ಅಮೆಜಾನ್‌ನಲ್ಲಿ ಹೊಸತನ : ಅಲೆಕ್ಸಾ 'ವಾಯಿಸ್‌ ಮೆಸೆಜ್' ಫೀಚರ್‌ ವಿಸ್ತರಣೆ!

|

ಟೆಕ್‌ ಪ್ರಪಂಚಕ್ಕೆ ಹಲವು ಸ್ಮಾರ್ಟ್‌ ಡಿವೈಸ್‌ಗಳು ಎಂಟ್ರಿ ಕೊಟ್ಟಿದ್ದು, ಅವುಗಳಲ್ಲಿ ಬಹುತೇಕ ಡಿವೈಸ್‌ಗಳು ವಾಯಿಸ್‌ ಕಮಾಂಡ್‌ ಫೀಚರ್‌ ಅನ್ನು ಒಳಗೊಂಡಿವೆ. ಬಳಕೆದಾರರು ಕೇವಲ ಆದೇಶ ನೀಡಿದರೇ ಸಾಕು ಸ್ಮಾರ್ಟ್‌ ಡಿವೈಸ್‌ಗಳು ಕಾರ್ಯನಿರ್ವಹಿಸುತ್ತವೆ. ಸದ್ಯ ಬಾರಿ ಜನಪ್ರಿಯತೆ ಪಡೆದಿರುವ 'ಅಮೆಜಾನ್‌ ಅಲೆಕ್ಸಾ' ತನ್ನ ಇಕೋ ಸ್ಮಾರ್ಟ್‌ ಉತ್ಪನ್ನಗಳಲ್ಲಿ 'ಅನೋನ್ಸ್‌ಮೆಂಟ್' ಫೀಚರ್ಸ್‌ ಅನ್ನು ಪರಿಚಯಿಸಿತ್ತು. ಆದರೆ ಇದೀಗ ಆ ಸೇವೆಯನ್ನು ವಿಸ್ತರಿಸಿದೆ.

ಅಮೆಜಾನ್‌ನಲ್ಲಿ ಹೊಸತನ : ಅಲೆಕ್ಸಾ 'ವಾಯಿಸ್‌ ಮೆಸೆಜ್' ಫೀಚರ್‌ ವಿಸ್ತರಣೆ!

ಹೌದು, ಅಮೆಜಾನ್‌ ಅಲೆಕ್ಸಾ ಅನೋನ್ಸ್‌ಮೆಂಟ್‌ ಫೀಚರ್‌ ಸೇವೆಯನ್ನು ಅನ್ನು ತನ್ನ ಇತರೆ ಸ್ಮಾರ್ಟ್‌ ಡಿವೈಸ್‌ಗಳಿಗೂ ವಿಸ್ತರಿಸಿದೆ. ಅಲೆಕ್ಸಾ ವಾಯಿಸ್‌ ಕಮಾಂಡ್‌ ಬೆಂಬಲಿತ ಸ್ಮಾರ್ಟ್‌ ಉತ್ಪನ್ನಗಳಲ್ಲಿ ಈ ಫೀಚರ್‌ ಅನ್ನು ಬಳಸಬಹುದಾಗಿದ್ದು, ಬಳಕೆದಾರರು ಒಂದು ವಾಕ್ಯದ ಹೇಳಿಕೆಯನ್ನು(short voice message) ಅಲೆಕ್ಸಾ ಬೆಂಬಲಿತ ಇತರೆ ಸ್ಮಾರ್ಟ್‌ ಡಿವೈಸ್‌ಗಳಿಗೆ ರವಾನಿಸಬಹುದಾಗಿದೆ.

ಅಮೆಜಾನ್‌ನಲ್ಲಿ ಹೊಸತನ : ಅಲೆಕ್ಸಾ 'ವಾಯಿಸ್‌ ಮೆಸೆಜ್' ಫೀಚರ್‌ ವಿಸ್ತರಣೆ!

