ಏರ್‌ಟೆಲ್‌ ಮತ್ತು ವೋಡಾಫೋನ್‌ನಿಂದ ಹೊಸ ಪ್ಲ್ಯಾನ್‌ಗಳು ಜಾರಿ : ಯಾವುದು ಬೆಸ್ಟ್‌?

|

ಏರ್‌ಟೆಲ್‌ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳು ಡಿಸೆಂಬರ್‌ನಲ್ಲಿ ಪ್ರೀಪೇಡ್‌ ಪ್ಲ್ಯಾನ್‌ಗಳ ಬೆಲೆ ಹೆಚ್ಚಳ ಮಾಡುವುದಾಗಿ ಘೋಷಿಸಿದ್ದವು. ಹೇಳಿಕೆಯಂತೆ ಇದೇ ಡಿಸೆಂಬರ್‌ 3ರಂದು ಹೊಸ ಪ್ರೀಪೇಡ್‌ ಪ್ಲ್ಯಾನ್‌ಗಳು ಜಾರಿಗೆ ಬಂದಿವೆ. ಈ ಎರಡು ಟೆಲಿಕಾಂ ಸಂಸ್ಥೆಗಳ ನೂತನ ಪ್ರೀಪೇಡ್‌ ಪ್ಲ್ಯಾನ್‌ಗಳ ದರ ಪಟ್ಟಿ ಬಹುತೇಕ ಸಾಮ್ಯತೆಯನ್ನು ಪಡೆದುಕೊಂಡಿದ್ದು, ಆದರೆ ಪ್ರಯೋಜನಗಳು ಮಾತ್ರ ಭಿನ್ನ ವಿಭಿನ್ನವಾಗಿವೆ.

ಏರ್‌ಟೆಲ್‌ ಮತ್ತು ವೊಡಾಫೋನ್

ಹೌದು, ಏರ್‌ಟೆಲ್‌ ಮತ್ತು ವೊಡಾಫೋನ್-ಐಡಿಯಾ ಸಂಸ್ಥೆಗಳು ಹೊಸ ಪ್ರೀಪೇಡ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿದ್ದು, ಇವು ಹಳೆಯ ಬೆಲೆಗಿಂತ ಶೇ.40ಕಿಂತಲೂ ಅಧಿಕವಾಗಿವೆ. ಏರ್‌ಟೆಲ್ ಮತ್ತು ವೊಡಾಫೋನ್‌ಗಳ ಹೊಸ ಅನಿಯಮಿತ ಪ್ರೀಪೇಡ್‌ ಪ್ಲ್ಯಾನ್‌ಗಳು ಆರಂಭಿಕ ಬೆಲೆಯು ಕ್ರಮವಾಗಿ 148ರೂ(ಏರ್‌ಟೆಲ್) ಮತ್ತು 149ರೂ.(ವೊಡಾಫೋನ್)ಗಳಾಗಿದ್ದು, ಹಾಗೆಯೇ ವಾರ್ಷಿಕ ಪ್ರೀಪೇಡ್‌ ಪ್ಲ್ಯಾನ್‌ ಕ್ರಮವಾಗಿ 2.398ರೂ(ಏರ್‌ಟೆಲ್‌) ಮತ್ತ 2,399ರೂ.(ವೊಡಾಫೋನ್) ಗಳಾಗಿವೆ. ಹಾಗಾದರೇ ಏರ್‌ಟೆಲ್‌ ಮತ್ತು ವೊಡಾಫೋನ್‌ಗಳ ಹೊಸ ಪ್ಲ್ಯಾನ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಮತ್ತು ಯಾವುದು ಯೋಗ್ಯ ಎನ್ನುವುದನ್ನು ನೋಡೋಣ ಬನ್ನಿರಿ.

