Airtel vs Jio: ನಿಮಗಿಂತ ನಾವೇನು ಕಡಿಮೆ ಇಲ್ಲಾ ಎನ್ನುತ್ತಿದೆ ಏರ್‌ಟೆಲ್; ಈ ಪ್ಲ್ಯಾನ್ ಮುಂದೆ ಜಿಯೋ...
ಭಾರತದಲ್ಲಿ ಪ್ರಮುಖವಾದ ಟೆಲಿಕಾಂ ಕಂಪೆನಿಗಳು (Telecom companies) ಎಂದರೆ ಒಂದು ಜಿಯೋ ಮತ್ತೊಂದು ಏರ್‌ಟೆಲ್ (Jio, Airtel). ಅದರಂತೆ ಇವೆರಡೂ ಸಹ ಒಂದಕ್ಕೊಂದು ತೀವ್ರವಾಗಿ ಸ್ಪರ್ಧಿಸುತ್ತಿದ್ದು, ಈ ಮೂಲಕ ಗ್ರಾಹಕರು ಇದರ ಲಾಭ ಪಡೆದುಕೊಳ್ಳುತ್ತಿದ್ದಾರೆ. ಈ ಬೆಳವಣಿಗೆ ನಡುವೆ ಜಿಯೋ ನಿನ್ನೆ ಹೊಸ ಪ್ಲ್ಯಾನ್ ಒಂದನ್ನು ಪರಿಚಯಿಸುವ ಮೂಲಕ ಟೆಲಿಕಾಂ ವಲಯದಲ್ಲಿ ಅಲೆ ಸೃಷ್ಟಿಸಿದೆ.
ಹೌದು, ಜಿಯೋ ಹಾಗೂ ಏರ್‌ಟೆಲ್ ಪರಸ್ಪರ ತೀವ್ರ ಪೈಪೋಟಿಯಲ್ಲೇ ಇರುತ್ತವೆ. ಈ ಕಾರಣಕ್ಕೆ ಹಲವಾರು ಜನರಿಗೆ ಏರ್‌ಟೆಲ್ ಉತ್ತಮವೇ ಅಥವಾ ಜಿಯೋ ಉತ್ತಮವೇ ಎಂಬ ಗೊಂದಲ ಉಂಟಾಗುತ್ತದೆ. ಆದರೆ ನಿಮಗೆ ಈ ಗೊಂದಲ ಬೇಡ. ಭಾರತದಲ್ಲಿ ಏರ್‌ಟೆಲ್ ಈಗ ಹೆಚ್ಚಿನ ಪ್ರಯೋಜನವನ್ನು ನೀಡುತ್ತಿದೆಯೇ? ಅಥವಾ ಜಿಯೋ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆಯೇ? ಯಾವ ನೆಟ್‌ವರ್ಕ್ ಆಯ್ಕೆ ಮಾಡುವುದರಿಂದ ಹೆಚ್ಚು ಲಾಭದಾಯಕ ಎಂಬ ಪ್ರಶ್ನೆಗೆ ಉತ್ತರವನ್ನು ನೀವು ತಿಳಿದುಕೊಳ್ಳಲು ಬಯಸಿದರೆ ಈ ಲೇಖನ ಓದಿರಿ.

ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಏರ್‌ಫೈಬರ್ ವಿರುದ್ಧ ಜಿಯೋ ಏರ್‌ಫೈಬರ್: ಭಾರತದಲ್ಲಿ ಫಿಕ್ಸೆಡ್ ವೈರ್‌ಲೆಸ್ ಆಕ್ಸೆಸ್ (FWA) 5G ಸೇವೆಯನ್ನು ವಿಸ್ತರಿಸಲು ಎರಡೂ ಕಂಪನಿಗಳು ಗಂಭೀರವಾಗಿ ಕೆಲಸ ಮಾಡುತ್ತಿವೆ. ಅದರಂತೆ ಏರ್‌ಟೆಲ್ ತನ್ನ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಏರ್‌ಫೈಬರ್ (Airtel Extreme AirFiber) ಪ್ಲ್ಯಾನ್ ಪರಿಚಯಿಸುವಂತೆಯೇ ಜಿಯೋ ತನ್ನ ಜಿಯೋ ಏರ್‌ಫೈಬರ್ (Jio AirFiber) ಯೋಜನೆಗಳನ್ನು ಪರಿಚಯಿಸುತ್ತಿದೆ.