ಅಮೆಜಾನ್‌ ಇಕೋ ಡಿವೈಸ್‌ಗಳಿಗೆ ಮಾತ್ರ ಸೀಮಿತವಾಗಿದ್ದ, ಅಲೆಕ್ಸಾ ಅನೋನ್ಸ್‌ಮೆಂಟ್‌ ಫೀಚರ್‌ ಇನ್ನು ಇತರೆ ಅಲೆಕ್ಸಾ ಡಿವೈಸ್‌ಗಳಿಗೂ ಲಭ್ಯವಾಗಲಿದೆ. ಬಳಕೆದಾರರು ಅಲೆಕ್ಸಾ ಅನೋನ್ಸ್‌ ದ್ಯಾಟ್‌/ಟೆಲ್‌ ಎವರಿ ಒನ್‌/ಬ್ರಾಡ್‌ಕಾಸ್ಟ್‌ ಎಂದು ಹೇಳುವ ಮೂಲಕ ತಮ್ಮ ವಾಯಿಸ್‌ ಮೆಸೆಜ್‌ ರವಾನಿಸಬಹುದಾಗಿದೆ. ಹಾಗಾದರೇ ಅಮೆಜಾನ್‌ ಅಲೆಕ್ಸಾ ಅನೋನ್ಸ್‌ಮೆಂಟ್‌ ಫೀಚರ್‌ ಕುರಿತ ಇನ್ನಷ್ಟು ಮಾಹಿತಿಗಾಗಿ ಮುಂದೆ ಓದಿರಿ.

ಓದಿರಿ : ಶಾಶ್ವತವಾಗಿ ಬೆಲೆ ಇಳಿಕೆ ಕಂಡ ವಿವೋ 'V15' ಮತ್ತು 'Y17' ಸ್ಮಾರ್ಟ್‌ಫೋನ್‌ಗಳು!ಓದಿರಿ : ಶಾಶ್ವತವಾಗಿ ಬೆಲೆ ಇಳಿಕೆ ಕಂಡ ವಿವೋ 'V15' ಮತ್ತು 'Y17' ಸ್ಮಾರ್ಟ್‌ಫೋನ್‌ಗಳು!

ವಿಸ್ತರಣೆ

ವಿಸ್ತರಣೆ

2018ರಲ್ಲಿ ಆರಂಭವಾಗಿದ್ದ ಅಮೆಜಾನ್‌ ಅಲೆಕ್ಸಾ ಅನೋನ್ಸಮೆಂಟ್ ಫೀಚರ್‌ ಈ ಮೊದಲು ಅಮೆಜಾನ್‌ ಇಕೋ ಡಿವೈಸ್‌ಗಳಲ್ಲಿ ಮಾತ್ರ ಬಳಕೆಮಾಡಬಹುದಾಗಿತ್ತು. ಆದರೆ ಕಂಪನಿ ಈಗ ತನ್ನ ಈ ಸೇವೆಯನ್ನು ಇತರೆ ಅಲೆಕ್ಸಾ ಬೆಂಬಲಿತ ಸ್ಮಾರ್ಟ್‌ ಡಿವೈಸ್‌ಗಳಿಗೂ ವಿಸ್ತರಿಸಿದೆ. ಈ ಹಿಂದೆ ಕೇವಲ ಅಮೆಜಾನ್‌ ಇಕೋ ಡಿವೈಸ್‌ಗಳಲ್ಲಿ ಮಾತ್ರ ನೀಡಲಾಗಿತ್ತು.

ಲಭ್ಯತೆಯ ಡಿವೈಸ್‌ಗಳು

ಲಭ್ಯತೆಯ ಡಿವೈಸ್‌ಗಳು

ಅಮೆಜಾನ್‌ ಅಲೆಕ್ಸಾ ವಾಯಿಸ್‌ ಕಮಾಂಡ್‌ನ ಅನೋನ್ಸ್‌ಮೆಂಟ್‌ ಫೀಚರ್‌ ಇತರೆ ಡಿವೈಸ್‌ಗಳಿಗೂ ವಿಸ್ತರಿಸಲಾಗಿದೆ. ಹೀಗಾಗಿ ಇನ್ನು ಕಂಪನಿಯ ಇಕೋ, ಇಕೋ ಪ್ಲಸ್‌, ಇಕೋ ಡಾಟ್‌, ಇಕೋ ಶೋ ಮತ್ತು ಇಕೋ ಸ್ಪೋಟ್‌ ಸ್ಮಾರ್ಟ್‌ ಡಿವೈಸ್‌ಗಳಲ್ಲಿಯೂ ದೊರೆಯಲಿದೆ.

