ಏರ್‌ಟೆಲ್‌ನ ಈ ಹೊಸ ಸೆಟ್‌ಅಪ್‌ ಬಾಕ್ಸ್‌ ಬಗ್ಗೆ ತಿಳಿದ್ರೆ, 'ಜಿಯೋ' ಬೇಡ ಅಂತಿರಿ!

|

ಭಾರತೀಯ ಟೆಲಿಕಾಂ ವಲಯದಲ್ಲಿ ಮಹತ್ತರ ಬದಲಾವಣೆಗಳು ನಡೆಯುತ್ತಿದ್ದು, ಇತ್ತೀಚಿಗೆ ಜಿಯೋ ಸಂಸ್ಥೆಯು ತನ್ನ ಗಿಗಾಫೈಬರ್ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳನ್ನು ಕಡಿಮೆ ಬೆಲೆಗೆ ಘೋಷಿಸಿದೆ. ಹಾಗೆಯೇ ವಿಡಿಯೊ ಸ್ಟ್ರೀಮಿಂಗ್ ಸೇವೆಯನ್ನು ಲಭ್ಯವಾಗಿಸುತ್ತಿದೆ. ಜಿಯೋಗೆ ಪ್ರತಿಯಾಗಿ ಏರ್‌ಟೆಲ್‌ ಮತ್ತು ಟಾಟಾಸ್ಕೈ ಸಂಸ್ಥೆಗಳು ಸಹ ಡಿಟುಎಚ್‌ ಸೇವೆಯ ದರ ಕಡಿಮೆ ಮಾಡಿ ಜಿಯೋಗೆ ನೇರ ಪೈಪೋಟಿ ನೀಡುವ ಹೊಸ ಯೋಜನೆಗಳನ್ನು ಪರಿಚಯಿಸಿವೆ. ಆದ್ರೆ ಏರ್‌ಟೆಲ್‌ ಇದೀಗ ಅದಕ್ಕೂ ಮಿಗಿಲಾಗಿ ಮತ್ತೊಂದು ಹೊಸ ಅಸ್ತ್ರವೊಂದನ್ನು ಹೂಡಿದೆ.

ಏರ್‌ಟೆಲ್

ಹೌದು, ಏರ್‌ಟೆಲ್ ಈಗಾಗಲೇ ಡಿ2ಎಚ್ ಸೇವೆಯಲ್ಲಿ ಜನಪ್ರಿಯ ಹೆಸರನ್ನು ಪಡೆದಿದ್ದು, ಆ ಸೇವೆಗೆ ಬಲ ತುಂಬಲು ಈಗ ಹೊಸದಾಗಿ 'ಏರ್‌ಟೆಲ್‌ ಎಕ್ಸ್‌ಸ್ಟ್ರಿಮ್ ಬಾಕ್ಸ್‌'(Airtel Xstream Box) ಡಿವೈಸ್‌ ಅನ್ನು ಪರಿಚಯಿಸಿದೆ. ಈ ಡಿವೈಸ್‌ ಆಂಡ್ರಾಯ್ಡ್‌ ಆಧಾರಿತವಾಗಿದ್ದು, ಲೈವ್ ಟಿವಿ, ನೆಟ್‌ಫ್ಲಿಕ್ಸ್‌, ಅಮೆಜಾನ್ ಪ್ರೈಮ್‌ ಸೇರಿದಂತೆ ಜನಪ್ರಿಯ ವಿಡಿಯೊ ಸ್ಟ್ರೀಮಿಂಗ್ (OTT) ಆಪ್ಸ್‌ ಮತ್ತು ಇಂಟರ್ನೆಟ್‌ ಸೇವೆಗಳನ್ನು ಪಡೆಯಬಹುದಾಗಿದೆ.

ಏರ್‌ಟೆಲ್‌ ಎಕ್ಸ್‌ಸ್ಟ್ರಿಮ್ ಬಾಕ್ಸ್‌

ಏರ್‌ಟೆಲ್‌ ಎಕ್ಸ್‌ಸ್ಟ್ರಿಮ್ ಬಾಕ್ಸ್‌ ಎನ್ನುವುದು ಏರ್‌ಟೆಲ್‌ನ ಹೊಸ ಹೈಬ್ರಿಡ್‌ ಸೆಟ್‌ಅಪ್‌ ಬಾಕ್ಸ್‌ ರೂಪವಾಗಿದ್ದು, ಈ ಮೂಲಕ ಗ್ರಾಹಕರಿಗೆ ಹೆಚ್ಚಿನ ಪ್ರಯೋಜನೆಗಳನ್ನು ಒದಗಿಸುವ ಉದ್ದೇಶವಾಗಿದೆ. ಸ್ಟ್ಯಾಂಡರ್ಡ್‌ ಸೆಟ್‌ಅಪ್‌ ಬಾಕ್ಸ್‌ಗಿಂತ ಭಿನ್ನವಾಗಿದ್ದು, ಡಿ2ಎಚ್‌ ಮಾರುಕಟ್ಟೆಯಲ್ಲಿ ಇದೊಂದು ಪ್ರಯತ್ನವೆನಿಸಿದೆ. ಏರ್‌ಟೆಲ್‌ ಹೊಸ 'ಏರ್‌ಟೆಲ್‌ ಎಕ್ಸ್‌ಸ್ಟ್ರಿಮ್ ಬಾಕ್ಸ್‌' ಡಿವೈಸ್‌ನ ಸೇವೆಗಳೆನು ಮತ್ತು ಬೆಲೆ ಎಷ್ಟು ಎನ್ನುವ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಮುಂದೆ ಓದಿರಿ.

