ಜಿಯೋ ಹಾದಿಯಲ್ಲಿ ಏರ್‌ಟೆಲ್: VoLTE ಬಳಕೆದಾರರಿಗೆ ಉಚಿತ ಡೇಟಾ..! ಪಡೆಯುವುದು ಹೇಗೆ..?
ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋ 4G VoLTE ಸೇವೆಯನ್ನು ಆರಂಭಿಸುವ ಮೂಲಕ ಬಳಕೆದಾರರಿಗೆ ಗುಣಮಟ್ಟದ ಡೇಟಾ ಮತ್ತು HD ವಾಯ್ಸ್ ಕಾಲಿಂಗ್ ಸೇವೆಯನ್ನು ನೀಡಲು ಮುಂದಾಗಿತ್ತು. ಅಲ್ಲ್ಏ ಉಚಿತ ಸೇವೆಯನ್ನು ಆರಂಭದಲ್ಲಿ ನೀಡಿತ್ತು. ಇದರಿಂದಾಗಿ ಹೆಚ್ಚಿನ ಜನರು ಜಿಯೋ ಆಕರ್ಷಕ ಸೇವೆಯ ಬಳಕೆಯಿಂದ ಸಂತೃಪ್ತಿ ಹೊಂದಿದ ಕಾರಣದಿಂದಾಗಿ ಇತರೆ ಟೆಲಿಕಾಂ ಕಂಪನಿಗಳು ಮಾರುಕಟ್ಟೆಯಲ್ಲಿ 4G VoLTE ಸೇವೆಯನ್ನು ನೀಡು ಮುಂದಾಗಿದ್ದು, ಇದರಲ್ಲಿ ಏರ್‌ಟೆಲ್ ಮುಂಚುಣಿಯಲ್ಲಿದೆ. ವೊಡಾಫೋನ್ ಸಹ ಇದೇ ಹಾದಿಯಲ್ಲಿ ಸಾಗುತ್ತಿದೆ.

ಈಗಾಗಲೇ ದೇಶದದ ಪ್ರಮುಖ ನಗರಗಳಲ್ಲಿ 4G VoLTE ಸೇವೆಯನ್ನು ನೀಡುತ್ತಿರುವ ಏರ್‌ಟೆಲ್, ಹೆಚ್ಚಿನ VoLTE ಬಳಕೆದಾರರನ್ನು ಜಿಯೋ ಪಾಳಯದಿಂದ ಸೆಳೆಯುವ ಸುಲುವಾಗಿ ಹೊಸ ಮಾದರಿಯ ಸೇವೆಯನ್ನು ಏರ್‌ಟೆಲ್ ಆಂಭಿಸಿದೆ. ಏರ್‌ಟೆಲ್ VoLTE ಬೀಟಾ ಯೋಜನೆಯನ್ನು ಜಾರಿಗೆ ತಂದಿದ್ದು, ಇದನ್ನು ಬಳಕೆ ಮಾಡಿಕೊಂಡು ತನ್ನ VoLTE ಸೇವೆಯನ್ನು ಪರೀಕ್ಷಿಸುವವರಿಗೆ ಉಚಿತ ಡೇಟಾವನ್ನು ನೀಡುವ ಯೋಜನೆಗೆ ಏರ್‌ಟೆಲ್ ಚಾಲನೆ ನೀಡಿದೆ.

ಈ ಬಗ್ಗೆ ಆಡ್ ನೀಡಲು ಮುಂದಾಗಿದ್ದು, ಏರ್‌ಟೆಲ್ VoLTE ಬೀಟಾ ಯೋಜನೆಯ ಲಾಭಗಳ ಕುರಿತು ಮಾಹಿತಿಯನ್ನು ನೀಡಿದ್ದು, HD ವಾಯ್ಸ್‌ಕಾಲಿಂಗ್, ವೇಗವಾಗಿ ಕಾಲ್‌ಗಳು ಕನೆಕ್ಟ್‌ಆಗಲಿದ್ದು, ಅಲ್ಲದೇ ವೇಗವಾದ ಇಂಟರ್ನೆಟ್ ಸೇವೆಯನ್ನು ಪಡೆಯಬಹುದಾಗಿದೆ. ಸದ್ಯ ದೇಶದ ಹಲವು ಸರ್ಕಲ್‌ಗಳಲ್ಲಿ ಈ ಆಫರ್ ಜಾರಿಯಲ್ಲಿದ್ದು, ನೀವು ಸಹ VoLTE ಸ್ಮಾರ್ಟ್‌ಫೋನ್ ಬಳಕೆ ಮಾಡುತ್ತಿದ್ದರೇ ಈ ಸೇವೆಯ ಲಾಭವನ್ನು ಪಡೆಯಬಹುದಾಗಿದೆ.

