Home
ಸುದ್ದಿಜಾಲ

ಏರ್‌ಟೆಲ್‌ನ ಈ ಪ್ಲ್ಯಾನ್‌ಗಳಲ್ಲಿ ವಾರ್ಷಿಕ ವ್ಯಾಲಿಡಿಟಿ ಜೊತೆ ಅಧಿಕ ಡೇಟಾ ಲಭ್ಯ!

ಟೆಲಿಕಾಂ ಸಂಸ್ಥೆಗಳ ನಡುವೆ ಪೈಪೋಟಿ ಇದ್ದು, ಎಲ್ಲ ಟೆಲಿಕಾಂ ಸಂಸ್ಥೆಗಳು ತಮ್ಮ ಚಂದಾದಾರರು ದೀರ್ಘಾವಧಿಯವರೆಗೂ ಉಳಿಯಬೇಕು ಎಂದು ಬಯಸುತ್ತವೆ. ಈ ನಿಟ್ಟಿನಲ್ಲಿ ಟೆಲಿಕಾಂ ಸಂಸ್ಥೆಗಳು ಹಲವು ಅಧಿಕ ವ್ಯಾಲಿಡಿಟಿಯ ದೀರ್ಘಾವಧಿಯ ಯೋಜನೆಗಳನ್ನು ಪರಿಚಯಿಸಿವೆ. ಜನಪ್ರಿಯ ಏರ್‌ಟೆಲ್‌ ಸಹ ಆಕರ್ಷಕ ವಾರ್ಷಿಕ ವ್ಯಾಲಿಡಿಟಿಯ ಪ್ರೀಪೇಯ್ಡ್‌ ಯೋಜನೆಗಳನ್ನು ಪರಿಚಯಿಸಿ ಗ್ರಾಹಕರಿಗೆ ಡೇಟಾ, ಕರೆ, ಎಸ್ಎಮ್‌ಎಸ್‌ ಸೌಲಭ್ಯಗಳನ್ನು ನೀಡಿದೆ.

ಏರ್‌ಟೆಲ್

ಭಾರ್ತಿ ಏರ್‌ಟೆಲ್ ದೀರ್ಘ ಅವಧಿಯ ಹಲವು ಪ್ರೀಪೇಯ್ಡ್‌ ಪ್ಲ್ಯಾನ್‌ಗಳನ್ನು ಹೊಂದಿದೆ. ಈ ಯೋಜನೆಗಳಲ್ಲಿ ಅನಿಯಮಿತ ವಾಯಿಸ್‌ ಕರೆ, ಪ್ರತಿದಿನ ಡೇಟಾ ಸೌಲಭ್ಯ, ಎಸ್‌ಎಮ್‌ಎಸ್‌ ಪ್ರಯೋಜನ ಮತ್ತು ಏರ್‌ಟೆಲ್‌ ಆಪ್‌ ಹಾಗೂ ಓಟಿಟಿ ಸೇವೆಗಳ ಲಭ್ಯತೆ ಇವೆ. ಏರ್‌ಟೆಲ್‌ ಟೆಲಿಕಾಂನ ಎಲ್ಲ ಪ್ರೀಪೇಯ್ಡ್‌ ಪ್ಲ್ಯಾನ್‌ಗಳಲ್ಲಿ ದೀರ್ಘಾವಧಿ ವ್ಯಾಲಿಡಿಟಿ ದೃಷ್ಠಿಯಿಂದ ಮುಖ್ಯವಾಗಿ ಮೂರು ವಾರ್ಷಿಕ ಯೋಝನೆಗಳು ಹೆಚ್ಚು ಗಮನ ಸೆಳೆಯುತ್ತವೆ. ಅವುಗಳ ಪ್ರಯೋಜನಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ಏರ್‌ಟೆಲ್ 2498ರೂ. ಪ್ಲ್ಯಾನ್