ಹೈಬ್ರಿಡ್‌ ಸೆಟ್‌ಅಪ್‌ ಬಾಕ್ಸ್‌

ಹೈಬ್ರಿಡ್‌ ಸೆಟ್‌ಅಪ್‌ ಬಾಕ್ಸ್‌

ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಸೆಟ್‌ಅಪ್‌ ಬಾಕ್ಸ್‌ಗಳ ಎದುರು ಏರ್‌ಟೆಲ್ ಎಕ್ಸ್‌ಸ್ಟ್ರಿಮ್ ಬಾಕ್ಸ್‌ ಭಿನ್ನವಾಗಿ ಕಾಣಿಸಿಕೊಳ್ಳುತ್ತದೆ. ಏಕೆಂದರೇ ಇದು ಹೈಬ್ರಿಡ್‌ ಸೆಟ್‌ಅಪ್‌ ಬಾಕ್ಸ್‌ ಆಗಿದೆ. ಸಾಮಾನ್ಯ ಸೆಟ್‌ಅಪ್ ಬಾಕ್ಸ್‌ಗಳು ಸೆಟಲೈಟ್‌ನ ನೆರವಿನಿಂದ ಟಿವಿ ಚಾನೆಲ್‌ಗಳನ್ನು ಮಾತ್ರ ಲಭ್ಯವಾಗಿಸುತ್ತವೆ. ಆದ್ರೆ ಈ ಏರ್‌ಟೆಲ್‌ನ ಹೈಬ್ರಿಡ್‌ ಸೆಟ್‌ಅಪ್‌ ಬಾಕ್ಸ್‌ ಲೈವ್ ಟಿವಿ ಜೊತೆಗೆ ಓಟಿಟಿ, ವಿಡಿಯೊ ಸ್ಟ್ರೀಮಿಂಗ್ ಆಪ್ಸ್‌ ಸೇರಿದಂತೆ ಇಂಟರ್ನೆಟ್‌ ಸಹ ಬಳಸಬಹುದಾಗಿದೆ.

ಆಂಡ್ರಾಯ್ಡ್‌ ಟಿವಿ

ಆಂಡ್ರಾಯ್ಡ್‌ ಟಿವಿ

ಏರ್‌ಟೆಲ್ ಎಕ್ಸ್‌ಸ್ಟ್ರಿಮ್ ಬಾಕ್ಸ್‌ ಆಂಡ್ರಾಯ್ಡ್ ಓಎಸ್‌ ಬೆಂಬಲವನ್ನು ಪಡೆದಿದ್ದು, ಅದರಲ್ಲಿಯೂ ಇತ್ತೀಚಿನ ಆಂಡ್ರಾಯ್ಡ್ 9.0 ಪೈ ವರ್ಷನ್ ಹೊಂದಿದೆ. ಹೀಗಾಗಿ ಈ ಸೆಟ್‌ಅಪ್‌ ಮೂಲಕ ಎಕ್ಸ್‌ಸ್ಟ್ರಿಮ್ ಆಪ್‌, ನೆಟ್‌ಫ್ಲಿಕ್ಸ್‌, ಅಮೆಜಾನ್ ಪ್ರೈಮ್, ಎಎಲ್‌ಟಿ ಬಾಲಾಜಿ, ಯೂಟ್ಯೂಬ್, ಗೂಗಲ್ ಪ್ಲೇ ಮೂವೀಸ್‌ ಸೇರಿದಂತೆ ಗೂಗಲ್ ಪ್ಲೇ ಸ್ಟೋರ್‌ ಸಹ ಆಕ್ಸಸ್ ಮಾಡಬಹುದಾಗಿದೆ.

ಬ್ಲೂಟೂತ್ ಪ್ಲಸ್‌ ಮತ್ತು ಕ್ರೋಮ್‌ಕಾಸ್ಟ್

ಬ್ಲೂಟೂತ್ ಪ್ಲಸ್‌ ಮತ್ತು ಕ್ರೋಮ್‌ಕಾಸ್ಟ್

ಸದ್ಯ ಬ್ಲೂಟೂತ್ ಪ್ಲಸ್‌ ಮತ್ತು ಕ್ರೋಮ್‌ಕಾಸ್ಟ್ ಎರಡು ಆಯ್ಕೆಗಳು ಡಿವೈಸ್‌ ಕನೆಕ್ಟ್ ಮಾಡಲು ಅಗತ್ಯವಾಗಿದ್ದು, ಈ ಆಯ್ಕೆಗಳನ್ನು ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಬಾಕ್ಸ್‌ ಒಳಗೊಂಡಿದೆ. Chromecast ಬಳಸಿ ಸ್ಮಾರ್ಟ್‌ಫೋನ್‌ನಿಂದ ಟಿವಿ ಪರದೆಯನ್ನು ಪ್ರತಿಬಿಂಬಿಸಲು ಮತ್ತು ಅಗತ್ಯವಿದ್ದರೆ ವಿಷಯವನ್ನು ಸ್ಟ್ರೀಮ್ ಮಾಡಲು ನಿಮಗೆ ಸಾಧ್ಯವಾಗುತ್ತದೆ. ಹಾಗೆಯೇ ಆಡಿಯೊ ಉಪಕರಣಗಳನ್ನು ಸಂಪರ್ಕಿಸುವಾಗ ಬ್ಲೂಟೂತ್ + ಕನೆಕ್ಟಿವಿಟಿ ಆಯ್ಕೆಯು ಸಹ ಸೂಕ್ತವಾಗಿ ಬರುತ್ತದೆ.

ವಾಯಿಸ್‌ ಸಪೋರ್ಟ್‌

ವಾಯಿಸ್‌ ಸಪೋರ್ಟ್‌

ಏರ್‌ಟೆಲ್ ಎಕ್ಸ್‌ಸ್ಟ್ರಿಮ್ ಬಾಕ್ಸ್‌ ವಾಯಿಸ್‌ ಕಮಾಂಡ್‌ ಸೌಲಭ್ಯವನ್ನು ಪಡೆದಿದ್ದು, ಅಮೆಜಾನ್ ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟಂಟ್‌ ಆಯ್ಕೆಗಳನ್ನು ಕನೆಕ್ಟ್‌ ಮಾಡಬಹುದಾಗಿದೆ. ವಾಯಿಸ್‌ ಅಸಿಸ್ಟಂಟ್‌ ಬಳಸಿ ಚಾನೆಲ್ ಟ್ಯೂನಿಂಗ್, ವ್ಯಾಲ್ಯೂಮ್ ಕಂಟ್ರೋಲ್ ಮತ್ತು ವಿಡಿಯೊ ಸ್ಟ್ರೀಮಿಂಗ್ ಆಪ್ಸ್‌ಗಳನ್ನು ನಿಯಂತ್ರಿಸಬಹುದಾಗಿದೆ. ಹೀಗಾಗಿ ಗ್ರಾಹಕರಿಗೆ ಆಂಡ್ರಾಯ್ಡ್ ಟಿವಿಯ ಅನುಭವ ಸಿಗಲಿದೆ.

ಬೆಲೆ ಎಷ್ಟಿದೆ

ಬೆಲೆ ಎಷ್ಟಿದೆ

ಏರ್‌ಟೆಲ್ ಎಕ್ಸ್‌ಸ್ಟ್ರಿಮ್ ಬಾಕ್ಸ್‌ ಬೆಲೆಯು 3,999ರೂ.ಗಳಾಗಿವೆ. ಆದರೆ ಏರ್‌ಟೆಲ್‌ನ ಎಕ್ಸಿಸ್ಟಿಂಗ್ ಗ್ರಾಹಕರು 2,249ರೂ.ಗಳಿಗೆ ಪ್ರಸ್ತುತ ಸೇವೆಯನ್ನು 'ಎಕ್ಸ್‌ಸ್ಟ್ರೀಮ್' ಸೆಟ್‌ಅಪ್‌ ಬಾಕ್ಸ್‌ಗೆ ಅಪ್‌ಗ್ರೇಡ್‌ ಮಾಡಿಸಿಕೊಳ್ಳಬಹುದು. ಏರ್‌ಟೆಲ್ ಎಕ್ಸ್‌ಸ್ಟ್ರಿಮ್ ಸೆಟ್‌ಅಪ್‌ ಬಾಕ್ಸ್‌ನೊಂದಿಗೆ 999ರೂ. ಶುಲ್ಕದ ಅಒಂದು ವರ್ಷದ ಚಂದಾದಾರಿಕೆ ಸಹ ಗ್ರಾಹಕರಿಗೆ ಸಿಗಲಿದೆ.

Best Mobiles in India

English summary
The Airtel Xstream Box will be available for Rs 2,249 for existing Airtel Digital TV subscribers. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X