಸಂಪರ್ಕವನ್ನು ಸಹ ಪಡೆಯುತ್ತಾರೆ.

ಡಿಸ್ನಿ+ ಹಾಟ್‌ಸ್ಟಾರ್

ಹಾಗೆಯೇ ಏರ್‌ಟೆಲ್ ಡಿಸ್ನಿ+ ಹಾಟ್‌ಸ್ಟಾರ್, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಮತ್ತು ಇತರೆ ಕೆಲವು ಉಚಿತ OTT ಚಂದಾದಾರಿಕೆ ಪ್ರಯೋಜನ ಒಳಗೊಂಡಿದೆ. ಇನ್ನು ಡಿಟಿಎಚ್ ಕನೆಕ್ಷನ್‌ಗಾಗಿ ಏರ್‌ಟೆಲ್ ಬಳಕೆದಾರರು ಸಂಸ್ಥೆಯಿಂದ ಎಕ್ಸ್‌ಸ್ಟ್ರೀಮ್ ಬಾಕ್ಸ್ ಅನ್ನು ಪಡೆಯುತ್ತಾರೆ. ಗ್ರಾಹಕರು ಮುಂಗಡ ಪಾವತಿಯಾಗಿ 4000 ರೂ. ಪಾವತಿಸಿ ಕನೆಕ್ಷನ್‌ಗಾಗಿ ಹಾರ್ಡ್‌ವೇರ್ ಅನ್ನು ಉಚಿತವಾಗಿ ಇನ್‌ಸ್ಟಾಲ್‌ ಪಡೆಯಬಹುದಾಗಿದೆ ಎಂದು ಏರ್‌ಟೆಲ್ ಹೇಳಿದೆ.

ಏರ್‌ಟೆಲ್

ಏರ್‌ಟೆಲ್ ಪ್ರಕಾರ, ಈ ಎಲ್ಲ ಪ್ರಯೋಜನಗಳು ಸುಮಾರು 2199 ರೂ ಮೌಲ್ಯದ್ದಾಗಿದೆ. ಆದರೆ ಏರ್‌ಟೆಲ್ ಬ್ಲಾಕ್ ಗ್ರಾಹಕರು ಇದನ್ನು ತಿಂಗಳಿಗೆ 699ರೂ + ತೆರಿಗೆಗಳಿಗೆ ಪಾವತಿಸಬೇಕಾಗಬಹುದು.

ಏರ್‌ಟೆಲ್‌ 1,099ರೂ. ಬ್ರಾಡ್‌ಬ್ಯಾಂಡ್‌ ಪ್ಲಾನ್‌ ಸೌಲಭ್ಯಗಳು

ಏರ್‌ಟೆಲ್‌ 1,099ರೂ. ಬ್ರಾಡ್‌ಬ್ಯಾಂಡ್‌ ಪ್ಲಾನ್‌ ಸೌಲಭ್ಯಗಳು

ಏರ್‌ಟೆಲ್‌ ಟೆಲಿಕಾಂನ ಈ ಪ್ಲಾನ್‌ನಲ್ಲಿ ಅಮೆಜಾನ್‌ ಪ್ರೈಮ್‌ ಮತ್ತು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಚಂದಾದಾರಿಕೆ ಕೂಡ ಲಭ್ಯವಾಗಲಿದೆ. ಜೊತೆಗೆ 200 Mbps ಅನಿಯಮಿತ ಇಂಟರ್‌ನೆಟ್‌ ವೇಗವನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ಈ ಪ್ಲಾನ್‌ನಲ್ಲಿ 14 OTT ಗಳಿಗೆ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಲಾಗಿನ್ ಮತ್ತು ಏರ್‌ಟೆಲ್ 4K ಎಕ್ಸ್‌ಸ್ಟ್ರೀಮ್ ಬಾಕ್ಸ್‌ನಲ್ಲಿ 350 ಚಾನಲ್‌ಗಳನ್ನು ವೀಕ್ಷಿಸಬಹುದಾಗಿದೆ.

ಏರ್‌ಟೆಲ್‌ 1,599ರೂ. ಬ್ರಾಡ್‌ಬ್ಯಾಂಡ್‌ ಪ್ಲಾನ್‌ ಸೌಲಭ್ಯಗಳು

ಏರ್‌ಟೆಲ್‌ 1,599ರೂ. ಬ್ರಾಡ್‌ಬ್ಯಾಂಡ್‌ ಪ್ಲಾನ್‌ ಸೌಲಭ್ಯಗಳು

ಏರ್‌ಟೆಲ್‌ 1,599ರೂ. ಬ್ರಾಡ್‌ಬ್ಯಾಂಡ್‌ ಪ್ಲಾನ್‌ನಲ್ಲಿ ನೀವು ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಚಂದಾದಾರಿಕೆಗಳೊಂದಿಗೆ 300 Mbps ಅನಿಯಮಿತ ಇಂಟರ್‌ನೆಟ್ ಪ್ರಯೋಜನ ಸಿಗಲಿದೆ. ಇದಲ್ಲದೆ 350 ಟಿವಿ ಚಾನಲ್‌ಗಳ ಜೊತೆಗೆ ಮೇಲಿನ ಎರಡು ಪ್ಲಾನ್‌ಗಳ ಮಾದರಿಯಲ್ಲಿಯೇ ಇದು ಕೂಡ 14 OTT ಗಳಿಗೆ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಲಾಗಿನ್ ನೀಡಲಿದೆ.

Best Mobiles in India

English summary
Airtel Users, Now Pay Rs 699 Instead of Rs 2199 for Wi-Fi, TV Channels and OTTs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+