ಎರಡೂ ಕಂಪನಿಗಳು ಪರ್ಯಾಯ ಪ್ಲ್ಯಾನ್‌ಗಳನ್ನು ನೀಡುತ್ತಿದ್ದರೂ ಸಹ ಕೆಲವು ಸೂಕ್ಷ್ಮ ವ್ಯತ್ಯಾಸಗಳನ್ನು ಈ ವೇಳೆ ಕಂಡುಕೊಂಡರೆ ಬಳಕೆದಾರರಿಗೆ ಲಾಭ ಆಗಲಿದೆ. ಅಂದರೆ ಏರ್‌ಟೆಲ್ 100 Mbps ವೇಗವನ್ನು ನೀಡುತ್ತಿದ್ದು, ಕೇವಲ ಒಂದು ಯೋಜನೆಯೊಂದಿಗೆ ಅನಿಯಮಿತ ಡೇಟಾ ಪ್ರಯೋಜನವನ್ನು ಕಲ್ಪಿಸಿಕೊಟ್ಟಿದೆ. ಆದರೆ, ಜಿಯೋ 30 Mbps ನಿಂದ 1Gbps ವೇಗದವರೆಗಿನ ಅನೇಕ ಅನಿಯಮಿತ ಡೇಟಾ ಪ್ಲ್ಯಾನ್‌ಗಳನ್ನು ನೀಡುತ್ತದೆ. ಆದರೂ ಸಹ ಜಿಯೋ ಏರ್‌ಫೈಬರ್ ಸೇವೆಗಳು ಲಭ್ಯವಿರುವ ಆಯ್ದ ಸ್ಥಳಗಳಲ್ಲಿ ಮಾತ್ರ ಹೈ-ಸ್ಪೀಡ್ ಪ್ಲ್ಯಾನ್ ಸಿಗಲಿದೆ.

ಜಿಯೋ ತನ್ನ ಬಳಕೆದಾರರಿಗೆ ಕೇವಲ 1TB ಹೆಚ್ಚಿನ ವೇಗದ ಡೇಟಾ ಪ್ಲ್ಯಾನ್‌ಗಳೊಂದಿಗೆ ಅನಿಯಮಿತ ಡೇಟಾ ಪ್ರಯೋಜನಗಳನ್ನು ನೀಡುತ್ತದೆ. ಈ 1TB ಮಿತಿಯನ್ನು ದಾಟಿದ ನಂತರ, ನ್ಯಾಯೋಚಿತ ಬಳಕೆಯ ನೀತಿಯ ಪ್ರಕಾರ ವೇಗವನ್ನು 64 kbps ಗೆ ಇಳಿಸಲಾಗುತ್ತದೆ. ಬಳಕೆದಾರರು ಹೆಚ್ಚಿನ ಡೇಟಾವನ್ನು ಬಯಸಿದರೆ, ಅವರು 401ರೂ.ಗಳ ಡೇಟಾ ಬೂಸ್ಟರ್ ಅನ್ನು ಬಳಸಿಕೊಂಡು 1TB ಡೇಟಾವನ್ನು ಪಡೆಯಬಹುದು.
