Home
ಸುದ್ದಿಜಾಲ

CoWIN Data Leak:ಕೊರೊನಾ ವೈರಸ್‌ಗೆ ಲಸಿಕೆ ಹಾಕಿಸಿಕೊಂಡಿದ್ದೀರಾ? ಹಾಗಿದ್ರೆ ನಿಮ್ಮ ಎಲ್ಲಾ ಡೇಟಾ ಲೀಕ್‌!?

ಕೊರೊನಾ ಇಡೀ ಜಗತ್ತನ್ನು ಇನ್ನಿಲ್ಲದಂತೆ ಕಾಡಿತ್ತು. ಈ ನಡುವೆ ಭಾರತದಲ್ಲಿ ಕೊರೊನಾ ವಿರುದ್ಧ ಸೆಣಸಲು ಲಸಿಕೆ ಕಡ್ಡಾಯಗೊಳಿಸಲಾಗಿತ್ತು. ಆದರೆ ಈ ಪ್ರಕ್ರಿಯೆ ಇಂದು ಜನರಿಗೆ ಸಂಕಷ್ಟ ಉಂಟು ಮಾಡಿದೆ ಎಂದು ವರದಿಯಿಂದ ತಿಳಿದುಬಂದಿದೆ. ಈ ಮೂಲಕ ಸರ್ಕಾರದ ವಿರುದ್ಧ ಜನರು ಕಿಡಿಕಾರುತ್ತಿದ್ದಾರೆ.

ಹೌದು, ಕೊರೊನಾ ಲಸಿಕೆ ಹಾಕಿಸಿಕೊಳ್ಳುವಾಗ ಹಾಗೂ ಲಸಿಕೆ ಹಾಕಿದ ನಂತರ ಸರ್ಕಾರ ನಮ್ಮೆಲ್ಲರ ಬಳಿ ಮಾಹಿತಿ ಪಡೆದುಕೊಂಡಿತ್ತು. ಈ ಮಾಹಿತಿ ಇದೀಗ ಸೋರಿಕೆಯಾಗಿದ್ದು, ಈ ಸಂಬಂಧ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರು ಲೀಕ್‌ ಸ್ಕ್ರೀನ್‌ಶಾಟ್ ಗಳ ವಿವರವನ್ನು ಶೇರ್‌ ಮಾಡಿಕೊಂಡಿದ್ದಾರೆ. ಇದನ್ನು ಗಮನಿಸಿ ಜನರು ಆತಂಕಕ್ಕೆ ಒಳಗಾಗುವಂತೆ ಆಗಿದೆ. ಹಾಗಿದ್ರೆ, ಕೊರೊನಾ ಲಸಿಕೆ ವೇಳೆ ಆಗಿರುವ ಅನಾನುಕೂಲ ಏನು?, ಯಾವೆಲ್ಲಾ ನಿಮ್ಮ ಮಾಹಿತಿಗಳು ಸಾರ್ವಜನಿಕವಾಗಿ ಎಂಬ ಮಾಹಿತಿಗಾಗಿ ಈ ಲೇಖನ ಓದಿರಿ.

ಕೊರೊನಾ ವೈರಸ್‌ಗೆ ಲಸಿಕೆ ಹಾಕಿಸಿಕೊಂಡಿದ್ದೀರಾ?ಹಾಗಿದ್ರೆ ನಿಮ್ಮ ಎಲ್ಲಾ ಡೇಟಾ ಲೀಕ್

ಕೋವಿನ್ ಡೇಟಾ ಸೋರಿಕೆ: ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರ ಸೋರಿಕೆಯಾದ ವಿವರಗಳ ಸ್ಕ್ರೀನ್‌ಶಾಟ್ ಮಾಹಿತಿ ಉಲ್ಲಂಘನೆಯ ಆಘಾತಕಾರಿ ವರದಿ ಬಿಡುಗಡೆ ಆಗಿದ್ದು, ಭಾರತೀಯ ನಾಗರಿಕರ ವೈಯಕ್ತಿಕ ಮಾಹಿತಿ, ಅವರ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ವಿವರಗಳು ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಟೆಲಿಗ್ರಾಮ್‌ನಲ್ಲಿಯೇ ಲಭ್ಯವಿದೆ ಎಂದು ಎಲ್ಲರಿಗೂ ತಿಳಿಯುವಂತೆ ಆಗಿದೆ.

