Home
ಸುದ್ದಿಜಾಲ

ಏರ್‌ಟೆಲ್‌ V/S ಬಿಎಸ್‌ಎನ್‌ಎಲ್‌ ಬ್ರಾಡ್‌ಬ್ಯಾಂಡ್‌: ಬೆಸ್ಟ್ ಯಾವುದು?

ದೇಶದ ಬ್ರಾಡ್‌ಬ್ಯಾಂಡ್ ವಲಯವು ಹಲವು ಮಹತ್ತರ ಬದಲಾವಣೆಗಳನ್ನು ಕಂಡಿದೆ. ಬ್ರಾಡ್‌ಬ್ಯಾಂಡ್ ಪೂರೈಕೆದಾರ ಸಂಸ್ಥೆಗಳು ಗ್ರಾಹಕರನ್ನು ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಅಗ್ಗದ ಬೆಲೆಯಲ್ಲಿ ಹಲವು ಆಕರ್ಷಕ ಪ್ರಯೋಜನಗಳ ಬ್ರಾಡ್‌ಬ್ಯಾಂಡ್‌ ಯೋಜನೆಗಳನ್ನು ಪರಿಚಯಿಸಿವೆ. ಅವುಗಳಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಹಾಗೂ ಏರ್‌ಟೆಲ್ ಸಂಸ್ಥೆಗಳ ಕೆಲವು ಯೋಜನೆಗಳು ಆಕರ್ಷಕ ಎನಿಸಿಕೊಂಡಿವೆ. ಈ ಎರಡು ಸಂಸ್ಥೆಗಳ ಕೆಲವು ಎಂಟ್ರಿ ಲೆವೆಲ್ ಪ್ಲ್ಯಾನ್‌ಗಳು ಅಗ್ಗದ ಪ್ರೈಸ್‌ನಲ್ಲಿವೆ.

ಬಿಎಸ್‌ಎನ್‌ಎಲ್‌

ಹೌದು, ಬಿಎಸ್‌ಎನ್‌ಎಲ್‌ ಹಾಗೂ ಏರ್‌ಟೆಲ್ ಸಂಸ್ಥೆಗಳ ಕೆಲವು ಬ್ರಾಡ್‌ಬ್ಯಾಂಡ್‌ ಯೋಜನೆಗಳು ಗ್ರಾಹಕರ ಗಮನ ಸೆಳೆದಿವೆ. ಮುಖ್ಯವಾಗಿ ಏರ್‌ಟೆಲ್‌ ಎಕ್ಸ್‌ಟ್ರಿಮ್ ಫೈಬರ್ 499ರೂ. ಹಾಗೂ ಬಿಎಸ್‌ಎನ್‌ಎಲ್‌ 499ರೂ. ಪ್ಲ್ಯಾನ್‌ ಬಜೆಟ್‌ ದರದಲ್ಲಿ ಉತ್ತಮ ಅನಿಸಿವೆ. ಈ ಎರಡು ಯೋಜನೆಗಳು ಭಿನ್ನ ಪ್ರಯೋಜನಗಳನ್ನು ಒಳಗೊಂಡಿವೆ. ಆದರೆ ಬಿಎಸ್‌ಎನ್‌ಎಲ್‌ ಹಾಗೂ ಏರ್‌ಟೆಲ್‌ ಇವೆರಡರಲ್ಲಿ ಯಾವುದು ಬೆಸ್ಟ್‌ ಬ್ರಾಡ್‌ಬ್ಯಾಂಡ್‌ ಯೋಜನೆ ಎನ್ನುವ ಬಗ್ಗೆ ತಿಳಿಯಲು ಮುಂದೆ ಓದಿರಿ.