ಇದನ್ನೆಲ್ಲಾ ಗಮನಿಸಿದ್ರೆ ಏರ್‌ಟೆಲ್ ಜಿಯೋಗಿಂತ ಹೆಚ್ಚಿನ ಅನಿಯಮಿತ ಡೇಟಾವನ್ನು ನೀಡುತ್ತದೆ. ಅಂದರೆ ಏರ್‌ಟೆಲ್ ಜಿಯೋಗಿಂತ 2 ಪಟ್ಟು ಹೆಚ್ಚು ಡೇಟಾ ಸೌಲಭ್ಯ ನೀಡುತ್ತದೆ. ಅದರಲ್ಲೂ FUP ಮಿತಿಯ ನಂತರದ ಡೇಟಾ ವೇಗವು ಜಿಯೋದ 64Kbps ಗೆ ಹೋಲಿಸಿದರೆ 2Mbps ನಲ್ಲಿ ಏರ್‌ಟೆಲ್ ಡೇಟಾ ನೀಡಲಿದೆ. ಪರಿಣಾಮ ಎಲ್ಲಾ ರೀತಿಯಲ್ಲೂ ಏರ್‌ಟೆಲ್ ಉತ್ತಮವಾದ ಆಯ್ಕೆ ಆಗಿದೆ. ಇದು ಕೇವಲ ಏರ್‌ಫೈಬರ್ ಸೇವೆಗಷ್ಟೇ ಸೀಮಿತವಾದ ವಿಷಯ ಅನ್ನೋದು ನಿಮ್ಮ ಗಮನಕ್ಕೆ ಇರಲಿ.
ಈ ಬೆಳವಣಿಗೆ ನಡುವೆ ಜಿಯೋ 5G FWA ಸೇವೆಯ ಅಡಿಯಲ್ಲಿ 401 ರೂ.ಗಳ ಹೊಸ ರೀಚಾರ್ಜ್ ಪ್ಲ್ಯಾನ್ ಅನ್ನು ಪ್ರಾರಂಭಿಸಿದೆ. ಈ ಪ್ಲ್ಯಾನ್ ಮೂಲಕ ಬಳಕೆದಾರರು 1TB ಡೇಟಾ ಪ್ರಯೋಜನವನ್ನು ಪಡೆಯಬಹುದಾಗಿದೆ. ಆದರೆ, ಈ ಪ್ಲ್ಯಾನ್ ಅನ್ನು ಪಡೆಯಲು ಬಳಕೆದಾರರು ಮೊದಲು ಜಿಯೋದ ಯಾವುದೇ ಮೂಲ ಯೋಜನೆಗಳೊಂದಿಗೆ ರೀಚಾರ್ಜ್ ಮಾಡಿಕೊಂಡಿರಬೇಕು.

ಅಂದರೆ ಜಿಯೋ ಏರ್‌ಫೈಬರ್ 599ರೂ.ಗಳು, 899 ರೂ.ಗಳು ಮತ್ತು 1199ರೂ.ಗಳು ಯೋಜನೆಗಳು ಅಥವಾ 1499 ರೂ.ಗಳು, 2499 ರೂ.ಗಳು ಮತ್ತು 3999 ರೂ.ಗಳ ಯಾವುದೇ ಜಿಯೋ ಏರ್‌ಫೈಬರ್ ಮ್ಯಾಕ್ಸ್ ಪ್ಲ್ಯಾನ್‌ನೊಂದಿಗೆ ರೀಚಾರ್ಜ್ ಮಾಡಿಕೊಂಡಿದ್ದರೆ ಮಾತ್ರ ಈ 1TB ಡೇಟಾ ಇರುವ ಪ್ಲ್ಯಾನ್ ಅನ್ವಯ ಆಗಲಿದೆ. ಅಂದರೆ ಯಾರಿಗೆಲ್ಲಾ ಹೆಚ್ಚುವರಿ ಡೇಟಾದ ಅವಶ್ಯಕತೆ ಇದೆಯೋ ಅವರು ಈ ಪ್ಲ್ಯಾನ್ ಕಡೆ ಮುಖ ಮಾಡಬಹುದಾಗಿದೆ.


Click it and Unblock the Notifications