ಈ ಸಂಬಂಧ ದಿ ಫೋರ್ತ್ ನ್ಯೂಸ್‌ ವರದಿ ಮಾಡಿದ್ದು, ಜನರು ತಮ್ಮ ವೈಯಕ್ತಿಕ ವಿವರಗಳನ್ನು ನೋಂದಾಯಿಸಿದ ಕೋವಿನ್ ಪೋರ್ಟಲ್-ಕೋವಿಡ್ ವ್ಯಾಕ್ಸಿನೇಷನ್ ಪೋರ್ಟಲ್‌ನಿಂದ ಡೇಟಾ ಸೋರಿಕೆ ಸಂಭವಿಸಿದೆ ಎಂದು ತಿಳಿಸಿದೆ. ಅಂದರೆ ಕೋವಿನ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯನ್ನು ಎಂಟ್ರಿ ಮಾಡಿದಾಗ ಟೆಲಿಗ್ರಾಮ್ ಬಾಟ್ ಲಿಂಗ, ಜನ್ಮ ವರ್ಷ ಮತ್ತು ಲಸಿಕೆ ಕೇಂದ್ರದ ಹೆಸರು ಮತ್ತು ಅವರ ಡೋಸ್‌ಗಳೊಂದಿಗೆ ವ್ಯಾಕ್ಸಿನೇಷನ್‌ಗಾಗಿ ಬಳಸಿದ ಐಡಿ ಕಾರ್ಡ್‌ನ ಸಂಖ್ಯೆಯನ್ನು ಬಹಿರಂಗಪಡಿಸುತ್ತದಂತೆ.

ಈ ದೊಡ್ಡ ಡೇಟಾ ಉಲ್ಲಂಘನೆ ಹಿನ್ನೆಲೆ ಭಾರತೀಯ ನಾಗರಿಕರ ಆಧಾರ್ ಕಾರ್ಡ್, ವೋಟರ್ ಐಡಿ ಮತ್ತು ಪ್ಯಾನ್ ಕಾರ್ಡ್ ಸಂಖ್ಯೆಗಳನ್ನು ಟೆಲಿಗ್ರಾಮ್‌ನಲ್ಲಿ ಯಾರಾದರೂ ಪ್ರವೇಶಿಸಬಹುದಾಗಿದೆ. ಈ ಮೂಲಕ ಭಾರತೀಯ ಪ್ರಜೆಗಳ ಗೌಪ್ಯತೆ ಪ್ರಶ್ನಿಸುವಂತಾಗಿದೆ. ಇಷ್ಟು ಮಾತ್ರವಲ್ಲ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಡೇಟಾ ಸಹ ಸೋರಿಕೆಯಾಗಿದೆ.

ಕೊರೊನಾ ವೈರಸ್‌ಗೆ ಲಸಿಕೆ ಹಾಕಿಸಿಕೊಂಡಿದ್ದೀರಾ?ಹಾಗಿದ್ರೆ ನಿಮ್ಮ ಎಲ್ಲಾ ಡೇಟಾ ಲೀಕ್

ಅಂದರೆ ಭೂಷಣ್ ಅವರ ಸಂಖ್ಯೆಯನ್ನು ನಮೂದಿಸಿದಾಗ, ಆಧಾರ್ ಸಂಖ್ಯೆಯ ಅಂತಿಮ ನಾಲ್ಕು ಅಕ್ಷರಗಳು ಮತ್ತು ಜನ್ಮ ದಿನಾಂಕ ಸೇರಿದಂತೆ ಎಲ್ಲಾ ವಿವರಗಳು ಕಾಣಿಸಿಕೊಂಡಿವೆ. ಅಷ್ಟು ಮಾತ್ರವಲ್ಲ ಉತ್ತರಾಖಂಡದ ಕೋಟ್‌ದ್ವಾರದ ಶಾಸಕಿಯಾದ ಅವರ ಪತ್ನಿ ರಿತು ಖಂಡೂರಿ ಅವರ ವಿವರಗಳು ಸಹ ಬಹಿರಂಗಗೊಂಡಿವೆ ಎಂದು ವರದಿ ಹೇಳಿದೆ. ಇವರು ಮಾತ್ರವಲ್ಲದೆ ಕೋವಿನ್ ಹೈಪವರ್ ಪ್ಯಾನೆಲ್‌ನ ಅಧ್ಯಕ್ಷ ರಾಮ್ ಸೇವಕ್ ಶರ್ಮಾ, ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಮತ್ತು ಕೇಂದ್ರ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಅವರ ವೈಯಕ್ತಿಕ ವಿವರಗಳು ಸೋರಿಕೆಯಾಗಿವೆ.