ಏರ್‌ಟೆಲ್ 148ರೂ v/s ವೊಡಾಫೋನ್ 149ರೂ.ಪ್ಲ್ಯಾನ್

ಏರ್‌ಟೆಲ್ 148ರೂ v/s ವೊಡಾಫೋನ್ 149ರೂ.ಪ್ಲ್ಯಾನ್

ಏರ್‌ಟೆಲ್‌ನ 148ರೂ ಪ್ರೀಪೇಡ್‌ ಪ್ಲ್ಯಾನ್‌ ಒಟ್ಟು 28ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಇದರೊಂದಿಗೆ ಅನಿಯಮಿತ ಉಚಿತ ಕರೆಗಳ ಸೌಲಭ್ಯ ಹಾಗೂ ಪ್ರತಿದಿನ 300ಎಸ್‌ಎಮ್‌ಎಸ್‌ ಜತೆಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ 2GB ಡೇಟಾ ಸಹ ಲಭ್ಯ. ಅದೇ ರೀತಿ ವೊಡಾಫೋನಿನ 149ರೂ. ಪ್ಲ್ಯಾನ್‌ ಸಹ 28 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಇತರೆ ನೆಟವರ್ಕ ಕರೆಗಳಿಗೆ 1000 ನಿಮಿಷಗಳು ಲಿಮಿಟ್ ಇರುತ್ತದೆ. ಇದರೊಂದಿಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ 1.5GB ಡೇಟಾ ಹಾಗೂ ಪ್ರತಿದಿನ 300 ಉಚಿತ ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದೆ.

ಏರ್‌ಟೆಲ್ 248ರೂ v/s ವೊಡಾಫೋನ್ 249ರೂ.ಪ್ಲ್ಯಾನ್

ಏರ್‌ಟೆಲ್ 248ರೂ v/s ವೊಡಾಫೋನ್ 249ರೂ.ಪ್ಲ್ಯಾನ್

ಏರ್‌ಟೆಲ್‌ನ 248ರೂ. ಪ್ರೀಪೇಡ್‌ ಪ್ಲ್ಯಾನ್‌ ಸಹ ಒಟ್ಟು 28ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ಹಾಗೂ ಪ್ರತಿದಿನ 1.5GB ಡೇಟಾ ಹಾಗೂ 100 ಎಸ್‌ಎಮ್‌ಎಸ್‌ ಸೌಲಭ್ಯ ಲಭ್ಯ. ಅದೇ ರೀತಿ ವೊಡಾಫೋನಿನ 249ರೂ.ಪ್ಲ್ಯಾನ್ ಸಹ 28 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಇತರೆ ನೆಟವರ್ಕ ಕರೆಗಳಿಗೆ 1000 ನಿಮಿಷಗಳು ಲಿಮಿಟ್ ಇರುತ್ತದೆ. ಇದರೊಂದಿಗೆ ಪ್ರತಿದಿನ 1.5GB ಡೇಟಾ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದೆ.

ಏರ್‌ಟೆಲ್ 298ರೂ v/s ವೊಡಾಫೋನ್ 299ರೂ.ಪ್ಲ್ಯಾನ್

ಏರ್‌ಟೆಲ್ 298ರೂ v/s ವೊಡಾಫೋನ್ 299ರೂ.ಪ್ಲ್ಯಾನ್

ಏರ್‌ಟೆಲ್‌ನ 298ರೂ. ಪ್ರೀಪೇಡ್‌ ಪ್ಲ್ಯಾನ್‌ ಸಹ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ಹಾಗೂ ಪ್ರತಿದಿನ 2GB ಡೇಟಾ ಹಾಗೂ 100 ಎಸ್‌ಎಮ್‌ಎಸ್‌ ಸೌಲಭ್ಯ ಲಭ್ಯ. ಅದೇ ರೀತಿ ವೊಡಾಫೋನಿನ 299ರೂ.ಪ್ಲ್ಯಾನ್ ಸಹ 28 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಇತರೆ ನೆಟವರ್ಕ ಕರೆಗಳಿಗೆ 1000 ನಿಮಿಷಗಳು ಲಿಮಿಟ್ ಇರುತ್ತದೆ. ಇದರೊಂದಿಗೆ ಪ್ರತಿದಿನ 2GB ಡೇಟಾ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದೆ.

