Home
ಸುದ್ದಿಜಾಲ

ಜಿಯೋ V/S ಏರ್‌ಟೆಲ್‌: 500ರೂ. ಒಳಗೆ ಯಾವ ಪ್ಲ್ಯಾನ್‌ ಬೆಸ್ಟ್‌!..ಡೇಟಾ ಎಷ್ಟು?

ಭಾರತೀಯ ಟೆಲಿಕಾಂ ವಲಯದಲ್ಲಿ ಜಿಯೋ ಮತ್ತು ಏರ್‌ಟೆಲ್ ಟೆಲಿಕಾಂ ಸಂಸ್ಥೆಗಳು ತಮ್ಮ ಚಂದಾದಾರಿಗೆ ಆಕರ್ಷಕ ಯೋಜನೆಗಳನ್ನು ಪರಿಚಯಿಸುತ್ತಾ ಸಾಗಿವೆ. ಆದರೆ ಬಜೆಟ್‌ ಬೆಲೆಯಲ್ಲಿ ಕೆಲವು ಪ್ರೀಪೇಯ್ಡ್‌ ಯೋಜನೆಗಳು ಅಧಿಕ ಪ್ರಯೋಜನಗಳೊಂದಿಗೆ ಗಮನ ಸೆಳೆದಿವೆ. ಆ ಪೈಕಿ ಬಹುತೇಕ ಬಳಕೆದಾರರು 500ರೂ. ಬೆಲೆಯ ಒಳಗಿನ ಪ್ರೀಪೇಯ್ಡ್‌ ಪ್ಲ್ಯಾನ್‌ ರೀಚಾರ್ಜ್‌ಗೆ ಮುಂದಾಗುತ್ತಾರೆ.

ಹೌದು, 500ರೂ. ಒಳಗೆ ಜಿಯೋ ಮತ್ತು ಏರ್‌ಟೆಲ್ ಟೆಲಿಕಾಂಗಳ 479ರೂ. ಬೆಲೆಯ ಪ್ರೀಪೇಯ್ಡ್‌ ಪ್ಲ್ಯಾನ್‌ ಹೈಲೈಟ್‌ ಆಗಿದೆ. ಈ ಎರಡು ಟೆಲಿಕಾಂಗಳ ಈ ಮೊತ್ತದ ರೀಚಾರ್ಜ್‌ ಯೋಜನೆಯಲ್ಲಿ ಅಧಿಕ ದೈನಂದಿನ ಡೇಟಾ, ಆಕರ್ಷಕ ವ್ಯಾಲಿಡಿಟಿ, ಅನಿಯಮಿತ ವಾಯಿಸ್‌ ಕರೆ ಹಾಗೂ ಎಸ್‌ಎಮ್‌ಎಸ್‌ ಪ್ರಯೋಜನಗಳು ಸೇರಿವೆ. ಹಾಗೆಯೇ ಹೆಚ್ಚುವರಿಯಾಗಿ ಓಟಿಟಿ ಸೌಲಭ್ಯಗಳು ಸಿಗಲಿವೆ.

ಜಿಯೋ V/S ಏರ್‌ಟೆಲ್‌: 500ರೂ. ಒಳಗೆ ಯಾವ ಪ್ಲ್ಯಾನ್‌ ಬೆಸ್ಟ್‌!..ಡೇಟಾ ಎಷ್ಟು?

ಅದಾಗ್ಯೂ, ಜಿಯೋ ಮತ್ತು ಏರ್‌ಟೆಲ್‌ನ ಈ ಎರಡು ಯೋಜನೆಗಳಲ್ಲಿ ಕೆಲವು ಭಿನ್ನತೆಗಳು ಕಾಣಬಹುದಾಗಿದೆ. ಹಾಗಾದರೇ ಜಿಯೋ 479ರೂ. ಪ್ರಿಪೇಯ್ಡ್‌ ಪ್ಲ್ಯಾನ್ ಮತ್ತು ಏರ್‌ಟೆಲ್ 479ರೂ. ಪ್ರಿಪೇಯ್ಡ್‌ ಪ್ಲ್ಯಾನಿನಲ್ಲಿ ರೀಚಾರ್ಜ್ ಮಾಡಿಸಲು ಯಾವುದು ಬೆಸ್ಟ್‌? ಈ ಪ್ರಿಪೇಯ್ಡ್‌ ಪ್ಲ್ಯಾನ್‌ಗಳ ಒಟ್ಟಾರೇ ಪ್ರಯೋಜನಗಳೆನು ಎನ್ನುವುದನ್ನು ಮುಂದೆ ತಿಳಿಯೋಣ ಬನ್ನಿರಿ.

ಜಿಯೋ 479ರೂ. ಪ್ಲ್ಯಾನ್ ಪ್ರಯೋಜನಗಳು : ಜಿಯೋ ಟೆಲಿಕಾಂನ ಈ ಯೋಜನೆಯು ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿರುವ ಜಿಯೋದ 399ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಬಳಕೆದಾರರಿಗೆ ಪ್ರತಿದಿನ 1.5 GB ಡೇಟಾ ಸೌಲಭ್ಯವನ್ನು ಒದಗಿಸುತ್ತದೆ. ಇದರೊಂದಿಗೆ ಜಿಯೋ ದಿಂದ ಜಿಯೋಗೆ ಸೇರಿದಂತೆ ಇತರೆ ನೆಟವರ್ಕ್‌ ಕರೆಗಳು ಸಹ ಅನಿಯಮಿತ ಉಚಿತ ಸೌಲಭ್ಯ ಪಡೆದಿವೆ. ಇದರೊಂದಿಗೆ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ನೀಡುತ್ತದೆ.