ವೆಬ್‌ಸೈಟ್‌ ಹ್ಯಾಕ್‌ ಆಗಿತ್ತು: ಈ ಮೊದಲು ಅಂದರೆ 2021ರಲ್ಲಿ ಕೋವಿನ್ ಪೋರ್ಟಲ್ ಅನ್ನು ಹ್ಯಾಕ್ ಮಾಡಲಾಗಿದ್ದು, ಬರೋಬ್ಬರಿ 15 ಕೋಟಿ ಜನರ ಡೇಟಾಬೇಸ್ ಅನ್ನು ಪಡೆದುಕೊಳ್ಳಲಾಗಿದೆ ಎಂದು ವರದಿಗಳು ಪ್ರಕಟ ಆಗಿದ್ದವು. ಆದರೆ ಈ ಆರೋಪದ ಬಗ್ಗೆ ಸೈಬರ್ ಭದ್ರತಾ ಸಂಶೋಧಕರು ನಿರಾಕರಣೆ ಮಾಡುವ ಮೂಲಕ ಇದು ಸಾಧ್ಯ ಇಲ್ಲದ ಮಾತು ಎಂದು ಹೇಳಿದ್ದರು. ಆದರೆ ಈ ವರದಿ ಗಮನಿಸಿದರೆ ಅದು ಸತ್ಯ ಎಂದು ಭಾಸವಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇದಾದ ನಂತರ ಅಂದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ಈ ವರ್ಷದ ಆರಂಭದಲ್ಲಿ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್‌ಎಸ್ ಶರ್ಮಾ ಅವರು ಕೋವಿನ್ ಪೋರ್ಟಲ್‌ ಭದ್ರತೆ ಬಗ್ಗೆ ಮಾತನಾಡಿದ್ದರು. ಕೋವಿನ್‌ ಅತ್ಯಾಧುನಿಕ ಭದ್ರತಾ ಮೂಲಸೌಕರ್ಯವನ್ನು ಹೊಂದಿದ್ದು, ಭದ್ರತಾ ಉಲ್ಲಂಘನೆಯನ್ನು ಎಂದಿಗೂ ಎದುರಿಸಿಲ್ಲ. ನಮ್ಮ ನಾಗರಿಕರ ಡೇಟಾ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಉಲ್ಲೇಖ ಮಾಡಿದ್ದರು.

ಕೊರೊನಾ ವೈರಸ್‌ಗೆ ಲಸಿಕೆ ಹಾಕಿಸಿಕೊಂಡಿದ್ದೀರಾ?ಹಾಗಿದ್ರೆ ನಿಮ್ಮ ಎಲ್ಲಾ ಡೇಟಾ ಲೀಕ್

ಆದರೆ ಈಗ ಟೆಲಿಗ್ರಾಮ್ ಅಪ್ಲಿಕೇಶನ್‌ನಲ್ಲಿ ಆಗುತ್ತಿರುವ ಬೆಳವಣಿಗೆ ಗಮನಿಸಿದರೆ ಇಡೀ ರಾಷ್ಟ್ರವೇ ಬೆಚ್ಚಿ ಬೀಳುವ ವಿಷಯದಂತೆ ಮಾರ್ಪಟ್ಟಿದೆ. ಅಂದರೆ ಯಾರಾದರೂ ಯಾರದೇ ವ್ಯಕ್ತಿಯೊಂದಿಗೆ ಫೋನ್‌ ಮೂಲಕ ಸಂಪರ್ಕ ಹೊಂದಿದ್ದರೆ ಅವರು ತಮ್ಮ ಲಿಂಗ, ಪಾಸ್‌ಪೋರ್ಟ್ ಸಂಖ್ಯೆ, ಆಧಾರ್ ಸಂಖ್ಯೆ, ಕೋವಿಡ್ ಲಸಿಕೆಯ ಮೊದಲ ಡೋಸ್ ಸ್ಥಳ ಮತ್ತು ಜನ್ಮ ದಿನಾಂಕವನ್ನು ತಿಳಿದುಕೊಳ್ಳಬಹುದಾಗಿದೆ.

Best Mobiles in India

English summary
government had obtained information from all of us during the corona vaccination and after the vaccination. This information has been leaked now and Congress leader P Chidambaram has shared the leaked details in this regard.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+