Home
ಸುದ್ದಿಜಾಲ

Jio vs Airtel vs Vi: ಅಧಿಕ ಡೇಟಾ ಜೊತೆ ವಾರ್ಷಿಕ ವ್ಯಾಲಿಡಿಟಿಗೆ ಯಾವ ಪ್ಲ್ಯಾನ್‌ ಬೆಸ್ಟ್‌?

ದೇಶದ ಖಾಸಗಿ ಟೆಲಿಕಾಂ ಸಂಸ್ಥೆಗಳು ದರ ಏರಿಕೆ ಮಾಡಿ ಭಾರೀ ಅಚ್ಚರಿ ನೀಡಿವೆ. ಅದಾಗ್ಯೂ, ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಸರ್ಕಸ್ ನಡೆಸಿವೆ. ಸದ್ಯ ದೀರ್ಘಾವಧಿ ವ್ಯಾಲಿಡಿಟಿ ಯೋಜನೆಗಳು ಹೆಚ್ಚು ಗಮನ ಸೆಳೆದಿವೆ. ಆ ಪೈಕಿ ಬಹುತೇಕ ಚಂದಾದಾರಿಗೆ ವಾರ್ಷಿಕ ವ್ಯಾಲಿಡಿಟಿ ಇರುವ ಪ್ರೀಪೇಯ್ಡ್‌ ಯೋಜನೆಗಳನ್ನು ರೀಚಾರ್ಜ್‌ ಮಾಡಲು ಮುಂದಾಗುತ್ತಾರೆ. ಜಿಯೋ, ಏರ್‌ಟೆಲ್‌ ಹಾಗೂ ವಿ ಟೆಲಿಕಾಂಗಳು ಕೂಡಾ 365 ದಿನಗಳ ವ್ಯಾಲಿಡಿಟಿ ಪ್ಲ್ಯಾನ್‌ ಹೊಂದಿವೆ. ಹಾಗಾದರೆ ವಾರ್ಷಿಕ ಅವಧಿಗೆ ಯಾವ ಪ್ಲ್ಯಾನ್‌ ಬೆಸ್ಟ್‌?

ಹೌದು, ಜಿಯೋ, ಭಾರ್ತಿ ಏರ್‌ಟೆಲ್ ಹಾಗೂ ವಿ ಟೆಲಿಕಾಂ 3599ರೂ. ಬೆಲೆಯ ವಾರ್ಷಿಕ ಪ್ರೀಪೇಯ್ಡ್‌ ಪ್ಲ್ಯಾನ್‌ ಆಯ್ಕೆ ಹೊಂದಿವೆ. ಈ ಮೂರು ಸಂಸ್ಥೆಗಳ ಈ ಮೊತ್ತದ ರೀಚಾರ್ಜ್‌ ಪ್ಲ್ಯಾನಿನಲ್ಲಿ ಅಧಿಕ ಡೇಟಾ, ದೀರ್ಘ ವ್ಯಾಲಿಡಿಟಿ, ಅನಿಯಮಿತ ವಾಯಿಸ್‌ ಕರೆ ಹಾಗೂ ಎಸ್‌ಎಮ್‌ಎಸ್‌ ಪ್ರಯೋಜನಗಳು ಕೂಡಾ ದೊರೆಯುತ್ತವೆ. ಹಾಗಾದರೇ ಜಿಯೋ, ಏರ್‌ಟೆಲ್ ಹಾಗೂ ವಿ ಟೆಲಿಕಾಂ 3599ರೂ. ಪ್ಲ್ಯಾನಿನಲ್ಲಿ ಯಾವುದು ಬೆಸ್ಟ್‌? ಪ್ರಯೋಜನಗಳೆನು ಮುಂದೆ ನೋಡೋಣ ಬನ್ನಿರಿ.

Jio, Airtel, Vi: ಡೇಟಾ ಜೊತೆ ವಾರ್ಷಿಕ ವ್ಯಾಲಿಡಿಟಿಗೆ ಯಾವ ಪ್ಲ್ಯಾನ್‌ ಉತ್ತಮ?

ಏರ್‌ಟೆಲ್‌ನ 3599ರೂ. ರೀಚಾರ್ಜ್‌ ಪ್ಲ್ಯಾನ್‌

ಭಾರ್ತಿ ಏರ್‌ಟೆಲ್‌ನ 3599ರೂ. ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯು ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಹೊಂದಿದೆ. ಈ ಯೋಜನೆಯಲ್ಲಿ ಪ್ರತಿದಿನ 2 GB ಡೇಟಾ ಸೌಲಭ್ಯ ಗ್ರಾಹಕರಿಗೆ ಲಭ್ಯವಾಗಲಿವೆ. ಹಾಗೆಯೇ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ ಜೊತೆಗೆ ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಹೆಚ್ಚುವರಿ ಯಾಗಿ ಏರ್‌ಟೆಲ್ 5G ಡೇಟಾ, ಹೆಲೋ ಟ್ಯೂನ್ಸ್‌, ವಿಂಕ್ ಮ್ಯೂಸಿಕ್ ಸೇವೆಗಳು ಲಭ್ಯ.