ಏರ್‌ಟೆಲ್ VoLTE ಬೀಟಾ ಸೇವೆಯೂ ಎಲ್ಲಾ VoLTE ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಲಭ್ಯವಿಲ್ಲ ಎನ್ನಲಾಗಿದೆ. ಇದಕ್ಕಾಗಿ ಏರ್‌ಟೆಲ್ ತನ್ನ ವೆಬ್ ತಾಣದಲ್ಲಿ ಈ ಕುರಿತು ವರದಿಯನ್ನು ನೀಡಿದೆ. ಇದರಲ್ಲಿ ಮೊಟೊ ಸ್ಮಾರ್ಟ್‌ಫೋನ್‌ಗಳು ಕಾಣಿಸಿಕೊಂಡಿಲ್ಲ. ಉಳಿದಂತೆ ಆಪಲ್, ಶಿಯೋಮಿ ಸೇರಿದಂತೆ ಹಲವು ಸ್ಮಾರ್ಟ್‌ಫೋನ್‌ಗಳನ್ನು ಕಾಣಬಹುದಾಗಿದೆ.
ಓದಿರಿ: ಪೇಟಿಎಂ, ಫೋನ್‌ಪೇ, ತೇಜ್ ಬಿಟ್ಟು ವಾಟ್ಸ್‌ಆಪ್‌ನಲ್ಲಿ ಪೇಮೆಂಟ್ ಮಾಡಲು ಇದೊಂದು ಆಯ್ಕೆ ಸಾಕು..!
ನೀವು ಈ ಸೇವೆಯನ್ನು ಬಳಕೆ ಮಾಡಿಕೊಳ್ಳುವ ಸಲುವಾಗಿ airtel.in/volte-circle ತಾಣಕ್ಕೆ ಭೇಟಿ ನೀಡಬೇಕಾಗಿದ್ದು, ಅಲ್ಲಿ ಕೆಳ ಭಾಗದಲ್ಲಿ ವ್ಯಾಲೂಡೇಟ್ ಯೂವರ್ ಮೊಬೈಲ್ ನಂಬರ್ ಎನ್ನುವ ಸ್ಥಳದಲ್ಲಿ ನಿಮ್ಮ ಮೊಬೈಲ್ ನಂಬರ್ ಎಂಟ್ರಿ ಮಾಡಿದರೆ ಸಾಕು ಏರ್‌ಟೆಲ್ ನಿಮಗೆ ಈ ಹೊಸ ಸೇವೆಯೂ ದೊರೆಯಲಿದೆಯೇ ಇಲ್ಲವೇ ಎಂಬುದನ್ನು ತಿಳಿಸಲಿದೆ. ಹೀಗೆ ನೀವು ಈ ಸೇವೆಯನ್ನು ಬಳಕೆ ಮಾಡಿಕೊಳ್ಳಲು ಮುಂದಾದರೆ 10GB ಡೇಟಾದಂತೆ ನೀವು ಒಟ್ಟು 30GB 4G ಡೇಟಾವನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಏರ್‌ಟೆಲ್‌ಗೆ VoLTE ಸೇವೆಯನ್ನು ಉತ್ತಮ ಪಡಿಸಲು ಫೀಡ್‌ಬ್ಯಾಕ್ ಸಹ ನೀಡಬಹುದು.


Click it and Unblock the Notifications








