Just In
Don't Miss
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Movies
Super Queen:ರಜಿನಿಯ ಕಲ್ಪನಾ ಪರ್ಫಾಮೆನ್ಸ್ಗೆ ಫುಲ್ ಫಿದಾ : ರಿಪ್ಲೆ ಮಾಡೋಕಾಗದೆ ನಟಿ ಸುಸ್ತು..!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಏರ್‌ಟೆಲ್ v/s ವಿ ಟೆಲಿಕಾಂ: 359ರೂ.ಗೆ ಯಾವುದು ಬೆಸ್ಟ್ ಪ್ಲ್ಯಾನ್?..ಪ್ರಯೋಜನಗಳೇನು?
ಭಾರತೀಯ ಟೆಲಿಕಾಂ ವಲಯದಲ್ಲಿ ರಿಲಯನ್ಸ್ ಜಿಯೋ ನಂತರ ಸ್ಥಾನದಲ್ಲಿ ಏರ್‌ಟೆಲ್ ಮತ್ತು ವಿ ಟೆಲಿಕಾಂ ಸಂಸ್ಥೆಗಳು ಕಾಣಿಸಿಕೊಂಡಿವೆ. ಈ ಎರಡು ಟೆಲಿಕಾಂಗಳು ಕೆಲವು ಅತ್ಯುತ್ತಮ ಪ್ರೀಪೇಯ್ಡ್ ಯೋಜನಗಳ ಮೂಲಕ ಜಿಯೋಗೆ ಟಾಂಗ್ ನೀಡುವ ಹಾದಿಯಲ್ಲಿ ಸಾಗಿವೆ. ಅದಾಗ್ಯೂ, ಚಂದಾದಾರರನ್ನು ಉಳಿಸಿಕೊಳ್ಳಲು ಹಾಗೂ ಹೆಚ್ಚಿಸಿಕೊಳ್ಳಲು ಹೊಸ ಯೋಜನೆಗಳನ್ನು ಪರಿಚಯಿಸುತ್ತ ಮುನ್ನಡೆದಿವೆ. ಅವುಗಳಲ್ಲಿ ಏರ್‌ಟೆಲ್ ಟೆಲಿಕಾಂನ 359ರೂ. ಮತ್ತು ವಿ ಟೆಲಿಕಾಂನ 359ರೂ. ಯೋಜನೆಗಳಲ್ಲಿ ಯಾವುದು ಬೆಸ್ಟ್?

ಏರ್‌ಟೆಲ್ 359ರೂ. ಪ್ರಿಪೇಯ್ಡ್ ಪ್ಲ್ಯಾನ್ ಮತ್ತು ವಿ ಟೆಲಿಕಾಂ 359ರೂ. ಪ್ರಿಪೇಯ್ಡ್ ಪ್ಲ್ಯಾನ್ ಆಯ್ಕೆ ಹೊಂದಿವೆ. ಈ ಎರಡು ಟೆಲಿಕಾಂಗಳ ಈ ಈ ಎರಡು ರೀಚಾರ್ಜ್ ಯೋಜನೆ ಯಲ್ಲಿ ಅಧಿಕ ದೈನಂದಿನ ಡೇಟಾ, ಆಕರ್ಷಕ ವ್ಯಾಲಿಡಿಟಿ, ಅನಿಯಮಿತ ಉಚಿತ ವಾಯಿಸ್ ಕರೆ ಹಾಗೂ ಎಸ್‌ಎಮ್‌ಎಸ್ ಪ್ರಯೋಜನಗಳು ಸೇರಿವೆ. ಹಾಗೆಯೇ ಹೆಚ್ಚುವರಿಯಾಗಿ ಆಪ್ಸ್‌ಗಳ ಸೌಲಭ್ಯಗಳು ಸಿಗಲಿವೆ. ಆದರೂ ಈ ಎರಡು ಟೆಲಿಕಾಂಗಳ ಈ ಪ್ರಿಪೇಯ್ಡ್ ಯೋಜನೆಯಲ್ಲಿ ಕೆಲವು ಭಿನ್ನತೆಗಳು ಕಾಣಬಹುದಾಗಿದೆ. ಹಾಗಾದರೇ ಏರ್‌ಟೆಲ್ 359ರೂ. ಪ್ರಿಪೇಯ್ಡ್ ಪ್ಲ್ಯಾನ್ ಮತ್ತು ವಿ ಟೆಲಿಕಾಂ 359ರೂ. ಪ್ರಿಪೇಯ್ಡ್ ಪ್ಲ್ಯಾನಿನಲ್ಲಿ ಯಾವುದು ಉತ್ತಮ? ಯೋಜನೆಗಳ ಪ್ರಯೋಜನಗಳೆನು ಮುಂದೆ ನೋಡೋಣ ಬನ್ನಿರಿ.