ಏರ್‌ಟೆಲ್ 2498ರೂ. ಪ್ಲ್ಯಾನ್

ಏರ್‌ಟೆಲ್‌ನ ಹೊಸ 2498ರೂ. ಪ್ರೀಪೇಡ್‌ ಪ್ಲ್ಯಾನ್‌ ವಾರ್ಷಿಕ ಯೋಜನೆ ಆಗಿದ್ದು, ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ವಾಯಿಸ್‌ ಕರೆಗಳ ಸೌಲಭ್ಯ ಹಾಗೂ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ 100 ಉಚಿತ ಎಸ್‌ಎಮ್‌ಎಸ್‌ ಸೌಲಭ್ಯ ಸಹ ಲಭ್ಯವಾಗುತ್ತದೆ. ಹಾಗೂ ಏರ್ಟೆಲ್ ಥ್ಯಾಂಕ್ಸ್‌ನ ಪ್ರಯೋಜನಗಳಿವೆ. ZEE5 ಪ್ರೀಮಿಯಂ, ಏರ್ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಮತ್ತು ವಿಂಕ್ ಮ್ಯೂಸಿಕ್‌ನ ಉಚಿತ ಚಂದಾದಾರಿಕೆಗಳು ಲಭ್ಯ. ಹಾಗೂ ಶಾ ಅಕಾಡೆಮಿಯೊಂದಿಗೆ 28 ದಿನಗಳವರೆಗೆ ಉಚಿತ ಆನ್‌ಲೈನ್ ಕೋರ್ಸ್‌ಗಳನ್ನು ಸಹ ಪಡೆಯಬಹುದು. ಜೊತೆಗೆ ಆಂಟಿ-ವೈರಸ್ ಮತ್ತು ಉಚಿತ ಹೆಲೋ ಟೂನ್‌ಗಳು ಸೌಲಭ್ಯಗಳನ್ನು ಪಡೆಯಬಹುದು.

ಏರ್‌ಟೆಲ್ 2398ರೂ. ಪ್ಲ್ಯಾನ್

ಏರ್‌ಟೆಲ್ 2398ರೂ. ಪ್ಲ್ಯಾನ್

ಏರ್‌ಟೆಲ್‌ನ 2398ರೂ. ಪ್ರೀಪೇಡ್‌ ಪ್ಲ್ಯಾನ್‌ ಸಹ ಒಂದು ವಾರ್ಷಿಕ ಯೋಜನೆ ಆಗಿದೆ. ಈ ಯೋಜನೆಯಲ್ಲಿ ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯು ದೊರೆಯುತ್ತದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ವಾಯಿಸ್‌ ಕರೆಗಳ ಸೌಲಭ್ಯ ಹಾಗೂ ಪ್ರತಿದಿನ 1.5GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಸೌಲಭ್ಯ ಸಹ ಲಭ್ಯವಾಗುತ್ತದೆ. ಇದರೊಂದಿಗೆ ಹೆಚ್ಚುವರಿಯಾಗಿ ಏರ್ಟೆಲ್ ಥ್ಯಾಂಕ್ಸ್‌ನ ಪ್ರಯೋಜನಗಳು, ZEE5 ಪ್ರೀಮಿಯಂ, ಏರ್ಟೆಲ್ ಎಕ್ಸ್‌ಸ್ಟ್ರೀಮ್ ಮತ್ತು ವಿಂಕ್ ಮ್ಯೂಸಿಕ್‌ನ ಉಚಿತ ಚಂದಾದಾರಿಕೆಗಳು ಲಭ್ಯ. ಹಾಗೂ ಶಾ ಅಕಾಡೆಮಿ, ಉಚಿತ ಹೆಲೋಟೂನ್ಸ್, 150 ರೂ. ಫಾಸ್ಟ್‌ಟ್ಯಾಗ್ ಕ್ಯಾಶ್-ಬ್ಯಾಕ್ ಸಹ ದೊರೆಯುತ್ತವೆ.

ಏರ್‌ಟೆಲ್‌ 1498ರೂ. ಪ್ಲ್ಯಾನ್

ಏರ್‌ಟೆಲ್‌ 1498ರೂ. ಪ್ಲ್ಯಾನ್

ಏರ್‌ಟೆಲ್‌ 1498ರೂ. ಪ್ಲ್ಯಾನ್ ಪ್ರೀಪೇಡ್‌ ಸಹ ಒಟ್ಟು ಪ್ಲ್ಯಾನ್ 365 ದಿನಗಳ ವಾರ್ಷಿಕ ವ್ಯಾಲಿಡಿಟಿ ಪಡೆದಿದ್ದು, ವಾಯಿಸ್‌ ಕರೆ ಮತ್ತು ಡೇಟಾ ಪ್ರಯೋಜನವನ್ನು ಒಳಗೊಂಡಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 24GB ಡೇಟಾ ಸೌಲಭ್ಯದ ಜೊತೆಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಪಡೆದುಕೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯವನ್ನು ಹೊಂದಿದೆ. ಇನ್ನು ಇದರೊಂದಿಗೆ Wynk ಮ್ಯೂಸಿಕ್, ಏರ್‌ಟೆಲ್‌ ಎಕ್ಸ್‌ಟ್ರಿಮ್ ಪ್ರೀಮಿಯಮ್, ಫಾಸ್ಟ್‌ಟ್ಯಾಗ್ ಕ್ಯಾಶ್‌ಬ್ಯಾಕ್ ಸೌಲಭ್ಯ ಹೊಂದಿದೆ. ದೀರ್ಘ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಈ ಆಯ್ಕೆ ಉತ್ತಮ ಅನಿಸಲಿದೆ.

Best Mobiles in India

English summary
These three airtel yearly prepaid plans which Airtel offers and all of them come with the benefit of unlimited calling.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+