ಓದಿರಿ : ಬದಲಾಗಲಿದೆ ಆಪಲ್‌!...ಐಫೋನ್‌ ಸೇರಲಿವೆ ವಿಶೇಷ ಆಯ್ಕೆಗಳು!ಓದಿರಿ : ಬದಲಾಗಲಿದೆ ಆಪಲ್‌!...ಐಫೋನ್‌ ಸೇರಲಿವೆ ವಿಶೇಷ ಆಯ್ಕೆಗಳು!

ಗೂಗಲ್‌ ವಾಯಿಸ್‌ ಮೆಸೆಜ್‌

ಗೂಗಲ್‌ ವಾಯಿಸ್‌ ಮೆಸೆಜ್‌

ಅಮೆಜಾನ್‌ನಂತೆಯೇ ಗೂಗಲ್‌ ಸಹ ಇತ್ತೀಚಿಗೆ ತನ್ನ ಗೂಗಲ್ ಹೋಮ್‌ ಲೈನ್‌ನಲ್ಲಿನ ಸ್ಮಾರ್ಟ್‌ ಸ್ಪೀಕರ್‌ಗಳಲ್ಲಿ ವಾಯಿಸ್‌ ಮೆಸೆಜ್‌ ರವಾನಿಸುವ ಫೀಚರ್‌ ಅನ್ನು ಪರಿಚಯಿಸಿದೆ. ಈ ಸ್ಪೀಕರ್‌ಗಳು ಗೂಗಲ್‌ ಅಸಿಸ್ಟಂಟ್‌ನ ಬೆಂಬಲ ಪಡೆದುಕೊಂಡಿವೆ.

ಬ್ರಾಡ್‌ಕಾಸ್ಟ್‌

ಬ್ರಾಡ್‌ಕಾಸ್ಟ್‌

ಅಮೆಜಾನ್‌ ಫೈರ್‌ ಟಿವಿ ಕ್ಯೂಬ್‌, ಸೋನೊಸ್‌ ಸ್ಪೀಕರ್ಸ್‌ ಸೇರಿದಂತೆ ಅಲೆಕ್ಸಾ ಬೆಂಬಲಿತ ಅಮೆಜಾನ್ ಡಿವೈಸ್‌ಗಳಲ್ಲಿ ಅಲೆಕ್ಸಾ ಅನೋನ್ಸ್‌ ದ್ಯಾಟ್‌/ಟೆಲ್‌ ಎವರಿ ಒನ್‌/ಬ್ರಾಡ್‌ಕಾಸ್ಟ್‌ ಎನ್ನುವ ಮೂಲಕ ವಾಯಿಸ್‌ ಮೆಸೆಜ್‌ ಅನ್ನು ಕಳುಹಿಸಬಹುದಾಗಿದೆ.

ಓದಿರಿ : ಗೂಗಲ್ ಡುಯೋ ; ಡೇಟಾ ಸೇವಿಂಗ್ ಮತ್ತು ಗ್ರೂಪ್‌ ವಿಡಿಯೊ ಕಾಲಿಂಗ್‌ ಆಯ್ಕೆ ಸೇರ್ಪಡೆ!ಓದಿರಿ : ಗೂಗಲ್ ಡುಯೋ ; ಡೇಟಾ ಸೇವಿಂಗ್ ಮತ್ತು ಗ್ರೂಪ್‌ ವಿಡಿಯೊ ಕಾಲಿಂಗ್‌ ಆಯ್ಕೆ ಸೇರ್ಪಡೆ!

Best Mobiles in India

English summary
Alexa Announcements Feature Expanded to All Alexa-Powered Devices.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X