ಏರ್‌ಟೆಲ್ 359ರೂ. ಪ್ರಿಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು
ಏರ್‌ಟೆಲ್ ಟೆಲಿಕಾಂನ 359ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ದೈನಂದಿನ 2 GB ಡೇಟಾ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ದೊರೆಯಲಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ ಸಿಗಲಿದೆ. ಹೆಚ್ಚುವರಿಯಾಗಿ ವಿಂಕ್ ಮ್ಯೂಸಿಕ್, ಉಚಿತ ಹೆಲೋ ಟ್ಯೂನ್ ಪ್ರಯೋಜನ ಸಿಗಲಿದೆ. ಜೊತೆಗೆ ಫಾಸ್ಟ್‌ಟ್ಯಾಗ್ ನಲ್ಲಿ 100ರೂ. ಕ್ಯಾಶ್‌ಬ್ಯಾಕ್ ಸಹ ಲಭ್ಯವಾಗಲಿದೆ.

ವಿ ಟೆಲಿಕಾಂ 359ರೂ. ಪ್ರಿಪೇಯ್ಡ್ ಪ್ಲಾನ್ ಪ್ರಯೋಜನಗಳು
ವಿ ಟೆಲಿಕಾಂ 359ರೂ ಪ್ರಿಪೇಯ್ಡ್ ಪ್ಲಾನ್ 28 ದಿನಗಳ ಮಾನ್ಯತೆಯನ್ನು ಹೊಂದಿದೆ. ಇನ್ನು ಈ ಪ್ಲಾನ್‌ನಲ್ಲಿ ನಿಮಗೆ ಪ್ರತಿನಿತ್ಯ 3 GB ಡೇಟಾ ಪ್ರಯೋಜನ ಸಿಗಲಿದೆ. ಹಾಗೆಯೇ ಅನಿಯಮಿತ ಕರೆ ಪ್ರಯೋಜನ ಹಾಗೂ ಡೈಲಿ 100 ಎಸ್‌ಎಂಎಸ್ ಪ್ರಯೋಜನ ಕೂಡ ಲಭ್ಯವಿದೆ. ಇದಲ್ಲದೆ ವಿ ಮೂವಿಸ್, ಲೈವ್‌ಟಿವಿ ಯಂತಹ ಪ್ರಯೋಜನಗಳನ್ನು ನೀಡಲಿದೆ. ಜೊತೆಗೆ ಡೇಟಾ ರೋಲ್‌ಓವರ್ ಸೌಲಭ್ಯವನ್ನು ಈ ಯೋಜನೆ ಒಳಗೊಂಡಿದೆ.

ರೀಚಾರ್ಜ್‌ಗೆ ಯಾವುದು ಬೆಸ್ಟ್?
ಏರ್‌ಟೆಲ್ 359ರೂ. ಮತ್ತು ವಿ ಟೆಲಿಕಾಂ 359ರೂ. ಪ್ರೀಪೇಯ್ಡ್ ಪ್ಲ್ಯಾನ್ ಗಳು ಆಕರ್ಷಕ ಸೌಲಭ್ಯ ಒಳಗೊಂಡಿವೆ. ಏರ್‌ಟೆಲ್ ಮತ್ತು ವಿ ಟೆಲಿಕಾಂಗಳ ಈ ಯೋಜನೆಗಳು ಸಾಮ್ಯತೆ ಎನಿಸಿದರೂ, ಪ್ರಯೋಜನಗಳಲ್ಲಿ ಭಿನ್ನತೆ ಪಡೆದಿವೆ. ಈ ಎರಡು ಯೋಜನೆಗಳು 28 ದಿನಗಳ ವ್ಯಾಲಿಡಿಟಿ ಒಳಗೊಂಡಿದ್ದು, ಡೇಟಾ ಪ್ರಯೋಜನದಲ್ಲಿ ಭಿನ್ನತೆ ಕಾಣಬಹುದಾಗಿದೆ. ಏರ್‌ಟೆಲ್ ಪ್ರತಿದಿನ 2 GB ಡೇಟಾ ಪ್ರಯೋಜನ ಹೊಂದಿದ್ದು, ವಿ ಟೆಲಿಕಾಂ ಪ್ರತಿದಿನ 3 GB ಡೇಟಾ ಪ್ರಯೋಜನ ಪಡೆದಿದೆ.

ಏರ್‌ಟೆಲ್ ಫಾಸ್ಟ್‌ಟ್ಯಾಗ್ ರೀಚಾರ್ಜ್ ನಲ್ಲಿ 100ರೂ. ಕ್ಯಾಶ್‌ಬ್ಯಾಕ್ ಸೌಲಭ್ಯ ನೀಡಿದೆ. ಇನ್ನು ವಿ ಟೆಲಿಕಾಂ ಡೇಟಾ ರೋಲ್‌ಓವರ್ ಸೌಲಭ್ಯ ನೀಡಿದೆ. ಡೇಟಾ ಸೌಲಭ್ಯಗಳನ್ನು ಗಮನಿಸುವುದಾದರೇ ವಿ ಟೆಲಿಕಾಂನ 359ರೂ. ಪ್ಲ್ಯಾನ್ ಉತ್ತಮ ಎನಿಸುತ್ತದೆ. ಇನ್ನು ನೀವೇನಾದರೂ ಹೆಚ್ಚು ಡೇಟಾ ಬಯಸದೆ ಇತರೆ ಹೆಚ್ಚುವರಿ ಪ್ರಯೋಜನ ಬಯಸಿದರೆ ಏರ್‌ಟೆಲ್‌ನ 359ರೂ. ಪ್ಲ್ಯಾನ್ ಆಕರ್ಷಕ ಎನಿಸುತ್ತದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470