Home
ಸುದ್ದಿಜಾಲ

ಏರ್‌ಟೆಲ್‌ ಮತ್ತು ವಿ 219ರೂ. ಪ್ಲ್ಯಾನ್: ರೀಚಾರ್ಜ್‌ಗೆ ನಿಮ್ಮ ಆಯ್ಕೆ ಯಾವುದು?

ದೇಶಿಯ ಟೆಲಿಕಾಂ ವಲಯದಲ್ಲಿ ಇದೀಗ ಸಾಕಷ್ಟು ಅಪ್‌ಡೇಟ್‌ಗಳು ನಡೆದಿವೆ. ಪ್ರಮುಖ ಟೆಲಿಕಾಂ ಸಂಸ್ಥೆಗಳು ಚಂದಾದಾರರನ್ನು ಹೆಚ್ಚಿಸಿಕೊಳ್ಳಲು ಕಡಿಮೆ ಬೆಲೆಯಲ್ಲಿ ಹಲವು ಪ್ರಯೋಜನಗಳ ಪ್ರೀಪೇಯ್ಡ್‌ ಯೋಜನೆಗಳನ್ನು ಪರಿಚಯಿಸಿವೆ. ಅವುಗಳಲ್ಲಿ ಭಾರ್ತಿ ಏರ್‌ಟೆಲ್‌ ಹಾಗೂ ವಿ ಟೆಲಿಕಾಂ ಸಂಸ್ಥೆಗಳು ಹೆಚ್ಚು ಟ್ರೆಂಡ್‌ನಲ್ಲಿ ಕಾಣಿಸಿಕೊಂಡಿದ್ದು, ಈ ಸಂಸ್ಥೆಗಳ ಬಜೆಟ್‌ ದರದ ಯೋಜನೆಗಳು ಆಕರ್ಷಕ ವ್ಯಾಲಿಡಿಟಿ ಪಡೆದಿದ್ದು, ದೈನಂದಿನ ಡೇಟಾ ಪ್ರಯೋಜನ ಪಡೆದಿವೆ.

ದೈನಂದಿನ

ಹೌದು, ಏರ್‌ಟೆಲ್‌ ಮತ್ತು ವಿ ಟೆಲಿಕಾಂ ಕೆಲವು ಪ್ರೀಪೇಯ್ಡ್‌ ಯೋಜನೆಗಳು ಗ್ರಾಹಕರನ್ನು ಹೆಚ್ಚಾಗಿ ಸೆಳೆದಿವೆ. ಮುಖ್ಯವಾಗಿ ಅಗ್ಗದ 219ರೂ. ಬೆಲೆಯ ಪ್ರೀಪೇಯ್ಡ್‌ ಯೋಜನೆಯು ದೈನಂದಿನ ಡೇಟಾ ಸೌಲಭ್ಯ, ಅನಿಯಮಿತ ವಾಯಿಸ್‌ ಕರೆ, ಎಸ್‌ಎಮ್‌ಎಸ್‌ ಹಾಗೂ ಅಧಿಕ ವ್ಯಾಲಿಡಿಟಿ ಅವಧಿಯಂತಹ ಪ್ರಯೋಜನಗಳನ್ನು ಹೊಂದಿದ್ದು, ಬಹುತೇಕ ಬಳಕೆದಾರರನ್ನು ಆಕರ್ಷಿಸಿದೆ. ಹಾಗಾದರೇ ಏರ್‌ಟೆಲ್‌ ಮತ್ತು ವಿ ಟೆಲಿಕಾಂ 219ರೂ. ಯೋಜನೆಯಲ್ಲಿ ಯಾವುದು ಬೆಸ್ಟ್‌?..ಪ್ರಯೋಜನಗಳೆನು?..ಮುಂದೆ ಓದಿರಿ.

ವೊಡಾಫೋನ್ ಐಡಿಯಾ 219ರೂ. ಪ್ಲ್ಯಾನ್

ವೊಡಾಫೋನ್ ಐಡಿಯಾ 219ರೂ. ಪ್ಲ್ಯಾನ್

ವಿ ಟೆಲಿಕಾಂನ 219ರೂ. ಪ್ರೀಪೇಯ್ಡ್‌ ಪ್ಲ್ಯಾನಿನಲ್ಲಿ ಪ್ರತಿದಿನ 1GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಪ್ಲ್ಯಾನಿನಲ್ಲಿ ಬಳಕೆದಾರರು ಹೆಚ್ಚುವರಿ 2GB ಡೇಟಾವನ್ನು ಪಡೆಯಬಹುದು. ಹಾಗೆಯೇ ವಿ ಮ್ಯೂವಿಸ್ ಹಾಗೂ ಟಿವಿ ಸೇವೆಯು ದೊರೆಯುತ್ತದೆ.

ಏರ್‌ಟೆಲ್‌ 219ರೂ. ಪ್ರೀಪೇಯ್ಡ್‌ ಪ್ಲ್ಯಾನ್

ಏರ್‌ಟೆಲ್‌ 219ರೂ. ಪ್ರೀಪೇಯ್ಡ್‌ ಪ್ಲ್ಯಾನ್

ಏರ್‌ಟೆಲ್‌ನ 219ರೂ. ಪ್ರೀಪೇಯ್ಡ್‌ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಪ್ರತಿದಿನ 1 GB ಡೇಟಾ ಪ್ರಯೋಜನ ದೊರೆಯಲಿದೆ. ಹಾಗೆಯೇ ಈ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿಯ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಅನಿಯಮಿತ ವಾಯಿಸ್‌ ಕರೆ ಮಾಡುವ ಪ್ರಯೋಜನವಿದೆ. ಜೊತೆಗೆ ದಿನಕ್ಕೆ 100 ಎಸ್‌ಎಂಎಸ್ ಪ್ರಯೋಜನ ಸಹ ಸಿಗಲಿದೆ. ಇದರೊಂದಿಗೆ ವೆಂಕ್ ಮ್ಯೂಸಿಕ್ ಹಾಗೂ ಹೆಲೊ ಟ್ಯೂನ್ ಸೇವೆ ಲಭ್ಯ.

