ಈ ಸ್ಮಾರ್ಟ್‌ಫೋನ್‌ಗಳಲ್ಲಿ 'ಏರ್‌ಟೆಲ್ ವೈಫೈ ಕಾಲಿಂಗ್' ಸೌಲಭ್ಯ ಲಭ್ಯ!
ಜನಪ್ರಿಯ ಖಾಸಗಿ ಟೆಲಿಕಾಂ ಭಾರ್ತಿ ಏರ್‌ಟೆಲ್ ಇತ್ತೀಚಿಗೆ ವೈಫೈ ಕಾಲಿಂಗ್ ಸೇವೆಯನ್ನು ಹೊಸದಾಗಿ ಪರಿಚಯಿಸಿದೆ. ಈ ಸೇವೆಯಲ್ಲಿ ಇಂಟರ್ನೆಟ್ ವೈಫೈ ಸಂಪರ್ಕದ ಮೂಲಕ ವಾಯಿಸ್ ಕರೆಗಳನ್ನು ಮಾಡಬಹುದಾಗಿದೆ. ವೈಫೈ ಕಾಲಿಂಗ್ ಸೇವೆಗೆ ಯಾವುದೇ ಹೆಚ್ಚುವರಿ ಶುಲ್ಕ ಇರುವುದಿಲ್ಲ. ಕೇವಲ ವೈಫೈ ನೆಟವರ್ಕ ಇದ್ದರೇ ಸಾಕು ಗ್ರಾಹಕರು ವಾಯಿಸ್ ಕಾಲ್ ಮಾಡಬಹುದಾಗಿದೆ.

ಹೌದು, ಏರ್‌ಟೆಲ್ ಸಂಸ್ಥೆಯ ಈ ಹೊಸ ಸೇವೆಯ ವ್ಯಾಪ್ತಿಗೆ ಸದ್ಯ ಕೆಲವೇ ಕೆಲವು ಸ್ಮಾರ್ಟ್‌ಫೋನ್‌ಗಳು ಮಾತ್ರ ಒಳಪಡುತ್ತವೆ. ಅವುಗಳ ಲಿಸ್ಟಿಗೆ ಏರ್‌ಟೆಲ್ ಇದೀಗ ಮತ್ತೆ ಆರು ಸ್ಮಾರ್ಟ್‌ಫೋನ್‌ಗಳಿಗೂ ವೈಫೈ ಕಾಲಿಂಗ್ ಸೇವೆಯನ್ನು ವಿಸ್ತರಿಸಿದೆ. ಈ ಸೇವೆಗೆ ಗ್ರಾಹಕರು ಯಾವುದೇ ಪ್ರತ್ಯೇಕ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳುವ ಮತ್ತು ಯಾವುದೇ ಸಿಮ್ ಸೇರಿಸುವ ಅಗತ್ಯವು ಇಲ್ಲ.

ಏರ್‌ಟೆಲ್ ಹೊಸದಾಗಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್10, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್10 ಪ್ಲಸ್, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್10e, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ20 ಮತ್ತು ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್‌ಗಳಿಗೂ ವೈಫೈ ಕಾಲಿಂಗ್ ಸೌಲಭ್ಯವನ್ನು ಕಲ್ಪಿಸಿದೆ. ಗ್ರಾಹಕರು ಮನೆಯ ಹಾಗೂ ಆಫೀಸ್‌ನ ವೈಫೈ ಸಂಪರ್ಕದ ಮೂಲಕವು ಕರೆ ಮಾಡುವ ಅವಕಾಶವು ಈ ಸೇವೆ ಪಡೆದಿದೆ.

ಸದ್ಯ ಐಫೋನ್ 6 ಎಸ್, ಐಫೋನ್ 6 ಎಸ್ ಪ್ಲಸ್, ಐಫೋನ್ 7, ಐಫೋನ್ 7 ಪ್ಲಸ್, ಐಫೋನ್ 8, ಐಫೋನ್ 8 ಪ್ಲಸ್, ಐಫೋನ್ ಎಕ್ಸ್, ಐಫೋನ್ ಎಕ್ಸ್ಆರ್, ಐಫೋನ್ ಎಕ್ಸ್ಎಸ್, ಐಫೋನ್ ಎಕ್ಸ್ಎಸ್ ಪ್ಲಸ್, ಐಫೋನ್ 11, ಐಫೋನ್ 11 ಪ್ರೊ, ಮತ್ತು ಐಫೋನ್ 11 ಪ್ರೊ ಪ್ಲಸ್, ರೆಡ್‌ಮಿ ಕೆ 20, ರೆಡ್‌ಮಿ ಕೆ 20 ಪ್ರೊ, ಪೊಕೊ ಎಫ್ 1, ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ 6, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 10 ಎಸ್, ಸ್ಯಾಮ್‌ಸಂಗ್ ಗ್ಯಾಲಕ್ಸಿ ಒನ್ 6, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 30 ಎಸ್, ಒನ್‌ಪ್ಲಸ್ 7, ಒನ್‌ಪ್ಲಸ್ 7 ಪ್ರೊ, ಒನ್‌ಪ್ಲಸ್ 7 ಟಿ, ಮತ್ತು ಒನ್‌ಪ್ಲಸ್ 7 ಟಿ ಪ್ರೊ ಸ್ಮಾರ್ಟ್‌ಫೋನ್‌ಗಳು ಏರ್‌ಟೆಲ್ ವೈಫೈ ಕಾಲಿಂಗ್ ಸೌಲಭ್ಯ ಪಡೆದಿವೆ.

ಏರ್‌ಟೆಲ್ ವೈ-ಫೈ ಕಾಲಿಂಗ್ ಅನ್ನು ಬಳಸಲು ಪ್ರಾರಂಭಿಸಲು ಬಳಕೆದಾರರು ತಮ್ಮ ಫೋನ್‌ನಲ್ಲಿ ವೈ-ಫೈ ಕರೆ ಸೇವೆಯನ್ನು ಸಕ್ರಿಯಗೊಳಿಸಬೇಕು ಮತ್ತು ಇತ್ತೀಚಿನ ಸಾಫ್ಟ್‌ವೇರ್ ಅಪ್‌ಗ್ರೇಡ್ ಮಾಡಬೇಕಾಗುತ್ತದೆ. ಇದಲ್ಲದೆ, ಉತ್ತಮ ಫಲಿತಾಂಶಗಳಿಗಾಗಿ ಬಳಕೆದಾರರು VoLTE ಅನ್ನು ಆನ್ ಮಾಡಲು ಸೂಚಿಸಲಾಗಿದೆ. ಡೇಟಾ ಬಳಕೆಗೆ ಸಂಬಂಧಿಸಿದಂತೆ, 5 ನಿಮಿಷಗಳ ವೈ-ಫೈ ಕರೆ 5MB ಗಿಂತ ಕಡಿಮೆ ಡೇಟಾವನ್ನು ಬಳಸುತ್ತದೆ. ಒಂದು ವೇಳೆ ವೈ-ಫೈ ನೆಟ್‌ವರ್ಕ್ ಆಫ್ ಆಗಿದ್ದರೆ, ನಡೆಯುತ್ತಿರುವ ವೈ-ಫೈ ಕರೆಯನ್ನು ಮನಬಂದಂತೆ VoLTE ಗೆ ಬದಲಾಯಿಸಲಾಗುತ್ತದೆ.


Click it and Unblock the Notifications








