Home
ಸುದ್ದಿಜಾಲ

ಜಿಯೋ ಮತ್ತು ಏರ್‌ಟೆಲ್‌ 719ರೂ. ಪ್ಲ್ಯಾನ್: ಡೇಟಾ ಎಷ್ಟು?..ರೀಚಾರ್ಜ್‌ಗೆ ಯಾವುದು ಯೋಗ್ಯ?

ದೇಶದಲ್ಲಿ ಟೆಲಿಕಾಂ ವಲಯದಲ್ಲಿ ಜಿಯೋ ಮತ್ತು ಏರ್‌ಟೆಲ್ ಟೆಲಿಕಾಂ ಸಂಸ್ಥೆಗಳು ತಮ್ಮ ಚಂದಾದಾರಿಗೆ ಆಕರ್ಷಕ ಯೋಜನೆಗಳನ್ನು ಪರಿಚಯಿಸುತ್ತಾ ಮುನ್ನಡೆದಿವೆ. ಅವುಗಳಲ್ಲಿ ಪ್ರೀಪೇಯ್ಡ್‌ ಯೋಜನೆಗಳು ಹಾಗೂ ಪೋಸ್ಟ್‌ಪೇಯ್ಡ್‌ ಯೋಜನೆಗಳು ಸೇರಿವೆ. ಆದರೆ ಗ್ರಾಹಕ ಸ್ನೇಹಿ ಬೆಲೆಯಲ್ಲಿ ಕೆಲವು ಪ್ರೀಪೇಯ್ಡ್‌ ಯೋಜನೆಗಳು ಅಧಿಕ ಪ್ರಯೋಜನಗಳೊಂದಿಗೆ ಗಮನ ಸೆಳೆದಿವೆ. ಆ ಪೈಕಿ ಬಹುತೇಕ ಬಳಕೆದಾರರು 719ರೂ. ಬೆಲೆಯ ಪ್ರೀಪೇಯ್ಡ್‌ ಪ್ಲ್ಯಾನ್‌ ರೀಚಾರ್ಜ್‌ಗೆ ಮುಂದಾಗುತ್ತಾರೆ.

ದೈನಂದಿನ

ಹೌದು, ಜಿಯೋ ಮತ್ತು ಏರ್‌ಟೆಲ್ ಟೆಲಿಕಾಂ ಸಂಸ್ಥೆಗಳು 719ರೂ. ಬೆಲೆಯ ಪ್ರೀಪೇಯ್ಡ್‌ ಪ್ಲ್ಯಾನ್‌ ಆಯ್ಕೆ ಹೊಂದಿವೆ. ಈ ಎರಡು ಟೆಲಿಕಾಂಗಳ ಈ ಮೊತ್ತದ ರೀಚಾರ್ಜ್‌ ಯೋಜನೆಯಲ್ಲಿ ಅಧಿಕ ದೈನಂದಿನ ಡೇಟಾ, ಆಕರ್ಷಕ ವ್ಯಾಲಿಡಿಟಿ, ಅನಿಯಮಿತ ವಾಯಿಸ್‌ ಕರೆ ಹಾಗೂ ಎಸ್‌ಎಮ್‌ಎಸ್‌ ಪ್ರಯೋಜನಗಳು ಸೇರಿವೆ. ಹಾಗೆಯೇ ಹೆಚ್ಚುವರಿಯಾಗಿ ಓಟಿಟಿ ಸೌಲಭ್ಯಗಳು ಸಿಗಲಿವೆ. ಆದರೂ ಕೆಲವು ಭಿನ್ನತೆಗಳು ಕಾಣಬಹುದಾಗಿದೆ. ಹಾಗಾದರೇ ಜಿಯೋ ಮತ್ತು ಏರ್‌ಟೆಲ್ 719ರೂ. ಪ್ರಿಪೇಯ್ಡ್‌ ಪ್ಲ್ಯಾನಿನಲ್ಲಿ ಯಾವುದು ಯೋಗ್ಯ? ಈ ಯೋಜನೆಗಳ ಒಟ್ಟಾರೇ ಪ್ರಯೋಜನಗಳೆನು ಎನ್ನುವುದನ್ನು ಮುಂದೆ ತಿಳಿಯೋಣ ಬನ್ನಿರಿ.

ಜಿಯೋದ 719ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು

ಜಿಯೋದ 719ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು

ಜಿಯೋ ಟೆಲಿಕಾಂನ 719ರೂ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದುಕೊಂಡಿದೆ. ಈ ಅವಧಿ ಯಲ್ಲಿ ಪ್ರತಿದಿನ 2 GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದ್ದು, ಇದರೊಂದಿಗೆ ಜಿಯೋ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ ಸಿಗಲಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 168GB ಡೇಟಾ ಲಭ್ಯ ಆಗುತ್ತದೆ. ಹೆಚ್ಚುವರಿಯಾಗಿ ಜಿಯೋ ಆಪ್‌ಗಳ ಸೌಲಭ್ಯ ದೊರೆಯುತ್ತದೆ.