ಜಿಯೋ V/S ಏರ್‌ಟೆಲ್‌: 500ರೂ. ಒಳಗೆ ಯಾವ ಪ್ಲ್ಯಾನ್‌ ಬೆಸ್ಟ್‌!..ಡೇಟಾ ಎಷ್ಟು?

ಏರ್‌ಟೆಲ್ 479ರೂ. ಪ್ಲ್ಯಾನ್ ಪ್ರಯೋಜನಗಳ : ಏರ್‌ಟೆಲ್ ಟೆಲಿಕಾಂನ ಈ ಯೋಜನೆಯು 479ರೂ. ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ FUP ಲಿಮಿಟ್‌ ಇಲ್ಲದೇ ಅನಿಯಮಿತ ವಾಯಿಸ್‌ ಕರೆಗಳ ಪ್ರಯೋಜನೆ ಲಭ್ಯವಾಗಲಿದೆ. ಇದರೊಂದಿಗೆ ಬಳಕೆದಾರರು ಪ್ರತಿದಿನ 1.5 GB ಡೇಟಾ ಪ್ರಯೋಜನ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ ಸೌಲಭ್ಯಗಳು ಲಭ್ಯವಾಗಲಿವೆ. ಜೊತೆಗೆ ಏರ್‌ಟೆಲ್ Xstream ಪ್ರೀಮಿಯಂ, ವಿಂಕ್ ಮ್ಯೂಸಿಕ್, ಫಾಸ್ಟ್ಯಾಗ್ ಕ್ಯಾಶ್‌ಬ್ಯಾಕ್ ಸೇವೆಗಳು ಲಭ್ಯ.

ರೀಚಾರ್ಜ್‌ ಮಾಡಲು ಯಾವ ಪ್ಲ್ಯಾನ್‌ ಉತ್ತಮ? : ಜಿಯೋ 479ರೂ ಮತ್ತು ಏರ್‌ಟೆಲ್‌ 479ರೂ. ಪ್ಲ್ಯಾನ್‌ ಗಳು ಆಕರ್ಷಕ ಸೌಲಭ್ಯ ಒಳಗೊಂಡಿವೆ. ಜಿಯೋ ಮತ್ತು ಏರ್‌ಟೆಲ್‌ ಟೆಲಿಕಾಂಗಳ ಈ ಯೋಜನೆಗಳು ಸಾಮ್ಯತೆ ಎನಿಸಿದರೂ, ಹೆಚ್ಚುವರಿ ಪ್ರಯೋಜನಗಳಲ್ಲಿ ಭಿನ್ನತೆ ಪಡೆದಿವೆ. ಈ ಎರಡು ಪ್ಲ್ಯಾನ್‌ಗಳು ಡೇಟಾ, ವ್ಯಾಲಿಡಿಟಿ ಸೌಲಭ್ಯ ಬಹುತೇಕ ಒಂದೇ ಆಗಿದೆ.

ಜಿಯೋ V/S ಏರ್‌ಟೆಲ್‌: 500ರೂ. ಒಳಗೆ ಯಾವ ಪ್ಲ್ಯಾನ್‌ ಬೆಸ್ಟ್‌!..ಡೇಟಾ ಎಷ್ಟು?

ಏರ್‌ಟೆಲ್‌ ಈ ಯೋಜನೆಯಲ್ಲಿ ಫಾಸ್ಟ್ಯಾಗ್‌ ರೀಚಾರ್ಜ್‌ನಲ್ಲಿ 100ರೂ, ಕ್ಯಾಶ್‌ಬ್ಯಾಕ್‌ ಸೌಲಭ್ಯ ನೀಡುತ್ತದೆ. ಉಚಿಯ ಹೆಲೊ ಟ್ಯೂನ್‌ ಸೌಲಭ್ಯ ಇದರೊಂದಿಗೆ ವೆಂಕ್ ಮ್ಯೂಸಿಕ್‌ ಸೌಲಭ್ಯ ಸಹ ಗ್ರಾಹಕರಿಗೆ ದೊರೆಯುತ್ತದೆ. ಇನ್ನು ಜಿಯೋ ಪ್ಲ್ಯಾನ್‌ ಸಹ ಜಿಯೋ ಟಿವಿ, ಜಿಯೋ ಸಿನಿಮಾ ಸೇರಿದಂತೆ ಇತರೆ ಜಿಯೋ ಆಪ್‌ಗಳನ್ನು ಒದಗಿಸುತ್ತದೆ.

500ರೂ. ಪ್ರೈಸ್‌ಟ್ಯಾಗ್‌ನ ಒಳಗೆ ಇತರೆ ಆಕರ್ಷಕ ಪ್ರೀಪೇಯ್ಡ್‌ ಯೋಜನೆಗಳ ಆಯ್ಕೆ ಹೊಂದಿವೆ. ಆದರೆ ದೈನಂದಿನ ಡೇಟಾ ಹಾಗೂ ದೀರ್ಘಾವಧಿಯ ವ್ಯಾಲಿಡಿಟಿ ಗಮನಿಸುವುದಾದರೆ ಜಿಯೋ ಹಾಗೂ ಏರ್‌ಟೆಲ್‌ ಟೆಲಿಕಾಂಗಳಲ್ಲಿ ಈ 479ರೂ. ಪ್ಲ್ಯಾನ್‌ ಆಕರ್ಷಕ ಎನಿಸುತ್ತದೆ. ಈ ಯೋಜನೆಯು ಅನಿಯಮಿತ ವಾಯಿಸ್‌ ಕರೆ ಹಾಗೂ ಎಸ್‌ಎಮ್‌ಎಸ್‌ ಸೌಲಭ್ಯ ಪಡೆದಿದೆ.

Best Mobiles in India

English summary
Airtel vs Jio Rs 479 Plan: Benefits comparison, data, validity and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+