ಏರ್‌ಟೆಲ್ 598ರೂ v/s ವೊಡಾಫೋನ್ 599ರೂ.ಪ್ಲ್ಯಾನ್

ಏರ್‌ಟೆಲ್ 598ರೂ v/s ವೊಡಾಫೋನ್ 599ರೂ.ಪ್ಲ್ಯಾನ್

ಏರ್‌ಟೆಲ್‌ನ 598ರೂ ಪ್ರೀಪೇಡ್‌ ಪ್ಲ್ಯಾನ್‌ ಸಹ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ಹಾಗೂ ಪ್ರತಿದಿನ 1.5GB ಡೇಟಾ ಹಾಗೂ 100 ಎಸ್‌ಎಮ್‌ಎಸ್‌ ಸೌಲಭ್ಯ ಲಭ್ಯ. ಇನ್ನು ವೊಡಾಫೋನಿನ 599ರೂ.ಪ್ಲ್ಯಾನ್ ಸಹ 84 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಇತರೆ ನೆಟವರ್ಕ ಕರೆಗಳಿಗೆ 1000ನಿಮಿಷಗಳು ಲಿಮಿಟ್ ಇರುತ್ತದೆ. ಇದರೊಂದಿಗೆ ಪ್ರತಿದಿನ 1.5GB ಡೇಟಾ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದೆ.

ಏರ್‌ಟೆಲ್ 698ರೂ v/s ವೊಡಾಫೋನ್ 699ರೂ.ಪ್ಲ್ಯಾನ್

ಏರ್‌ಟೆಲ್ 698ರೂ v/s ವೊಡಾಫೋನ್ 699ರೂ.ಪ್ಲ್ಯಾನ್

ಏರ್‌ಟೆಲ್‌ನ 698ರೂ ಪ್ರೀಪೇಡ್‌ ಪ್ಲ್ಯಾನ್‌ ಸಹ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ಹಾಗೂ ಪ್ರತಿದಿನ 2GB ಡೇಟಾ ಹಾಗೂ 100 ಎಸ್‌ಎಮ್‌ಎಸ್‌ ಸೌಲಭ್ಯ ಲಭ್ಯ. ಇನ್ನು ವೊಡಾಫೋನಿನ 699ರೂ.ಪ್ಲ್ಯಾನ್ ಸಹ 84 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಇತರೆ ನೆಟವರ್ಕ ಕರೆಗಳಿಗೆ 1000 ನಿಮಿಷಗಳು ಲಿಮಿಟ್(FUP) ಇರುತ್ತದೆ. ಇದರೊಂದಿಗೆ ಪ್ರತಿದಿನ 2GB ಡೇಟಾ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದೆ.

ಏರ್‌ಟೆಲ್ 1498ರೂ v/s ವೊಡಾಫೋನ್ 1499ರೂ.ಪ್ಲ್ಯಾನ್

ಏರ್‌ಟೆಲ್ 1498ರೂ v/s ವೊಡಾಫೋನ್ 1499ರೂ.ಪ್ಲ್ಯಾನ್

ಏರ್‌ಟೆಲ್‌ನ 1498ರೂ ದೀರ್ಘಾವಧಿಯ ಪ್ರೀಪೇಡ್‌ ಪ್ಲ್ಯಾನ್‌ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ಹಾಗೂ ಒಟ್ಟು 24GB ಡೇಟಾ ಮತ್ತು 3,600 ಎಸ್‌ಎಮ್‌ಎಸ್‌ ಸೌಲಭ್ಯ ಲಭ್ಯ. ಹಾಗೆಯೇ ವೊಡಾಫೋನಿನ 1499ರೂ.ಪ್ಲ್ಯಾನ್ ಸಹ 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಈ ಅವಧಿಯಲ್ಲಿ ಒಟ್ಟು 24GB ಡೇಟಾ ಹಾಗೂ 3,600 ಎಸ್‌ಎಮ್‌ಎಸ್‌ ಸೌಲಭ್ಯ ಲಭ್ಯವಾಗುತ್ತವೆ. ಹಾಗೂ ಇತರೆ ನೆಟವರ್ಕ ಕರೆಗಳಿಗೆ ಒಟ್ಟು 12,000 ಉಚಿತ ನಿಮಿಷಗಳು ಲಿಮಿಟ್(FUP) ಇರುತ್ತದೆ.