ಜಿಯೋ 3599ರೂ. ರೀಚಾರ್ಜ್‌ ಪ್ಲ್ಯಾನ್‌

ರಿಲಯನ್ಸ್‌ ಜಿಯೋ 3599ರೂ. ರೀಚಾರ್ಜ್‌ ಪ್ಲ್ಯಾನ್‌ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿಯ ಸೌಲಭ್ಯ ಪಡೆದಿದೆ. ಪ್ರತಿದಿನ 2.5 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ ಹಾಗೂ ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಇನ್ನು ಒಟ್ಟಾರೇ ಪೂರ್ಣ ವ್ಯಾಲಿಡಿಟಿ ಅವಧಿಗೆ ಈ ಯೋಜನೆಯಲ್ಲಿ 912.5GB ಡೇಟಾ ಸೌಲಭ್ಯ ದೊರೆಯುತ್ತದೆ. ಹೆಚ್ಚುವರಿ ಯಾಗಿ ಜಿಯೋ ಟಿವಿ, ಜಿಯೋ ಸಿನಿಮಾ ಸೇವೆಗಳು ಲಭ್ಯ.

ವಿ ಟೆಲಿಕಾಂನ 3599ರೂ. ರೀಚಾರ್ಜ್‌ ಪ್ಲ್ಯಾನ್‌

ವಿ ಟೆಲಿಕಾಂನ 3599ರೂ. ರೀಚಾರ್ಜ್‌ ಯೋಜನೆಯು ಸಹ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಅನ್ನು ಪಡೆದುಕೊಂಡಿದೆ. ಈ ಯೋಜನೆಯಲ್ಲಿ ಒಟ್ಟು 850 GB ಡೇಟಾ ಸೌಲಭ್ಯ (ನಿತ್ಯ 2.3GB ಪಡೆದಂತೆ) ಗ್ರಾಹಕರಿಗೆ ದೊರೆಯುತ್ತದೆ. ಅಲ್ಲದೇ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ ಜೊತೆಗೆ ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಹೆಚ್ಚುವರಿ ವಿ ಟೆಲಿಕಾಂ ಆಪ್ಸ್‌ ಸೌಲಭ್ಯ ಲಭ್ಯ.

ರೀಚಾರ್ಜ್‌ಗೆ ಯಾವುದು ಪ್ಲ್ಯಾನ್‌ ಬೆಸ್ಟ್?

ಜಿಯೋ, ಭಾರ್ತಿ ಏರ್‌ಟೆಲ್ ಹಾಗೂ ವಿ ಟೆಲಿಕಾಂ 3599ರೂ. ಬೆಲೆಯ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲ್ಯಾನ್‌ಗಳು ವ್ಯಾಲಿಡಿಟಿಯಲ್ಲಿ ಸಾಮ್ಯತೆ ಹೊಂದಿವೆ. ಅದಾಗ್ಯೂ ಈ ಮೂರು ಪ್ಲ್ಯಾನ್‌ಗಳ ಡೇಟಾ ಸೌಲಭ್ಯದಲ್ಲಿ ಭಿನ್ನತೆ ಕಾಣಬಹುದಾಗಿದೆ. ಏರ್‌ಟೆಲ್‌ನ ಯೋಜನೆಯು ದೈನಂದಿನ 2GB ಡೇಟಾ ಹೊಂದಿದೆ, ವಿ ಟೆಲಿಕಾಂ ಒಟ್ಟಾರೇ 850GB (ನಿತ್ಯ 2.3GB ಪಡೆದಂತೆ) ನೀಡಿದೆ. ಇನ್ನು ಜಿಯೋ ನಿತ್ಯ 2.5GB ಡೇಟಾ ಸೌಲಭ್ಯ ಒದಗಿಸಿದೆ. ಇನ್ನು ದೈನಂದಿನ ಅಧಿಕ ಡೇಟಾ ಅಗತ್ಯತೆಯ ದೃಷ್ಠಿಕೋನದಿಂದ ನೋಡುವುದಾದರೆ ಜಿಯೋದ ಹೆಚ್ಚು ಗಮನ ಸೆಳೆಯುತ್ತದೆ.

Best Mobiles in India

English summary
Airtel vs Jio Vs Vi Rs 3599 Plan: which one better for recharge? Check Comparison, benefits and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+