ಪ್ರಯೋಜನಗಳಲ್ಲಿ ಭಿನ್ನತೆಗಳು

ಪ್ರಯೋಜನಗಳಲ್ಲಿ ಭಿನ್ನತೆಗಳು

ಜಿಯೋ ಹಾಗೂ ಏರ್‌ಟೆಲ್‌ ಟೆಲಿಕಾಂಗಳ ಬಹುತೇಕ ಯೋಜನೆಗಳಲ್ಲಿ ಸಾಮ್ಯತೆ ಕಂಡು ಬಂದರೂ, ಕೆಲವು ಭಿನ್ನ ಪ್ರಯೋಜನಗಳು ಕಾಣಿಸುತ್ತವೆ. ಸದ್ಯ 219ರೂ. ಬಜೆಟ್‌ ಬೆಲೆಯ ರೀಚಾರ್ಜ್‌ ಯೋಜನೆಯಲ್ಲಿ ಎರಡು ಟೆಲಿಕಾಂಗಳು ಡೈಲಿ 1GB ಡೇಟಾ ಪ್ರಯೋಜನ ಹೊಂದಿವೆ. ಹಾಗೆಯೇ ಎಸ್‌ಎಮ್‌ಎಸ್‌ ಸೌಲಭ್ಯ ನೀಡಿವೆ. ಇನ್ನು ವ್ಯಾಲಿಡಿಟಿಯು ಸಹ 28 ದಿನಗಳಾಗಿದೆ. ಆದರೆ ಹೆಚ್ಚುವರಿ ಸೌಲಭ್ಯಗಳಲ್ಲಿ ಭಿನ್ನತೆ ಗಮನಿಸಬಹುದು. ವಿ ಟೆಲಿಕಾಂ 2GB ಹೆಚ್ಚುವರಿಯಾಗಿ ನೀಡುತ್ತದೆ. ಹಾಗಾದರೇ ಏರ್‌ಟೆಲ್ ಮತ್ತು ವಿ ಟೆಲಿಕಾಂನ ಇನ್ನಿತರೆ ಅಗ್ಗದ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವೊಡಾಫೋನ್-ಐಡಿಯಾ 249ರೂ. ಪ್ಲ್ಯಾನ್

ವೊಡಾಫೋನ್-ಐಡಿಯಾ 249ರೂ. ಪ್ಲ್ಯಾನ್

ವಿ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಪ್ಲ್ಯಾನಿನಲ್ಲಿ ಬಳಕೆದಾರರು ಹೆಚ್ಚುವರಿ 5GB ಡೇಟಾವನ್ನು ಪಡೆಯಬಹುದು.

ಏರ್‌ಟೆಲ್‌ 249ರೂ. ಪ್ರೀಪೇಯ್ಡ್‌ ಪ್ಲ್ಯಾನ್

ಏರ್‌ಟೆಲ್‌ 249ರೂ. ಪ್ರೀಪೇಯ್ಡ್‌ ಪ್ಲ್ಯಾನ್

ಏರ್‌ಟೆಲ್‌ನ 249ರೂ. ಪ್ರೀಪೇಯ್ಡ್‌ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಪ್ರತಿದಿನ 1.5GB ಡೇಟಾ ಪ್ರಯೋಜನ ದೊರೆಯಲಿದೆ. ಹಾಗೆಯೇ ಈ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿಯ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಅನಿಯಮಿತ ವಾಯಿಸ್‌ ಕರೆ ಮಾಡುವ ಪ್ರಯೋಜನವಿದೆ. ಜೊತೆಗೆ ದಿನಕ್ಕೆ 100 ಎಸ್‌ಎಂಎಸ್ ಪ್ರಯೋಜನ ಸಹ ಸಿಗಲಿದೆ. ಹೆಚ್ಚುವರಿಯಾಗಿ ಹೆಲ್ಲೊ ಟ್ಯೂನ್, ವೆಂಕ್ ಮ್ಯೂಸಿಕ್ ಸೌಲಭ್ಯಗಳನ್ನು ಪಡೆದಿದೆ.

ವೊಡಾಫೋನ್ ಐಡಿಯಾ 149ರೂ. ಪ್ಲ್ಯಾನ್

ವೊಡಾಫೋನ್ ಐಡಿಯಾ 149ರೂ. ಪ್ಲ್ಯಾನ್

ವಿ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಒಟ್ಟು 3GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ 300 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಪ್ಲ್ಯಾನಿನಲ್ಲಿ ಬಳಕೆದಾರರು ಹೆಚ್ಚುವರಿ 1GB ಡೇಟಾವನ್ನು ಪಡೆಯಬಹುದು.

Best Mobiles in India

English summary
Airtel V/S Vi Telecom Rs 219 Plan Compared: Which One Best To Recharge.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+