ಏರ್‌ಟೆಲ್ 2398ರೂ v/s ವೊಡಾಫೋನ್ 2399ರೂ.ಪ್ಲ್ಯಾನ್

ಏರ್‌ಟೆಲ್ 2398ರೂ v/s ವೊಡಾಫೋನ್ 2399ರೂ.ಪ್ಲ್ಯಾನ್

ಏರ್‌ಟೆಲ್‌ನ 2398ರೂ ದೀರ್ಘಾವಧಿಯ ಪ್ರೀಪೇಡ್‌ ಪ್ಲ್ಯಾನ್‌ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ಹಾಗೂ ಪ್ರತಿದಿನ 1.5GB ಡೇಟಾ ಹಾಗೂ 100 ಎಸ್‌ಎಮ್‌ಎಸ್‌ ಸೌಲಭ್ಯ ಲಭ್ಯ. ಅದೇ ರೀತಿ ವೊಡಾಫೋನಿನ 2399ರೂ.ಪ್ಲ್ಯಾನ್ ಸಹ 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಈ ಅವಧಿಯಲ್ಲಿ ಪ್ರತಿದಿನ 1.5GB ಡೇಟಾ ಹಾಗೂ 100 ಎಸ್‌ಎಮ್‌ಎಸ್‌ ಸೌಲಭ್ಯ ಲಭ್ಯ. ಹಾಗೂ ಇತರೆ ನೆಟವರ್ಕ ಕರೆಗಳಿಗೆ ಒಟ್ಟು 12,000 ಉಚಿತ ನಿಮಿಷಗಳು ಲಿಮಿಟ್(FUP) ಇರುತ್ತದೆ.

ಯಾವುದು ಬೆಸ್ಟ್‌

ಯಾವುದು ಬೆಸ್ಟ್‌

ಏರ್‌ಟೆಲ್‌ ಮತ್ತು ವೊಡಾಫೋನ್ ಟೆಲಿಕಾಂ ಸಂಸ್ಥೆಗಳೆರಡು ಹಲವು ನೂತನ ಪ್ರೀಪೇಡ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿವೆ. ಪ್ರತಿ ಪ್ಲ್ಯಾನ್‌ಗಳು ಒಂದೊಕ್ಕೊಂದು ಹೋಲಿಕೆಯನ್ನು ಪಡೆದಿವೆ. ಏರ್‌ಟೆಲ್‌ಗಿಂತ ವೊಡಾಫೋನ್ ಪ್ರತಿ ಪ್ಲ್ಯಾನಿನಲ್ಲಿಯೂ ಒಂದು ರೂಪಾಯಿ ಹೆಚ್ಚಳ ಇದೆ. ಇತರೆ ನೆಟವರ್ಕ ಕರೆಗಳಿಗೆ ಏರ್‌ಟೆಲ್‌ FUP ಲಿಮಿಟ್ ಹೊಂದಿಲ್ಲ, ಆದ್ರೆ ವೊಡಾಫೋನ್ FUP ಲಿಮಿಟ್ ನೀಡಿದೆ. ಇತರೆ ಟೆಲಿಕಾಂಗಳಿಗೆ ಹೆಚ್ಚು ವಾಯಿಸ್‌ ಕರೆ ಮಾಡ ಬಯಸುವವರಿಗೆ ಏರ್‌ಟೆಲ್‌ ಓಕೆ ಅನಿಸುತ್ತದೆ. ಹಾಗೇ ಕರೆಗಳು ಹೆಚ್ಚಾಗಿ ಅಗತ್ಯ ಇಲ್ಲದವರಿಗೆ ವೊಡಫೋನ್ ಮತ್ತು ಏರ್‌ಟೆಲ್‌ ಯೋಗ್ಯ ಅನಿಸಲಿವೆ.

Most Read Articles
Best Mobiles in India

English summary
Airtel, Vodafone Idea introduced new plans. Here you will get complete information about airtel new plans and vodafone new plans details. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X