Subscribe to Gizbot

ಪೇಟಿಎಂ, ಫೋನ್‌ಪೇ, ತೇಜ್ ಬಿಟ್ಟು ವಾಟ್ಸ್‌ಆಪ್‌ನಲ್ಲಿ ಪೇಮೆಂಟ್‌ ಮಾಡಲು ಇದೊಂದು ಆಯ್ಕೆ ಸಾಕು..!

Written By:

ದೇಶದಲ್ಲಿ ನೋಟ್ ಬ್ಯಾನ್ ನಂತರದಲ್ಲಿ ಡಿಜಿಟಲ್ ವ್ಯವಹಾರವೂ ಹೆಚ್ಚಾದ ಕಾರಣದಿಂದಾಗಿ ಮೊಬೈಲ್ ಪೇಮೆಂಟ್ ಆಪ್‌ಗಳ ಬಳಕೆಯ ಪ್ರಮಾಣವೂ ತೀರಾ ಹೆಚ್ಚಾಯಿತು. ಈ ಹಿನ್ನಲೆಯಲ್ಲಿ ಗೂಗಲ್ ಸೇರಿದಂತೆ ಹಲವು ಪ್ರಮುಖ ಕಂಪನಿಗಳು ತಮ್ಮದೇ ಪೇಮೆಂಟ್ ಆಪ್‌ಗಳನ್ನು ಮಾರುಕಟ್ಟೆಗೆ ಪರಿಚಯ ಮಾಡಿದವು. ಇದೇ ಮಾದರಿಯಲ್ಲಿ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡ ಸೋಶಿಯಲ್ ಮೇಸೆಂಜಿಗ್ ದೈತ್ಯ ವಾಟ್ಸ್‌ಆಪ್ ಪೇಮೆಂಟ್ ಬಳಕೆದಾರರಿಗೆ ಮತ್ತೊಂದು ಹೊಸ ಮಾದರಿಯ ಸೇವೆಯನ್ನು ನೀಡಲು ಮುಂದಾಗಿದೆ.

 ವಾಟ್ಸ್‌ಆಪ್‌ನಲ್ಲಿ ಪೇಮೆಂಟ್‌ ಮಾಡಲು ಇದೊಂದು ಆಯ್ಕೆ ಸಾಕು..!

ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ UPI ಆಧಾರಿತ ಪೇಮೆಂಟ್ ಸೇವೆಯನ್ನು ನೀಡುತ್ತಿರುವ ಪೇಟಿಎಂ, ಗೂಗಲ್ ತೇಜ್, ಫೋನ್ ಪೇ ಆಪ್‌ಗಳಿಗೆ ನೇರವಾಗಿ ಸ್ಪರ್ಧೇಯನ್ನು ನೀಡಲು ಮುಂದಾಗಿರುವ ವಾಟ್ಸ್‌ಆಪ್ ಪೇಮೆಂಟ್‌, ಇನ್ನು ಮಾರುಕಟ್ಟೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯಚರಣೆಯನ್ನು ಆರಂಭಿಸಿಲ್ಲ ಎನ್ನಲಾಗಿದೆ. ಇನ್ನು ಪರೀಕ್ಷಾರ್ಥವಾಗಿ ಬೀಟಾ ಬಳಕೆದಾರರಿಗೆ ಮಾತ್ರವೇ ಪೇಮೆಂಟ್ ಮಾಡುವ ಸೇವೆಯನ್ನು ಪರಿಚಯಿಸಿದೆ. ಈ ಹಿಂದೆ ಕೇವಲ ಬ್ಯಾಂಕ್ ಆಕೌಂಟ್‌ಗಳಿಗೆ ಮಾತ್ರವೇ ಪೇಮೆಂಟ್ ಮಾಡುವ ಅವಕಾಶವನ್ನು ಮಾಡಿಕೊಟ್ಟಿದ್ದ ವಾಟ್ಸ್‌ಆಪ್ ಮತ್ತೊಂದು ಆಯ್ಕೆಯನ್ನು ನೀಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪ್ರಬಲ ಸ್ಪರ್ಧೇ:

ಪ್ರಬಲ ಸ್ಪರ್ಧೇ:

ಮಾರುಕಟ್ಟೆಯಲ್ಲಿ ವಾಟ್ಸ್‌ಆಪ್ ಪೇಮೆಂಟ್ ಪೂರ್ಣ ಪ್ರಮಾಣದಲ್ಲಿ ಸೇವೆಯನ್ನು ಆರಂಭಿಸಿದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಬೇರೆ ಎಲ್ಲಾ ಪೇಮೆಂಟ್ ಆಪ್‌ಗಳು ಹೆಚ್ಚಿನ ಪ್ರಮಾಣದ ಬಳಕೆದಾರರನ್ನು ಕಳೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಕಾರಣ ವಾಟ್ಸ್‌ಆಪ್ ಬಳಕೆದಾರರ ಸಂಖ್ಯೆಯೂ ದೇಶದಲ್ಲಿ 200 ಮಿಲಿಯನ್‌ಗಿಂತಲೂ ಅಧಿಕವಾಗಿದ್ದು, ಅವರೇಲ್ಲರೂ ಸುಲಭವಾಗಿ ವಾಟ್ಸ್‌ಆಪ್ ನಲ್ಲಿಯೇ ಪೇಮೆಂಟ್ ಸೇವೆಯನ್ನು ಬಳಸಿಕೊಳ್ಳಲಿದ್ದಾರೆ. ಇತರೆ ಆಪ್‌ಗಳ ಬಳಕೆದಾರರ ಸಂಖ್ಯೆಯೂ 50 ಮಿಲಿಯನ್‌ ಅನ್ನು ಮೀರುವುದಿಲ್ಲ.

ವಾಟ್ಸ್‌ಆಪ್ ಹವಾ:

ವಾಟ್ಸ್‌ಆಪ್ ಹವಾ:

ಈ ಹಿಂದೆ ವಾಟ್ಸ್‌ಆಪ್ ವಿಡಿಯೋ ಕಾಲಿಂಗ್ ಸೇವೆಯನ್ನು ಬಿಡುಗಡೆ ಮಾಡಿದ್ದ ಸಂದರ್ಭದಲ್ಲಿಯೂ ಸಹ ಇದೇ ಮಾದರಿಯಲ್ಲಿ ಮಾರುಕಟ್ಟೆಯಲ್ಲಿ ವಿಡಿಯೋ ಕಾಲಿಂಗ್‌ಗಾಗಿಯೇ ಇದ್ದಂತಹ ಹಲವು ಆಪ್‌ಗಳು ತಮ್ಮ ಆಸ್ತಿತ್ವವನ್ನು ಉಳಿಸಿಕೊಳ್ಳಲು ಸಾಕಷ್ಟು ಪರದಾಡುವಂತ ಸ್ಥಿತಿಯೂ ನಿರ್ಮಾಣವಾಗಿತ್ತು. ಈ ಹಿನ್ನಲೆಯಲ್ಲಿ ಫೇಸ್‌ಬುಕ್ ಒಡೆತನದ ವಾಟ್ಸ್‌ಆಪ್ ಬಿಡುಗಡೆ ಮಾಡುತ್ತಿರುವ ವಾಟ್ಸ್‌ಆಪ್ ಸಹ ಇದೇ ಮಾದರಿಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಲಿದೆ.

TEZ App : ಗೂಗಲ್ ಭಾರತೀಯರಿಗಾಗಿ ಗೂಗಲ್‌ನಿಂದ Tez ಪೇಮೆಂಟ್ ಆಪ್
ಒಂದೇ ಆಪ್‌ನಲ್ಲಿ ಎಲ್ಲಾ ಸೇವೆ:

ಒಂದೇ ಆಪ್‌ನಲ್ಲಿ ಎಲ್ಲಾ ಸೇವೆ:

ವಾಟ್ಸ್‌ಆಪ್ ಒಂದಿದ್ದರೇ ಎಲ್ಲಾ ಮಾದರಿಯ ಸೇವೆಯನ್ನು ಪಡೆಯಬಹುದಾಗಿದೆ. ಪೇಮೆಂಟ್, ವಿಡಿಯೋ-ಆಡಿಯೋ ಕಾಲಿಂಗ್, ಚಾಟಿಂಗ್, ಲೈವ್ ಲೋಕೆಷನ್ ಶೇರಿಂಗ್, ಫೋಟೋ-ವಿಡಿಯೋ ಶೇರಿಂಗ್, ಗ್ರೂಪ್ ಚಾಟಿಂಗ್, ಬಿಸ್ನೆಸ್ ಸೇರಿಂದಂತೆ ಹಲವು ಕಾರ್ಯಗಳಿಗೆ ಇದು ಬಳಕೆಯಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
the much-awaited feature has arrived for WhatsApp users. The latest beta WhatsApp update for Android users has added QR Code payments option, meaning a user can now payments by scanning QR Codes. Since the rollout of WhatsApp Payment service. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot