ಏರ್‌ಟೆಲ್ VS ಜಿಯೋ 249ರೂ. ಪ್ಲ್ಯಾನ್: ರೀಚಾರ್ಜ್‌ಗೆ ನಿಮ್ಮ ಆಯ್ಕೆ ಯಾವುದು?
ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಇದೀಗ ಸಾಕಷ್ಟು ಅಪ್‌ಡೇಟ್‌ಗಳು ನಡೆದಿವೆ. ಪ್ರಮುಖ ಟೆಲಿಕಾಂ ಸಂಸ್ಥೆಗಳು ಚಂದಾದಾರರ ಸಂಖ್ಯೆ ಹೆಚ್ಚಿಸಿಕೊಳ್ಳಲು ಅಗ್ಗದ ಬೆಲೆಯಲ್ಲಿ ಹಲವು ಪ್ರಯೋಜನಗಳ ಪ್ರೀಪೇಯ್ಡ್ ಯೋಜನೆಗಳನ್ನು ಪರಿಚಯಿಸಿವೆ. ಆ ಪೈಕಿ ಮುಖ್ಯವಾಗಿ ರಿಲಾಯನ್ಸ್ ಜಿಯೋ ಹಾಗೂ ಭಾರ್ತಿ ಏರ್‌ಟೆಲ್ ಸಂಸ್ಥೆಗಳು ಹೆಚ್ಚು ಟ್ರೆಂಡ್‌ನಲ್ಲಿ ಕಾಣಿಸಿಕೊಂಡಿದ್ದು, ಈ ಎರಡು ಟೆಲಿಕಾಂಗಳು ಬಜೆಟ್ ದರದಲ್ಲಿ ಅತ್ಯುತ್ತಮ ವ್ಯಾಲಿಡಿಟಿ/ಡೇಟಾ ಪ್ಲ್ಯಾನ್‌ಗಳು ಆಕರ್ಷಕ ಅನಿಸುತ್ತದೆ.

ಹೌದು, ಜಿಯೋ ಹಾಗೂ ಏರ್‌ಟೆಲ್ ಕೆಲವು ಪ್ರೀಪೇಯ್ಡ್ ಯೋಜನೆಗಳು ಗ್ರಾಹಕರನ್ನು ಹೆಚ್ಚಾಗಿ ಸೆಳೆದಿವೆ. ಮುಖ್ಯವಾಗಿ 249ರೂ. ಬೆಲೆಯ ಪ್ರೀಪೇಯ್ಡ್ ಯೋಜನೆಯು ಪ್ರತಿದಿನ ಡೇಟಾ ಸೌಲಭ್ಯ, ಅನಿಯಮಿತ ವಾಯಿಸ್ ಕರೆ, ಎಸ್‌ಎಮ್‌ಎಸ್ ಹಾಗೂ ಅಧಿಕ ವ್ಯಾಲಿಡಿಟಿ ಅವಧಿಯಂತಹ ಪ್ರಯೋಜನಗಳನ್ನು ಒಳಗೊಂಡಿದ್ದು, ಅನೇಕ ಚಂದಾದಾರರನ್ನು ಸೆಳೆದಿದೆ. ಹಾಗಾದರೇ ಜಿಯೋ ಮತ್ತು ಏರ್‌ಟೆಲ್ ಟೆಲಿಕಾಂನ 249ರೂ. ಯೋಜನೆಯಲ್ಲಿ ಯಾವುದು ಬೆಸ್ಟ್?..ಪ್ರಯೋಜನಗಳೆನು?..ಮುಂದೆ ಓದಿರಿ.

ಭಾರ್ತಿ ಏರ್‌ಟೆಲ್ 249ರೂ. ಪ್ರೀಪೇಯ್ಡ್ ಯೋಜನೆ
ಏರ್‌ಟೆಲ್ ಟೆಲಿಕಾಂನ. 249ರೂ ಪ್ರೀಪೇಯ್ಡ್ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಪ್ರತಿದಿನ 1.5GB ಡೇಟಾ ಪ್ರಯೋಜನ ದೊರೆಯಲಿದೆ. ಹಾಗೆಯೇ ಈ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿಯ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಅನಿಯಮಿತ ವಾಯಿಸ್ ಕರೆ ಮಾಡುವ ಪ್ರಯೋಜನವಿದೆ. ಜೊತೆಗೆ ದಿನಕ್ಕೆ 100 ಎಸ್‌ಎಂಎಸ್ ಪ್ರಯೋಜನ ಸಹ ಸಿಗಲಿದೆ. ಹೆಚ್ಚುವರಿಯಾಗಿ ವೆಂಕ್ ಮ್ಯೂಸಿಕ್, ಹೆಲೋ ಟ್ಯೂನ್ ಲಭ್ಯ.

ರಿಲಾಯನ್ಸ್ ಜಿಯೋ 249ರೂ. ಪ್ರೀಪೇಯ್ಡ್ ಯೋಜನೆ
ಜಿಯೋದ ಈ ಪ್ಲ್ಯಾನಿನಲ್ಲಿ ಪ್ರತಿದಿನ 2GB ಇಂಟರ್ನೆಟ್ ಪ್ರಯೋಜನ ಸಿಗುತ್ತದೆ. ಹಾಗೆಯೇ ಜಿಯೋದಿಂದ ಜಿಯೋ ಕರೆಗಳು ಸೇರಿದಂತೆ ಜಿಯೋದಿಂದ ಇತರೆ ನೆಟವರ್ಕ ಕರೆಗಳು ಸಹ ಸಂಪೂರ್ಣ ಅನಿಯಮಿತ ಉಚಿತ. ಇದರೊಂದಿಗೆ ಪ್ರತಿದಿನ 100 ಎಸ್ಎಮ್ಎಸ್ ಸೌಲಭ್ಯ ಲಭ್ಯ. ಈ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿ ಹೊಂದಿದೆ. ಈ ಯೋಜನೆಯಲ್ಲಿ ಒಟ್ಟು 56 GB ಡೇಟಾ ಸಿಗಲಿದ್ದು, ಜಿಯೋ ಆಪ್ಸ್ ಸಹ ಲಭ್ಯ.

ಈ ಯೋಜನೆಗಳ ಪ್ರಯೋಜನಗಳಲ್ಲಿ ಭಿನ್ನತೆ
ಜಿಯೋ ಹಾಗೂ ಏರ್‌ಟೆಲ್ ಟೆಲಿಕಾಂಗಳ ಬಹುತೇಕ ಯೋಜನೆಗಳಲ್ಲಿ ಸಾಮ್ಯತೆ ಕಂಡು ಬಂದರೂ, ಕೆಲವು ಭಿನ್ನ ಪ್ರಯೋಜನಗಳು ಕಾಣಿಸುತ್ತವೆ. ಸದ್ಯ 249ರೂ. ಅಗ್ಗದ ಬೆಲೆಯ ರೀಚಾರ್ಜ್ ಯೋಜನೆಯಲ್ಲಿ ಎರಡು ಟೆಲಿಕಾಂಗಳು ಡೈಲಿ ಡೇಟಾ ಪ್ರಯೋಜನದಲ್ಲಿ ಭಿನ್ನತೆ ಹೊಂದಿವೆ. ಆದರೆ ಎಸ್‌ಎಮ್‌ಎಸ್ ಸೌಲಭ್ಯ, ವ್ಯಾಲಿಡಿಟಿ ಹಾಗೂ ವಾಯಿಸ್ ಕರೆ ಪ್ರಯೋಜನಗಳಲ್ಲಿ ಭಿನ್ನತೆ ಇಲ್ಲ.

ರೀಚಾರ್ಜ್ ಮಾಡಿಸಲು ಯಾವುದು ಉತ್ತಮ?
249ರೂ. ಪ್ರೀಪೇಯ್ಡ್ ಯೋಜನೆಯಲ್ಲಿ ಜಿಯೋ ಹಾಗೂ ಏರ್‌ಟೆಲ್ ಟೆಲಿಕಾಂಗಳು ಆಕರ್ಷಕ ಪ್ರಯೋಜನ ನೀಡಿದ್ದು, ಪ್ರತಿದಿನ ಡೇಟಾ ಆಫರ್ ಹೊಂದಿವೆ. ಆದರೆ ಅಧಿಕ ಡೇಟಾ ಅಗತ್ಯ ಇದ್ರೆ ಜಿಯೋ ಯೋಜನೆ ರೀಚಾರ್ಜ್‌ಗೆ ಉತ್ತಮ ಏಕೆಂದರೇ ಇದು ಡೈಲಿ 2GB ಡೇಟಾ ಪ್ರಯೋಜನ ಪಡೆದಿದೆ. ಏರ್‌ಟೆಲ್ 1.5GB ಡೇಟಾ ಪಡೆದಿದೆ. ಉಳಿದಂತೆ ಹೆಚ್ಚಿನ ಭಿನ್ನತೆಗಳಿಲ್ಲ.

ವಿ ಟೆಲಿಕಾಂ 299ರೂ. ಪ್ರೀಪೇಯ್ಡ್ ಯೋಜನೆ
ವಿ ಟೆಲಿಕಾಂನ 299ರೂ. ಪ್ರೀಪೇಯ್ಡ್ ಪ್ಲ್ಯಾನಿನಲ್ಲಿ ಪ್ರತಿದಿನ 2GB ಡೇಟಾ ಲಭ್ಯವಿದೆ. ಆದರೆ ಸದ್ಯ ಈ ಯೋಜನೆಯು ಡಬಲ್ ಡೇಟಾ ಆಫರ್ ಪಡೆದಿದೆ. ಹೀಗಾಗಿ ಹೆಚ್ಚುವರಿ 2GB ಡೇಟಾ ಸೇರಲಿದ್ದು, ಒಟ್ಟು 4GB ಡೇಟಾ ಸೌಲಭ್ಯ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಸಿಗಲಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

ವಿ ಟೆಲಿಕಾಂನ 449ರೂ. ಪ್ರೀಪೇಯ್ಡ್ ಪ್ಲ್ಯಾನ್
ವಿ ಟೆಲಿಕಾಂನ 449ರೂ. ಪ್ರೀಪೇಯ್ಡ್ ಪ್ಲ್ಯಾನ್ ಸಹ ಪ್ರತಿದಿನ 2GB ಡೇಟಾ ಲಭ್ಯವಿದೆ. ಆದರೆ ಸದ್ಯ ಈ ಯೋಜನೆಯು ಡಬಲ್ ಡೇಟಾ ಆಫರ್ ಪಡೆದಿದೆ. ಹೀಗಾಗಿ ಹೆಚ್ಚುವರಿ 2GB ಡೇಟಾ ಸೇರಲಿದ್ದು, ಒಟ್ಟು 4GB ಡೇಟಾ ಸೌಲಭ್ಯ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.


Click it and Unblock the Notifications