ಏರ್‌ಟೆಲ್‌ 719ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು

ಏರ್‌ಟೆಲ್‌ 719ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು

ಏರ್‌ಟೆಲ್‌ ಟೆಲಿಕಾಂನ 719ರೂ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದುಕೊಂಡಿದೆ. ಈ ಅವಧಿ ಯಲ್ಲಿ ಪ್ರತಿದಿನ 1.5 GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದ್ದು, ಇದರೊಂದಿಗೆ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಸಿಗಲಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 126GB ಡೇಟಾ ಲಭ್ಯ ಆಗುತ್ತದೆ. ಹೆಚ್ಚುವರಿಯಾಗಿ ಏರ್‌ಟೆಲ್‌ ವೆಂಕ್ ಮ್ಯೂಸಿಕ್, ಫಾಸ್ಟ್‌ಟ್ಯಾಗ್ ಕ್ಯಾಶ್‌ಬ್ಯಾಕ್, ಉಚಿತ ಹೆಲೋ ಟ್ಯೂನ್‌ ಸೌಲಭ್ಯ ದೊರೆಯುತ್ತದೆ.

ರೀಚಾರ್ಜ್‌ಗೆ ಯಾವುದು ಉತ್ತಮ?

ರೀಚಾರ್ಜ್‌ಗೆ ಯಾವುದು ಉತ್ತಮ?

ಜಿಯೋ ಮತ್ತು ಏರ್‌ಟೆಲ್ ಟೆಲಿಕಾಂ ಈ ಎರಡು ಕಂಪನಿಗಳು 719ರೂ ಪ್ರೀಪೇಯ್ಡ್‌ ಪ್ಲ್ಯಾನ್ ನಲ್ಲಿ ಆಕರ್ಷಕ ಸೌಲಭ್ಯಗಳನ್ನು ನೀಡಿವೆ. ಎರಡು ಟೆಲಿಕಾಂಗಳು ಬಹುತೇಕ ಸಾಮ್ಯತೆಯ ಪ್ರಯೋಜನ ಹೊಂದಿದ್ದರೂ, ಭಿನ್ನತೆ ಇದೆ. ಎರಡು ಪ್ಲ್ಯಾನ್‌ ಗಳು 84 ದಿನಗಳ ವ್ಯಾಲಿಡಿಟಿ ಒದಗಿಸಿವೆ. ಆದರೆ ಡೇಟಾ ವಿಷಯಕ್ಕೆ ಬಂದಾಗ ಜಿಯೋ ಉತ್ತಮ ಅನಿಸಲಿದೆ. ಇದು ಪ್ರತಿದಿನ 2GB ಡೇಟಾ ನೀಡುತ್ತದೆ. ಏರ್‌ಟೆಲ್‌ ಟೆಲಿಕಾಂನಲ್ಲಿ ಪ್ರತಿದಿನ 1.5 GB ಡೇಟಾ ಪ್ರಯೋಜನ ಲಭ್ಯ. ಒಂದು ವೇಳೆ ಹೆಚ್ಚಿನ ಡೇಟಾ ಅಗತ್ಯ ಇಲ್ಲ ಎನ್ನುವುದಾದರೇ ಏರ್‌ಟೆಲ್‌ ಆಕರ್ಷಕ ಎನಿಸಲಿದೆ.

ಜಿಯೋದ 666ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು

ಜಿಯೋದ 666ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು

ಜಿಯೋ ಟೆಲಿಕಾಂನ 666ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿ ಯಲ್ಲಿ ಪ್ರತಿದಿನ 1.5 GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ದೊರೆಯುತ್ತದೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ.

ಏರ್‌ಟೆಲ್‌ 666ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು

ಏರ್‌ಟೆಲ್‌ 666ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು

ಏರ್‌ಟೆಲ್‌ ಟೆಲಿಕಾಂನ 666ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 77 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿ ಯಲ್ಲಿ ಪ್ರತಿದಿನ 1.5 GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ದೊರೆಯುತ್ತದೆ. ಏರ್‌ಟೆಲ್‌ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ.

ಜಿಯೋದ 2879ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು

ಜಿಯೋದ 2879ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು

ಜಿಯೋದ ಈ ಪ್ರೀಪೇಯ್ಡ್‌ ಪ್ಲ್ಯಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಪ್ರತಿದಿನ 2 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ.

ಏರ್‌ಟೆಲ್‌ನ 2999ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು

ಏರ್‌ಟೆಲ್‌ನ 2999ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು

ವಿ ಟೆಲಿಕಾಂನ ಈ ಪ್ರೀಪೇಯ್ಡ್‌ ಪ್ಲ್ಯಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಪ್ರತಿದಿನ 2 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಏರ್‌ಟೆಲ್‌ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ.

ಜಿಯೋದ 2879ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು

ಜಿಯೋದ 2879ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು

ಜಿಯೋದ ಈ ಪ್ರೀಪೇಯ್ಡ್‌ ಪ್ಲ್ಯಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಪ್ರತಿದಿನ 2 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ.

ಏರ್‌ಟೆಲ್‌ನ 1799ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು

ಏರ್‌ಟೆಲ್‌ನ 1799ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು

ಜಿಯೋದ ಈ ಪ್ರೀಪೇಯ್ಡ್‌ ಪ್ಲ್ಯಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಪ್ರತಿದಿನ 24 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಏರ್‌ಟೆಲ್‌ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ.

Best Mobiles in India

English summary
Airtel VS Jio Rs 19 Plan: What Are The Benefits and Which Is Best To Recharge.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+