ಏರ್‌ಟೆಲ್‌ ಎಕ್ಸ್‌ಟ್ರಿಮ್ ಫೈಬರ್ 499ರೂ. ಪ್ಲ್ಯಾನ್‌

ಏರ್‌ಟೆಲ್‌ ಎಕ್ಸ್‌ಟ್ರಿಮ್ ಫೈಬರ್ 499ರೂ. ಪ್ಲ್ಯಾನ್‌

ಏರ್‌ಟೆಲ್‌ನ 499ರೂ. ಪ್ಲ್ಯಾನ್‌ ಅಗ್ಗದ ಯೋಜನೆಯಾಗಿದೆ. ಈ ಯೋಜನೆಯು 40 Mbps ವೇಗವನ್ನು ನೀಡುತ್ತದೆ ಹಾಗೆಯೇ 3.3 TB (3300 ಜಿಬಿ) ಎಫ್‌ಯುಪಿ ಮಿತಿ ಮತ್ತು ಅನಿಯಮಿತ ಧ್ವನಿ ಕರೆ ಪ್ರಯೋಜನಗಳನ್ನು ಹೊಂದಿದೆ. ಇದನ್ನು ಆರಿಸಿಕೊಳ್ಳುವ ಬಳಕೆದಾರರು ವೂಟ್ ಬೇಸಿಕ್, ಇರೋಸ್ ನೌ, ಹಂಗಮಾ ಪ್ಲೇ, ಶೆಮರೂ ಮಿ ಮತ್ತು ಅಲ್ಟ್ರಾಗಳಿಂದ ಉಚಿತ ವಿಷಯವನ್ನು ಒದಗಿಸುವ ಏರ್ಟೆಲ್ ಎಕ್ಸ್‌ಸ್ಟ್ರೀಮ್ ಅಪ್ಲಿಕೇಶನ್‌ಗೆ ಉಚಿತ ಪ್ರವೇಶವನ್ನು ಪಡೆಯುತ್ತಾರೆ.

ಬಿಎಸ್‌ಎನ್‌ಎಲ್‌ 499ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್‌ 499ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್‌ ಹೊಸ 499ರೂ.ಗಳ ಭಾರತ ಫೈಬರ್‌ ಪ್ಲ್ಯಾನ್‌ ಒಂದು ಅಗ್ಗದ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ ಆಗಿದೆ. 3.3TB ಡೇಟಾ ಬಳಕೆಯ ವರೆಗೂ 30 Mbps ವೇಗದಲ್ಲಿ ಇಂಟರ್ನೆಟ್ ಸೌಲಭ್ಯವು ಇರುತ್ತದೆ. ನಿಗದಿತ ಡೇಟಾ ಮಿತಿ ಮುಗಿದ ಬಳಿಕ 2 Mbps ವೇಗದಲ್ಲಿ ಇಂಟರ್ನೆಟ್ ಮುಂದುವರೆಯುತ್ತದೆ. ಇದರೊಂದಿಗೆ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ವಾಯಿಸ್‌ ಕರೆ ಪ್ರಯೋಜನ ಲಭ್ಯ. ಬಿಎಸ್‌ಎನ್‌ಎಲ್‌ನ ಇತರೆ ಪ್ಲ್ಯಾನ್‌ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಬಿಎಸ್‌ಎನ್‌ಎಲ್‌ 799ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್‌ 799ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್ 799ರೂ. ಭಾರತ್ ಫೈಬರ್ ಪ್ಲ್ಯಾನ್ ಅನ್ನು ಫೈಬರ್ ವ್ಯಾಲ್ಯೂ ಎಂದು ಹೆಸರಿಸಲಾಗಿದೆ. ಈ ಪ್ಲ್ಯಾನ್ ತಿಂಗಳಿಗೆ 799ರೂ. ಆಗಿದ್ದು, 3300GB ಅಥವಾ 3.3TB ವರೆಗೆ 100 Mbps ವೇಗದಲ್ಲಿ ಇಂಟರ್ನೆಟ್‌ ಸೌಲಭ್ಯ ನೀಡುತ್ತದೆ. ಡೇಟಾ ಮಿತಿ ಮುಗಿದ ಬಳಿಕ 2 Mbps ವೇಗದಲ್ಲಿ ಇಂಟರ್ನೆಟ್ ಮುಂದುವರೆಯುತ್ತದೆ.

ಬಿಎಸ್‌ಎನ್‌ಎಲ್‌ 999ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್‌ 999ರೂ. ಪ್ಲ್ಯಾನ್

ಬಿಎಸ್ಎನ್ಎಲ್ 999ರೂ. ಭಾರತ್ ಫೈಬರ್ ಪ್ಲ್ಯಾನ್ ಅನ್ನು ಫೈಬರ್ ಪ್ರೀಮಿಯಂ ಯೋಜನೆ ಎಂದು ಹೇಳಲಾಗಿದೆ. 3300GB ಅಥವಾ 3.3TB ವರೆಗೆ 100 Mbps ವೇಗದಲ್ಲಿ ಇಂಟರ್ನೆಟ್‌ ಸೌಲಭ್ಯ ನೀಡುತ್ತದೆ. ಡೇಟಾ ಮಿತಿ ಮುಗಿದ ಬಳಿಕ 2 Mbps ವೇಗದಲ್ಲಿ ಇಂಟರ್ನೆಟ್ ಮುಂದುವರೆಯುತ್ತದೆ. ಚಂದಾದಾರರಿಗೆ ಅನಿಯಮಿತ ಧ್ವನಿ ಕರೆ ಪ್ರಯೋಜನವನ್ನು ಸಹ ನೀಡುತ್ತದೆ.

Best Mobiles in India

English summary
Airtel and BSNL offer fiber broadband plans to the users which are almost priced the same.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+